ಜೀವನ ಚಿಂತೆಯಲ್ಲ, ಶಾಶ್ವತ ಜ್ಞಾನ
Team Udayavani, Mar 11, 2019, 7:17 AM IST
ಜೀವನದಲ್ಲಿ ಎಲ್ಲರೂ ಬಯಸುವುದು ಸಂತೋಷವನ್ನು. ಆದರೆ ಅದನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹೀಗಾಗಿ ಅದನ್ನು ಎಲ್ಲೆಲ್ಲೋ ಅರಸಿ ಹೋಗುತ್ತಾರೆ. ಸಂತೋಷ ಎನ್ನುವುದು ಬೇರೆಲ್ಲೂ ಇಲ್ಲ. ಅದು ನಮ್ಮೊಳಗೆ ಇದೆ ಎನ್ನುತ್ತಾರೆ ಮಹಾ ಋಷಿ ಮಹೇಶ್ ಯೋಗಿ. ಸಂದರ್ಭಗಳು ಹೇಗೆ ಇವೆಯೋ ಅದನ್ನು ಹಾಗೇ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ನಾವು ಸಂತೋಷವಾಗಿರಲು ಸಾಧ್ಯ ಎಂದಿರುವ ಅವರ ಮಾತುಗಳು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡರೆ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂಬುದನ್ನು ತಮ್ಮ ಬದುಕಿನ ಮೂಲಕವೇ ನಿರೂಪಿಸಿದರು. ಧ್ಯಾನಕ್ಕೆ ಆಧುನಿಕ ಸ್ಪರ್ಶ ನೀಡಿದ ಗುರುಗಳು ಜಗತ್ತಿಗೆ ಆಧ್ಯಾತ್ಮಿಕ ನಾಯಕಾರದರು.
ಜೀವನ ಎಂದರೆ ಹೋರಾಟವಲ್ಲ, ಅದೊಂದು ಚಿಂತೆಯಲ್ಲ.. ಜೀವನವೆಂದರೆ ಆನಂದ. ಅದೊಂದು ಶಾಶ್ವತ ಜ್ಞಾನ, ಶಾಶ್ವತ ಅಸ್ತಿತ್ವ. ಇದು ಮಹಾಋಷಿ ಮಹೇಶ್ ಯೋಗಿ ಅವರು ಬೋಧಿಸಿದ ಜೀವನದ ಬಗೆಗಿನ ತತ್ತ್ವಶಾಸ್ತ್ರ .’ ಸ್ವರ್ಗದ ಸಾಮ್ರಾಜ್ಯವು ವಿದ್ಯುತ್‌ನಂತೆ. ನೀವು ಅದನ್ನು ಕಾಣಲಾರಿರಿ. ಅದು ನಿಮ್ಮೊಳಗೇ ಇದೆ’ ಎಂದ ಮಹೇಶ್ ಯೋಗಿ ಅವರು, ಧ್ಯಾನವನ್ನು ಒಂದು ಧಾರ್ಮಿಕ ಭಾವಾವೇಶ (ಮಿಸ್ಟಿಕ್ಸ್) ದ ಆಚರಣೆ/ರೂಢಿಯಿಂದ ಮೇಲೆತ್ತಿ ವೈಜ್ಞಾನಿಕ ಬೆಂಬಲ ಹೊಂದಿದ ಆರೋಗ್ಯ ಕಾರ್ಯಕ್ರಮವನ್ನಾಗಿಸಿ ಕಾರ್ಯಸಾಧ್ಯ ಆರೋಗ್ಯ ಚಿಕಿತ್ಸೆ ಎಂಬಂತೆ ಯಸಮ್ಮತಗೊಳಿಸಿದವರು. ಇದು ಟ್ರಾನ್ಸೆಂಡೆಂಟಲ್ ಮೆಡಿಟೇಶನ್ (ಟಿ.ಎಂ.) ಎಂದು ಪ್ರಸಿದ್ಧವಾಗಿದೆ.
ಧ್ಯಾನವೆಂದರೆ ಏನು?
