ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜಂಟಿ ಜವಾಬ್ದಾರಿ
Team Udayavani, Feb 10, 2020, 5:56 AM IST
ಈ ಆಧುನಿಕ ಕಾಲಘಟ್ಟದಲ್ಲಿ ಆರ್ಥಿಕ ಶಿಸ್ತು ಎಷ್ಟಿದ್ದರೂ ಕಡಿಮೆಯೇ. ಅದರಲ್ಲೂ ವಿದ್ಯಾಭ್ಯಾಸಗಳ ಖರ್ಚುಗಳು ಕೈಗೆಟಕುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಶೇ. 5-20ರಷ್ಟು ರೂಪದಲ್ಲಿ ಏರಿಕೆಯಾಗುತ್ತಿವೆ. ಈ ಸಂದರ್ಭ ವನ್ನು ಸರಿಯಾಗಿ ನಿರ್ವಹಿಸಲು ನಮ್ಮ ಖರ್ಚುಗಳನ್ನು ಕಡಿತಗೊಳಿಸಿ, ಅದನ್ನು ಉಳಿತಾಯದತ್ತ ಮುಖ ಮಾಡಿಸುವ ಜವಾ ಬ್ದಾರಿ ಇದೆ. ಇಲ್ಲಿ ಸಣ್ಣ ಪ್ರಾಯದ ಮಕ್ಕಳಿಂದ ಹಿಡಿದು ಹೆತ್ತವರ ತನಕ ಉತ್ತಮ ನಾಳೆಗಾಗಿ ಹಾಕಿಕೊಳ್ಳಬಹುದಾದ ಜಂಟಿ ಉಳಿತಾಯ ಕ್ರಮಗಳನ್ನು ಕಾರ್ತಿಕ್ ಅಮೈ ಅವರು ವಿವರಿಸಿದ್ದಾರೆ.
ವಿದ್ಯಾರ್ಥಿ ಜೀವನದ ಆರ್ಥಿಕ ಶಿಸ್ತು ಭವಿಷ್ಯವನ್ನು ನಿರ್ಧ ರಿಸಬಹುದು. ಇಂದು ಶಿಕ್ಷಣ ತುಂಬಾ ದುಬಾರಿಯಾಗುತ್ತಿದೆ. ವಾರ್ಷಿಕವಾಗಿ ಶೇ. 10ರಷ್ಟು ಶಿಕ್ಷಣದ ಶುಲ್ಕ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಒಳ್ಳೆಯ ಯೋಜನೆಯನ್ನು ರೂಪಿಸಿ ಕೊಂಡು ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಆರ್ಥಿಕ ಹಿನ್ನಡೆಯಾ ಗದಂತೆ ನೋಡಿಕೊಳ್ಳಬಹುದು. ಈ ಜವಾಬ್ದಾರಿ ಹೆತ್ತವರಿಗೆ ಮತ್ತು ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ಉಳಿತಾಯ ಮಾಡಲಿರುವಅವಕಾಶಗಳು ಮತ್ತು ಹೆತ್ತವರಿಗಿರುವ ಸಾಧ್ಯತೆಗಳನ್ನು ನೀಡಲಾಗಿದೆ.
ವಿದ್ಯಾರ್ಥಿ ಜೀವನದಲ್ಲಿಯೇ ಮಕ್ಕಳು ಬ್ಯಾಂಕ್ ಅಕೌಂಟ್ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದರೆ ಅವರ ಭವಿಷ್ಯಕ್ಕೆ ಉತ್ತಮ ಅಡಿಪಾಯ ದೊರಕಿದಂತಾಗುತ್ತದೆ. ಮಕ್ಕಳು ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಇವು ಅವರ ಶೈಕ್ಷಣಿಕ ಬದುಕಿನಲ್ಲಿಯೂ ಸಾಲ ಸೌಲಭ್ಯ ಸಹಿತ ಇತರ ಆವಶ್ಯಕತೆಗಳನ್ನು ಪೂರೈಸಲು ನೆರವಾಗುತ್ತದೆ.
