ಶುದ್ಧವಾಗಿರಲಿ ಮನೆ
ಎಚ್ಚರ...ಕಲುಷಿತ ವಾಯು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಲ್ಲದು
Team Udayavani, Nov 30, 2019, 4:14 AM IST
ದಿನ ಕಳೆದಂತೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವುದು ಕಳವಳಕಾರಿ. ಇದು ಯಾವುದೇ ದೇಶ ಅಥವಾ ರಾಜ್ಯಕ್ಕೆ ಸೀಮಿತವಾಗಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಇಂದು ದಿಲ್ಲಿಯಲ್ಲಿ ಕಾಣಿಸಿಕೊಂಡಿರುವ ವಿಷಮ ಪರಿಸ್ಥಿತಿ ನಮಗೂ ಬಾರದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ಅತ್ಯಗತ್ಯ. ಅದರಲ್ಲೂ ಮನೆಯ ಒಳಗಿನ ವಿಷಮ ವಾಯು ಶ್ವಾಸದ ಮೂಲಕ ದೇಹವನ್ನು ಸೇರಿ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸ್ವಲ್ಪ ಎಚ್ಚರಿಕೆ ವಹಿಸಿದರೆ ಇದರಿಂದ ಪಾರಾಗಬಹುದು.
ಮಿತಿ ಮೀರಿದ ವಾಯು ಮಾಲಿನ್ಯ ಜನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ದಿಲ್ಲಿ ಸುದ್ದಿಯಲ್ಲಿತ್ತು. ಮಾನವನ ಅತಿಯಾದ ಚಟುವಟಿಕೆಯಿಂದಾಗಿ ವಾಯು ಕಲುಷಿತವಾಗುತ್ತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅನೇಕ ರಾಜ್ಯಗಳಲ್ಲಿ ವಾಯುವಿನ ಗುಣಮಟ್ಟ ಕುಸಿದಿದ್ದು, ಹರಿಯಾಣದ ಏರ್ ಕ್ವಾಲಿಟಿ ಇಂಡೆಕ್ಸ್(ಎಕ್ಯೂಐ)448 ಹೊಂದಿದೆ. ಇನ್ನು ಉತ್ತರ ಪ್ರದೇಶದ ಎಕ್ಯೂಐ 448 ಆಗಿದ್ದರೆ ದಿಯಲ್ಲದು 407 ಆಗಿತ್ತು. ಇದು ಆ ರಾಜ್ಯಗಳಿಗೆ ಸೀಮಿತವಲ್ಲ. ಮುಂಜಾಗ್ರತೆ ವಹಿಸದಿದ್ದರೆ ನಮ್ಮಲ್ಲೂ ಈ ಪರಿಸ್ಥಿತಿ ಬರಬಹುದು ಎನ್ನುವ ಎಚ್ಚರಿಕೆ ಘಂಟೆ ಎಂದೇ ನಾವು ಪರಿಗಣಿಸಬೇಕಾಗಿದೆ. ಹೀಗಾಗಿ ನಾವು ಹೊರಗಿನ ವಾತಾವರಣ ಜತೆಗೆ ಮನೆ ಒಳಗೆ ವಾಯು ಕಲುಷಿತವಾಗದಂತೆ ಎಚ್ಚರಿಕೆ ವಹಿಸಬೇಕು.
ಬೆಚ್ಚಿ ಬೀಳಿಸುವ ಅಧ್ಯಯನ: ತಜ್ಞರ ಪ್ರಕಾರ ಮನೆ ಒಳಗಿನ ವಾಯು ಮಾಲಿನ್ಯ ಹೊರಗಡೆಗಿಂತ ಎರಡರಿಂದ ಐದು ಪಟ್ಟು ಹೆಚ್ಚಾಗಿದೆಯಂತೆ. ಆದ್ದರಿಂದ ಮನೆ ಒಳಗೆ ವಾಯು ಕಲುಷಿತವಾಗದಂತೆ ನೋಡಿಕೊಳ್ಳಬೇಕು.
