ಕನಸಿನ ವೃತ್ತಿಗಾಗಿ ಕಾಯುವ ತಾಳ್ಮೆ ಇರಲಿ


Team Udayavani, Aug 27, 2018, 3:12 PM IST

27-agust-14.jpg

ನಾವು ಆಯ್ಕೆ ಮಾಡಿಕೊಂಡ ವೃತ್ತಿ ನಮಗೆ ತೃಪ್ತಿ ನೀಡಬೇಕು. ಆಗ ಮಾತ್ರ ನಮ್ಮ ಸಾಧನೆಯ ಹಂಬಲ ಈಡೇರಲು ಸಾಧ್ಯವಿದೆ. ಇಲ್ಲವಾದರೆ ಅರ್ಧದಲ್ಲೇ ಉದ್ಯೋಗ ತ್ಯಜಿಸುವ ನಿರ್ಣಯಕ್ಕೂ ನಾವು ತಲೆಬಾಗುವೆವು.

ವೃತ್ತಿಯ ಬಗ್ಗೆ ಎಲ್ಲರಿಗೂ ಕನಸುಗಳಿರುತ್ತವೆ. ಆದರೆ ತಮ್ಮ ಕನಸನ್ನು ನನಸಾಗಿಸುವವರು ಬಹಳ ಕಡಿಮೆ. ಮುಖ್ಯವಾಗಿ ಮಹಿಳೆಯರು. ಅದರಲ್ಲೂ ಪುರುಷ ಪ್ರಧಾನವಾದ ವೃತ್ತಿ ಕ್ಷೇತ್ರದಲ್ಲಿ ಮಹಿಳೆಯರು ಮುಂದುವರಿಯಬೇಕಾದರೆ ಸಾಕಷ್ಟು ಪರಿಶ್ರಮವನ್ನು ಪಡಲೇಬೇಕು. ಬದುಕಿನಲ್ಲಿ ಎದುರಾಗುವ ಸಣ್ಣ ಸಣ್ಣ ಸೋಲುಗಳಿಗೆ ಅಂಜಿ ಹಿಂಜರಿದರೆ ಕನಸು ನನಸು ಮಾಡಲು ಸಾಧ್ಯವೇ ಇಲ್ಲ. ಬದುಕಿನಲ್ಲಿ ಗುರಿಯೊಂದನ್ನು ಇಟ್ಟು ಕೊಂಡು ಆ ಗುರಿ ಸಾಧನೆಗೆ ಮುನ್ನಡೆಯುವ ಛಲ ನಿಮ್ಮದಾಗಿದ್ದರೆ ಯಾರೂ ನಿಮ್ಮನ್ನು ತಡೆಯಲಾರರು.

ವಯಸ್ಸು, ಸಮಯ, ಪದವಿಯಷ್ಟೇ ಇಂದು ವೃತ್ತಿ ಕ್ಷೇತ್ರಕ್ಕೆ ಸಾಲುವುದಿಲ್ಲ. ಅದರ ಹೊರತಾಗಿಯೂ ವಿಶೇಷವಾದ ಕೌಶಲವನ್ನೂ ಕಂಪೆನಿ ನಿಮ್ಮಲ್ಲಿ ಹುಡುಕುತ್ತದೆ. ಅದಕ್ಕಾಗಿ ಮೊದಲಿಗೆ ನಿಮ್ಮನ್ನು ನೀವು ತಯಾರಿ ಮಾಡಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ನಿಮ್ಮ ಕನಸಿನ ವೃತ್ತಿ ನಿಮ್ಮದಾಗಬೇಕಾಗಿದ್ದರೆ ಒಂದಷ್ಟು ಸಿದ್ಧತೆಗಳು ಇರಲೇಬೇಕು. ಇದು ನಿಮ್ಮ ಸುಂದರ ಭವಿಷ್ಯವನ್ನು ರೂಪಿಸುತ್ತದೆ.

1 ಜ್ಞಾನ ಹೆಚ್ಚಿಸಿಕೊಳ್ಳಿ
ವೃತ್ತಿ ಕ್ಷೇತ್ರದಲ್ಲಿದ್ದರೂ ಪ್ರಚಲಿತ ವಿದ್ಯಮಾನದ ಕುರಿತಾದ ಜ್ಞಾನ ಇಲ್ಲದೇ ಇದ್ದರೆ ನಿಮಗೇ ನಷ್ಟ. ಹೀಗಾಗಿ ಹೊಸ ಹೊಸ ವಿಚಾರಗಳನ್ನು ಕಲಿಯುವ ಉತ್ಸಾಹ ನಿಮ್ಮಲ್ಲಿ ಇರಲೇಬೇಕು. ಗಳಿಸಿದ ಜ್ಞಾನ ಎಂಬುದು ಯಾವತ್ತೂ ವ್ಯರ್ಥವಾಗುವುದಿಲ್ಲ. ರೆಸ್ಯೂಮ್‌ ಕಳುಹಿಸಿ ವೃತ್ತಿಗಾಗಿ ಕಾಯುತ್ತಿರುವಾಗ ಹೊಸದೇನಾದರೂ ಕಲಿಯುವ ಉತ್ಸಾಹವಿರಬೇಕು. ಅದು ವೃತ್ತಿಗೆ ಪೂರಕವಾಗಿ ಇರಬೇಕೆಂದೇ ನಿಲ್ಲ.