10 ವರ್ಷಕ್ಕಿಂತ ಹೆಚ್ಚು ವಯೋಮಾನದ ಮಕ್ಕಳು ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆಯಲು ತಮ್ಮ ಹೆತ್ತವರು ಅಥವಾ ಪೋಷಕರ ನೆರವು ಪಡೆದುಕೊಂಡು ಅಥವಾ ತಾವೇ ಸ್ವತಂತ್ರವಾಗಿ ಬ್ಯಾಂಕ್ ಖಾತೆ ತೆರೆಯಬಹುದು. 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ವತಂತ್ರವಾಗಿ ಉಳಿತಾಯ ಖಾತೆ ನಿರ್ವಹಿಸಲು ಅನುಕೂಲವಾಗುವಂತಹ ಯೋಜನೆಗಳು ಇಂದು ಬ್ಯಾಂಕಿಂಗ್ ವಲಯದಲ್ಲಿವೆೆ. ಹೀಗಾಗಿ ಹೆತ್ತವರ ಸಹಾಯವಿಲ್ಲದೆ ಖಾತೆ ತೆರೆಯಬಹುದು. ಹೆಚ್ಚುವರಿ ಸೌಲಭ್ಯಗಳಿಗಾಗಿ ಇಂಟರ್‌ನೆಟ್ ಬ್ಯಾಂಕಿಂಗ್, ಎಟಿಎಂ, ಡೆಬಿಟ್ ಕಾರ್ಡ್, ಚೆಕ್‌ಬುಕ್ ಸೌಲಭ್ಯಗಳನ್ನು ಅಪ್ರಾಪ್ತ ಮಕ್ಕಳಿಗೆ ಒದಗಿಸಲು ಅನುಮತಿ ಇದೆ. ಆದರೆ ಬಳಕೆಯಲ್ಲಿ ಮಾತ್ರ ಎಚ್ಚರ ತಪ್ಪಬಾರದು.
ಉತ್ತಮ ಉಳಿತಾಯ
ಮಕ್ಕಳ ಶಾಲಾ ದಿನಗಳಲ್ಲಿ ಅಗತ್ಯದ ಖರ್ಚಿಗೆ ಅಷ್ಟಾಗಿ ಹಣದ ಅಗತ್ಯತೆ ಕಾಡುವುದಿಲ್ಲ. ಯಾಕೆಂದರೆ, ಮಕ್ಕಳ ಪೋಷಕರೇ ಮಕ್ಕಳ ಜವಾಬ್ದಾರಿ ನಿರ್ವಹಿಸುತ್ತಾರೆ. ಆದರೆ, ಭವಿಷ್ಯದಲ್ಲಿ ಉನ್ನತ ಶಿಕ್ಷಣ ಅಥವಾ ಇತರ ಅಗತ್ಯಕ್ಕಾಗಿ ಹಣ ಬೇಕೆನಿಸಿದಾಗ ಹೆತ್ತವರ ಬಳಿ ಕೇಳುವುದಕ್ಕಿಂತಲೂ, ಸ್ವಾವಲಂಬಿಯಾಗಿ ಹಣ ಖರ್ಚು ಮಾಡಲು ಯೋಚಿಸಬೇಕು. ಅದಕ್ಕಾಗಿ ಉಳಿತಾಯ ಮನೋಭಾವ ಚಿಕ್ಕಂದಿನಿಂದಲೇ ಮೂಡಿ ಬಂದರೆ ಮುಂದೆ ಉಪ ಯೋಗ ವಾಗುತ್ತದೆ. ಅದರಲ್ಲೂ ವಿದ್ಯಾರ್ಥಿ ಬದುಕಿನಲ್ಲಿ ಉಳಿತಾಯದ ಗುಣಗಳು ಇದ್ದಾಗ, ಭವಿಷ್ಯ ಉಜ್ವಲವಾಗಬಹುದು.
ಪ್ರತೀ ಹಣದ ಬಗ್ಗೆ ಜಾಗೃತಿ ಹಾಗೂ ಖರ್ಚು ಮಾಡುವ ವಿಧಾನ ಎಲ್ಲವೂ ಗಣನೆಗೆ ಬರುತ್ತದೆ. ಹೀಗಾಗಿ ಬ್ಯಾಂಕ್ ಖಾತೆ ತೆರೆದರೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ. ವಿದ್ಯಾರ್ಥಿಗಳು ಯಾವುದೇ ಬ್ಯಾಂಕಿನಲ್ಲಿ ಖಾತೆ ತೆರೆಯಲು ಹೋಗುವಾಗ ಅಗತ್ಯ ದಾಖಲೆಯನ್ನು ಕೊಂಡೊಯ್ಯಬೇಕು. ವಿದ್ಯಾರ್ಥಿಗಳ ಸ್ಟಡಿಸರ್ಟಿಫಿಕೇಟ್, ಜನನ ಪ್ರಮಾಣ ಪತ್ರ, ಫೋಟೋ, ಪಾಲಕರ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್, ಪಾಲಕರ ಗುರುತಿನ ಚೀಟಿ, ಶಾಲೆಯ ಗುರುತಿನ ಚೀಟಿ ಮೊದಲಾದವುಗಳು ಬೇಕಾಗಿ ಬರುತ್ತದೆ.
