ಅಡುಗೆ ಕೋಣೆ ಅಂದವಾಗಿರಲಿ

Team Udayavani, Nov 30, 2019, 4:04 AM IST

zx-9

ವಾಲ್‌ ಸ್ಟೋರೇಜ್‌ಗಳನ್ನು ಬಳಸುವುದು, ಅಗತ್ಯವಿರುವ ಪಾತ್ರೆಗಳನ್ನು ತೂಗು ಹಾಕುವುದರಿಂದ ಇದು ನೋಡಲು ಅಂದರವಗಿರುತ್ತದೆ. ಹೆಚ್ಚುವರಿ ಶೆಲ್ಫ್ಗಳನ್ನು ಬಳಸುವುದರಿಂದಲೂ ಪಾತ್ರೆಗಳನ್ನು ಒಂದರಂತೆ ಜೋಡಿಸಿಡಬೇಕು.

ಮನೆಯಲ್ಲಿ ಮುಖ್ಯ ಸ್ಥಳವೆಂದರೆ ಅದು ಅಡುಗೆ ಮನೆ. ಒಂದು ಮನೆಯ ಅಲಂಕಾರ ಹೆಚ್ಚಾಗಬೇಕಾದರೆ ಅಲ್ಲಿ ಅಡುಗೆ ಮನೆಯ ಪಾತ್ರ ಮಹತ್ತರವಾದುದು. ಅಡುಗೆ ಮನೆಯೊಂದು ಶುಚಿಯಾಗಿದ್ದರೆ ಇಡೀ ಮನೆ ಶುಚಿ ಇದ್ದಂತೆ. ಪ್ರತಿಯೊಬ್ಬರೂ ಮನೆ ನಿರ್ಮಿಸುವಾಗ ಹೆಚ್ಚಿನ ಗಮನ ಅಡುಗೆ ಮನೆಗೆ ನೀಡುವುದನ್ನು ಕಾಣಬಹುದು.

ಇನ್ನಷ್ಟು ಚಂದಗಾಣಿಸಲು ಸುಪ್ತ ಸಲಹೆ:
ಕೆಲವರ ಮನೆಯಲ್ಲಿ ಅಡುಗೆ ಕೋಣೆ ಸಣ್ಣದಾಗಿರುತ್ತದೆ. ಅಡುಗೆ ಕೋಣೆಯಲ್ಲಿನ ಸಾಮಗ್ರಿಗಳನ್ನು ಚೆನ್ನಾಗಿ ಜೋಡಿಸಿಟ್ಟುಕೊಳ್ಳಬೇಕು ಜತೆಗೆ ಗೋಡೆಗಳಿಗೆ ಡಲ್‌ ಬಣ್ಣಗಳನ್ನು ಬಳಸಬೇಕು. ಆದಷ್ಟು ಬೆಳಕು ಕಾಣುವಂತಿರಬೇಕು. ಸ್ಥಳಾವಕಾಶ ಕಡಿಮೆ ಇರುವುದರಿಂದ ಸಿಂಕ್‌ ಜಾಗದಲ್ಲಿ ತರಕಾರಿ ಕತ್ತರಿಸುವ ಬೋರ್ಡ್‌ಗಳನ್ನು ನಿರ್ಮಿಸಬಹುದು ಇದರಿಂದ ಉಳಿದ ಸಾಮಗ್ರಿಗಳನ್ನು ಚಂದಗಾನಿಸುವಂತೆ ಜೋಡಿಸಲು ಸುಲಭವಾಗುತ್ತದೆ.

ಪಾಟ್‌ ರ್ಯಾಕ್‌ ಮಾದರಿ ನಿರ್ಮಾಣ: ರ್ಯಾಕ್‌ ಮೇಲ್ಗಡೆ ಗೋಡೆಯಲ್ಲಿ ಪ್ಯಾನ್‌ಗಳನ್ನು ಜೋಡಿಸಲು ಶೆಲ್ಫ್ ಗಳನ್ನು ಬಳಸಬಹುದು. ಗೋಡೆಗಳಿಗೆ ಪೈಂಟ್‌ಗಳನ್ನು ಮಾಡಿಸಬೇಕು. ವಿವಿಧ ಮಾದರಿಯ ಪೈಂಟ್‌ಗಳನ್ನು ಮಾಡಿಸುವುದರ ಜತೆಗೆ ಬಣ್ಣಗಳ ಆಯ್ಕೆ ತುಂಬಾ ಮುಖ್ಯವಾದದ್ದು. ಹಾಗೆಯೇ ಅಡುಗೆ ಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸಲು ಮಣ್ಣಿನ ಮಡಕೆಗಳನ್ನು, ಫ್ಲವರ್‌ ಪಾಟ್‌ಗಳನ್ನು ಬಳಸಬಹುದು. ನಿಮ್ಮಲ್ಲಿ ಕಲಾವಿದನಿದ್ದರೆ ನಿಮಗೆ ಬೇಕಾದ ರೀತಿಯಲ್ಲಿ ಗೋಡೆಗಳಲ್ಲಿ ಚಿತ್ರ ಬಿಡಿಸಬಹುದು.

