ಕಾಲಿನ ಅಂದ ಹೆಚ್ಚಿಸುತ್ತೆ ಜರ್ದೋಸಿ ಚಪ್ಪಲ್
Team Udayavani, Nov 2, 2018, 12:58 PM IST
ಹೊಸ ಪಾದರಕ್ಷೆ ಖರೀದಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಸದ್ಯ ಟ್ರೆಂಡ್ ಬದಲಾಗಿದ್ದು, ಒಂದು ಜತೆ ಚಪ್ಪಲ್ ಹಾಳಾದ ಬಳಿಕ ಹೊಸ ಚಪ್ಪಲ್ ಖರೀದಿ ಟ್ರೆಂಡ್ ಹೋಗಿದೆ. ಹೊಸ ಟ್ರೆಂಡಿಗೆ ತಕ್ಕಂತೆ ಚಪ್ಪಲ್‌ಗಳಲ್ಲಿಯೂ ವಿವಿಧ ಡಿಸೈನ್‌ಗಳು ಬಂದಿದೆ. ಯುವತಿಯರಲ್ಲಂತೂ ತರಹೇವಾರಿ ಡಿಸೈನ್‌ಗಳ ಚಪ್ಪಲ್‌ಗಳು ಇರುತ್ತದೆ. ಕೆಲವೊಬ್ಬರು 30ಕ್ಕೂ ಹೆಚ್ಚಿನ ಜತೆ ಚಪ್ಪಲ್ ಖರೀದಿ ಮಾಡಿಟ್ಟಿರುತ್ತಾರೆ.
ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಡಿಸೈನ್‌ಗಳಲ್ಲಿ ಪಾದರಕ್ಷೆಗಳು ಮಾರುಕಟ್ಟೆಗೆ ಬರುತ್ತಿದೆ. ಅದರಲ್ಲಿಯೂ ಜರ್ದೋಸಿ ಕಸೂತಿ ಕೆಲಸ ಮಾಡಿದ ಫೂಟ್‌ವೆರ್ ಟ್ರೆಂಡ್ ಪ್ರಾರಂಭವಾಗಿದೆ. ಸಾಮಾನ್ಯ ಚಪ್ಪಲ್‌ಗೆ ಹೋಲಿಕೆ ಮಾಡಿದರೆ ಇದಕ್ಕೆ ಬೆಲೆ ಹೆಚ್ಚಾದರೂ, ನೋಡಲು ಆಕರ್ಷಿಸುವಂತಿರುತ್ತದೆ. ಅಲ್ಲದೆ, ಕಸೂತಿ ಕೆಲಸದಿಂದಾದಾಗಿ ಸಾಮಾನ್ಯ ಪಾದರಕ್ಷೆಗಿಂತ ಸುಂದರವಾಗಿ ಕಾಣುತ್ತದೆ.
ಇತ್ತೀಚೆಗೆ ಮುಖದ ಅಂದದ ಜೊತೆಗೆ ಕಾಲಿನ ಅಂದಕ್ಕೂ ಪ್ರಾಮುಖ್ಯತೆ ನೀಡುತ್ತಾರೆ. ಜರ್ದೋಸಿ ಫೂಟ್‌ವೆರ್ ಇಷ್ಟ ಪಡಲೂ ಅದೇ ಕಾರಣ. ಏಕೆಂದರೆ ಈ ಪಾದರಕ್ಷೆಗೆ ಮ್ಯಾಚಿಂಗ್ ಡ್ರೆಸ್ ಬೇಕಂತಿಲ್ಲ. ಸಮಾರಂಭಗಳಿಗೆ ಧಿರಿಸುವ ಲೆಹಂಗಾ, ಕುರ್ತಾ, ಶೆರ್ ವಾನಿ, ಸಾರಿಗಳಿಗೆ ಇದು ಮ್ಯಾಚ್ ಆಗುತ್ತದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಜರ್ದೋಸಿ ಪಾದರಕ್ಷೆಗಳಿಗೆ ಬೇಡಿಕೆ ಹೆಚ್ಚಿದೆ.
ಜರ್ದೋಲಿ ಚಪ್ಪಲಿಗಳಲ್ಲಿ ಹೂವಿನ ಅಲಂಕಾರವುಳ್ಳ ಚಪ್ಪಲ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಈ ಬಗೆಯ ಪಾದರಕ್ಷೆಗಳನ್ನು ಖರೀದಿ ಮಾಡುವುದು ಕೂಡ ಇಂದಿನ ಹೊಸ ಟ್ರೆಂಡ್ ಆಗಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಯುವತಿಯರು ಹೂವಿನ ಅಳಂಕಾರವುಳ್ಳ ಜರ್ದೋಸಿ ಪಾದರಕ್ಷೆಗಳನ್ನು ಇಷ್ಟಪಡುತ್ತಿದ್ದಾರೆ. ಅದರಲ್ಲಿಯೂ ಜೀನ್ಸ್‌ಗೆ ಈ ರೀತಿಯ ಶೂಗಳು ಅಂದ ನೀಡುತ್ತದೆ.
ಮಾರುಕಟ್ಟೆಯಲ್ಲಿ ಹೂವಿನ ಅಲಂಕಾರ ಜರ್ದೋಸಿ ಹೈಹೀಲ್ಡ್ ಶೂ, ಚಪ್ಪಲಿಗಳು ಲಭ್ಯವಿದ್ದು, ಹಿಮ್ಮಡಿ ಎತ್ತರದಲ್ಲಿರುವ, ತೆಳುವಾದಂತಹ, ಚಪ್ಪಟೆ ವಿನ್ಯಾಸ ಚಪ್ಪಲ್‌ಗಳು ಕೂಡ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗುತ್ತಿದೆ. ಶಾಲಾ ಕಾಲೇಜು ಯುವತಿಯರಿಗೆ ಜರ್ದೋಸಿ ಚಪ್ಪಲ್‌ಗಳು ಅಚ್ಚು ಮೆಚ್ಚು. ಅದರಲ್ಲಿಯೂ ಹೀಲ್ಸ್ ಇಲ್ಲದೆ, ಇರುವಂತಹ ಚಪ್ಪಟೆ ಚಪ್ಪಲ್ ಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ.
ಆನ್‌ಲೈನ್ ಬೇಡಿಕೆ
ಜರ್ದೋಲಿ ಚಪ್ಪಲ್ ಗಳಿಗೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಸಾಮಾನ್ಯ ಅಂಗಡಿಗಳಲ್ಲಿ ತರಹೇವಾರಿ ಡಿಸೈನ್ ಗಳು ಸಿಗದೇ ಇರಬಹುದು. ಈ ಸಮಯದಲ್ಲಿ ಆನ್‌ಲೈನ್ ನಲ್ಲಿ ಖರೀದಿ ಮಾಡಲು ಅನೇಕ ಮಂದಿ ಇಷ್ಟಪಡುತ್ತಾರೆ. ಏಕೆಂದರೆ ಆನ್ ಲೈನ್‌ನಲ್ಲಿ ಗುಣಮಟ್ಟ ಮತ್ತು ಬ್ರಾಂಡ್‌ಗೆ ಆಧರಿಸಿ 800 ರೂ.ನಿಂದ 1,500 ರೂ.ವರೆಗಿನ ಚಪ್ಪಲ್‌ಗಳು ಲಭ್ಯವಿದೆ.
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.