2 ವೃತ್ತಿ ತರಬೇತಿ ಪಡೆದುಕೊಳ್ಳಿ
 ಶಿಕ್ಷಣ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ. ಆದರೆ ಪ್ರಾಯೋಗಿಕ ತರಬೇತಿಗಳು ನಿಮ್ಮ ಜ್ಞಾನವನ್ನು ಉತ್ತಮಗೊಳಿಸುತ್ತದೆ. ಯಾವ ವೃತ್ತಿಗೆ ಸೇರಬೇಕು ಎಂಬ ಕಲ್ಪನೆ ನಿಮ್ಮಲ್ಲಿ ಇದ್ದರೆ ಅದಕ್ಕೆ ಪೂರಕವಾದ ಪ್ರಾಯೋಗಿಕ ತರಬೇತಿ ಪಡೆಯುವುದು ವೃತ್ತಿ ಕ್ಷೇತ್ರದಲ್ಲಿ ನಿಮ್ಮನ್ನು ಅನುಭವಿಗಳು, ನಿಪುಣರನ್ನಾಗಿ ಮಾಡುತ್ತದೆ. ಅಲ್ಲದೇ ವೃತ್ತಿ ಅನುಭವವು ನಿಮ್ಮ ರೆಸ್ಯೂಮ್‌ನ ಮೌಲ್ಯವನ್ನೂ ಹೆಚ್ಚಿಸುತ್ತದೆ. ಸಿಕ್ಕಿದ ಅವಕಾಶಗಳನ್ನು ಬಿಟ್ಟುಕೊಡದೆ ಸದ್ಬಳಕೆ ಮಾಡಿ ಕೊಂಡರೆ ಯಾವುದೇ ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಅನುಭವಕ್ಕೆ ಗೌರವ ಖಂಡಿತಾ ಸಿಗುತ್ತದೆ.

3 ಬ್ಲಾಗ್‌ ಆರಂಭಿಸಿ
ನಿಮ್ಮ ಸ್ವಂತ ಬ್ಲಾಗ್‌ ತೆರೆದು ಅಲ್ಲಿ ನಿಮ್ಮ ಆಸಕ್ತಿಯ ವಿಚಾರಗಳು, ನೀವು ತಿಳಿದುಕೊಂಡಿರುವ ಮಾಹಿತಿಗಳನ್ನು ಹಂಚಿಕೊಳ್ಳುವುದರಿಂದ ಮಾರುಕಟ್ಟೆಯಲ್ಲಿ ನಿಮ್ಮ ಮೌಲ್ಯ ವೃದ್ಧಿಯಾಗುವುದು. ನಿಮ್ಮ ಬ್ಲಾಗ್‌ ಗಳು ಕ್ರಿಯಾತ್ಮಕವಾಗಿರಲಿ ಮತ್ತು ಸೃಜನಶೀಲತೆಯನ್ನು ವೃದ್ಧಿಸುವಂತಿರಲಿ. ಇದು ನಿಮ್ಮ ಅನುಭವನ್ನು ವೃದ್ಧಿಸುವಂತೆ ಮತ್ತು ಹಂಚುವಂತೆ ಮಾಡುತ್ತದೆ. ಇದು ಹೊಸ ವೃತ್ತಿ ಕ್ಷೇತ್ರಕ್ಕೆ ಹೋಗುವವರಿಗೆ ಸಾಕಷ್ಟು ನೆರವಾಗುತ್ತದೆ.

4 ಸಂಪರ್ಕ ಜಾಲ ವಿಸ್ತರಿಸಿ
ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳಿ. ಅಲ್ಲಿ ಉನ್ನತ ವ್ಯಕ್ತಿಗಳೊಂದಿಗೆ ಸಂಪರ್ಕ ಜಾಲವನ್ನು ವಿಸ್ತರಿಸಿಕೊಳ್ಳಿ. ಅಲ್ಲಿ ಪಡೆದ ಅನುಭವದ ಕುರಿತು ಬ್ಲಾಗ್‌ ಮೂಲಕ ಹಂಚಿಕೊಳ್ಳಿ. ಇದು ನಿಮ್ಮನ್ನು ವೃತ್ತಿ ಕ್ಷೇತ್ರಕ್ಕೆ ಸಿದ್ಧರಾಗುವಂತೆ ಮಾಡುತ್ತದೆ. ಕನಸಿನ ವೃತ್ತಿ ಸಿಗುವುದು ಸುಲಭವಲ್ಲ. ಆದರೆ ಅದಕ್ಕಾಗಿ ಕಾಯುವ ತಾಳ್ಮೆಯಂತೂ ಇರಲೇಬೇಕು. ಇದಕ್ಕಾಗಿ ಜನಸಂದಣಿಯ ಮಧ್ಯೆ ನೀವು ನಿಂತು ನಿಮ್ಮ ಕಾರ್ಯಗಳ ಬಗ್ಗೆ ನೀವು ಪ್ರದರ್ಶನ ಮಾಡಲೇಬೇಕು. ಆಗಲೇ ನೀವು ವೃತ್ತಿ ಕ್ಷೇತ್ರಕ್ಕೆ ಉತ್ತಮ ಮಹಿಳೆಯಾಗಲು ಸಾಧ್ಯವಿದೆ.

 ವಿದ್ಯಾ ಕೆ. ಇರ್ವತ್ತೂರು

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.