ನಮ್ಮ ಕೆಲಸ ಮಾಡಿ ಸುಮ್ಮನಿದ್ದು ಬಿಡೋಣ!

Team Udayavani, Sep 30, 2019, 6:00 AM IST

Life-aa

ನಮ್ಮ ಮನೆಯ ಎದುರು ಕಾಲುಹಾದಿಯ ಅಕ್ಕಪಕ್ಕದಲ್ಲಿ ಎರಡು ನಂದಿಬಟ್ಟಲಿನ ಗಿಡಗಳಿವೆ. ವರ್ಷವಿಡೀ ಸದಾ ಹಸುರು ಎಲೆಗಳು ತುಂಬಿರುವ ಬಿಳಿಯ ಹೂವುಗಳ ಗಿಡಗಳು. ಕಳೆದ ನಾಲ್ಕಾರು ವರ್ಷಗಳಿಂದ ನೋಡುತ್ತಿದ್ದೇನೆ, ಪ್ರತೀ ವರ್ಷದ ಈ ಸಮಯದಲ್ಲಿ ಯಾವುದೋ ಚಿಟ್ಟೆ ನಂದಿಬಟ್ಟಲಿನ ಎಲೆಗಳಲ್ಲಿ ಮೊಟ್ಟೆ ಇರಿಸುತ್ತದೆ. ಆಗಸ್ಟ್‌ ಅಂತ್ಯ, ಸೆಪ್ಟಂಬರ್‌ ತಿಂಗಳಿಡೀ ನಂದಿಬಟ್ಟಲಿನ ಎಲೆಗಳ ನಡುವೆ ಹುಡುಕಿ ಹಿಡಿಯಲಾಗದಂತೆ ಹುದುಗಿರುವ ಹೆಬ್ಬೆರಳು ಗಾತ್ರದ ಹಸಿರು ಹುಳುಗಳು. ಅವುಗಳ ಇರುವಿಕೆ ಗೊತ್ತಾಗುವುದು ಬುಡದಲ್ಲಿ ಬಿದ್ದಿರುವ ಹಿಕ್ಕೆಗಳಿಂದ ಮಾತ್ರ. ಕಷ್ಟಪಟ್ಟು ಹುಡುಕಿ ನೋಡಿದರೆ ಬದುಕಿನ ಉದ್ದೇಶ ಅದೊಂದೇ ಎನ್ನುವ ಹಾಗೆ ಅವು ನಂದಿಬಟ್ಟಲಿನ ಎಲೆಯನ್ನು ಗಬಗಬನೆ ಮುಕ್ಕುತ್ತಿರುವುದು ಕಾಣಿಸುತ್ತದೆ.

ನಾಲ್ಕೈದು ವರ್ಷಗಳಿಂದ ಗಮನಿಸಿದ್ದು ಇದು. ಪ್ರಾಯಃ ತಾಯಿ ಚಿಟ್ಟೆ ನೂರಾರು ಮೊಟ್ಟೆಗಳನ್ನು ಇಟ್ಟಿರಬಹುದು. ಮಳೆಯಲ್ಲಿ ನೆನೆದು, ಬಿಸಿಲಲ್ಲಿ ಒಣಗಿ ಅರ್ಧದಷ್ಟು ಹಾಳಾಗುತ್ತವೆ, ಅರ್ಧದಷ್ಟು ಮೊಟ್ಟೆಗಳಿಂದ ಹುಳುಗಳು ಹೊರಬರುತ್ತವೆ ಎಂದಿಟ್ಟುಕೊಳ್ಳಿ. ಅವು ಹಸಿರು ಹುಳುಗಳಾಗಿ ಎಲೆಗಳನ್ನು ತಿನ್ನುತ್ತವೆ. ನಾನು ನೋಡನೋಡುತ್ತ ಇದ್ದಹಾಗೆಯೇ ಕುಪ್ಪುಳು ಹಕ್ಕಿ ನಂದಿಬಟ್ಟಲಿನ ದುರ್ಬಲ ಟೊಂಗೆಗಳನ್ನು ಏರಿ ಸರ್ಕಸ್‌ ಮಾಡುತ್ತಾ ದಿನವೂ ಎನ್ನುವ ಹಾಗೆ ಕ್ಯಾಟರ್‌ಪಿಲ್ಲರ್‌ಗಳನ್ನು ಹಿಡಿದು ತಿನ್ನುತ್ತದೆ. ಹಾಗೆ ಹಕ್ಕಿಗಳು, ಇರುವೆಗಳ ಹೊಟ್ಟೆ ಸೇರದೆ ಬದುಕಿ ಉಳಿದ ಕ್ಯಾಟರ್‌ಪಿಲ್ಲರ್‌ಗಳು ಕೋಶಗಳಾಗಿ ಆ ಹಂತದಲ್ಲಿಯೂ ಅಪಾಯಗಳನ್ನು ಎದುರಿಸಬೇಕು. ಕೋಶವೆಂದರೆ ನಿಮಗೆ ಗೊತ್ತು; ಅದು ಹರಿದಾಡಲಾರದ ನಿಶ್ಚಲ ಸ್ಥಿತಿ, ಹಾಗಾಗಿ ನಾಶವಾಗುವ ಸಾಧ್ಯತೆಗಳು ಹೆಚ್ಚು.

