ಶಿರಾಡಿ ಘಾಟಿ ಸುರಂಗಮಾರ್ಗ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ಬರಲಿ
Team Udayavani, Jul 14, 2019, 5:40 AM IST
ಶಿರಾಡಿಘಾಟಿಯಲ್ಲಿ ಸುರಂಗಮಾರ್ಗ ನಿರ್ಮಾಣ ಯೋಜನೆ ರೂಪಿಸ ಲಾಗಿದೆ.ಕಳೆದ ವರ್ಷ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಯೋಜನೆಗೆ ಟೆಂಡರ್ ಪ್ರಕ್ರಿಯೆ ಘೋಷಿಸಿದ್ದರು.ಮತ್ತೆ ಗಡ್ಕರಿ ಸಚಿವರಾಗಿದ್ದು, ಈ ಯೋಜನೆ ಜಾರಿಗೊಂಡರೆ ಬೆಂಗಳೂರು- ಮಂಗಳೂರು ನಡುವೆ ಮಹತ್ವದ ಮೈಲುಗಲ್ಲು ಆಗಲಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿಯಾಗಿದ್ದರೂ, ಭೂಕುಸಿತದ ಘಟನೆಗಳು ಈ ರಸ್ತೆಯಲ್ಲಿ ಸುಗಮ ಸಂಚಾರ ವ್ಯವಸ್ಥೆಯನ್ನು ಕಾಯ್ದುಕೊಳ್ಳುವುದಕ್ಕೆ ಸದಾ ಒಂದು ಸವಾಲು ಆಗಿ ಪರಿಣಮಿಸಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಇಲಾಖೆ ಶಿರಾಡಿಘಾಟ್‌ನಲ್ಲಿ ಸುರಂಗಮಾರ್ಗ ನಿರ್ಮಾಣ ಯೋಜನೆ ರೂಪಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಯೋಜನೆಯ ಡಿಪಿಆರ್ ಅನುಮೋದನೆಗೊಂಡಿದ್ದು ಆರು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಆರಂಭಿಸುವುದಾಗಿ ಹಾಸನದಲ್ಲಿ ಘೋಷಿಸಿದ್ದರು. ಈಗ ಮತ್ತೆ ಗಡ್ಕರಿಯವರೇ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವರಾಗಿದ್ದಾರೆ. ಈ ಯೋಜನೆ ಶೀಘ್ರ ಕಾರ್ಯಗತಗೊಂಡರೆ ಬೆಂಗ ಳೂರು- ಮಂಗಳೂರು ನಡುವೆ ರಸ್ತೆ ಸಂಚಾರದಲ್ಲಿ ಒಂದು ಮಹತ್ವದ ಮೈಲುಗಲ್ಲು ಆಗಲಿದೆ.
ಶಿರಾಡಿ ಘಾಟಿಯಲ್ಲಿ ಅಡ್ಡಹೊಳೆಯಿಂದ ಸಕಲೇಶಪುರದ ಹೆಗ್ಗದ್ದೆವರೆಗೆ 23.57 ಕಿ.ಮೀ. ಸುರಂಗ ಮಾರ್ಗವನ್ನು ನಿರ್ಮಿಸುವ ಯೋಜನೆ ಇದಾಗಿದೆ. ಅಡ್ಡಹೊಳೆ, ಗುಂಡ್ಯ, ಯೆಡಕುಮೇರಿ, ಕಡಗರವಳ್ಳಿ, ಮಾರನಹಳ್ಳ ಮೂಲಕ ಸುರಂಗ ಸಾಗುತ್ತದೆ. ಇದರಲ್ಲಿ 6 ಸುರಂಗಗಳು ಮತ್ತು 10 ಸೇತುವೆಗಳು ನಿರ್ಮಾಣವಾಗಲಿದ್ದು ಯೋಜನಾ ವೆಚ್ಚ 10,015 ಕೋ.ರೂ.. ಜಪಾನ್ ಇಂಟರ್‌ನೆàಶನಲ್ ಕೋ-ಆಪರೇಟಿವ್ ಎಜೆನ್ಸಿ ( ಜೈಕಾ) ಇದರ ಡಿಪಿಆರ್ ಸಿದ್ದಪಡಿಸಿದ್ದು ಕೇಂದ್ರ ಸರಕಾರದಿಂದ ಈಗಾಗಲೇ ಅನುಮೋದನೆಗೊಂಡಿದೆ. ಇದು ಪ್ರಸ್ತಾವನೆಯಿಂದ ಯೋಜನೆ ಹಂತಕ್ಕೆ ಬರುವಲ್ಲಿ ವಿವಿಧ ಪ್ರಕ್ರಿಯೆಗಳಿಗಾಗಿ ಈಗಾಗಲೇ ಸುಮಾರು 5 ವರ್ಷಗಳನ್ನು ತೆಗದುಕೊಂಡಿದೆ. 2019ರ ಕೇಂದ್ರ ಬಜೆಟ್‌ನಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಮೀಸಲಿರಿಸಲಾಗಿದ್ದು ಇದರಲ್ಲಿ ಅವಶ್ಯ ಅನುದಾನ ಹೊಂದಿಸಿಕೊಂಡು ಯೋಜನೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಕ್ರಮಗಳಾಗಬೇಕಾಗಿದೆ.
