ನಮ್ಮೊಳಗಿನ ಪರಿಮಳವ ಅನುಭವಿಸೋಣ
Team Udayavani, Apr 15, 2019, 6:00 AM IST
ಬದುಕಿನ ಮೂಟೆ ಹೊರುವುದು ಕಷ್ಟ. ಆದರೆ ಅಸಾಧ್ಯವೇನಲ್ಲ.
ನಿಜಕ್ಕೂ ಬದುಕು ಬಂಗಾರ.ಬಂಗಾರವೂ ತನ್ನ ಹೊಳಪು ಕಳೆದುಕೊಳ್ಳುವು ದುಂಟು.ಹಾಗೆಯೇ ನೇತ್ಯಾತ್ಮಕ ಆಲೋಚನೆಗಳಿಂದ ನಮ್ಮ ಬದುಕೂ ಹೊಳಪು ಕಳೆದುಕೊಳ್ಳುತ್ತದೆ. ಆಗ ಬಂಗಾರವನ್ನು ಸ್ವತ್ಛಗೊಳಿಸಿ ಹೊಳೆಯುವಂತೆ ಹೇಗೆ ಮಾಡುತ್ತೇವೆಯೋ ಹಾಗೆಯೇ ನಮ್ಮ ಮನಸ್ಸಿಗೂ ಚಿಕಿತ್ಸೆ ನೀಡಬೇಕು. ಅದು ಧನಾತ್ಮಕ ಚಿಕಿತ್ಸೆ. ಅದರಿಂದ ಮಾತ್ರ ಮನಸ್ಸು ಮತ್ತೆ ಹೊಳೆಯಲು ಸಾಧ್ಯ.
ಜೀವನ ಕಲ್ಲು ಮುಳ್ಳುಗಳ ಹಾದಿ. ಇಲ್ಲಿ ಗೆಲುವು ಸೋಲು ಎಂಬುದು ಸಾಮಾನ್ಯ. ಎಲ್ಲ ಸಂದರ್ಭಗಳಲ್ಲಿಯೂ ನಮಗೆ ನಲಿವೊಂದೇ ಸಿಗಬೇಕು ಎಂದು ಮನಸ್ಸು ಬಯಸುವುದು ಸಹಜ. ಆದರೆ ಸಮಯ ಹಾಗಲ್ಲ. ಕೆಲವೊಮ್ಮೆ ದುಃಖದ ರುಚಿಯನ್ನೂ ತೋರಿಸುತ್ತದೆ. ಕೆಲವೊಮ್ಮೆ ಡಿಪ್ರಷನ್‌ಗೆ ಜಾರುವ ಸಂಭವವೂ ಇರುತ್ತದೆ. ವಾಸ್ತವವನ್ನು ಬಿಟ್ಟು ಕಾಲ್ಪನಿಕ ಜಗತ್ತಿನಲ್ಲೇ ಹೆಚ್ಚು ಕಾಲ ಸುತ್ತುತ್ತಿರುವ ಮನಸ್ಸಿಗೆ ಹೀಗಾಗುವುದು ಸಹಜ. ಋಣಾತ್ಮಕ ಜಗತ್ತಿನತ್ತ ವಾಲುವ ಮನಸ್ಸನ್ನು ಕಟ್ಟಿ ಹಾಕಿಕೊಳ್ಳುವ, ಕ್ರಿಯಾ ಶೀಲತೆಯಲ್ಲಿ ತೊಡಗಿಸಿ ಕೊಳ್ಳುವ ಕಲೆ ಗೊತ್ತಿಲ್ಲದೇ ಹೋದಾಗ ಇಂತಹ ಸಮಸ್ಯೆಗಳು ನಮ್ಮದಾಗುತ್ತವೆ. ಹಾಗಾದರೆ ನಮ್ಮ ಸುಂದರ ಮನಸ್ಸನ್ನು ಸದಾ ಕಾಲ ಸಂತೋಷ ವಾಗಿಟ್ಟುಕೊಳ್ಳುವುದು, ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವಂತೆ ಬಲಿಷ್ಠಗೊಳಿಸಿ ಕೊಳ್ಳಲು ಧನಾತ್ಮಕತೆಯನ್ನು ತುಂಬಿಕೊಳ್ಳುವುದು ಹೇಗೆ?