ಅಲ್ಲಲ್ಲಿ ಹಳೇ ಕಾಲದ ವಸ್ತುಗಳನ್ನು ಇಡುವುದರಿಂದ ಅಡುಗೆ ಮನೆಯ ಅಂದ ಇನ್ನಷ್ಟು ಹೆಚ್ಚಿಸಬಹುದು. ಸೆರಾಮಿಕ್‌ ಪಾತ್ರೆಗಳನ್ನು ಅಲಂಕರಿಸಿ ,ವಾಸ್‌ಗಳಾಗಿ ಬಳಸಬಹುದು. ಇಲ್ಲಿ ಕೇವಲ ಪಾತ್ರೆಗಳನ್ನು ಮಾತ್ರವಲ್ಲದೆ ಕರಕುಶಲ ವಸ್ತುಗಳನ್ನು ಇಡುವುದರಿಂದ ಇನ್ನಷ್ಟು ಚೆನ್ನಾಗಿ ಅಲಂಕರಿಸಬಹುದಾಗಿದೆ.

ಪ್ಲಾಸ್ಟಿಕ್‌ಗೆ ಬದಲಿ ವ್ಯವಸ್ಥೆ
ಪ್ಲಾಸ್ಟಿಕ್‌ ವಸ್ತುಗಳ ಬದಲಾಗಿ ವಿವಿಧ ವಿನ್ಯಾಸದ ಮಣ್ಣಿನ ಪಾತ್ರೆಗಳನ್ನು ಬಳಸಬಹುದು . ಇದರಿಂದ ಅಡುಗೆ ಮನೆ ವಾತಾವರಣವನ್ನು ತಂಪಾಗಿರಿಸಬಹುದು.ಇನ್ನು ತರಕಾರಿ ಹಣ್ಣು ಹಂಪಲುಗಳನ್ನು ಡೈನಿಂಗ್‌ ಟೇಬಲ್‌ ಮೇಲಿಟ್ಟು ಅದರ ಮಧ್ಯೆ ಅಂದದ ಮನೆಯಲ್ಲಿಯೇ ತಯಾರಿಸಿದ ವಾಸ್‌ಗಳನ್ನು ಬಳಸಿ ಅಂದವನ್ನು ಹೆಚ್ಚಿಸಬಹುದಾಗಿದೆ. ಹಾಗೇಯೇ ವೇಸ್ಟ್‌ ಪೇಪರ್‌ ಮತ್ತು ಬಾಟಲ್‌ಗಳನ್ನುಪಯೋಗಿಸಿ ವಿವಿದ ರೀತಿಯ ಕಲಾಕೃತಿಯನ್ನು ರಚಿಸಿ ಇಡಬಹುದು.

ಕರ್ಟನ್‌ ಅಲಂಕಾರ
ಕರ್ಟನ್‌ಗಳನ್ನು ಇಷ್ಟಪಡುವವರು ಬಣ್ಣದ ಕರ್ಟನ್‌ಗಳನ್ನು ಬಳಸಿದರೆ ಉತ್ತಮ ,ಇದು ಅಡುಗೆ ಕೋಣೆಯನ್ನು ಇನ್ನಷ್ಟು ಮೆರುಗುಗೊಳಿಸುತ್ತದೆ. ಕರ್ಟನ್‌ಗಳನ್ನು ಸಾಮಾನ್ಯವಾಗಿ ಕೋಣೆಗಳಲ್ಲಿ ಬಳಸುವುದಿದೆ. ಆದರೆ ಅಡುಗೆ ಮನೆಯಲ್ಲಿ ಕೂಡಾ ಇವುಗಳನ್ನು ಬಳಸಿದರೆ ಅಡುಗೆ ಮನೆಯ ಸೌಂಧರ್ಯ ಇಮ್ಮಡಿಯಾಗುತ್ತದೆ.

-  ವಿಶು ಅಮೀನ್‌, ಬಂಟ್ವಾಳ

ಟಾಪ್ ನ್ಯೂಸ್

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

ಯಮುನಾ ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

Yamuna ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

1-astr

Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ

ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್‌ ಸಿಂಗ್‌, ಸ್ಮೃತಿ ಮಂಧನಾ ನಾಮ ನಿರ್ದೇಶ

ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್‌ ಸಿಂಗ್‌, ಸ್ಮೃತಿ ಮಂಧನಾ ನಾಮ ನಿರ್ದೇಶ

Bengaluru: ಕೀಪರ್‌ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ

Bengaluru: ಕೀಪರ್‌ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

ಯಮುನಾ ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

Yamuna ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

1-astr

Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.