ತ್ಯಾಜ್ಯ ನಿರ್ವಹಣೆಗೆ ಸ್ಥಳೀಯ ಯೋಜನೆಗಳೇ ಪರಿಹಾರ


Team Udayavani, May 5, 2019, 6:00 AM IST

0305MLR50-PACHANADI

ಮಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆ ಪ್ರಸ್ತುತ ಗಂಭೀರ ಸವಾಲುಗಳಲ್ಲೊಂದು. ಈ ಸಮಸ್ಯೆ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಪ್ರಸ್ತುತ ಹಾಗೂ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತ್ಯಾಜ್ಯ ನಿರ್ವಹಣೆಗೆ ವಿಭಿನ್ನ ಯೋಜನೆಗಳನ್ನು ರೂಪಿಸುವುದು ಅತೀ ಅವಶ್ಯವಾಗಿದೆ.

ತ್ಯಾಜ್ಯ ನಿರ್ವಹಣೆಯಲ್ಲಿ ಹೊಸ ಆವಿಷ್ಕಾರಗಳು, ಮಾದರಿಗಳು ಬರುತ್ತಿವೆ. ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಇದನ್ನು ವಿವಿಧ ನೆಲೆಗಳಲ್ಲಿ ಉಪಯೋಗಿಸುವ ಬಗ್ಗೆ ಈಗಾಗಲೇ ಹಲವಾರು ಪ್ರಯತ್ನಗಳು ನಡೆದಿವೆ. ಪ್ರತಿ ವಾರ್ಡ್‌ನ ಕಸವನ್ನು ವಾರ್ಡ್‌ನ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ವಾರ್ಡ್‌ಮಟ್ಟದಲ್ಲೇ ವಿಲೇವಾರಿ ಆಗುವ ನಿಟ್ಟಿನಲ್ಲಿ ತ್ಯಾಜ್ಯ ನಿರ್ವಹಣೆ ಯೋಜನೆಗಳು ರೂಪುಗೊಂಡರೆ ಲ್ಯಾಂಡ್‌ಪಿಲ್‌ ( ಭೂಭರ್ತಿ) ಕೇಂದ್ರಗಳನ್ನು ಮಿತಿ ಮೀರಿ ಅವಲಂಬಿಸುವುದು ತಪ್ಪುತ್ತದೆ. ಪ್ರಸ್ತುತ ಹೊಸದಾಗಿ ತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆಗೆ ಆ ಪ್ರದೇಶಗಳ ನಾಗರಿಕರಿಂದಲೂ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ಸ‌ಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಮಂಗಳೂರು ನಗರದಲ್ಲಿ ದಿನಂಪ್ರತಿ ಸರಾಸರಿ 325ರಿಂದ 330 ಟನ್‌ ಕಸ ಸಂಗ್ರಹವಾಗುತ್ತದೆ. ಇದರಲ್ಲಿ ಬಹುಪಾಲು ಹಸಿ ಕಸವಾಗಿರುತ್ತದೆ. ಹೊಟೇಲ್‌, ಮನೆ ಸಹಿತ ಒಟ್ಟಾರೆ 97,294 ಕಟ್ಟಡಗಳಿವೆ. 1,180 ಕಿ.ಮೀ. ರಸ್ತೆಗಳಿವೆ. 823 ಮಂದಿ ಕಾರ್ಮಿಕರು ಕಸ ಸಂಗ್ರಹದಲ್ಲಿ ದುಡಿಯುತ್ತಿದ್ದಾರೆ. ಮನೆಮನೆಗಳಿಂದ ಸಂಗ್ರಹಿಸಿದ ಕಸವನ್ನು ಪಚ್ಚನಾಡಿಗೆ ಸಾಗಿಸಲಾಗುತ್ತದೆ. ವಾರದಲ್ಲಿ ಒಂದು ದಿನ ಒಣಕಸವನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಉಳಿದ ದಿನಗಳಲ್ಲಿ ಹಸಿಕಸವನ್ನು ಕೊಂಡೋಯ್ಯಲಾಗುತ್ತಿದೆ.

ಪಚ್ಚನಾಡಿಯಲ್ಲಿ ಹಸಿ ಕಸದಿಂದ ಕಾಂಪೋಸ್ಟ್‌ ತಯಾರಿಸುವ ಘಟಕವಿದೆ. ಉರ್ವದಲ್ಲಿ ಹಸಿ ಕಸದಿಂದ ಬಯೋಗ್ಯಾಸ್‌ ತಯಾರಿಸುವ ಘಟಕವಿದೆ. ಸಂಸ್ಕರಿಸಿ ಉಳಿದ ತ್ಯಾಜ್ಯವನ್ನು ಲ್ಯಾಂಡ್‌ಪಿಲ್‌ ಮಾಡಲಾಗುತ್ತಿದೆ. ಕಸ ಸಂಗ್ರಹದಲ್ಲೂ ಅನೇಕ ಸಮಸ್ಯೆಗಳಿವೆ. ತ್ಯಾಜ್ಯ ವಿಲೇವಾರಿ ಕೆಲಸ ಸಮಯ ಪರಿಮಿತಿಯೊಳಗೆ ನಡೆಯಬೇಕು. ಹಸಿಕಸ ಹಾಗೂ ಒಣ ಕಸವನ್ನು ವಿಂಗಡಿಸಿ ಕೊಡುವ ವ್ಯವಸ್ಥೆಯೂ ಇದೆ. ಆದರೆ ಇದು ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ.

