ಹೆಗ್ಗಣ ಕಲಿಸಿದ ಪಾಠ


Team Udayavani, Dec 21, 2019, 4:03 AM IST

dc-24

ಒಂದು ದಟ್ಟ ಕಾಡಿತ್ತು. ಅಲ್ಲಿ ದೊಡ್ಡ ಮರವಿತ್ತು. ಆ ಮರ ಬಹಳ ವರ್ಷಗಳಿಂದ ಜೀವಿಸಿದ್ದರಿಂದ ಹಿರಿಯನಂತೆ ವರ್ತಿಸುತ್ತಿತ್ತು. ಅದೇ ವಿಷಯವಾಗಿ ಅದಕ್ಕೆ ತುಂಬಾ ಜಂಬವಿತ್ತು. ಕಾಡಿಗೆ ತಾನೇ ಹಿರಿದಾದ ಮರ, ತನ್ನಷ್ಟು ಹಿರಿಯ ಮರ ಎಲ್ಲೂ ಇಲ್ಲ, ಆದ್ದರಿಂದ ಎಲ್ಲರೂ ತನ್ನ ಮಾತು ಕೇಳಬೇಕು ಎಂದು ಮೆರೆಯುತ್ತಿತ್ತು. ತನ್ನ ನೆರಳಿನ ಆಶ್ರಯಕ್ಕೆ ಬಂದ ಪ್ರಾಣಿಗಳ ಬಳಿ “ಇಷ್ಟು ವಯಸ್ಸಾಗಿದ್ದರೂ ನನ್ನ ರೆಂಬೆ ಕೊಂಬೆಗಳು ಹಸಿರಿನಿಂದ ನಳನಳಿಸುತ್ತಿವೆ ನೋಡಿ’ ಎಂದು ನಲಿಯುತ್ತಿತ್ತು. ಒಂದು ದಿನ, ಪುಟ್ಟ ಗುಬ್ಬಿ ಮರದ ಮೇಲೆ ಕುಳಿತಿತು.

ಹಿರಿಯ ಮರ ಮಾತ್ರ ಮಾತಾಡಲೇ ಇಲ್ಲ. ಯಾವತ್ತೂ ತಾನಾಗಿಯೇ ಮಾತು ಶುರುಮಾಡುತ್ತಿದ್ದ ಮರ ಇವತ್ತೇಕೆ ಸುಮ್ಮನಿದೆ ಎಂದು ಗುಬ್ಬಿ ಆಶ್ಚರ್ಯ ವ್ಯಕ್ತಪಡಿಸಿತು. ತುಂಬಾ ಹೊತ್ತು ಸುಮ್ಮನಿದ್ದ ಗುಬ್ಬಿ “ನೀನು ಯಾವಾಗಲೂ ಸಂತೋಷದಿಂದ ಇರುತ್ತಿದ್ದೆಯಲ್ಲಾ. ಇಂದು ಯಾಕೆ ಬೇಸರದಿಂದ ಇದ್ದೀಯಾ?’ ಎಂದು ಕೇಳಿತು. ಮರ “ನನ್ನ ಬೇರು ನೋಡಿದ್ದೀಯ? ಎಷ್ಟು ಕೊಳಕಾಗಿದೆ. ನನ್ನ ಎತ್ತರ, ನನ್ನ ಸೌಂದರ್ಯ ಇಷ್ಟು ಬೃಹತ್ತಾಗಿದ್ದರೂ ಬೇರುಗಳು ಮಾತ್ರ ಕೊಳಕಾಗಿದ್ದರೆ ಏನು ಚೆನ್ನ?!’ ಎಂದಿತು.

