ಅಡುಗೆ ಮನೆ, ಚಿಕ್ಕಾದರೂ ಚೊಕ್ಕದಾಗಿರಲಿ

Team Udayavani, Jul 7, 2018, 2:49 PM IST

7-july-10.jpg

ಅಡುಗೆ ಮನೆ ಚಿಕ್ಕದಾದರೂ ಪರವಾಗಿಲ್ಲ, ಚೊಕ್ಕದಾಗಿರಬೇಕು. ಯಾಕೆಂದರೆ ಅದು ಮನೆಯ ಕೇಂದ್ರ ಬಿಂದು ಇದ್ದಂತೆ. ಕಿಚನ್‌ ನೋಡಲು ಆಕರ್ಷಕವಾಗಿ, ಸ್ವಚ್ಛವಾಗಿದ್ದರೆ ಮಾತ್ರ ಮನೆ ಮಂದಿಯೆಲ್ಲ ಉತ್ಸಾಹದಿಂದ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಲು ಸಾಧ್ಯ. ಹಾಗೇ ಹೊಸತಾಗಿ ಮನೆಗೆ ಬಂದ ಅತಿಥಿಗಳು ಅಡುಗೆ ಮನೆಯನ್ನೊಮ್ಮೆ ವೀಕ್ಷಿಸದಿರುವುದಿಲ್ಲ. ಆದ್ದರಿಂದ ಅಡುಗೆ ಮನೆ ಗಾತ್ರ ಚಿಕ್ಕದಾದರೂ ನೀಟಾಗಿ, ಸ್ವಚ್ಛವಾಗಿ, ಸುಂದರವಾಗಿದ್ದರೆ ಸಾಕು ಅದುವೇ ಮನೆಯೊಡತಿಗೆ ಹೆಮ್ಮೆಯ ಸಂಗತಿ.

ಕಿಚನ್‌ ಸಣ್ಣದಾಗಿದ್ದಾಗ ಪಾತ್ರೆಗಳು, ದವಸ ಧಾನ್ಯಗಳನ್ನು ಇಡುವುದೇ ದೊಡ್ಡ ತಲೆನೋವು. ಅವೆಲ್ಲವನ್ನೂ ಅಲ್ಲಲ್ಲಿ ಹರಡಿ ಇಟ್ಟರೆ ಅಡುಗೆ ಮನೆಯ ಅಂದವೇ ಹಾಳಾಗುತ್ತದೆ. ಅದಕ್ಕಾಗಿ ಓಪನ್‌ ಶೆಲ್ಫ್ ಗಳನ್ನು ನಿರ್ಮಿಸಬೇಕು. ಅಡುಗೆ ಮನೆಯಲ್ಲಿ ಸಾಮಾನು ಜಾಸ್ತಿ ಇರುವುದರಿಂದ ಕನಿಷ್ಠವೆಂದರೂ ಎರಡು ಕಪಾಟುಗಳು ಇದ್ದರೆ ಒಳ್ಳೆಯದು. ಜತೆಗೆ ಡ್ರಾಯರ್‌ ಕೂಡ ಇರಲಿ. ಅದರಲ್ಲಿ ಬಟ್ಟಲು, ಚಮಚ ಹಾಗೂ ಇನ್ನಿತರ ಸಣ್ಣ ಸಣ್ಣ ಪಾತ್ರೆಗಳನ್ನು ಇಡಬಹುದು. ವಾಶ್‌ ಬೇಸಿನ್‌ ಮೇಲಿನ ಜಾಗವನ್ನು ವೇಸ್ಟ್ ಮಾಡದೆ ಅಲ್ಲಿ ಇನ್ನೊಂದು ಶೆಲ್ಫ್ ಅನ್ನು ಹಾಕಬಹುದು. ಅದರಲ್ಲಿ ಲೋಟ, ಕೆಲವು ಪಾತ್ರೆಗಳನ್ನು ಇಡಬಹುದು. ಜತೆಗೆ ಅದರಲ್ಲಿರುವ ಹುಕ್ಕಿನಲ್ಲಿ ಕಪ್‌ ಗಳನ್ನು ತೂಗು ಹಾಕಬಹುದು.

ವಿವಿಧ ಡಿಸೈನ್‌ ಬಳಕೆ
ಚಿಕ್ಕ ಅಡುಗೆ ಮನೆಗೂ ಐಷಾರಾಮಿ ಲುಕ್‌ ನೀಡುವಂತಹ ಕಿಚನ್‌ ಡಿಸೈನ್‌ ಗಳು ಲಭ್ಯವಿವೆ. ಆದ್ದರಿಂದ ಅಡುಗೆ ಮನೆಯನ್ನು ತಮಗಿಷ್ಟ ಬಂದತೆ ವಿನ್ಯಾಸಗೊಳಿಸಿಕೊಳ್ಳಬಹುದು. ವಿವಿಧ ಬಗೆಯ ಮರಗಳಿಂದ ತಯಾರಿಸಿದ ಫ್ರೋರಿಂಗ್‌ ಅನ್ನು ಅಡುಗೆ ಮನೆಗೆ ಬಳಸಬಹುದು. ಇದು ಸ್ವಲ್ಪ ದುಬಾರಿಯಾದರೂ ಐಷಾರಾಮಿ ಲುಕ್‌ ನೀಡುತ್ತದೆ. ಬಾಳಿಕೆಯೂ ಹೆಚ್ಚು.  ಮಾರ್ಬಲ್‌ ಮತ್ತು ಸೆರಾಮಿಕ್‌ ಕಲ್ಲುಗಳನ್ನು ಬಳಸಿ ಅಡುಗೆ ಮನೆ ಸಿಂಗಾರಗೊಳಿಸುವುದರಿಂದ ಸೌಂದರ್ಯ ವೃದ್ಧಿಸುತ್ತದೆ.

