ಪ್ರತಿ ಮಹಿಳೆಯ ಜೀವಿತಾವಧಿಯಲ್ಲಿ ನಡೆಯುವ ಒಂದು ನೈಸರ್ಗಿಕ ಪ್ರಕ್ರಿಯೆ
Team Udayavani, Feb 18, 2020, 5:29 AM IST
ಮೆನೋಪಾಸ್ ಒಂದು ನೈಸರ್ಗಿಕ ಪ್ರಕ್ರಿಯೆ. ಕೆಲವೊಮ್ಮೆ ಆ ಕುರಿತು ಹೆಚ್ಚಾಗಿ ಆಲೋಚಿಸತೊಡಗಿದಾಗ ಉಂಟಾಗುವ ಸಮಸ್ಯೆಗಳು ಹಲವು. ಈ ಸಮಸ್ಯೆಗಳಿಂದ ದೂರವಾಗಲು ಮೊದಲು ಸೂಕ್ತ ವೈದ್ಯರನ್ನುಸಂಪರ್ಕಿಸುವುದು ಅತೀ ಮುಖ್ಯ.
ಸಾ ಮಾನ್ಯವಾಗಿ ವಯಸ್ಸು 50 ದಾಟುತ್ತಿದ್ದಂತೆ ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಲಕ್ಷಣಗಳು ಕಂಡು ಬರುತ್ತವೆ, ಇದನ್ನು ಮೆನೋಪಾಸ್ ಎಂದು ಕರೆಯುತ್ತಾರೆ. ಮೆನೋಪಾಸ್ ಒಂದು ಸಹಜ ಪ್ರಕ್ರಿಯೆ.
ಮೆನೋಪಾಸ್ ಬಳಿಕ ಮಹಿಳೆಯಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಂದುವುದೇ, ಹೊರತು ಮುಟ್ಟು ನಿಂತ ಬಳಿಕ ಹೆಣ್ತನವೇ ಮುಗಿದೇ ಹೋಯ್ತು ಎಂದು ಭಾವಿಸುವುದು ತಪ್ಪು. ಇತ್ತೀಚೆಗೆ ಏಕೋ ಮುಟ್ಟಿನಲ್ಲಿ ವ್ಯತ್ಯಾಸ ಉಂಟಾಗುತ್ತಿದೆ, ವಿಪರೀತ ಸೆಕೆ ಅನಿಸುತ್ತಿದೆ, ತುಂಬಾ ಆಯಾಸ ಅನಿಸುತ್ತೆ, ಮುಟ್ಟಿನ ಸಮ ಯದಲ್ಲಿ ವಿಪರೀತ ರಕ್ತಸ್ರಾವ ಆಗುತ್ತದೆ ಎಂಬ ಮಾತುಗಳು ಕೇಳಿ ಬಂದರೆ ,ಇನ್ನು ಕೆಲವರು 3-4 ತಿಂಗಳಿಗೊಮ್ಮೆ ಮುಟ್ಟಾಗುವುದು ಎಂಬಿತ್ಯಾದಿ ತೊಂದರೆಗಳು ಆಗುತ್ತಿವೆ ಎನ್ನುತ್ತಾರೆ. ಆದರೆ ಇದಕ್ಕೆ ಕಾರಣ ಏನು, ಪರಿಹಾರ ಏನು ಎಂಬು ದರ ಮಾಹಿತಿ ಹಲವರಿಗೆ ಇರುವುದಿಲ್ಲ. ಮೆನೋಪಾಸ್ ಎಂದರೆ ಮಹಿಳೆಯರಲ್ಲಿ ಭೀತಿ ಉಂಟಾಗುತ್ತಿದ್ದು, ಅನವಶ್ಯ ಒತ್ತಡಕ್ಕೆ ಒಳಗಾ ಗುತ್ತಿದ್ದಾರೆ. ಈ ಹಿನ್ನಲೆ ಮೆನೋಪಾಸ್‌ಗೆ ಸಂಬಂಧಪಟ್ಟ ಮಾಹಿತಿ, ಲಕ್ಷಣ ಮತ್ತು ಸಮಸ್ಯೆಗೆ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ನೈಸರ್ಗಿಕ ಪ್ರಕ್ರಿಯೆ
