ಕೋಪ ನಿಯಂತ್ರಣದಲ್ಲಿರಲಿ
Team Udayavani, Dec 30, 2019, 4:47 AM IST
ಕೋಪ ಎಂಬುದು ನೈಸರ್ಗಿಕವಾದುದು. ಆದರೆ ಇಂತಹ ಕೋಪಗಳಿಂದ ನಮ್ಮ ವ್ಯಕ್ತಿತ್ವಗಳು ಕೆಡದಂತೆ ಜಾಗ್ರತೆ ವಹಿಸಿಕೊಳ್ಳುವುದು ಅಗತ್ಯ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಪರಿಸ್ಥಿತಿ ನಮ್ಮನ್ನು ಕೆಟ್ಟ ರೀತಿಯಲ್ಲಿ ಪ್ರತಿಕ್ರಿಯಿಸುವಂತೆ ಮಾಡುವಂತೆ, ಅಸಹಜವಾದ ಸಂಗತಿಗಳು ನಡೆದಾಗ ಅಥವಾ ಅಂತಹ ಸನ್ನಿವೇಶಗಳಿಂದ ನಮಗೆ ಹಾನಿಯಾದಾಗ ಕೋಪಗಳು ಬರುವುದು ಸಾಮಾನ್ಯ. ಆದರೆ ಅವುಗಳನ್ನು ನಾವು ವ್ಯಕ್ತಪಡಿಸುವಾಗ ಬೇರೊಬ್ಬರಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಉತ್ತಮ. ಕೋಪ ನಿಗ್ರಹವಾದರೆ ಬದುಕಿಗೊಂದು ಅರ್ಥ ಕಂಡುಕೊಳ್ಳಬಹುದು.
ಕೋಪಗಳನ್ನು ನಿಯಂತ್ರಿಸುವುದು ಹೇಗೆ?
ನೀವು ತುಂಬಾ ಕೋಪಗೊಳ್ಳುವವರಾಗಿದ್ದಾರೆ ನಿಮ್ಮ ಕೋಪಕ್ಕೆ ಕಾರಣವಾಗುವ ವಿಷಯಗಳ ಕುರಿತು ಆತ್ಮಾವಲೋಕನ ನಡೆಸಿಕೊಳ್ಳಿ. ಇದಕ್ಕೆ ಕುಟುಂಬ ಸದಸ್ಯರ, ಗೆಳೆಯರ ಸಹಾಯ ಪಡೆದುಕೊಳ್ಳಿ.
– ನಿಮ್ಮಲ್ಲಿ ಕೋಪ ಆರಂಭವಾಗುತ್ತಿರುವ ಅರಿವಾದೊಡನೆ ದೀರ್ಘವಾಗಿ ಶ್ವಾಸ ಎಳೆದುಕೊಳ್ಳುತ್ತಲೂ ಹೊರಗೆ ಬಿಡುತ್ತಲೂ ಇರಿ. ಅದನ್ನು ಹೀಗೆ ಪುನರಾವರ್ತಿಸುತ್ತಾ ಇರಿ. ನಿಮ್ಮ ಆಕ್ರೋಶ ಕಡಿಮೆಯಾಗಲಿದೆ.
– ಕೋಪದಿಂದ ಶಾರೀರಿಕ ಬದಲಾವಣೆಯಾಗುವ ಭಾಗಗಳನ್ನು ತಡೆಯಿರಿ. ಉದಾಹರಣೆಗೆ ನಿಮ್ಮ ಕೈಗಳು ಬಳಕೆಯಾಗದಂತೆ ನೋಡಿಕೊಳ್ಳಿ. ತಲೆನೋವಾದರೆ ಹಣೆಗೆ ಮಸಾಜ್ ಮಾಡಿರಿ. ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿರಿ.
– ಕೋಪ ಆರಂಭವಾಗುವ ಸಂದರ್ಭ ಒಂದು ಎರಡು ಹೀಗೆ ನೂರರವರೆಗೆ ಮತ್ತು ನೂರರಿಂದ ಒಂದರವರೆಗೆ ಎಣಿಸುತ್ತಾ ಇರಿ. ಕಡಿಮೆಯಾಗದೇ ಇದ್ದರೆ ಪುನರಾವರ್ತಿಸಿ.
