ಇಲಿಗಳನ್ನು ದೂರವಿರಿಸಿ
Team Udayavani, Aug 4, 2018, 2:54 PM IST
ಪ್ರತಿಯೊಬ್ಬರ ಮನೆಯಲ್ಲೂ ಇಲಿಯ ಕಾಟ ಇದ್ದೇ ಇರುತ್ತದೆ. ಹಣ್ಣು, ತರಕಾರಿ, ಬಟ್ಟೆ ಬರೆ, ಪುಸ್ತಕ ಮಾತ್ರವಲ್ಲ ಬಹುತೇಕ ಎಲ್ಲ ವಸ್ತುಗಳನ್ನು ಕಚ್ಚಿ ತುಂಡು ತುಂಡು ಮಾಡುವ ಇಲಿಗಳ ಸಾಹವಾಸವೇ ಬೇಡ ಎಂದು ಇಲಿಪಾಶಣವೋ, ಇಲಿಗೂಡನ್ನು ತಂದಿಡುತ್ತೇವೆ. ಜಾಣ ಇಲಿಗಳು ಇದರ ಬಳಿ ಬರಬೇಕಲ್ವ. ಇನ್ನು ಕೆಲವರು ಬೆಕ್ಕುಗಳನ್ನು ಸಾಕುತ್ತಾರೆ. ಆದರೆ, ಮನೆಯಲ್ಲಿದ್ದ ಹಾಲು, ಮಾಂಸವನ್ನು ತಿಂದು ಕೊಬ್ಬಿದ ಈಗೀನ ಬೆಕ್ಕುಗಳಿಗೂ ಇಲಿಯ ಜತೆ ಆಡುವ ಮನಸ್ಸಿಲ್ಲ. ಹೀಗಾಗಿ ಇಲಿಗಳ ತಾಪತ್ರಯ ಯಾರಿಗೂ ತಪ್ಪಿದ್ದಲ್ಲ.
ಹಲವು ರೋಗಗಳನ್ನು ಹರಡಲು ಕಾರಣವಾಗುವ ಇಲಿಗಳನ್ನು ಮನೆಯಿಂದ ದೂರವಿಡಲು ಕೆಲವೊಂದು ಉಪಾಯಗಳಿವೆ. ಟ್ರೈ ಮಾಡಿ ನೋಡಬಹುದು.
.ಶಬ್ದವಿದ್ದಲ್ಲಿ ಇಲಿಗಳು ಇರುವುದಿಲ್ಲ. ಯಾಕೆಂದರೆ ಶಬ್ದಗಳು ಇಲಿಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಅಷ್ಟೇ ಅಲ್ಲ ಅವುಗಳ ಕಿವಿಯಲ್ಲಿ ರಕ್ತ ಸ್ರಾವಕ್ಕೂ ಕಾರಣವಾಗುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಹೀಗಾಗಿ ಸೌಂಡ್ ಬಾಕ್ಸ್ ಬಳಸಿ ಜೋರಾಗಿ ಆಡಿಯೋ ಪ್ಲೇ ಮಾಡುವುದರಿಂದಲೂ ಮನೆಯಿಂದ ಇಲಿಗಳನ್ನು ದೂರವಿಡಬಹುದು.
.ಕಾಳು ಮೆಣಸಿನ ಹುಡಿಯನ್ನು ಇಲಿಗಳು ಬರುವ ಜಾಗದಲ್ಲಿ ಅಥವಾ ಅವುಗಳ ಬಿಲಗಳಿಗೆ ಹಾಕಿ. ಇದರ ವಾಸನೆಗೆ ಇಲಿಗಳು ಮನೆಯೊಳಗೆ ಬರುವುದಿಲ್ಲ.
.ಲವಂಗದ ಎಲೆಗಳನ್ನು ಇಲಿಯ ಬಿಲದೊಳಗೆ ಅಥವಾ ಮನೆಯ ಸಂದುಗೊಂದಿನಲ್ಲಿ ಇಡುವುದರಿಂದಲೂ ಇಲಿಗಳು ಮನೆಯೊಳಗೆ ಬರುವುದನ್ನು ತಡೆಯಬಹುದು. ಲವಂಗದ ಎಲೆಗಳನ್ನು ತಿನ್ನುವ ಇಲಿಗಳು ಹೆಚ್ಚು ಕಾಲ ಬಾಳುವುದಿಲ್ಲ.
.ಈರುಳ್ಳಿ ಕೂಡ ಇಲಿಗಳನ್ನು ಸಾಯಿಸುವ ಗುಣ ಹೊಂದಿದೆ. ಈರುಳ್ಳಿಯನ್ನು ಕತ್ತರಿಸಿ ಇಲಿಗಳು ಬರುವ ಜಾಗದಲ್ಲಿ ಇಡಬಹುದು.
. ಮಕ್ಕಳ ಪೌಡರ್ ಇಲಿಗಳಿಗೆ ಉಸಿರು ಗಟ್ಟಿಸುವ ಗುಣ ಹೊಂದಿದೆ. ಅದ್ದರಿಂದ ಇಲಿಗಳು ಬರುವ ಜಾಗದಲ್ಲಿ ಮಕ್ಕಳ ಪೌಡರ್ ಹಾಕಿ. ಇದರಿಂದ ಇಲಿಗಳು ಮನೆಯಿಂದ ದೂರವಿರುವುದು ಗ್ಯಾರಂಟಿ.
. ಪುದೀನಾ ವಾಸನೆಯನ್ನು ಇಲಿಗಳು ಸಹಿಸಲಾರವು. ಪುದೀನಾ ಎಣ್ಣೆಯಲ್ಲಿ ಅದ್ದಿ ಹತ್ತಿಯನ್ನು ಇಲಿಗಳು ಓಡಾಡುವ ಜಾಗದಲ್ಲಿ ಇಟ್ಟರೆ ಇಲಿಗಳು ಮನೆಯೊಳಗೆ ಬರಲಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.