ಲಿನೋಲಿಯಂ ಟೈಲ್‌ಗ‌ಳನ್ನು ಬಳಸಿ ಅಡುಗೆಮನೆ ಸಿಂಗರಿಸಿದರೂ ಕೂಡ ಸ್ಟೈಲಿಶ್‌ ಆಗಿರುತ್ತದೆ. ಇದರಲ್ಲಿಯೂ ನಾನಾ ರೀತಿಯ ಬಣ್ಣಗಳು, ಗಾತ್ರಗಳು, ಆಕಾರಗಳು ಲಭ್ಯ. ಗೋಡೆಗಳ ಬಣ್ಣಕ್ಕೆ ತಕ್ಕಂತೆ ಲಿನೋಲಿಯಂ ಟೈಲ್‌ಗ‌ಳನ್ನು ಬಳಸಿಕೊಂಡರೆ ಅಡುಗೆ ಮನೆಯ ಅಂದ ಇಮ್ಮಡಿಗೊಳ್ಳುತ್ತದೆ. 

ನಿರ್ವಹಣೆ ಹೇಗೆ ?
.ಸಣ್ಣ ಅಡುಗೆ ಕೋಣೆಗೆ ತಿಳಿ ಬಣ್ಣವನ್ನು ಬಳಸಬಹುದು. ಬಿಳಿ, ತಿಳಿ ನೀಲಿ ಅಥವಾ ಇನ್ನಾವುದಾದರೂ ತಿಳಿಯಾದ ಬಣ್ಣ ಇಲ್ಲಿಗೆ ಸರಿಯಾಗಿ ಸೂಟ್‌ ಆಗುತ್ತದೆ. 

.ಅಡುಗೆ ಕೋಣೆಯಲ್ಲಿ ಎಲ್ಲ ಸಾಮಗ್ರಿಗಳನ್ನು ಆಕರ್ಷಕವಾಗಿ ಮತ್ತು ಸುಲಭವಾಗಿ ಸಿಗುವಂತೆ ಜೋಡಿಸಿ.

.ಪ್ರತಿನಿತ್ಯದ ಬಳಕೆಗೆ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸ ಬೇಡಿ. ಚಿಕ್ಕ ಅಡುಗೆ ಮನೆಯಲ್ಲಿ ತುಂಬಾ ವಸ್ತು ತುರುಕಬೇಡಿ.

.ಅಡುಗೆ ಮನೆಯ ದ್ವಾರಕ್ಕೆ ಸುಂದರವಾದ ಕರ್ಟನ್‌ ಅಳವಡಿಸಿ.

.ಪ್ರತಿ ದಿನ ರಾತ್ರಿ ಕಿಚನ್‌ ಕ್ಲೀನ್‌ ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ.

.ಕಾಫಿ, ಟೀ ಕಲೆ, ಸಾರಿನ ಕಲೆಗಳನ್ನು ಆಗಿಂದಾಗಲೇ ಒರೆಸಿ.

.ಉತ್ತಮ ಗುಣಮಟ್ಟದ ಕ್ಲೀನರ್‌ಗಳನ್ನು ಬಳಸಿ ಅಡುಗೆ ಮನೆ ಸ್ವಚ್ಛಗೊಳಿಸಿ.

.ಗಾಢವಾದ ವಾಸನೆ ಬೀರುವ, ಅತಿಯಾದ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಕ್ಲೀನರ್‌ಗಳನ್ನು ಬಳಸದಿರಿ.

.ನೀರಿಗೆ ಅಡುಗೆ ಸೋಡ, ವಿನೇಗರ್‌, ನಿಂಬೆಹಣ್ಣಿನ ರಸ ಸೇರಿಸಿ ಸ್ವಚ್ಛಗೊಳಿಸುವುದು ಉತ್ತಮ.

.ಕನಿಷ್ಠ ಹತ್ತು ದಿನಗಳಿಗೊಮ್ಮೆಯಾದರೂ ಅಡುಗೆ ಮನೆಯಲ್ಲಿರುವ ಎಲ್ಲ ಪಾತ್ರೆ, ಡಬ್ಬ, ಪದಾರ್ಥಗಳನ್ನುಸ್ವಚ್ಛಗೊಳಿಸಿ, ಬೇಡವಾದವುಗಳನ್ನು ಬಿಸಾಡಿ.

. ಜಿರಳೆ, ಹಲ್ಲಿ, ಇಲಿಗಳು ಬರದಂತೆ ಮುನ್ನೆಚ್ಚರಿಕೆ ವಹಿಸಿ. 

. ಸಿಂಕ್‌ ಪಾಚಿಕಟ್ಟದಂತೆ ಎಚ್ಚರವಹಿಸಿ.

.ಕಸದ ಬುಟ್ಟಿಯನ್ನು ಅಡುಗೆ ಮನೆಯಿಂದ ಹೊರಗಿಟ್ಟು ಸ್ವಚ್ಛತೆ ಕಾಪಾಡಿ.

 ಗಣೇಶ ಕುಳಮರ್ವ

ಟಾಪ್ ನ್ಯೂಸ್

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.