ಲಿವಿಂಗ್ ರೂಮ್ ಅಂದವಾಗಿರಲಿ
Team Udayavani, Feb 22, 2020, 4:07 AM IST
ಮನೆಯ ಹೃದಯಭಾಗವಾದ ಲಿವಿಂಗ್ ರೂಮ್‌ನಲ್ಲಿ ಬಹುತೇಕ ಸಮಯವನ್ನು ಕಳೆಯಲಾಗುತ್ತದೆ. ಊಟ, ಹರಟೆ, ಮಾತುಕತೆ ಸಹಿತ ಮತ್ತಿತರ ಸಂಗತಿಗಳು ಜರಗುವುದು ಲಿವಿಂಗ್ ರೂಮ್‌ನಲ್ಲಿ. ಹೀಗಾಗಿ ಲಿವಿಂಗ್ ರೂಮ್‌ನೊಂದಿಗೆ ನಮ್ಮದು ಅವಿನಾಭಾವ ಸಂಬಂಧವಿರುತ್ತದೆ. ಹಾಗಾಗಿ ಈ ಸ್ಥಳವನ್ನು ಸೊಗಸಾಗಿ ಇಟ್ಟುಕೊಳ್ಳುವುದಲ್ಲದೆ ಯಾವ ರೀತಿಯಲ್ಲಿ ಅಂದ-ಚೆಂದ ಮತ್ತು ಗಮನಸೆಳೆಯುವಂತೆ ನೋಡಿಕೊಳ್ಳಬಹುದು ಎಂಬುವುದನ್ನು ತಿಳಿಯುವುದು ಅವಶ್ಯ.
ಪೀಠೊಪಕರಣಗಳಿರಲಿ
ಲೀವಿಂಗ್ ರೂಮ್‌ನಲ್ಲಿ ಪೀಠೊಪಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ರೂಮ್‌ನಲ್ಲಿ ಮರದ ಕುರ್ಚಿ, ಟೇಬಲ್‌ಗಳನ್ನು ಬಳಸುವುದು ಉತ್ತಮ. ಅವುಗಳಿಗೆ ಹೊದಿಕೆಯಿರಲಿ, ಅವುಗಳ ಮೇಲೆ ಒಂದು ಹೂ-ಕುಂಡ ಇದ್ದರೆ ಒಳ್ಳೆಯದು. ಆಗ ಮನೆಯೂ ಸುಂದರವಾಗಿ ಕಾಣುತ್ತದೆ.
ದೀಪಾಲಂಕಾರಗಳಿಂದ ಕಂಗೊಳಿಸುತ್ತಿರಲಿ
ಲೀವಿಂಗ್ ರೂಮ್ ಯಾವಾಗಲೂ ಝಗಮಗಿಸುವ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರಬೇಕು. ರೂಮ್‌ನಲ್ಲಿ ವರ್ಣಮಯವಾದ ದೀಪಾಲಂಕಾರಗಳನ್ನು ನೇತು ಹಾಕಿದ್ದರೆ ಮನೆಯೂ ಅಂದವಾಗಿ ಕಾಣುತ್ತದೆ. ಇನ್ನು ಕೃತಕ ದೀಪಾಲಂಕಾರ ಬಳಕೆಯ ಜತಗೆ ಮನೆಯ ಹಣತೆಗಳನ್ನು ಬಳಸುವುದು ಉತ್ತಮ. ಹಣತೆ ದೀಪಗಳಿಂದ ಜೈವಿಕವಾಗಿ ನಮ್ಮಲ್ಲಿ ಸಕಾರಾತ್ಮಕ ಮನಸ್ಥಿತಿ ಉಂಟಾಗಲು ಕಾರಣವಾಗುತ್ತದೆ.