ಅದನ್ನು ಕೇಳಿ ಪುಟ್ಟ ಗುಬ್ಬಿ ನಕ್ಕು “ಅಯ್ಯೋ ಮರವೇ… ನಿನ್ನ ಎತ್ತರ, ಸೌಂದರ್ಯ ಇವೆಲ್ಲವಕ್ಕೂ ಕಾರಣ ಇದೇ ಕೆಸರು ಮೆತ್ತಿದ ಬೇರು. ಅದಿಲ್ಲದೇ ಇರುತ್ತಿದ್ದರೆ ನೀನು ಬೆಳೆಯುವುದಕ್ಕೆ ಪೋಷಕಾಂಶ ಎಲ್ಲಿಂದ ಬರಬೇಕು? ಈಗ ಅದನ್ನೇ ದೂಷಿಸುತ್ತಿರುವೆ ಯಲ್ಲ. ಇದು ಸರಿಯೇ?’ ಎಂದು ಕೇಳಿತು. ಆದರೆ ಮರಕ್ಕೆ ಅದು ನಾಟಲಿಲ್ಲ. ಅದು ತನ್ನ ಮೊಂಡುವಾದವನ್ನೇ ಹಿಡಿಯಿತು. “ಆದರೂ ಈ ಬೇರುಗಳು ಮಣ್ಣು ಮೆತ್ತಿಕೊಂಡಿರದೇ ಇದ್ದರೇ ಚೆಂದವಿತ್ತು’ ಎಂದು ಮತ್ತೆ ಬೇಸರಪಟ್ಟುಕೊಂಡಿತು. ಇದಕ್ಕೆ ಎಷ್ಟು ಹೇಳಿದರೂ ಅಷ್ಟೆ ಎಂದು ಅರಿತ ಗುಬ್ಬಿ ಮತ್ತೆ ಏನನ್ನೂ ಹೇಳದೆ ಅಲ್ಲಿಂದ ಹಾರಿಹೋಯಿತು.

ಕೆಲವು ದಿನಗಳ ನಂತರ, ಕಾಡಿನಲ್ಲಿ ಹೊಸದೊಂದು ಸಮಸ್ಯೆ ಪ್ರಾರಂಭವಾಗಿತ್ತು. ಅದೆಲ್ಲಿಂದಲೋ ಹೆಗ್ಗಣದ ಸೈನ್ಯ ಕಾಡಿಗೆ ನುಗ್ಗಿಬಿಟ್ಟಿತು. ಅವು ಸಿಕ್ಕ ಸಿಕ್ಕ ಮರಗಳನ್ನೆಲ್ಲಾ ಕಡಿದು ಹಾಕುತ್ತಿದ್ದವು. ಅವು ಕಾಡಿನ ನೆಲದಲ್ಲಿ ಬಿಲ ತೋಡಲು ಸೂಕ್ತವಾದ ಮರವನ್ನು ಹುಡುಕುತ್ತಿದ್ದವು. ಅದೇ ಸಮಯಕ್ಕೆ, ಹಿರಿಯ ಮರ ಹೆಗ್ಗಣಗಳನ್ನು ತನ್ನ ಬಳಿಗೆ ಕರೆಯಿತು. ಅವುಗಳಿಂದ ತನ್ನ ಬೇರನ್ನು ಸ್ವತ್ಛ ಮಾಡಿಸಿ ಕೊಳ್ಳುವುದು ಅದರ ಉದ್ದೇಶ ವಾಗಿತ್ತು. ಆ ಹಿರಿಯ ಮರದ ಎತ್ತರ ಮತ್ತು ಬೃಹತ್‌ ಗಾತ್ರ ನೋಡಿದ ಹೆಗ್ಗಣಗಳ ಸೈನ್ಯದ ಮುಖಂಡ- “ಈ ಮರದ ಕೆಳಗೆ ಬಿಲ ತೋಡಿದರೆ ತಮ್ಮ ಸೈನ್ಯದ ಸದಸ್ಯರೆಲ್ಲರೂ ವಾಸಿಸಬಹುದು’ ಎಂದಿತು. ತಮ್ಮ ಮುಖಂಡ ಹಾಗೆ ಹೇಳಿದ್ದೇ ತಡ; ಹೆಗ್ಗಣಗಳು ಮರದ ಬುಡದ ಮೇಲೆ ಮುಗಿಬಿದ್ದವು. ಸ್ವಲ್ಪ ಹೊತ್ತಿನಲ್ಲಿ ಮರಕ್ಕೆ ನೋವಾಗತೊಡಗಿತು. ಬಹಳ ಬೇಗ ಹೆಗ್ಗಣಗಳು ಹಿರಿಯ ಮರದ ಬೇರನ್ನು ಕಡಿದು ಕಡಿದು ಸಡಿಲ ಮಾಡಿದವು. ಮರ ಉರುಳಿಬಿತ್ತು.

-  ಯು.ಎಚ್‌.ಎಂ. ಗಾಯತ್ರಿ

ಟಾಪ್ ನ್ಯೂಸ್

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

baby

Sullia: ಒಂಟಿಯಾಗಿ ಪತ್ತೆಯಾದ ಮಗು ಪೋಷಕರ ಮಡಿಲಿಗೆ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

suicide (2)

Manipal: ಬಾವಿಗೆ ಬಿದ್ದು ಕಾರ್ಮಿಕ ಸಾ*ವು

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.