ವೆಂಟಿಲೇಟರ್: ಶೇ. 60ರಷ್ಟು ವಾಯು ಕಲುಷಿತಗೊಳ್ಳುವುದು ಮನೆಯಲ್ಲಿ ಸೂಕ್ತ ವೆಂಟಿಲೇಟರ್ ಇಲ್ಲದಿರುವುದರಿಂದ. ವ್ಯವಸ್ಥಿತ ವೆಂಟಿಲೇಟರ್ ಕಲುಷಿತ ವಾಯುವನ್ನು ಹೊರ ಹಾಕಿ ಶುದ್ಧ ಗಾಳಿ ಸುಳಿಯುವಂತೆ ಮಾಡುತ್ತದೆ. ಆದ್ದರಿಂದ ವೆಂಟಿಲೇಟರ್ ಅನ್ನು ಸಮರ್ಪಕವಾಗಿಡಿ. ಅಡೆತಡೆಗಳಿದ್ದರೆ ನಿವಾರಿಸಿ ಶುಚಿಗೊಳಿಸಿ.
ಏರ್ ಪ್ಯೂರಿಫೈಯರ್
ಏರ್ ಪ್ಯೂರಿಫೈಯರ್ ಅಳವಡಿಸುವುದರಿಂದಲೂ ಮನೆಯೊಳಗಿನ ವಾಯುವನ್ನು ಶುದ್ಧೀಕರಿಸಬಹುದು. ಇಲ್ಲಿ ಎಚ್ಚರಿಕೆ ವಹಿಸಬೇಕಾದ ಅಂಶವೆಂದರೆ ಉತ್ತಮ ಗುಣಮಟ್ಟದ ಏರ್ ಪ್ಯೂರಿಫೈಯರ್ ಅನ್ನೇ ಖರಿದಿಸಬೇಕು. ಹೈ ಎಫಿಶಿಯೆನ್ಸಿ ಪರ್ಟಿಕ್ಯುಲೇಟ್ ಅರೆಸ್ಟಿಂಗ್(ಎಚ್‌ಇಪಿಎ)ಏರ್ ಪ್ಯೂರಿಫೈಯರ್ ಮಾತ್ರ ಕಲುಷಿತ ವಾಯು ನಿವಾರಿಸಬಲ್ಲದು ಎನ್ನುತ್ತಾರೆ ತಜ್ಞರು. ಧೂಮಪಾನ ಅಪಾಯಕಾರಿ: ವರದಿ ಪ್ರಕಾರ ಒಳಾಂಗಣ ವಾಯು ಮಾಲಿನ್ಯಕ್ಕೆ ಧೂಮಪಾನ ಶೇ. 90ರಷ್ಟು ಕಾರಣ. ಧೂಮಪಾನ ಮನೆಯೊಳಗಿನ ವಾಯುವನ್ನು ವಿಷಯುಕ್ತವನ್ನಾಗಿಸುತ್ತದೆ. ಹೀಗೆ ಧೂಮಪಾನಿ ಮಾತ್ರವಲ್ಲ ಆತನ ಮನೆಯವರ ಅನಾರೋಗ್ಯಕ್ಕೂ ಆತ ಕಾರಣವಾಗುತ್ತಾನೆ.
