ಬದುಕು ಬದಲಿಸುವ ಪಥ…
Team Udayavani, Sep 17, 2018, 2:55 PM IST
ಬದುಕು ನಾವಂದುಕೊಂಡತೆ ಇರುವುದಿಲ್ಲ ಎಂದು ಹಲವು ಬಾರಿ ಪರಿತಪಿಸುತ್ತೇವೆ. ಆದರೆ, ಎಷ್ಟೋ ಬಾರಿ ನಮಗೆ ಸಿಕ್ಕಿದ ಅವಕಾಶವನ್ನು ಕೈಚೆಲ್ಲಿ ಹಣೆ ಬರಹ ಎಂದುಕೊಳ್ಳುತ್ತೇವೆ. ಇಲ್ಲಿ ಮೂರು ಘಟನೆಗಳಿವೆ. ಇದರಲ್ಲಿ ಒಂದು ನಮ್ಮದೂ ಆಗಿರಬಹುದು. ಹಾಗಿದ್ದರೆ ನಮ್ಮ ಭವಿಷ್ಯ ಏನು ಎಂದು ಈಗಲೇ ನಿರ್ಧರಿಸಿ, ನಾವು ಯಾವ ದಾರಿಯಲ್ಲಿ ಸಾಗಬೇಕು ಎಂಬುದನ್ನು ಯೋಚಿಸಬೇಕಾಗುತ್ತದೆ.
ಘಟನೆ - 1
ಜೀವನ ಸರಾಗವಾಗಿ ಸಾಗಬೇಕೆಂದಿದ್ದರೆ ಒಂದು ಉದ್ಯೋಗ, ಮೂರು ಹೊತ್ತಿನ ಊಟ ಇವಿಷ್ಟು ಸಾಕು. ಬದುಕಿನ ಆರಂಭದಿಂದ ಅಂತ್ಯದವರೆಗೆ ಯಾವುದೇ ಜಂಜಾಟವಿಲ್ಲದೆ ಸಾಗುತ್ತದೆ ಒಂದು ದೋಣಿಯಂತೆ. ಹೆಚ್ಚಿನ ಹೆತ್ತವರಿಗೆ ಇದುವೇ ಹೆಮ್ಮೆಯ ವಿಚಾರ ನಮ್ಮವ/ಳು ಯಾರ ತಂಟೆಗೂ ಹೋಗುವುದಿಲ್ಲ ಎಂಬ ಹಿರಿಮೆ. ಇಂಥವರ ಜೀವನ ಸಾಗುತ್ತಿರುತ್ತದೆ. ಒಂದು ದಿನ ಜೀವನ ಮುಗಿಯುತ್ತದೆ. ಮಾರನೇ ದಿನ ಮನೆಯವರು ನೆನಪಿನಲ್ಲೇ ಕೊರಗುತ್ತಾರೆ. ಆ ನೆನಪಿಷ್ಟೇ ನಮ್ಮವ/ ಳು ಒಳ್ಳೆಯವ/ಳು ಈ ಸ್ಥಿತಿ ಬರಬಾರದಿತ್ತು ಅನ್ನುವುದು.
ಘಟನೆ - 2
ಉದ್ಯೋಗ ಇಲ್ಲ. ಹೇಗೋ ಹೊಟ್ಟೆ ತುಂಬುತ್ತದೆ. ಅಡ್ಡದಾರಿಯತ್ತ ಸಾಗುವುದೇ ಹೆಚ್ಚು. ಮಾತಿಗೆ ಬಗ್ಗದವರು. ಮನೆಯವರಿಗೆ ಮಕ್ಕಳದ್ದೇ ಚಿಂತೆ. ಸರಿದಾರಿಗೆ ಬರುತ್ತಾರೆ ಎನ್ನುವ ಅಚಲ ನಂಬಿಕೆ. ಇಂಥವರಿಗೆ ಮನೋರಂಜನೆ ಮುಖ್ಯ ಜೀವನವಲ್ಲ. ಇಲ್ಲಿ ಏನಿದ್ದರೂ ಆ ಕ್ಷಣದ ಸುಖ ಮಾತ್ರ. ಜೀವನವನ್ನು ಅಪಾಯದಲ್ಲಿ ತಂದಿಡುವವರು. ಆದರೆ ಅದೃಷ್ಟದಾಟದಲ್ಲಿ ಗೆಲುವು ಸಿಗಲೂಬಹುದು ಸೋಲು ದಕ್ಕಲೂ ಬಹುದು. ಇದು ಜೀವನ ಪರ್ಯಾಂತ ಪರಿತಪಿಸುವ ಯಾತನೆಯೂ ಆಗಿರಬಹುದು.
ಘಟನೆ - 3
ಸಾಧನೆಗೆ ಪಣ ತೊಡುವವರು. ಯಶಸ್ಸು ಗಳಿಸುವುದೇ ಇವರ ಜಾಯಾಮಾನ. ಸದಾ ಆಲೋಚನೆ, ಕಾರ್ಯಗತಮಾಡುವುದನ್ನೇ ಇವರು ಕರಗತ ಮಾಡಿಕೊಳ್ಳುತ್ತಾರೆ. ಊರು ತುಂಬ ಗೆಳೆತನ, ಕಷ್ಟ ಕಾಲಕ್ಕೆ ಗೆಳೆಯರಿಗೆ ಆಸರೆಯಾಗುವವರು. ಜೀವನದಲ್ಲಿ ಹೊಸತನ ಹುಡುಕುವ ಹಂಬಲವಿರುವವರು. ಇವರು ಸ್ಪೀಡ್ ಬೋಟ್ ಇದ್ದಂತೆ ಕಡಿಮೆ ಅವಧಿಯಲ್ಲಿ ಯಶಸ್ಸು ಸಾಧಿಸುವವರು. ಅಪಾಯವನ್ನು ಜಾಣ್ಮೆಯಿಂದ ಎದುರಿಸುವರು.
ಜೀವನದಲ್ಲಿ ಪಥ ಎಂಬುವುದು ಮರದ ಗೆಲ್ಲುಗಳಂತೆ. ಜಾಣ್ಮೆ, ಏಕಾಗ್ರತೆ, ನಿಖರತೆ, ಗುರಿ, ಉದ್ದೇಶ ಹೀಗೆ ಹತ್ತು ಹಲವು ಸಂಗತಿಗಳೂ ಇಲ್ಲಿ ಮುಖ್ಯ. ಬದುಕಿನಲ್ಲಿ ಬಿರುಗಾಳಿ ಎದ್ದರೂ ದೃಢವಾಗಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಅನಿರೀಕ್ಷಿತ ಘಟನೆಗಳಿಂದ ಕುಗ್ಗದೆ ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗುವುದನ್ನು ಕರಗತ ಮಾಡಿಕೊಂಡರಷ್ಟೇ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯವಿದೆ. ಆ ಮೂಲಕ ಜೀವನ ಮುಗಿದ ಅನಂತರದ ಬದುಕು ಕೂಡ ಶಾಶ್ವತವಾಗಿ ಉಳಿಯುತ್ತದೆ. ಮರ ನಶಿಸಿ ಹೋದರೂ ಅದರ ಕುರುಹು ಆ ಮರವನ್ನು ನೆನಪಿಸುವಂತಿರುತ್ತದೆ. ಅಂತೆಯೇ ನಮ್ಮ ಜೀವನವೂ ಇರಬೇಕು.
ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.