ತಾಯಿ ಚಿಟ್ಟೆ ಇರಿಸಿದ ನೂರಾರು ಮೊಟ್ಟೆಗಳಲ್ಲಿ ಹೀಗೆ ಎಲ್ಲ ಅಪಾಯಗಳಿಂದ ಪಾರಾಗಿ ಹೊಸ ಚಿಟ್ಟೆಯಾಗಿ ಹಾರಿಹೋಗುವಂಥವು ನಾಲ್ಕೋ ಐದೋ ಇರಬಹುದೇನೋ!

ಪ್ರತೀ ವರ್ಷವೂ ಹಸುರು ಕ್ಯಾಟರ್‌ಪಿಲ್ಲರ್‌ಗಳು ನಂದಿಬಟ್ಟಲಿನ ಗಿಡದಲ್ಲಿ ಕಂಡುಬಂದಾಗ ನನಗೆ ಸಮಾಧಾನವಾಗುತ್ತದೆ; ಪ್ರಕೃತಿಯಲ್ಲಿ ಜೀವಸಂಕುಲ ಎಲ್ಲ ಅಡೆತಡೆ, ಸವಾಲುಗಳನ್ನು ಯಶಸ್ವಿಯಾಗಿ ಉತ್ತರಿಸಿ ಮುನ್ನಡೆಯುತ್ತದೆ ಎನ್ನುವ ಅಂತಿಮ ಸತ್ಯದ ರೂಪಕದಂತೆ ಅವು ಭಾಸವಾಗುತ್ತವೆ. ಚಿಟ್ಟೆಯ ಸಾಸಿವೆ ಕಾಳಿಗಿಂತಲೂ ಸಣ್ಣ ಗಾತ್ರದ ಮೊಟ್ಟೆಗಳು, ಅದರಿಂದ ಹೊರಬರುವ ಪುಟ್ಟ ಲಾರ್ವಾಗಳು, ಎಲೆ ತಿನ್ನುತ್ತಾ ಬೆಳೆಯುವ ದುರ್ಬಲ ಕ್ಯಾಟರ್‌ಪಿಲ್ಲರ್‌, ಚಲಿಸಲಾಗದ ಕೋಶ – ಈ ಎಲ್ಲ ಹಂತಗಳಲ್ಲೂ ಕ್ಷಣಕ್ಷಣಕ್ಕೆ ಎದುರಾಗುವ ಅಪಾಯಗಳನ್ನು ಮೀರಿ ಕೆಲವಾದರೂ ಹೊಸ ಚಿಟ್ಟೆಗಳು ಉಂಟಾಗುತ್ತವಲ್ಲ! ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ಬದುಕು ಮುಂದುವರಿಯುತ್ತದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ!
ಅಮ್ಮ ಚಿಟ್ಟೆಗೆ ತಾನು ಇರಿಸಿಹೋದ ಮೊಟ್ಟೆಗಳಿಂದ ಎಷ್ಟು ಹೊಸ ಚಿಟ್ಟೆಗಳು ಉತ್ಪತ್ತಿಯಾದವು ಎಂಬ ಲಕ್ಷ್ಯವಿಲ್ಲ; ಮೊಟ್ಟೆ ಇರಿಸಿ ಹಾರಿಹೋಗುವುದಷ್ಟೇ ಅದರ ಕೆಲಸ. ನಾನು ನೋಡಿ ಬೆರಗಾಗುವ ಕ್ಯಾಟರ್‌ಪಿಲ್ಲರ್‌ಗಳಿಗೂ ಎಲೆಗಳನ್ನು ತಿಂದು ಬೆಳೆಯುವುದಷ್ಟೇ ಕೆಲಸ; ಬೇರೆ ಯಾವುದರ ಗಣ್ಯವೂ ಇಲ್ಲ. ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟನ್ನು ಶ್ರದ್ಧೆಯಿಂದ ಕುಂದಿಲ್ಲದಂತೆ ಮಾಡಿ ಮುಗಿಸಿ; ತಕ್ಕ ಪ್ರತಿಫ‌ಲ ಸಿಕ್ಕೇ ಸಿಗುತ್ತದೆ ಎನ್ನುವ ಹಾಗಿದೆಯಲ್ಲ ಇದು!

ಮತ್ತೆ ನಾವು; ಹುಲುಮನುಷ್ಯರು ಕಷ್ಟ ಬಂತು, ದುಡ್ಡಿಲ್ಲ, ನಷ್ಟವಾಯಿತು, ಹಾಳಾಯಿತು, ಅವ ಹೋದ, ಇವಳು ಬಂದಳು ಎಂದೆಲ್ಲ ಅಳುವುದೇಕೆ?! ಸವಾಲುಗಳು ಎದುರಾದಾಗ ಕುಗ್ಗುವುದೇಕೆ? ನಮ್ಮ ನಮ್ಮ ಕೆಲಸ ಮಾಡುತ್ತ ಇದ್ದರಾಗದೇ! ಅದಕ್ಕೇನು ವಿಹಿತ ಪ್ರತಿಫ‌ಲವೋ ಅದು ತಾನಾಗಿ ಒದಗಿಬಾರದೇ?

–  ಆನಂದಮಯಿ

ಟಾಪ್ ನ್ಯೂಸ್

Delhi Election 2025:  ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

5

Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ

Delhi Election 2025:  ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

4

Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.