ಧ್ಯಾನವನ್ನು ಮಾನವನ ಆತ್ಮವನ್ನು ಇಡೀ ಬ್ರಹ್ಮಾಂಡದಲ್ಲಿ ಹಾಗೂ ಮಾನವನ ಒಳಗೆ ಹರಡಿಕೊಂಡಿರುವ ದೇವರೊಂದಿಗೆ ಜಾಗೃತಾವಸ್ಥೆಯಲ್ಲಿ ಸಂಧಿಸುವಂತೆ ಮಾಡುವ ಒಂದು ನೈಸರ್ಗಿಕ ವಿಧಾನ ಎಂದು ಸರಳವಾಗಿ ವಿವರಿಸಬಹುದು. ಧ್ಯಾನವು ಶಾಂತಿಯನ್ನು ನೀಡುವುದಲ್ಲದೆ, ನಮ್ಮೊಳಗಿನ ಆಳ, ಪವಿತ್ರ ಅಂಶದೆಡೆಗಿನ ದಾರಿಯನ್ನು ತೆರೆಯುತ್ತದೆ ಎಂದು ಬಲ್ಲವರು ಹೇಳುತ್ತಾರೆ. ಮನೋಚಿಕಿತ್ಸಕರು, ಆಪ್ತ ಸಮಾಲೋಚಕರು ಒತ್ತಡ ನಿವಾರಣೆಗೆ ಧ್ಯಾನವೂ ಒಂದು ದಾರಿ ಎಂದು ಸಲಹೆ ನೀಡುತ್ತಾರೆ. ಧ್ಯಾನ ಎಂದರೆ ‘ಓರ್ವನ ಗಮನ (ಅಟೆನ್ಶನ್) ವನ್ನು ಒಂದೆಡೆ ಏಕತ್ರಗೊಳಿಸುವ ವಿಧಾನ’ ಎಂದು ಮನಃಶಾಸ್ತ್ರ ಹೇಳುತ್ತದೆ.
ಧ್ಯಾನ ಎಂದರೆ ಏನು ಎಂದು ಕೇಳಿದಾಗ ಇಂತಹ ಹಲವು ಉತ್ತರಗಳು ಸಿಕ್ಕಾವು. ಆದರೆ ಧ್ಯಾನ ಹೇಗೆ ಮಾಡಬೇಕೆಂಬ ಪ್ರಶ್ನೆಗೆ ಬಹುಶಃ ಸರಳ, ಹೇರಳ ಉತ್ತರ ದೊರಕುವುದು ಕಷ್ಟ. ಜನಸಾಮಾನ್ಯರಿಗಂತೂ ಇಂಥದ್ದೆಲ್ಲ ಸನ್ಯಾಸಿ, ಸ್ವಾಮೀಜಿಗಳು ಮಾಡುವಂಥದ್ದು ಎಂಬ ಭಾವನೆಯಿದೆಯಷ್ಟೆ? ಹಾಗಾಗಿ ಧ್ಯಾನವು ಬಹುತೇಕ ಸರಳವೆಂದರೂ ಸರಳವಾಗಿರದೆ ಧಾರ್ಮಿಕ ಅಂಶವಾಗಿಯೇ ಉಳಿದುಕೊಂಡಿರುವಾಗ ಅಂಥಹ ಧ್ಯಾನವನ್ನು ವಿದೇಶೀಯರೂ ಮೆಚ್ಚುವಂತೆ, ನೆಚ್ಚಿಕೊಳ್ಳುವಂತೆ ಮಾಡಿದ್ದು ಈ ಮಹಾಋಷಿ.
ತುಸು ಭಿನ್ನತೆ
ಜಗತ್ತು ಸದಾ ಹೊಸತಕ್ಕೆ ತುಡಿಯುತ್ತಿರುತ್ತದೆ. ಮಹೇಶ್ ಯೋಗಿ ಅವರು ಸಾಂಪ್ರದಾಯಿಕ ಧ್ಯಾನಕ್ಕೆ ಹೊಸತನವನ್ನು ಕೊಟ್ಟು ಓರ್ವ ಆಧ್ಯಾತ್ಮಿಕ ನಾಯಕನಾಗಿ ಬದುಕಿದವರು. ಟ್ರಾನ್ಸೆಂಡೆಂಟಲ್ ಮೆಡಿಟೇಶನ್ ಎಂಬ ವಿಧಾನ ಪಾಶ್ಚಾತ್ಯ ಜಗತ್ತನ್ನು ಹೆಚ್ಚು ಆಕರ್ಷಿಸಿತು. ಸರಳವಾಗಿರುವ ಈ ವಿಧಾನವನ್ನು ದಿನಕ್ಕೆರಡು ಬಾರಿ 20 ನಿಮಿಷಗಳವರೆಗೆ ಒಂದು ವಿಶೇಷ ಮಂತ್ರದ ಪಠಣದೊಂದಿಗೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯು ಚಂಚಲ ಮಾನಸಿಕ ಚಟುವಟಿಕೆಗಳನ್ನು ಕಡಿಮೆ ಗೊಳಿಸಿ ಉನ್ನತ ಸ್ಥಿತಿಯ ಜಾಗೃತಾವಸ್ಥೆಯನ್ನು ತರುತ್ತದೆ ಎಂದು ನಂಬಲಾಗಿದೆ. ಇದರ ಉದ್ದೇಶ: ಆಳ ವಿಶ್ರಾಂತಿ, ಒತ್ತಡ ನಿವಾರಣೆ, ಸ್ವತ್ಛ ಆಲೋಚನೆಯನ್ನು ಉತ್ತೇಜಿಸುವುದು, ಉತ್ತಮ ಆರೋಗ್ಯ ಪಡೆಯುವುದು.