ಕಾರ್ಪೆಟ್ ಬಳಕೆಗೆ ನಿಯಂತ್ರಣ
ಹೌದು, ಮನೆಯೊಳಗೆ ಬಳಸುವ ಕಾರ್ಪೆಟ್ ಕಲುಷಿತ ವಾತಾವರಣಕ್ಕೆ ಕಾರಣವಾಗಬಲ್ಲದು. ಧೂಳಿನಲ್ಲಿರುವ ಸಣ್ಣ ಸಣ್ಣ ಕಣಗಳು ಕಾಪೆìಟ್‌ನ ಸಂದಿಗಳಲ್ಲಿ ಸೇರಿಕೊಂಡು ಕ್ರಮೇಣ ವಾತಾವರಣಕ್ಕೆ ಬಿಡುಗಡೆಯಾಗಿ ಶ್ವಾಸಕೋಶದ ತೊಂದರೆ, ಅಸ್ತಮಾ, ಕಫ ಮುಂತಾದ ಅನಾರೋಗ್ಯಕ್ಕೆ ಕಾರಣವಾಗಬಲ್ಲದು. ಆದ್ದರಿಂದ ಸಾಧ್ಯವಾದಷ್ಟು ಮನೆ ಒಳಗೆ ಕಾಪೆìಟ್ ಬಳಕೆ ನಿಯಂತ್ರಿಸಿ. ಎಕ್ಸಾಸ್ಟ್ ಫ್ಯಾನ್ ಬಳಸಿ: ಅಡುಗೆ ಕೋಣೆ ಮತ್ತು ಸ್ನಾನದ ಕೋಣೆಯ ಬಿಸಿ ಗಾಳಿ ಫಂಗಸ್ ಉತ್ಪತ್ತಿ ಮತ್ತು ಬೆಳವಣಿಗೆಗೆ ಕಾರಣವಾಗಬಲ್ಲದು. ಫಂಗಸ್ ದೇಹಕ್ಕೆ ಪ್ರವೇಶಿಸಿ ಶ್ವಾಸಕೋಶದ ಸೋಂಕು, ಕಫ, ಶೀತ ಮುಂತಾದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಅಡುಗೆ ಕೋಣೆ ಮತ್ತು ಸ್ನಾನದ ಕೋಣೆಗಳಲ್ಲಿ ಎಕ್ಸಾಸ್ಟ್ ಫ್ಯಾನ್ ಅಳವಡಿಸುವುದರಿಂದ ಇದು ಕಲುಷಿತ ವಾಯುವನ್ನು ಹೊರ ತಳ್ಳುತ್ತದೆ. ಆದ್ದರಿಂದ ಇದರ ಬಳಕೆಗೆ ಗಮನ ಹರಿಸಿ.
ಒಳಾಂಗಣ
ಸಸ್ಯ ಬೆಳೆಸಿ
ಇದು ಅತ್ಯುತ್ತಮ ಮಾರ್ಗ. ಮನೆಯೊಳಗೆ ಗಿಡ ಇರಿಸುವುದು ಟ್ರೆಂಡ್ ಕೂಡಾ ಆಗಿದ್ದು, ವಿಶೇಷ ಮೆರಗು ನೀಡುತ್ತದೆ. ಸಸ್ಯಗಳು ವಿಷಯುಕ್ತ ಗಾಳಿಯನ್ನು ಸೇವಿಸಿ ಶುದ್ಧ ವಾಯುವನ್ನು ಬಿಡುಗಡೆಗೊಳಿಸುತ್ತವೆ. ಮಾತ್ರವಲ್ಲ ಸಸ್ಯಗಳನ್ನು ನೋಡುವುದರಿಂದ ನಿಮ್ಮ ಒತ್ತಡವೂ ನಿವಾರಣೆಯಾಗುತ್ತದೆ. ಜತೆಗೆ ಕಣ್ಣಿಗಾಗುವ ಕಿರಿಕಿರಿಯನ್ನೂ ತಪ್ಪಿಸಬಹುದು.
ಶುಚಿಗೊಳಿಸಿ
ಇತ್ತೀಚೆಗೆ ವಾತಾವರಣ ವಿಪರೀತ ಎನ್ನುವ ಮಟ್ಟಕ್ಕೆ ಮಲಿನಗೊಳ್ಳುತ್ತಿದ್ದು, ಮನೆ ಒಳಗೂ ಕಲುಷಿತ ವಾಯು ಆರೋಗ್ಯ ಸಮಸ್ಯೆ ಹೊತ್ತು ತರುತ್ತಿದೆ. ನಾವು ಹೆಚ್ಚಿನ ಸಮಯ ಮನೆಯಲ್ಲೇ ಕಳೆಯುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸುವುದು ಆವಶ್ಯ. ಮನೆ ಸುತ್ತಮುತ್ತ ಖಾಲಿ ಜಾಗ ಇದ್ದರೆ ಅಲ್ಲಿ ತುಳಸಿ, ಕಹಿ ಬೇವು, ಕರಿ ಬೇವು ಮುಂತಾದ ಗಿಡಗಳನ್ನು ಬೆಳೆಸಿ. ಮನೆಯನ್ನು ನಿಯಮಿತವಾಗಿ ಶುಚಿಗೊಳಿಸಿ. ಧೂಳು, ಹೊಗೆ ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಿ..
– ಸುಯೋಗ್, ಬೆಂಗಳೂರು , ಒಳಾಂಗಣ ವಿನ್ಯಾಸಕಾರ
– ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.