ಆದರೆ ಮೆನೋಪಾಸ್ ಎನ್ನುವುದು ಒಂದು ಕಾಯಿಲೆಯಲ್ಲ, ಪ್ರತಿ ಮಹಿಳೆಯ ಜೀವಿತಾ ವಧಿ ಯಲ್ಲಿ ನಡೆಯುವ ಒಂದು ನೈಸರ್ಗಿಕ ಪ್ರಕ್ರಿಯೆ. ಅಂದರೆ ನಿಧಾನಕ್ಕೆ ಅಂಡಾ ಶಯದ ಕಾರ್ಯ ನಿಲ್ಲಿಸುವ ಪ್ರಕ್ರಿಯೆ. ಈ ಹಂತದಲ್ಲಿ ಕೆಲವರಿಗೆ 15 ದಿನಗಳಿಗೊಮ್ಮೆ ಮುಟ್ಟಾದರೆ ಮತ್ತೆ ಕೆಲವರಿಗೆ 2-3 ತಿಂಗಳು ಮುಟ್ಟಾಗುವುದೇ ಇಲ್ಲ, ಈ ರೀತಿ ಆಗುತ್ತಾ ಕೆಲವು ತಿಂಗಳಿನಲ್ಲಿ ಮುಟ್ಟಿನ ಪ್ರಕ್ರಿಯೆ ಸಂಪೂರ್ಣ ನಿಂತು ಹೋಗಿರುತ್ತದೆ.
ಮಹಿಳೆಯರ ದೇಹದಲ್ಲಿ ತಿಂಗಳಿಗೊಮ್ಮೆ ಅಂಡಾಶಯದಿಂದ ಅಂಡಾಣು ಬಿಡುಗಡೆ ಗೊಂಡು ಗರ್ಭನಾಳದ ಮುಖಾಂತರ ವಾಗಿ ಗರ್ಭಕೋಶವನ್ನು ಸೇರುತ್ತದೆ. ಇದಕ್ಕೆ ಮುಖ್ಯ ಕಾರಣ ಹಾರ್ಮೋನ್. ಪಿಟ್ಯುಟರಿ ಗ್ರಂಥಿಯಿಂದ ಉತ್ಪತ್ತಿಗೊಳ್ಳುವ ಹಾರ್ಮೋನ್‌ಗಳು ಅಂಡಾ ಶಯದ ಹಾರ್ಮೋನ್‌ಗಳನ್ನು ಪ್ರಚೋದಿಸಿ ಗರ್ಭಾಶಯದ ಎಂಡೋ ಮೆಟ್ರಿಯಂ ಎಂಬ ಪದರವನ್ನು ಹರಿದಾಗ ರಕ್ತಸ್ರಾವ ಉಂಟಾಗುತ್ತದೆ. ಮೆನೋಪಾಸ್ ಆದಾಗ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಆಗುವುದರಿಂದ ಗರ್ಭಾಶಯದ ಎಂಡೋ ಮೆಟ್ರಿಯಂ ಪದರದ ಬೆಳವಣಿಗೆ ಕುಂಠಿತಗೊಂಡು, ಈಸ್ಟ್ರೋಜನ್ ಹಾರ್ಮೋನ್‌ನ ಪ್ರಮಾಣ ಕಡಿಮೆಯಾಗಿ ಮುಟ್ಟು ನಿಂತು ಹೋಗುವುದು.
ಅಕಾಲಿಕ ಮೆನೋಪಾಸ್‌ಗೆ ಜೀವನಶೈಲಿ ಕಾರಣಮೆನೋಪಾಸ್ 45 ವರ್ಷ ಕಳೆದ ಮೇಲೆ ಉಂಟಾದರೆ ಅದು ಸಹಜವಾದ ಪ್ರಕ್ರಿಯೆ, ಆದರೆ ಕೆಲವರಿಗೆ ವಯಸ್ಸು 30 ದಾಟುತ್ತಿದ್ದಂತೆ ಈ ಸಮಸ್ಯೆ ಕಂಡು ಬರುತ್ತದೆ, ಇದು ಸಹಜವಲ್ಲ. ಅಕಾಲಿಕ ಮೆನೋಪಾಸ್‌ಗೆ ಜೀವನಶೈಲಿ ಪ್ರಮುಖ ಕಾರಣವಾಗಿದೆ. ಆಧುನಿಕ ಜೀವನ ಶೈಲಿ, ಕೃತಕ ಗರ್ಭಧಾರಣೆ, ರಾಸಾಯನಿಕಗಳು, ವಿಷಯುಕ್ತ ಆಹಾರ (ರಾಸಾಯನಿಕ ರಸಗೊಬ್ಬರ ಹಾಗೂ ಕೀಟನಾಶಕ ಬಳಸಿದ ಆಹಾರ) ಸೇವನೆ ಇವೆಲ್ಲ ಅಕಾಲಿಕ ಮೆನೋಪಾಸ್‌ಗೆ ಪ್ರಮುಖ ಕಾರಣಗಳಾಗಿವೆ.