ಹೂ- ಸಸಿಗಳನ್ನು ಬಳಸಿ
ಹೆಚ್ಚಿನ ಸಮಯವನ್ನು ನಾವು ಲಿವಿಂಗ್ ರೂಮ್‌ನಲ್ಲಿ ಕಳೆಯುವುದರಿಂದ ನಾವು ಆರೋಗ್ಯಕ್ಕೆ ಪೂರಕವಾಗುವಂತೆ ಗಿಡ-ಸಸಿಗಳನ್ನು ಮತ್ತು ಹೂ-ಕುಂಡಗಳನ್ನು ಬಳಸುವುದು ಕೂಡ ಒಳಿತು. ಇದರಿಂದಾಗಿ ಶುದ್ಧ ಗಾಳಿಯನ್ನು ಪಡೆಯಬಹುದು. ಹೂ-ಕುಂಡಗಳಿಂದ ನಮ್ಮಲ್ಲಿ ಶಾಂತ ಸ್ವಭಾವ ಮೂಡಲು ಕಾರಣವಾಗಬಹುದು. ಹೀಗಾಗಿ ಸ್ಮರಣೀಯ ಕ್ಷಣಗಳಿಗೆ ಕಾರಣವಾಗುವಂತೆ ನಮ್ಮ ರೂಮ್‌ನ್ನು ಇಟ್ಟುಕೊಳ್ಳಬೇಕಾಗುತ್ತದೆ. ಲಿವಿಂಗ್ ರೂಮ್‌ನಲ್ಲಿ ಕನ್ನಡಿಗಳ ಬಳಕೆ ಇರಲಿ. ಇದು ಮನೆಯ ಚಂದವನ್ನು ಹೆಚ್ಚಿಸುತ್ತದೆ.
ಗಮನಸೆಳೆಯುವ ವರ್ಣ-ಬಣ್ಣಗಳು
ಮನೆಯ ಲಿವಿಂಗ್ ರೂಮ್‌ನ ಗೋಡೆಗಳಿಗೆ ಚಿತ್ರ-ಚಿತ್ತಾರವಾದ ಬಣ್ಣ ಮತ್ತು ಕಲಾಕೃತಿಗಳನ್ನು ಅಂಟಿಸುವುದರಿಂದ ಮನೆಯೂ ಅಂದವಾಗಿ ಕಾಣುತ್ತದೆ. ನಮ್ಮ ಕೆಲವೊಂದು ಸ್ಮರಣೀಯ ಕ್ಷಣಗಳಿಗೆ ಇದು ಕಾರಣವಾಗುತ್ತದೆ. ಅಲ್ಲದೇ ಲಿವಿಂಗ್ ರೂಮ್‌ನಲ್ಲಿ ನಮ್ಮದು ಸಣ್ಣದಾದ ಗ್ರಂಥಾಲಯ ಇದ್ದರೆ ಒಳ್ಳೆಯದು. ಅಲ್ಲಿ ಪುಸ್ತಕ ಮತ್ತು ಗಿಫ್ಟ್ಗಳನ್ನು ಅಂದವಾಗಿ ಜೋಡಿಸಿಟ್ಟಾಗ ರೂಮ್‌ನ ಅಂದ ಇನ್ನಷ್ಟು ಹೆಚ್ಚುತ್ತದೆ.
ಮುಖ್ಯ ಪ್ರಾಂಗಣವಾಗಲಿ
ಲಿವಿಂಗ್ ಕೇವಲ ಮನೆಯ ಭಾಗವಾಗದೇ ಎಲ್ಲ ಕಾರ್ಯ ಚಟುವಟಿಕೆ ಮುಖ್ಯ ಪ್ರಾಂಗಣವಾಗಲಿ. ಮನೆಯ ಎಲ್ಲ ಸದಸ್ಯರು ಕುಳಿತು ಟಿವಿ ನೋಡುವುದಕ್ಕೆ, ಮನೆಯ ವ್ಯವಹಾರಗಳನ್ನು ಚರ್ಚಿಸುವುದಕ್ಕಾಗಿ ಲಿವಿಂಗ್ ರೂಮ್‌ನಲ್ಲಿ ಮಾಡಿ.
– ಸ್ವರೂಪಿಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.