ಆತ್ಯಾನಂದ ಹೊಂದುವುದು
ಕಷ್ಟ ಎನ್ನುವುದು ಎಲ್ಲರಿಗೂ ಇದೆ. ಎಲ್ಲೆಲ್ಲೂ ಇದೆ. ಆದರೆ, ಮನಸ್ಸು ಸದಾ ಸಂತೋಷದ ಶೋಧದಲ್ಲಿರುತ್ತದೆ. ಇದು ಎಲ್ಲರ ಅನುಭವಕ್ಕೆ ಬಂದಿರುತ್ತದೆ. ಮನಸ್ಸನ್ನು ಕೇಂದ್ರೀಕರಿಸದೆ, ನಿಯಂತ್ರಿಸದೆ, ಅದು ಪರಮ ಸಂತೋಷವನ್ನು ಪಡೆಯುವ ತನ್ನ ಸಹಜ ಗುಣದಲ್ಲೇ ಮುಂದುವರೆಯಲು ಬಿಟ್ಟಾಗ ಮನಸ್ಸು ಆತ್ಯಾನಂದವನ್ನು ಹೊಂದುವುದು ಸಾಧ್ಯ ಎಂಬುದು ಟ್ರಾನ್ಸೆಂಡೆಂಟಲ್ ಮೆಡಿಟೇಶನ್‌ನ ಪ್ರತಿಪಾದನೆ. ‘ಮಾನವಕುಲ ಕಷ್ಟಪಡಲು ಜನ್ಮತಾಳಿಲ್ಲ. ಅದು ಸಂತೋಷವನ್ನು ಅನುಭವಿಸಲು ಜನ್ಮ ತಾಳಿದೆ. ಜೀವನದ ಉದ್ದೇಶವೆಂದರೆ ಖುಷಿಯನ್ನು ವಿಸ್ತರಿಸುವುದು’ ಎಂಬುದು ಮಹಾಋಷಿ ಅವರ ಅಭಿಮತ.
ಜೀವನದಲ್ಲಿ ಖುಷಿ ಅತ್ಯಂತ ಅಗತ್ಯವಾದುದೇ ಆಗಿದೆ. ಸಕಲ ಜೀವಿಗಳೂ ಖುಷಿ, ನೆಮ್ಮದಿಯನ್ನೇ ಬಯಸುತ್ತವೆ. ಖುಷಿಗಾಗಿ ಜನರು ನಾನಾ ತರದ ಪಾಡು ಪಡುತ್ತಾರೆ. ನೆಮ್ಮದಿ ಅರಸಿ ಎಲ್ಲೆಲ್ಲೋ ಹೋಗುತ್ತಾರೆ. ಅದಕ್ಕಾಗಿಯೇ ಮಹಾಋಷಿ ಅವರು ಖುಷಿ ನಮ್ಮೊಳಗೇ ಇದೆ ಎನ್ನುತ್ತಾರೆ. ಇದು ಜಗತ್ತಿನ ಬಹುತೇಕ ಜ್ಞಾನಿಗಳ ಅಭಿಮತವೂ ಹೌದು. ಆದರೆ ಆ ಖುಷಿ, ಅತ್ಯಾನಂದವನ್ನು ಪಡೆಯಲು ವಿಧಾನಗಳು ಭಿನ್ನ. ಮಹಾರುಷಿ ಅವರು ಜೀವನವೆಂದರೆ ಆನಂದ ಎಂದರು. ‘ಯಾವುದರಲ್ಲೇ ಆದರೂ ಯಶಸ್ಸು ಸಿಗುವುದಾದರೆ ಅದು ಸಂತೋಷದ ಮೂಲಕವೇ’. ‘ಸಂದರ್ಭಗಳನ್ನು ಅವು ಹೇಗಿವೆಯೋ ಹಾಗೆಯೇ ಸ್ವೀಕರಿಸಬೇಕು. ಅವುಗಳ ಕುರಿತಂತೆ ನಾವು ನಮ್ಮ ಮಾನಸಿಕ ಧೋರಣೆಗಳನ್ನು ಬದಲಾಯಿಸಿಕೊಳ್ಳಬೇಕಷ್ಟೆ’.