ಬಂಜೆತನಕ್ಕೆ ಕಾರಣವಾಗಬಹುದು
ಅಕಾಲಿಕ ಮೆನೋಪಾಸ್ ಅನೇಕ ಮಹಿಳೆ ಯರಲ್ಲಿ ಬಂಜೆತನ ಉಂಟಾಗಲು ಪ್ರಮುಖ ಕಾರಣವಾಗಿದೆ. ಶಿಕ್ಷಣ, ಉದ್ಯೋಗ ಅಂತ ವಯಸ್ಸು 30 ದಾಟಿದರೂ ಮದುವೆಯತ್ತ ಆಸಕ್ತಿ ತೋರದ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಈ ರೀತಿ ಅಕಾಲಿಕ ಮೆನೋಪಾಸ್ ಉಂಟಾದರೆ ಮದುವೆ ಬಳಿಕ ಮಕ್ಕಳಾಗದಿರುವ ಸಮಸ್ಯೆ ಎದುರಾಗುತ್ತದೆ. ಕೆಲವರಿಗೆ ಅಕಾಲಿಕ ಮೆನೋಪಾಸ್ ವಂಶಪಾರಂಪರ್ಯವಾಗಿಯೂ ಬರುತ್ತದೆ.
ದೇಹದಲ್ಲಾಗುವ ಬದಲಾವಣೆ
ಮೆನೋಪಾಸ್ ಅನಂತರ ಅಂಡಾಶಯದ ಗಾತ್ರ ಕಡಿಮೆಯಾಗಿ ಅಂಡಾಣು ಉತ್ಪತ್ತಿ ಆಗುವುದಿಲ್ಲ. ಪರಿಣಾಮ ಗರ್ಭನಾಳ ನಿಶ್ಯಕ್ತವಾಗಿ ಗರ್ಭಕೋಶದ ಗಾತ್ರ ಕಡಿಮೆ ಯಾಗುವುದು. ಯೋನಿಯಲ್ಲಿ ಪಿಎಚ್ ಪ್ರಮಾಣ ಕಡಿಮೆಯಾಗುವುದು. ಆರೋಗ್ಯಕರ ಜೀವನಶೈಲಿ ಪಾಲಿಸದಿದ್ದರೆ ಮೆನೋಪಾಸ್ ಬಳಿಕ ಮೈಬೊಜ್ಜಿನ ಸಮಸ್ಯೆ ಉಂಟಾಗುವುದು.
ಹಿಂದೆ ಹೆಣ್ಣುಮಕ್ಕಳಿಗೆ 50 ರಿಂದ 55 ಋತುಬಂಧ ಕಾಲ. ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಋತುಬಂಧ 35 ವರ್ಷಕ್ಕೆ ಕಾಣಿಸಿಕೊಳ್ಳುತ್ತಿದೆ. ಋತುಚಕ್ರ ನಿಲ್ಲುವ ಹಂತದಲ್ಲಿ ಮಹಿಳೆಯರು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ನಿಗದಿತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಕೊಂಡರೆ ಉತ್ತಮ.