ಸುರಂಗ ಮಾರ್ಗ ನಿರ್ಮಾಣ ಮುಖ್ಯವಾಗಿ ವರ್ಷಂಪ್ರತಿ ಮಳೆಗಾಲದಲ್ಲಿ ಶಿರಾಡಿಘಾಟ್ ರಸ್ತೆಯಲ್ಲಿ ಎದುರಿಸುತ್ತಿರುವ ಭೂಕುಸಿತದ ಆತಂಕಕ್ಕೆ ಪರಿಹಾರ ಕಲ್ಪಿಸಲಿದೆ. ಈಗಾಗಲೇ ಕೊಂಕಣ ರೈಲ್ವೆಯ ಮಾರ್ಗದಲ್ಲಿ ಮಾಡಿರುವ ಹಲವಾರು ಸುರಂಗಗಳ ಉದಾಹರಣೆಗಳಿವೆ. ವಿದೇಶಗಳಲ್ಲೂ ರಸ್ತೆಗಳಲ್ಲಿ ಭೂಕುಸಿತ ಸಮಸ್ಯೆಗೆ ಪರಿಹಾರ ವಾಗಿ ಘಾಟ್, ಗುಡ್ಡ ಪ್ರದೇಶಗಳಲ್ಲಿ ಸುರಂಗ ಮಾದರಿಗಳನ್ನು ಅನುಸರಿಸ ಲಾಗುತ್ತಿದೆ. ಮುಖ್ಯವಾಗಿ ಜಪಾನ್, ಸ್ವಿಜರ್‌ಲ್ಯಾಂಡ್, ನಾರ್ವೆ ಮುಂತಾದ ದೇಶಗಳಲ್ಲಿ ಈ ರೀತಿಯ ಮಾದರಿಗಳನ್ನು ಅನುಸರಿಸಲಾಗುತ್ತಿವೆ ಎಂದು ವರದಿಗಳು ಹೇಳುತ್ತಿವೆ. ಶಿರಾಡಿಘಾಟ್ ಸುರಂಗ ಮಾರ್ಗ ಯೋಜನೆಗೆ ಜಪಾನ್ ದೇಶ ತಂತ್ರಜ್ಞಾನ ಸಲಹೆಗಳನ್ನು ನೀಡುತ್ತಿದೆ. ಸುರಂಗ ಮಾರ್ಗ ನಿರ್ಮಾಣದಿಂದ ಅಡ್ಡಹೊಳೆ-ಸಕಲೇಶಪುರ ಮಾರ್ಗದ ಮಧ್ಯೆ ದೂರದಲ್ಲೂ ಇಳಿಕೆಯಾಗಲಿದೆ ಮತ್ತು ಕಡಿಮೆ ಸಮಯದಲ್ಲಿ ಕ್ರಮಿಸಬಹುದಾಗಿದೆ. ಇಂಧನದಲ್ಲೂ ಇಳಿತ ಮತ್ತು ಸಂಚಾರ ಸುಗಮವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಚೆನ್ನೈ – ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆ ಅನುಷ್ಠಾನದ ಹಂತದಲ್ಲಿದೆ. ಜಪಾನ್ ಹಾಗೂ ಭಾರತ ಸರಕಾರದ ಸಹಯೋಗದೊಂದಿಗೆ ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿರುವ ಯೋಜನೆ. ಜಪಾನ್ ಇಂಟರ್‌ನೆàಶನಲ್ ಕಾರ್ಪೊರೇಶನ್ ಎಜೆನ್ಸಿ (ಜೈ,ಕಾ) ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸಿದೆ. ಒಟ್ಟು 560 ಕಿ.ಮೀ. ಉದ್ದದ ಈ ಯೋಜನೆ ಚೆನ್ನೈ ಯಿಂದ ಆಂಧ್ರಮೂಲಕ ಸಾಗಿ ಬೆಂಗಳೂರುವರೆಗೆ ಬರುತ್ತದೆ. ಬೆಂಗಳೂರು- ಚೆನ್ನೈ ಇಂಡಸ್ಟ್ರೀಯಲ್ ಕಾರಿಡಾರ್ ಯೋಜನೆಯನ್ನು ಬೆಂಗಳೂರಿನಿಂದ ಮಂಗಳೂರಿಗೂ ವಿಸ್ತರಿಸಬೇಕು ಎಂಬ ಪ್ರಸ್ತಾವನೆಯನ್ನು ಕರ್ನಾಟಕ ಸರಕಾರವು ಈ ಹಿಂದೆ ಕೇಂದ್ರ ಸರಕಾರಕ್ಕೆ ಮಂಡಿಸಿತ್ತು.
