ನೋವು ನಲಿವುಗಳ ಸಮ್ಮಿಲನವೇ ಬದುಕು
Team Udayavani, Sep 9, 2019, 5:10 AM IST
ಬದುಕು ಎಂದರೆ ನೋವು ನಲಿವುಗಳ ಸಮ್ಮಿಲನ. ಬುದ್ಧಿವಂತಿಕೆ, ಪರಿಶ್ರಮ, ಕ್ರಿಯಾಶೀಲ ಗುಣದಿಂದ ಜೀವನದ ಪ್ರತಿಯೊಂದು ಸಮಸ್ಯೆಗಳನ್ನೂ ಪರಿಹರಿಸಿ ಕೊಳ್ಳಬಹುದು. ಸ್ವತಂತ್ರವಾಗಿ ಬದುಕು ರೂಪಿಸಿಕೊಳ್ಳಬೇಕು ಎನ್ನುವ ಹಂಬಲ ಇರುವವರು ಛಲ, ಧೈರ್ಯ, ಸತತ ಪರಿಶ್ರಮ, ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು.
ಎಲ್ಲಿ ಬದ್ಧತೆ ಇದೆಯೋ ಅಲ್ಲಿ ಉನ್ನತಿ ಸುಲಭ ಸಾಧ್ಯ ಎಂಬ ಮಾತಿದೆ. ಬದ್ಧತೆ ಎಂದರೆ ಒಬ್ಬ ವ್ಯಕ್ತಿ ತಾನು ನಿರ್ವಹಿಸಲು ಇಚ್ಛಿಸಿದ ಕೆಲಸವನ್ನು ಶ್ರದ್ಧೆ,ನಿಷ್ಠೆ ,ಪ್ರಾಮಾಣಿಕವಾಗಿ ಪೂರ್ಣ ಗೊಳಿಸಲು ಪ್ರಯತ್ನಿಸುವ ಮನೋಭಾವ.
ಹಲವರು ದೊಡ್ಡ ಕನಸು ಕಾಣುತ್ತಾರೆ. ಆದರೆ ಬದ್ಧತೆ ಇರದಿದ್ದರೆ ಅವರು ಗುರಿಸಾಧನೆಯ ಕಡೆಗೆ ಪಯಣಿಸುವುದು ಕಷ್ಟ. ಬದ್ಧತೆಯು ವ್ಯಕ್ತಿಯನ್ನು ಗುರಿಯ ಜತೆಗೆ ಬಂಧಿಸುವ ಅಂಟು ಇದ್ದಂತೆ. ಇದು ಗಂಟೆಗಟ್ಟಲೆ ಕೆಲಸದಲ್ಲಿ ಮಗ್ನನಾಗುವಂತೆ ಮಾಡುತ್ತದೆ ಮತ್ತು ಬದುಕಿನಲ್ಲಿ ಯಶಸ್ಸಿಗೆ ಬೇಕಾದ ಕೌಶಲಗಳನ್ನು ಪರಿಪೂರ್ಣಗೊಳಿಸುತ್ತಾ ಸಾಗುತ್ತದೆ.
ಋಣಾತ್ಮಕ ಚಿಂತನೆ ಬಿಟ್ಟು ಕಲ್ಪನಾಶಕ್ತಿಯನ್ನು ಬಳಸಿಕೊಂಡು ಗುರಿಯನ್ನು ತಲುಪುತ್ತೇನೆ ಎಂದು ಪಣತೊಡಿ. ಸಾಧನೆ ಸುಲಭವಾಗುತ್ತದೆ. ಕಂಡ ಕನಸು ನನಸಾಗುವವರೆಗೂ ನಿರಂತರ ಪ್ರಯತ್ನ ಜಾರಿಯಲ್ಲಿದ್ದರೆ, ಯಾವುದೇ ಸನ್ನಿವೇಶವು ನಿಮ್ಮನ್ನು ಗುರಿಯಿಂದ ವಿಮುಖರಾಗಿಸಲು ಸಾಧ್ಯವಿಲ್ಲ. ದಿನವೂ ನಿಮ್ಮಷ್ಟಕ್ಕೆ ನೀವೇ ಇದು ನನ್ನಿಂದ ಸಾಧ್ಯ ಎಂದು ಹೇಳಿಕೊಳ್ಳಿ. ಇದು ನಿಮ್ಮನ್ನು ಹೆಚ್ಚು ಶಕ್ತಿವಂತರನ್ನಾಗಿಸುತ್ತದೆ.
ಸಾಧನೆಗೆ ಪ್ರಯತ್ನಿಸಲು ಒಳ್ಳೆಯ ಸಮಯ ಬರಲಿ ಎಂದು ಕಾಯಬೇಡಿ. ಅಂಥ ಸಮಯ ಎಂದೂ ಬಾರದು. ಸಮಸ್ಯೆಗಳಿಗೆ ಹೆದರದೇ ಅವುಗಳನ್ನು ಸವಾಲಾಗಿ ಸ್ವೀಕರಿಸಿ ಪರಿಹಾರ ಹುಡುಕಿಕೊಳ್ಳುವುದು ಜಾಣತನ.
ನಿರಂತರ ವಾಗಿರಲಿ
ಗೊತ್ತುಗುರಿಗಳಿಲ್ಲದ ಬದುಕು ಹರಿಗೋಲಿಲ್ಲದ ದೋಣಿಯಂತೆ. ಗುರಿ ಇಲ್ಲದೆ ಸಾಗುವ ಬದುಕಿಗೆ ಅರ್ಥವಿಲ್ಲ. ನಮ್ಮ ಸಾಮರ್ಥ್ಯ ಅರಿತು ನಾವೇ ಗುರಿ ನಿಗದಿಪಡಿಸಬೇಕು. ಗುರಿಯನ್ನು ಇದ್ದಕ್ಕಿದ್ದಂತೆ ಸಾಧಿಸಲು ಸಾಧ್ಯವಿಲ್ಲ. ನಿರಂತರ ಪರಿಶ್ರಮ ಅಗತ್ಯ. ಧನಾತ್ಮಕ ಚಿಂತನೆಯುಳ್ಳವರು ಸದಾ ಗುರಿಯತ್ತ ಪ್ರಯತ್ನ ಶೀಲರಾಗಿ ರುತ್ತಾರೆ.
ಸೋಲಿನ ಬಗ್ಗೆ ಯೋಚಿಸದೆ ನಾವಿಡುವ ಹೆಜ್ಜೆಯ ಕಡೆಗೆ ಗಮನ ಹರಿಸಬೇಕು. ಸಾಧನೆಯ ಹಾದಿಯಲ್ಲಿ ಎತ್ತರದ ಬೆಟ್ಟಗಳನ್ನು ಏರಿದಂತೆ ಎದುರಿನ ಇನ್ನೊಂದು ಬೆಟ್ಟ ಗೋಚರಿಸುತ್ತದೆ. ಸೃಜನಶೀಲ ಗುಣ, ಸಾಮರ್ಥ್ಯ ಬಳಸಿಕೊಂಡು ಗುರಿ ತಲುಪಲು ನಿರ್ದಿಷ್ಟ ಯೋಜನೆಗಳನ್ನು ರೂಪಿಸಿ. ಅಲ್ಲದೆ ದಿನ ನಿತ್ಯ ಸ್ವಲ್ಪ ಸ್ವಲ್ಪವೇ ಪೂರ್ತಿಗೊಳಿಸಲು ಪ್ರಯತ್ನಿಸುವುದು ಉತ್ತಮ.
- ಗಣೇಶ ಕುಳಮರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.