– ಆರೋಗ್ಯಕರ ರೀತಿಯಿಂದ ಕೋಪವನ್ನು ಪ್ರಕಟಿಸಲು ಬೇರೆ ಮಾರ್ಗವನ್ನು ನೋಡಿಕೊಳ್ಳಿ. ವಾದ್ಯ ಸಂಗೀತವನ್ನು ಆಸ್ವಾದಿಸಬಹುದು. ಚಿತ್ರ ರಚನೆ ಮಾಡಬಹುದು. ಕೆಲವರು ಇಂತಹ ಸಂದರ್ಭದಲ್ಲಿ ಪತ್ರ ಬರೆಯುವುದೂ ಇದೆ. ಇವು ಅವರನ್ನು ಶಾಂತರನ್ನಾಗಿಸುತ್ತದೆ.
– ಕೋಪದಿಂದಾಗುವ ಗುಣ ದೋಷಗಳ ಒಂದು ಪಟ್ಟಿ ತಯಾರಿಸಿ. ಕೋಪ ಇಳಿದ ಸಂದರ್ಭದಲ್ಲಿ ಅದನ್ನು ಓದುತ್ತಾ ಇರಿ. ಇದು ನಿಮ್ಮ ಕೋಪವನ್ನು ಕಡಿಮೆ ಮಾಡಲಿದೆ.
– ಹಾಸ್ಯ ಎಲ್ಲ ರೀತಿಯ ಮನೋರೋಗಕ್ಕೆ ಒಳ್ಳೆಯ ಅಸ್ತ್ರ. ಈ ಮನೋಭಾವವನ್ನು ರೂಢಿಸಿಕೊಳ್ಳಿ. ಹಾಸ್ಯಬರಹ, ಕಾರ್ಟೂನ್‌ಗಳನ್ನು ಆಸ್ವಾದಿಸಿ. ನೀವು ತುಂಬಾ ಇಷ್ಟ ಪಡುವ ಹಾಸ್ಯಗಳಿಗೆ ಕಿವಿಯಾಗಲು ಪ್ರಯತ್ನಿಸಿ.
– ಕೋಪ ಪ್ರಕಟನೆಗೆ ಸಾಧ್ಯತೆ ಇಲ್ಲದಂತಾಗಲು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇವು ನಿಮ್ಮ ಮನಸ್ಸನ್ನು ಬೇರೆ ಕಡೆಗೆ ಕರೆದೊಯ್ಯುತ್ತದೆ. ಜೋರಾಗಿ ಹಾಡುವುದು, ಶಟ್ಲ, ವಾಲಿಬಾಲ್, ಬಾಸ್ಕೆಟ್ ಬಾಲ್, ಟೆನಿಸ್ ಮುಂತಾದ ಆಟಗಳನ್ನು ಆಡುವುದು, ಈಜುವುದು ಇವೆಲ್ಲಾ ಕೋಪದ ವ್ಯಾಪ್ತಿಯನ್ನು ತೀವ್ರತೆಯನ್ನು ಕಡಿಮೆಗೊಳಿಸುತ್ತದೆ.
– ಕೌನ್ಸೆಲರ್, ಸೈಕೋಲಜಿಸ್ಟ್, ಯೋಗ ಶಿಕ್ಷಕರು ಮೊದಲಾದ ಪ್ರೊಫೆಶನಲ್‌ಗಳ ಸಹಾಯದೊಂದಿಗೆ ಕೋಪ ನಿಯಂತ್ರಣ ಮಾಡಿಕೊಳ್ಳಲು ಸಾಧ್ಯ. ತಜ್ಞರ ಸಹಾಯದಿಂದ ರಿಲ್ಯಾಕ್ಸೇಶನ್ ಥೆರಪಿ ಅಭ್ಯಾಸ ಮಾಡಿಕೊಳ್ಳಿ.
- ಕಾರ್ತಿಕ್ ಅಮೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.