ದುಂದುವೆಚ್ಚ ಬಿಡಿ, ಉಳಿತಾಯದ ಕಡೆ ಗಮನಕೊಡಿ
Team Udayavani, Sep 10, 2018, 3:00 PM IST
ಆಧುನಿಕ ಜಗತ್ತಿನಲ್ಲಿ ಬ್ರ್ಯಾಂಡ್, ಸ್ಟೇಟಸ್‌ಗಳ ಕಡೆಗೆ ಎಲ್ಲರೂ ಹೆಚ್ಚಿನ ಗಮನಕೊಡುವುದರಿಂದ ಹೆಚ್ಚು ಖರ್ಚಿಗೆ, ಸಾಲಕ್ಕೆ ಮೂಲ ಕಾರಣವಾಗಿದೆ. ದಿನನಿತ್ಯ ಬಳಸುವ ಚಿಕ್ಕ ವಸ್ತುಗಳು, ಮನೆಯ ಪೀಠೊಪಕರಣಗಳು, ಶಿಕ್ಷಣ, ಆಲಂಕಾರಿಕ ಸಾಮಗ್ರಿಗಳು… ಹೀಗೆ ಪ್ರತಿಯೊಂದರಲ್ಲೂ ನಾವು ಸ್ಟೇಟಸ್ ಬಗ್ಗೆ ಚಿಂತೆ ಮಾಡುತ್ತೇವೆಯೇ ಹೊರತು, ಇದರಿಂದಾಗುವ ದುಂದು ವೆಚ್ಚದ ಕಡೆಗೆ ಗಮನ ನೀಡುವುದೇ ಇಲ್ಲ. ಒಮ್ಮೆ ಸರಿಯಾಗಿ ಯೋಚಿಸಿ. ಇವುಗಳೇ ನಮ್ಮ ಉಳಿತಾಯಕ್ಕೆ ದೊಡ್ಡ ಶತ್ರುಗಳಾಗಿವೆ.
ಮನೆಗೆ ದುಂದು ವೆಚ್ಚ
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮನೆಗಳ ವಿಷಯದಲ್ಲಿ ಹೆಚ್ಚಿನ ದುಂದು ವೆಚ್ಚವನ್ನು ಗಮನಿಸಬಹುದು. ಹಿಂದೆಲ್ಲ ಮನೆಯಲ್ಲಿ ಅದೆಷ್ಟು ಸದಸ್ಯರಿದ್ದರೂ ಮನೆಯೊಂದಕ್ಕೆ ಒಂದೇ ಬಾತ್ ರೂಮ್‌ಗಳು ಇರುತ್ತಿದ್ದವು. ಆದರೆ ಈಗ ಮನೆಯೊಂದರಲ್ಲಿ ಇರುವ ಜನರಿಗಿಂತ ಬಾತ್‌ರೂಮ್‌ಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಸರ್ವೆಯೊಂದು ಹೇಳುವಂತೆ 1990ರ ವೇಳೆಗೆ ವ್ಯಕ್ತಿಯೋರ್ವನ ಆದಾಯದಲ್ಲಿ ಸರಾಸರಿ 23ರಷ್ಟನ್ನು ಮನೆಗೆಂದು ವಿನಿಯೋಗಿಸಲಾಗುತ್ತಿತ್ತು. ಆದರೆ ಈಗ ಅದರ ಪ್ರಮಾಣ ಸರಾಸರಿ 35ಕ್ಕಿಂತ ಜಾಸ್ತಿಯಾಗಿದೆ.
ಕಾರ್‌ಗಳ ಕ್ರೇಜ್
ಪ್ರಯಾಣಕ್ಕೆಂದು ಬಳಸುತ್ತಿದ್ದ ಕಾರುಗಳು ಇಂದು ಘನತೆಯ ವಿಷಯವಾಗಿ ಬದಲಾಗಿದ್ದು, ನಾವು ಅದಕ್ಕೆ ಪೂರಕವಾಗಿ ವರ್ತಿಸಲಾರಂಭಿಸಿದ್ದೇವೆ. ಸಮಾಜ ನಮ್ಮನ್ನು ಗುರುತಿಸ ಬೇಕು ಎಂಬ ಹಂಬಲದಿಂದ ಸಾಲ ಮಾಡಿ ತುಪ್ಪ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದೇವೆ. ಕಡಿಮೆ ಬೆಲೆಯ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಅವುಗಳನ್ನು ಕೊಂಡುಕೊಳ್ಳಲು ಮನಸ್ಸು ಮಾಡುವುದು ಬೆರಳೆಣಿಕೆಯಷ್ಟು ಜನ ಮಾತ್ರ. ನಮಗೆ ಅರಿವಿದ್ದೂ ನಾವು ದುಂದು ವೆಚ್ಚ ಮಾಡುತ್ತಿರುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನ.
ಶಿಕ್ಷಣಕ್ಕಾಗಿ ವೆಚ್ಚ
ಬದುಕಿಗೆ ದಾರಿ ದೀಪವಾಗುವ ಶಿಕ್ಷಣ ಇಂದು ವ್ಯಾವಹಾರವಾಗಿ ಬದಲಾಗುತ್ತಿದೆ. ಆರಂಭದಿಂದಲೇ ದುಂದುವೆಚ್ಚ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಬದಲು ಉನ್ನತ ಶಿಕ್ಷಣಕ್ಕೆ ಮಾತ್ರ ಸ್ವಲ್ಪ ಜಾಸ್ತಿ ವೆಚ್ಚ ಮಾಡುವ ಮೂಲಕ ಅಧಿಕ ಖರ್ಚನ್ನು ತಡೆಯಬಹುದು. ಉನ್ನತ ಅಂಕಗಳನ್ನು ಪಡೆಯುವ ಮೂಲಕ ಸ್ಕಾಲರ್‌ಶಿಪ್ ಗಳನ್ನು ಪಡೆಯಲು ಪ್ರಯತ್ನಿಸಿದಲ್ಲಿ ಮತ್ತಷ್ಟು ಆರ್ಥಿಕ ಹೊರೆ ಕಡಿಮೆಯಾಗಲಿದೆ.
ಪ್ರಸನ್ನ ಹೆಗಡೆ ಊರಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.