ಜೀವನ ಪ್ರೀತಿ
ನಾವು ನಮ್ಮನ್ನು ಪ್ರೀತಿಸು ವುದನ್ನು ಮೊದಲು ಕಲಿಯ ಬೇಕು. ನಮ್ಮಲ್ಲಿ ಜೀವನ ಪ್ರೀತಿ ಬತ್ತಿದರೆ ಮತ್ತೆ ಬದುಕುವ ಉತ್ಸಾಹವೇ ಉಡುಗಿ ಹೋಗುತ್ತದೆ. ನಕಾರಾತ್ಮಕ ಸಂಗತಿಗಳು ನಮ್ಮನ್ನು ಹೆಚ್ಚು ಕಾಡುವುದಕ್ಕೆ ಆರಂಭವಾಗುತ್ತವೆ. ನಮ್ಮನ್ನು ನಾವು ಇಷ್ಟಪಡುವುದನ್ನು ಕಲಿಯದೇ ಹೋದರೆ ನಾವು ಇನ್ನೊಬ್ಬರನ್ನು ಒಪ್ಪಿಕೊಳ್ಳುವ, ಪ್ರೀತಿ ಮಾಡುವ ಗುಣ ನಮ್ಮೊಳಗೆ ಹುಟ್ಟಿಕೊಳ್ಳದು.ಯಾವುದೇ ಕೆಲಸ ಪೂರ್ಣಗೊಳಿಸಬೇಕಾದರೂ ಈ ಒಂದು ಅಂಶ ನಮ್ಮ ಮನಸ್ಸಿನಲ್ಲಿದ್ದರೆ ಸಾಕು. ಫಲಿತಾಂಶ ಏನೇ ಇದ್ದರೂ ಅದನ್ನು ಆತ್ಮವಿಶ್ವಾಸದ ಮೂಲಕವೇ ಒಪ್ಪಿಕೊಳ್ಳುವ ಗಟ್ಟಿತನ ಮೂಡುತ್ತದೆ. ಮುಗುಳು ನಗುವಿಗೂ ಈ ಅದಮ್ಯ ಜೀವನೋತ್ಸಾಹವೇ ಕಾರಣ. ನಮ್ಮನ್ನು ನೋಡಿ ಇತರರೂ ಆತ್ಮವಿಶ್ವಾಸ ಬೆಳೆಸಿ ಕೊಳ್ಳುವುದು ಆಗಲೇ.
ನೀವು ಖುಷಿಪಡುವ ಕೆಲಸಗಳಲ್ಲಿ ತೊಡಗಿಕೊಳ್ಳಿ
ಇದು ಬಹಳ ಮುಖ್ಯವಾದುದು. ಮನಸ್ಸನ್ನು ಉಲ್ಲಸಿತವಾಗಿಡುವುದೇ ಅದು. ಋಣಾತ್ಮಕ ಯೋಚನೆಗಳು ನಮ್ಮಿಂದ ದೂರವಾಗಿಡುವುದಕ್ಕೆ ಇದು ಸಹಕಾರಿ ಯಾದೀತು. ಯಾವುದೇ ನಿಮಗಿಷ್ಟವಾಗುವ ರಚನಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳಿ. ಹಲವು ಸಂದರ್ಭಗಳಿಗೆ ಸರಿಯಾಗಿ ನಮ್ಮನ್ನು ನಾವು ಹೊಂದಿಸಿ ಕೊಳ್ಳುವುದರಿಂದಲು ನಮ್ಮ ಮನಸ್ಸಿನೊಳಗೆ ಶಕ್ತಿ ಸಂಚಲನ ಸಾಧ್ಯ. ಹಾಗಾಗಿ ಸಂಗೀತ ಕೇಳುವುದು, ಮನಸ್ಸಿಗೆ ಹತ್ತಿರವಾದವರ ಜತೆಯಲ್ಲಿ ಸಮಯ ಕಳೆಯುವುದು, ಪುಸ್ತಕಗಳನ್ನು ಓದುವುದು, ಪ್ರವಾಸ, ಚಾರಣ, ಹಳೆಯ ನೆನಪುಗಳನ್ನು ಮತ್ತೆ ನೆನಪಿಸಿಕೊಳ್ಳುವುದನ್ನು ಮಾಡಿದಾಗ ಮನಸ್ಸು ಖುಷಿಗೊಳ್ಳುತ್ತದೆ.