-ಡಾ| ಅಪರ್ಣಾ,
ಪ್ರಸೂತಿ ಶಾಸ್ತ್ರ ವಿಭಾಗ,
ಎಸ್‌ಡಿಎಂ ಆಯುರ್ವೇದ ಕಾಲೇಜು, ಉದ್ಯಾವರ
ಮೆನೋಪಾಸ್‌ನ
ಲಕ್ಷಣಗಳೇನು
-ಅನಿಯಮಿತ ಮುಟ್ಟು, ಅಧಿಕ ರಕ್ತಸ್ರಾವ, ಕಡಿಮೆ ರಕ್ತಸ್ರಾವ, ವಯಸ್ಸು 30 ದಾಟಿದ ಬಳಿಕ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೂ ಗರ್ಭಿಣಿಯಾಗದಿದ್ದರೆ ರಕ್ತಪರೀಕ್ಷೆ ಹಾಗೂ ಅಲ್ಟ್ರಾಸೌಂಡ್ ಮಾಡಿಸಿಕೊಂಡರೆ ಮೆನೋಪಾಸ್ ಉಂಟಾಗಿದೆಯೇ ಎಂದು ತಿಳಿಯಬಹುದು.
-ಇನ್ನು ಸಹಜ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ತುಂಬಾ ಸೆಕೆಯಾಗುವುದು, ಮೈ ಬೆವರಿ ಉದ್ವೇಗ ಹೆಚ್ಚಾಗುವುದು, ವಿನಾಕಾರಣ ಬೇಸರ ಅನಿಸುವುದು, ಪದೇ ಪದೆ ಮೂತ್ರವಿಸರ್ಜನೆ, ವಿಪರೀತ ತಲೆನೋವು, ನಿದ್ರೆ ಬಾರದಿರುವುದು, ಮಾನಸಿಕ ಕಿರಿಕಿರಿ, ಖನ್ನತೆ ಕಾಣಿಸಿಕೊಳ್ಳುವುದು.
– ಹೊಟ್ಟೆಯ ಭಾಗದಲ್ಲಿ ಚರ್ಮ ಸುಕ್ಕಾಗುವುದು.
-ಲೈಂಗಿಕಕ್ರಿಯೆಯ ಸಂದರ್ಭದಲ್ಲಿ ನೋವು ಉಂಟಾಗುವುದು.
– ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುವುದು.
-ತುಂಬಾ ಖನ್ನತೆಗೆ ಒಳಗಾಗುತ್ತಾರೆ, ಹೀಗೆ ಉಂಟಾದರೆ ಸೂಕ್ತ ಚಿಕಿತ್ಸೆ ನೀಡಿದರೆ ಸರಿಯಾಗುವುದು.
ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು
-ಆಹಾರಕ್ರಮ ಹೀಗಿರಲಿ
ಮೆನೋಪಾಸ್ ಸಮಯದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುವುದ ರಿಂದ ಆಹಾರದ ಮೂಲಕ ಆ ಕೊರತೆ ಉಂಟಾಗದಂತೆ ನೋಡಿಕೊಳ್ಳಿ. ಹಾಲು, ಮೊಸರು, ಮಜ್ಜಿಗೆಯ ಬಳಕೆಯನ್ನು ಹೆಚ್ಚಿಸಿ, ನುಗ್ಗೆಸೊಪ್ಪನ್ನು ತಿನ್ನಿ. ಅಡುಗೆಯಲ್ಲಿ ಕರಿಬೇವು ಬಳಸಿ, ಇದು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ. ತಾಜಾ ಸೊಪ್ಪು, ತರಕಾರಿಗಳು ಮತ್ತು ಹಣ್ಣುಗಳನ್ನು ಬಳಸಿ. ಮೈ ತೂಕ ಹೆಚ್ಚದಿರಲು ಆಹಾರಕ್ರಮದ ಕಡೆ ಗಮನ ಕೊಡಿ, ಮೈ ತೂಕ ಹೆಚ್ಚಿದರೆ ಮಂಡಿ ನೋವಿನ ಸಮಸ್ಯೆ ಉಂಟಾಗುವುದು. ನಾರಿನಂಶ, ವಿಟಮಿ®Õ…, ಖನಿಜಾಂಶಗಳು ಅಧಿಕವಿರುವ ಆಹಾರ ಆಹಾರ ಕ್ರಮದಲ್ಲಿರಲಿ. ಮೀನು, ಕಾಳುಗಳು, ಬಟಾಣಿ, ಬೀನ್ಸ್ ಇವುಗಳನ್ನು ಆಹಾರದಲ್ಲಿ ಬಳಸುವವರಿಗೆ ಅಕಾಲಿಕ ಮೆನೋಪಾಸ್ ಉಂಟಾಗುವುದಿಲ್ಲ.