ಹಾಗಾದರೆ ಮಕ್ಕಳಿಗೆ ಹಣ ಎಲ್ಲಿಂದ?
ಹೌದು.ವಿದ್ಯಾಭ್ಯಾಸದ ಸಮಯದಲ್ಲಿ ಮಕ್ಕಳಿಗೆ ಆದಾಯ ಅಥವಾ ಹಣ ಗಳಿಸುವ ಅವಕಾಶ ತೀರಾ ಕಡಿಮೆ. ಆದರೆ ಅಸಾಧ್ಯವಾದುದೇನಲ್ಲ. ಸರಕಾರ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸ್ಕಾಲರ್‌ಶಿಪ್‌ಗ್ಳನ್ನು ನೀಡುತ್ತದೆ. ಇಂತಹ ಸ್ಕಾಲರ್‌ಶಿಪ್‌ಗ್ಳು ಮಕ್ಕಳ ಖಾತೆಗೆ ಬರುವುದರಿಂದ ಆ ಹಣವನ್ನು ಖರ್ಚು ಮಾಡದೇ ಇಡಬಹುದಾಗಿದೆ.
1.ಹಲವು ಸಂದರ್ಭ ನಡೆಯುವ ಪ್ರಬಂಧ ಸ್ಪರ್ಧೆ, ಚಿತ್ರ ಕಲೆ, ಭಾಷಣ ಮೊದಲಾದ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅದರಲ್ಲಿ ಹಣದ ರೂಪದಲ್ಲಿ ಬಹುಮಾನ ಲಭಿಸುತ್ತದೆ. ಈ ಹಣವನ್ನು ಖಾತೆಗೆ ಹಾಕಿಡಬಹುದು.
2.ಹೆಚ್ಚಾಗಿ ಮನೆಗಳಿಗೆ ನೆಂಟರು ಬಂದಾಗ ಅಥವಾ ಸಂಬಂಧಿಕರ ಮನೆಗೆ ಹೋದಾಗ ಮಕ್ಕಳನ್ನು ಖುಷಿ ಪಡಿಸಲು ಹಣವನ್ನು ನೀಡುವುದು ಕ್ರಮ. ಇಂತಹ ಹಣವನ್ನು ತಮ್ಮ ಖಾತೆಗೆ ಜಮೆ ಮಾಡಿಕೊಳ್ಳಬಹುದು.
3.ಇನ್ನು ರಜಾ ಅವಧಿಯಲ್ಲಿ ಸಣ್ಣಪುಟ್ಟ ಕೆಲಸಗಳಿಗೆ ತೆರಳಬಹುದಾಗಿದೆ.
ಉದಾ: ಪತ್ರಿಕೆ, ಹಾಲು ಹಾಕುವುದು, ಅಂಗಡಿಗಳಲ್ಲಿ ಕೆಲಸ ಮಾಡುವಂತಹ ಅವಕಾಶಗಳು ಲಭಿಸಿದರೆ ಉಪಯೋಗಿಸಿಕೊಳ್ಳಿ. ಇದರಿಂದ ಒಂದಷ್ಟು ಪ್ರಮಾಣದ ಹಣ ಗಳಿಸಬಹುದಾಗಿದೆ.
4.ಈ ಎಲ್ಲಾ ಮೂಲಗಳಿಂದ ನೀವು ವರ್ಷಕ್ಕೆ ಕನಿಷ್ಠ 1,000 ರೂ. ಉಳಿತಾಯ ಮಾಡಿದರೆ ನಿಮ್ಮ ಪದವಿ ವ್ಯಾಸಂಗದ ಸಂದರ್ಭ ದೊಡ್ಡ ಮೊತ್ತವಾಗಿರಲಿದೆ. ಇದಕ್ಕೆ ಬ್ಯಾಂಕ್ ಒಂದಷ್ಟು ಬಡ್ಡಿಯೂ ನೀಡಲಿದೆ.