ಕಾರಿಡಾರ್‌ಗೆ ಪ್ರದೇಶವನ್ನು ಆಯ್ಕೆ ಮಾಡುವಾಗ ಬಂದರು, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಸೌಕರ್ಯಗಳನ್ನು ಪರಿಗಣಿಸಲಾಗುತ್ತದೆ. ಕಾರಿಡಾರ್‌ನಲ್ಲಿ ಉತ್ಪಾದನಾ ಹಾಗೂ ಇತರ ಉದ್ದಿಮೆಗಳ ಗುಂಪುಗಳ ಸ್ಥಾಪನೆಗೆ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ. ಇದಕ್ಕೆ ಈಗಾಗಲೇ ಪ್ರಸ್ತಾವನೆಯಲ್ಲಿರುವ ಮಂಗಳೂರು-ಬೆಂಗಳೂರು ಹೈಸ್ಪೀಡ್ ಹೈವೇ ಪ್ರಸ್ತಾವನೆಯನ್ನು ಲಿಂಕ್ ಮಾಡಿದರೆ ಮಂಗಳೂರು ಹಾಗೂ ಹಾಸನ ಭಾಗದ ಅಭಿವೃದ್ಧಿಯಲ್ಲೂ ಒಂದು ಮಹತ್ವದ ಪಾತ್ರವನ್ನು ವಹಿಸಲಿದೆ.ರಾಜ್ಯದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಅದರಲ್ಲೂ ಸಣ್ಣ ಮತ್ತು ಮಧ್ಯಮ ಕೈಗಾರಿಗೆಗಳ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ಇದೊಂದು ಮಹತ್ವದ ಯೋಜನೆಯಾಗಲಿದೆ . ಈ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕು ಎಂಬ ಒತ್ತಡ ಹೇರಲು ಶಿರಾಡಿ ಘಾಟ್ ಸುರಂಗ ಮಾರ್ಗ ಪೂರಕವಾಗಬಹುದು.
ಎಕ್ಸ್‌ಪ್ರೆಸ್ ಹೈವೆ ಪ್ರಸ್ತಾವನೆಗೂ ಪೂರಕ
ಈಗಾಗಲೇ ಮಂಗಳೂರು-ಬೆಂಗಳೂರು ಮಧ್ಯೆ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣ ಪ್ರಸ್ತಾವನೆಯಲ್ಲಿದೆ. ಚೆನ್ನೈ – ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್‌ನ್ನು ಮಂಗಳೂರಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ಇದೆ. ಇವುಗಳಿಗೆ ಶಿರಾಡಿಘಾಟ್ ಸುರಂಗ ಮಾರ್ಗ ಬಲ ನೀಡಲಿದೆ. ಈ ಎರಡೂ ಯೋಜನೆಗಳು ಮಂಗಳೂರು ಮತ್ತು ದ.ಕನ್ನಡ ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಆಯಾಮವೊಂದಕ್ಕೆ ತೆರೆದುಕೊಳ್ಳುವುದಕ್ಕೆ ಪೂರಕವಾಗಲಿದೆ. ಪಶ್ಚಿಮ ಕರಾವಳಿ ಬಂದರಿನಿಂದ ಪೂರ್ವ ಕರಾವಳಿಯ ಬಂದರಿಗೆ ಸಂಪರ್ಕ ಕಲ್ಪಿಸುವ ಕಾರಿಡಾರ್ ಆಗಿ ರೂಪುಗೊಳ್ಳಲಿದೆ. ಇದರ ಜತೆಗೆ 3 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಕಾರಿಡಾರ್ ಮಧ್ಯೆ ಲಭ್ಯವಿದ್ದು ಉತ್ಪನ್ನಗಳ ತಯಾರಿಕಾ ಉದ್ಯಮಗಳನ್ನು ಸ್ಥಾಪಿಸಲು ಅನುಕೂಲವಾಗಿದೆ.
ಭಾರತ್‌ಮಾಲಾ ಯೋಜನೆಯಡಿಯಲ್ಲಿ ಮಂಗಳೂರು- ಬೆಂಗಳೂರು, ಮುಂಬಯಿ-ಕೋಲ್ಕತ್ತಾ, ಲೂಧಿಯಾನ-ಕಾಂಡ್ಲಾ ,ಫೋರ್‌ಬಂದರ್-ಸಿಲ್‌ಲಾರ್ ಸೇರಿದಂತೆ ದೇಶದ 4 ಹೆದ್ದಾರಿಗಳನ್ನು 3.18 ಲಕ್ಷ ಕೋಟಿ ರೂ. ಯೋಜನೆಯಲ್ಲಿ ಹೈ ಸ್ಪೀಡ್ ಹೆದ್ದಾರಿಯಾಗಿ ಪರಿವರ್ತಿಸಲು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯ ಯೋಜನೆ ರೂಪಿಸಿದ್ದು ಮಂಗಳೂರು-ಬೆಂಗಳೂರು ಯೋಜನೆಗೆ 1.18 ಲಕ್ಷ ಕೋ.ರೂ.ವೆಚ್ಚ ಅಂದಾಜಿಸಲಾಗಿದೆ.
- ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.