ಬದುಕಿನಲ್ಲಿ ಏನೇ ಬಂದರೂ ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿಯೊಂದನ್ನು ನಾವು ಬೆಳೆಸಿಕೊಂಡರೆ ಸಾಕು, ಇಡೀ ಜಗತ್ತು ನಮ್ಮ ಮುಂದೆ ಶರಣಾಗಿಬಿಡುತ್ತದೆ. ಸಮಸ್ಯೆಗಳಿಗೆ ಸೋತು ನಾವೇ ತಲೆ ಬಾಗಿಸಿದಲ್ಲಿ ಚಿಂತೆಯ ಚಿತೆ ನಮ್ಮನ್ನೇ ಸುಟ್ಟುಬಿಡುತ್ತದೆ. ಹಾಗಾಗಿ ಜೀವನದಲ್ಲಿ ಏನೇ ಬಂದರೂ ಧನಾತ್ಮಕವಾಗಿ ತೆಗೆದುಕೊಳ್ಳೋಣ. ಸುಂದರ ಬದುಕು ನಮ್ಮದಾಗುತ್ತದೆ.
ಮನಸಾರೆ ಅತ್ತುಬಿಡಿ
ದುಃಖವಿದ್ದರಷ್ಟೆ ಸುಖದ ಅರಿವು ನಮಗಾಗುವುದು ಸಾಧ್ಯ. ಸಂತೋಷವನ್ನು ಹೇಗೆ ಆಸ್ವಾದಿಸುತ್ತೇವೆಯೋ ಹಾಗೆಯೇ ನೋವನ್ನು ಅನುಭವಿಸುವುದಕ್ಕೂ ನಾವು ಸಿದ್ಧರಾಗಿರಬೇಕು. ಮನಸ್ಸು ದುಃಖದಿಂದ ವಿಚಲಿವಾದಾಗ ಅದರಿಂದ ಹೊರ ಬರುವುದಕ್ಕೆ ಕೊಂಚ ಮಟ್ಟಿಗೆ ಸಹಾಯ ಮಾಡುವುದು ಕಣ್ಣೀರು. ಕೊರಗುವುದಕ್ಕಿಂತ ಮನಸಾರೆ ಅತ್ತು ಬಿಟ್ಟರೆ ನಿರಾಳತೆ ನಮ್ಮದಾಗುತ್ತದೆ. ನೋವಿನಿಂದ ಹೊರಬರುವ ದಾರಿಯನ್ನು ಯೋಚಿಸುವುದಕ್ಕೂ ಇದು ನಮಗೆ ಅನೇಕ ಬಾರಿ ಸಹಾಯ ಮಾಡುತ್ತದೆ. ಆಗ ನಿರಾಳವಾಗುವ ಮನಸ್ಸು ಸಕಾರಾತ್ಮಕ ಯೋಚನೆಗಳ ನೂರಾರು ಹಾದಿಯನ್ನು ತೆರೆಯಬಲ್ಲದು.
ಧ್ಯಾನ
ಜೀವಕ್ಕೆ ಆಹಾರ ಹೇಗೆ ಚೈತನ್ಯ ನೀಡುತ್ತದೆಯೋ ಹಾಗೆಯೇ ಜೀವನಕ್ಕೆ ಉಲ್ಲಾಸ ತುಂಬುವ ಕೆಲಸವನ್ನು ಧ್ಯಾನ ಮಾಡುತ್ತದೆ. ನಿತ್ಯವೂ ಬೆಳಗ್ಗೆ ಮತ್ತು ಸಂಜೆಯ ಹೊತ್ತಿನ ಧ್ಯಾನ ಮನಸ್ಸನ್ನು ಉಲ್ಲಸಿತವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಬೇಕಾದ ತಾಳ್ಮೆ ಮತ್ತು ಇಚ್ಛಾಶಕ್ತಿ ಯನ್ನು ಬೆಳೆಸಿಕೊಳ್ಳಲು ಧ್ಯಾನ ದಿವ್ಯಾಸ್ತ್ರವೇ ಸರಿ. ನಮ್ಮೊಳಗೆ ಧನಾತ್ಮಕತೆ ಭಾವನೆ ಗಳನ್ನು ಹೆಚ್ಚು ಮಾಡುವುದಕ್ಕೂ ಇದು ದಿವೌÂಷಧ.
– ಭುವನ ಬಾಬು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.