ಮಕ್ಕಳ ವಿದ್ಯಾಭ್ಯಾಸ ಹೇಗೆ? ಮಗುವಿನ ಜೀವನಕ್ಕೆ ಎಷ್ಟು ಹಣದ ಆವಶ್ಯಕತೆ ಇದೆ ಎಂಬುದನ್ನು ಮೊದಲೇ ಚಿಂತಿಸಿದರೆ ಭವಿಷ್ಯದಲ್ಲಿ ಕಿರಿಕಿರಿ ಇರುವುದಿಲ್ಲ. ಮದುವೆಯಾದ ತಿಂಗಳಿಂದಲೇ ಮೂರು ಸಾವಿರದಂತೆ ಆರ್‌ಡಿಯಲ್ಲಿ ಉಳಿಸುತ್ತಾ ಬನ್ನಿ. ಮೂರು ವರ್ಷಗಳ ಬಳಿಕ ಮಕ್ಕಳಾಗಿ, ಅದು ಶಾಲೆಗೆ ಸೇರುವ ಹೊತ್ತಿಗೆ ಹೆಚ್ಚು-ಕಡಿಮೆ ಬಡ್ಡಿ ಸೇರಿಸಿ ದೊಡ್ಡ ಮೊತ್ತ ದೊರೆಯುತ್ತದೆ.
ಹೆತ್ತವರು ಏನು ಮಾಡಬಹುದು?
ಮಕ್ಕಳಿಗಾದರೂ ಉಳಿತಾಯ ಮಾಡಿ ಈ ಉಳಿತಾಯ ನಿಮಗಲ್ಲದೇ ಇದ್ದರೂ ಮಕ್ಕಳಿಗಾದರೂ ಮಾಡಲೇಬೇಕು. ಯಾಕೆಂದರೆ, ಪ್ರತಿ ವರ್ಷ ವಿದ್ಯಾಭ್ಯಾಸ ಖರ್ಚು ಶೇ. 5 ರಿಂದ 10ರಷ್ಟು ಏರುತ್ತಿದೆ. ಮನೆಯಲ್ಲಿ ಎರಡು ಮಕ್ಕಳಿದ್ದರೆ ( ನಾಲ್ಕು ವರ್ಷದ ಮಕ್ಕಳು) ವರ್ಷಕ್ಕೆ ಒಂದು ಲಕ್ಷ ಎತ್ತಿಡುವ ಅನಿವಾರ್ಯವಿರುವುದರಿಂದ ಉಳಿತಾಯದ ಹಾದಿ ತುಳಿಯಲೇ ಬೇಕು. ಇಲ್ಲದಿದ್ದರೆ ಮುಂದೆ ಕಷ್ಟವಾಗುತ್ತದೆ.
ಶಿಕ್ಷಣದ ಲೆಕ್ಕ ಮಾಡಿ
ಮಕ್ಕಳ ವಿದ್ಯಾಭ್ಯಾಸ ಹೇಗೆ? ಮಗುವಿನ ಬೆಳವಣಿಗೆಗೆ ಎಷ್ಟು ವ್ಯಯವಾಗಬಹುದು ಎಂದು ಮೊದಲೇ ಚಿಂತಿಸಿ ಅಗತ್ಯಕ್ಕೆ ತಕ್ಕಂತೆ ಉಳಿತಾಯ ಮಾಡಿ. ಮಕ್ಕಳ ಭವಿಷ್ಯದ ವಿದ್ಯಾಭ್ಯಾಸದ ನೆರವಿಗೆಂದು ನಾನಾ ಬಗೆಯ ಯೋಜನೆಗಳಿವೆ. ಮಗುವಿನ ಪ್ರಾಥಮಿಕ ಶಿಕ್ಷಣಕ್ಕೆ ಯಾವುದೇ ಅಡ್ಡಿ ಇಲ್ಲ. ಇಂತಹ ಸಣ್ಣ, ಸಣ್ಣ ಉಳಿತಾಯ ದೊಡ್ಡ ಕಷ್ಟದಲ್ಲಿ ಕೈ ಹಿಡಿಯುತ್ತದೆ.