‘ನೀವು ಏನನ್ನು ಪಡೆಯಲು ಸಾಧ್ಯ ಎಂದು ಭಾವಿಸುತ್ತೀರೊ ಅದನ್ನಲ್ಲ; ನಿಜವಾಗಿಯೂ ನಿಮಗೇನು ಬೇಕೊ ಅದನ್ನು ಪಡೆಯಲು ಪ್ರಯತ್ನಿಸಿ’. ‘ಸಂತೋಷದ ವಿಸ್ತರಣೆಯಲ್ಲಿ ಬದುಕು ತನ್ನ ಉದ್ದಿಶ್ಯ ಮತ್ತು ಈಡೇರಿಕೆಯನ್ನು ಕಾಣುತ್ತದೆ’ ಇತ್ಯಾದಿ ಅವರ ಬೋಧನೆಗಳು ಜೀವನ ಪ್ರೀತಿಯ ಅಗಾಧತೆಗೆ ಸಾಕ್ಷಿ. ಆಧುನಿಕ ಜಗತ್ತಿಗೆ ಆಪ್ತವಾಗುವಂಥವೂ ಆಗಿವೆ.
ಅಧ್ಯಾತ್ಮ ಅರಸಿ ಹೋದವರು ಗುರುವಾದರು
ಮೂಲತಃ ಜಬಲ್‌ಪುರದವರು ಎನ್ನಲಾದ ಮಹೇಶ್ ಯೋಗಿ (ಮಹೇಶ್ ಪ್ರಸಾದ್ ವರ್ಮಾ) (1917-2008) ಅವರು ಆರಂಭದಲ್ಲಿ ಕೈಗಾರಿಕೆಗಳಲ್ಲಿ ದುಡಿದರು. ಭೌತಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿಯೂ ಆಯಿತು. ಅಧ್ಯಾತ್ಮ ಅರಸಿ ಹೋದಾಗ ಹಿಮಾಲಯದಲ್ಲಿ ಸ್ವಾಮಿ ಬ್ರಹ್ಮಾನಂದ ಸರಸ್ವತಿ ಅವರು ಗುರುವಾದರು. ಟ್ರಾನ್ಸೆಂಡೆಂಟಲ್ ಮೆಡಿಟೇಶನ್‌ನ ಸಂಸ್ಥಾಪಕರು ಅವರು. ಗುರು ಸಾನ್ನಿಧ್ಯ ಸೇರಿದ ವರ್ಮಾ, ಮಹೇಶ್ ಯೋಗಿ ಆದರು. ಮಹಾಋಷಿ ಅಭಿಧಾನವೂ ಗುರುವಿನಿಂದ ಲಭಿಸಿತು. ಗುರುವಿನ ಅನಂತರ ಅವರ ಬೋಧನೆಗಳನ್ನು ಪ್ರಸರಿಸಲು ಮಹಾಋಷಿ ಅವರು ಸ್ಪಿರಿಚುವಲ್ ರೀಜನರೇಶನ್ ಮೂವ್ ಮೆಂಟ್ ಆರಂಭಿಸಿದರು. ಧ್ಯಾನದಲ್ಲಿ ಆಸಕ್ತಿ ಹೆಚ್ಚಿತು. ಯಾವಾಗ ಬ್ರಿಟಿಷ್ ರಾಕ್ ಸಂಗೀತ ತಂಡ ‘ಬೀಟಲ್ಸ್’ ಇವರನ್ನು ಭೇಟಿಯಾಯಿತೋ
ಮಹಾಷಿಯ ಖ್ಯಾತಿ ವಿಶ್ವಕ್ಕೆ ಹರಡಿತು. ವಿಶೇಷವಾಗಿ, ಅಮೆರಿಕನ್ನರನ್ನು ಸೆಳೆಯಿತು. ಬೀಟಲ್ಸ್ ತಂಡಕ್ಕೆ ಆಧ್ಯಾತ್ಮಿಕ ಗುರುವಾಗಿ ಅವರು ಪ್ರಸಿದ್ಧರಾದರು.
ಕುದ್ಯಾಡಿ ಸಂದೇಶ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.