-ಅಕಾಲಿಕ ಮೆನೋಪಾಸ್ ಆದಾಗ ಹೀಗೆ ಮಾಡಿ
ಶಸ್ತ್ರಚಿಕಿತ್ಸೆಯ ಮೂಲಕ ಅಂಡಾಶಯವನ್ನು ತೆಗೆಸಿದಾಗ ಮೆನೋ ಪಾಸ್ ಆಗಬಹುದು. ಅದೇ ರೀತಿ ಗರ್ಭಪಾತ, ಕೃತಕ ಗರ್ಭಧಾರಣೆ, ಕ್ಯಾನ್ಸರ್‌ಗೆ ಚಿಕಿತ್ಸೆ ತೆಗೆದುಕೊಂಡಾಗ ಅಕಾಲಿಕ ಮೆನೋಪಾಸ್ ಉಂಟಾಗುವುದು. ಹಾರ್ನೋನ್‌ಗಳ ವ್ಯತ್ಯಾಸದಿಂದ ದೇಹದ ತೂಕ ಹೆಚ್ಚಾಗುವುದು ಅಥವಾ ತುಂಬಾ ಕಡಿಮೆಯಾಗುವುದು ಉಂಟಾಗುತ್ತದೆ. ಕೆಲವರಿಗೆ ಈ ಕಾರಣದಿಂದ ಖನ್ನತೆ ಸಮಸ್ಯೆ ಉಂಟಾಗುತ್ತದೆ.ಈ ರೀತಿ ಉಂಟಾದಾಗ ಅವರಿಗೆ ಮನೆಯವರು ಸರಿಯಾದ ಆರೈಕೆ ಮಾಡಿದರೆ ಬೇಗನೆ ಚೇತರಿಸಿಕೊಳ್ಳುತ್ತಾರೆ.
-ಮನೆಯವರ ಸಹಕಾರವಿರಲಿ
ಅಕಾಲಿಕ ಅಥವಾ ನೈಸರ್ಗಿಕವಾಗಿ ಮೆನೋಪಾಸ್ ಉಂಟಾದಾಗ ಮಹಿಳೆಗೆ ಮನೆಯಲ್ಲಿ ಪತಿ ಹಾಗೂ ಮಕ್ಕಳ ಆರೈಕೆ ಬೇಕಾಗುತ್ತದೆ. ಈ ಸಮಯದಲ್ಲಿ ತನ್ನನ್ನು ಪ್ರೀತಿಸುವವರು ಯಾರೂ ಇಲ್ಲ ಅಂತ ಅನಿಸಬಹುದು, ಹಾಗಾಗಿ ಸೂಕ್ತ ಕಾಳಜಿ ತೋರಿಸಿದರೆ ಆ ಭಾವನೆ ಯನ್ನು ಇಲ್ಲವಾಗಿಸಬಹುದು. ಈ ಸಮಯದಲ್ಲಿ ಭಾವನಾತ್ಮಕವಾಗಿ ಬೆಂಬಲ ನೀಬೇಕೆ ಹೊರತು ಈ ವಯಸ್ಸಿನಲ್ಲಿ ಇವೆಲ್ಲ ಸಹಜ ಅಂತ ಮನೆಯವರು ಅಸಡ್ಡೆ ಮಾಡಬಾರದು.
-ಆರೋಗ್ಯ ತಪಾಸಣೆ ಮಾಡಿಸಿ
ಈ ಸಮಯದಲ್ಲಿ ಥೈರಾಯ್ಡ್, ಗರ್ಭಕೋಶದ ಸಮಸ್ಯೆಯಿದ್ದರೆ ಪತ್ತೆ ಹಚ್ಚಲು ಸಹಾಯವಾಗುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡಬೇಕು, ಸ್ವಲ್ಪ ಹೊತ್ತು ಸೂರ್ಯನ ಬಿಸಿಲಿನಲ್ಲಿ ನಿಲ್ಲುವುದರಿಂದ ವಿಟಮಿನ್ ಡಿ ದೊರೆಯುತ್ತದೆ. ಇದರಿಂದ ಮೂಳೆಗಳು ಬಲವಾಗುತ್ತವೆ.
ಸುಶ್ಮಿತಾ ಜೈನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.