ಇವುಗಳಿಂದ ಟ್ಯಾಕÕ… ಕನ್ಸೆಶನ್ ಸಿಗುವ ಜತೆಗೆ ಸೇವಿಂಗ್ ಸಹ ಆಗುತ್ತದೆ. ಕೆಲವು ಸ್ಕೀಮ್‌ಗಳಲ್ಲಿ ಮಗುವಿಗೆ ಎರಡು ವರ್ಷ ಇರುವಾಗ ಕಂತಿನ ಹಣ ನಿಗದಿತವಾಗಿ ಕಟ್ಟಲು ಆರಂಭಿಸಿ 18 ವರ್ಷ ಆಗುವ ವರೆಗೆ ಪಾವತಿಸುತ್ತ ಬಂದರೆ, ಅದಕ್ಕೆ ಬಡ್ಡಿ, ಬೋನಸ್ ಎಲ್ಲ ಸೇರಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಒಳ್ಳೆಯ ಆದಾಯವಾಗುತ್ತದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಸುಲಭವಾಗುತ್ತದೆ.
ಉಳಿತಾಯ ಯೋಜನೆಗೆ ಬರವಿಲ್ಲ
ಉಳಿತಾಯಕ್ಕೆ ನೂರಾರು ದಾರಿಗಳಿವೆ. ಆದರೆ ಉಳಿತಾಯ ಮಾಡಬೇಕು ಎನ್ನುವ ಯೋಚನೆ ಮನಸ್ಸಿಗೆ ಬರಬೇಕು ಅಷ್ಟೇ. ಇವತ್ತು ಉಳಿತಾಯ ಮಾಡಿದರೆ ಇವತ್ತೇ ಬದಲಾವಣೆ ಅಸಾಧ್ಯ. ನಮ್ಮ ಆವಶ್ಯಕತೆಗೆ ಅನುಗುಣವಾಗಿಯೇ ಉಳಿತಾಯದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಎಲ್ಲ ಆದಾಯಗಳ ಮೂಲವನ್ನು ಗುಡ್ಡೆ ಹಾಕಿ. ತಿಂಗಳಿಗೆ ಎಷ್ಟು ಕೈಗೆ ಬರುತ್ತಿದೆ. ಎಷ್ಟು ಖರ್ಚಾಗುತ್ತಿದೆ ಎನ್ನುವುದನ್ನು ಪಟ್ಟಿ ಮಾಡಿ.
ಹೂಡಿಕೆಯತ್ತವೂ ಚಿತ್ತಹರಿಸಬಹುದು
ಬ್ಯಾಂಕಿನ ಆರ್‌ಡಿ ಖಾತೆ ಬಹಳ ಸೇಫ್. ಇದು 10 ವರ್ಷಕ್ಕೆ ಮಾತ್ರ. ಪ್ರತಿ ತಿಂಗಳು ನೀವು 3 ಸಾವಿರ ಹಾಕಿದರೆ 10 ವರ್ಷಕ್ಕೆ ಶೇ. 9.5ರ ಬಡ್ಡಿ ದರದಲ್ಲಿ 6 ಲಕ್ಷ ರೂ. ದೊರೆಯಬಹುದು. ಇದನ್ನು ಉಳಿದ ಐದು ವರ್ಷಕ್ಕೆ ಕ್ಯಾಶ್ ಸರ್ಟಿಫಿಕೆಟ್‌ಕೊಂಡರೆ 15 ವರ್ಷದ ಹೊತ್ತಿಗೆ ಬಡ್ಡಿ ಎಲ್ಲ ಸೇರಿ ಸುಮಾರು 9 ಲಕ್ಷದ 60 ಸಾವಿರ ರೂ. ದೊರೆಯಬಹುದು. ಇಂಥ ಪ್ಲಾನ್‌ಗಳನ್ನು ಮಾಡಿದರೆ ನಾಲ್ಕೈದು ವರ್ಷದೊಳಗೆ ನೀವು ಆರ್ಥಿಕವಾಗಿ ಸಬಲರಾಗಬಹುದು.ಇನ್ನು ಚಿನ್ನದ ಮೇಲಿನ ಹೂಡಿಕೆಯೂ ಒಳ್ಳೆಯದೆ. ಆದರೆ ಇದು ದೀರ್ಘಾವಧಿಯ ಹೂಡಿಕೆಯಾಗಿರಲಿ. ಇತ್ತೀಚಿಗೆ ಅಲ್ಪಾವಧಿಯ ಹೂಡಿಕೆಯಾಗಿ ಚಿನ್ನ ಅಷ್ಟೊಂದು ಯಶಸ್ವಿಯಾಗಿಲ್ಲ. ತತ್‌ಕ್ಷಣದ ಲಾಭ ನಿರೀಕ್ಷೆ ಇದರಿಂದ ಅಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.