ಮನೆಯಲ್ಲೆ ನಿರ್ವಹಣೆಗೆ ಉತ್ತೇಜನ
ನಮ್ಮ ಮನೆಯ ತ್ಯಾಜ್ಯಗಳನ್ನು ನಾವೇ ವಿಲೇವಾರಿ ಮಾಡಿ ಅದರಿಂದ ಜೈವಿಕ ಇಂಧನ ಪಡೆಯುವ ಅಡುಗೆ ಜೈವಿಕ ಇಂಧನ ಘಟಕ ಒಂದು ಪರಿಣಾಮಕಾರಿ ವಿಧಾನ. ಮನೆ, ಹೊಟೇಲ್‌, ವಸತಿ ನಿಲಯಗಳ ತ್ಯಾಜ್ಯಗಳ ವಿಲೇವಾರಿ ಹಾಗೂ ವಿಂಗಡನೆಯಲ್ಲಿ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಈ ಜೈವಿಕ ಇಂಧನ ಘಟಕ. ಅಡುಗೆ ತ್ಯಾಜ್ಯ ಜೈವಿಕ ಇಂಧನ ಘಟಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಪ್ರಾಯೋಗಿಕ ನೆಲೆಯಲ್ಲಿ ಅಲ್ಲಲ್ಲಿ ನಡೆಯುತ್ತಿದೆ.

ಜೈವಿಕ ಅನಿಲ ಜತೆಗೆ ಇದರಲ್ಲಿ ಉತ್ಪತಿಯಾಗುವ ದ್ರವವನ್ನು ತರಕಾರಿ ಗಿಡಗಳಿಗೆ ಸೇರಿದಂತೆ ಕೃಷಿಗೆ ಪೌಷ್ಟಿಕಾಂಶವಾಗಿ ಬಳಸಬಹುದಾಗಿದೆ. ಅನ್ನ, ಸಾಂಬಾರು, ಚಪಾತಿ, ಗಂಜಿ ನೀರು, ತರಕಾರಿ ತ್ಯಾಜ್ಯಗಳು, ಚಹಾ ಮತ್ತು ಕಾಫಿಯ ತ್ಯಾಜ್ಯ ಮುಂತಾದ ತ್ಯಾಜ್ಯಗಳನ್ನು ಇದಕ್ಕೆ ಬಳಸಬಹುದಾಗಿದೆ. ಉತ್ಪತಿಯಾಗುವ ಅಡುಗೆ ತ್ಯಾಜ್ಯದ ಪ್ರಮಾಣದ ಮೇಲೆ ಘಟಕದ ಸಾಮರ್ಥ್ಯ ಅಡಗಿದೆ. ಸಾಮಾನ್ಯವಾಗಿ ಮನೆಗಳಲ್ಲಿ 5 ಕೆ.ಜಿ.ವರೆಗೆ ಅಡುಗೆ ತ್ಯಾಜ್ಯ ಉತ್ಪತಿಯಾಗಲು ಸಾಧ್ಯವಿದೆ. 5 ಕಿಲೋ ಸಾಮರ್ಥ್ಯದ ಘಟಕದಲ್ಲಿ ದಿನವೊಂದಕ್ಕೆ ಅರ್ಧ ಕಿಲೋ ಅನಿಲ ಲಭ್ಯವಾಗುತ್ತದೆ.

ಮಣ್ಣಿನ ಮಡಕೆ ಕಾಂಪೋಸ್ಟ್‌
ಕಸದ ಸಮಸ್ಯೆಯನ್ನು
ಬಗೆಹರಿಸುವ ನಿಟ್ಟಿನಲ್ಲಿ ಸ್ವತ್ಛತಾ ಅಭಿಯಾನ , ಜಾಗೃತಿ ಕಾರ್ಯಕ್ರಮಗಳ ಮೂಲಕ ಹೆಸರು ಮಾಡಿರುವ ಮಂಗಳೂರು ರಾಮಕೃಷ್ಣ ಮಿಷನ್‌ ಮಣ್ಣಿನ ಮಡಕೆ ಕಾಂಪೋಸ್ಟ್‌ ಎಂಬ ನೂತನ ಪ್ರಯೋಗವನ್ನು ಸುಮಾರು ಎರಡು ವರ್ಷದಿಂದ ಮಾಡುತ್ತಿದೆ. ಮನೆಯ ಹಸಿ ಕಸಗಳನ್ನು ಗೊಬ್ಬರವಾಗಿ ಪರಿವರ್ತಿಸುವ ಈ ಯೋಜನೆಯಿಂದ ಹಸಿ ಕಸದ ವಿಲೇವಾರಿ ಸಮಸ್ಯೆಯನ್ನು ಭಾಗಶಃ ಪರಿಹರಿಸಬಹುದು ಎಂಬುದು ರಾಮಕೃಷ್ಣ ಮಿಷನ್‌ ಚಿಂತನೆ. ಸುಮಾರು 3,400ಕ್ಕೂ ಅಧಿಕ ಜನರು ಕಸ ನಿರ್ವಹಣೆ ಮಾಡಲು ಮೂರು ಮಡಕೆ ಸಾಧನಕ್ಕಾಗಿ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.
ಸ್ವತ್ಛ ಭಾರತ ಯೋಜನೆಯಡಿ ಮನೆಯಲ್ಲೇ ತ್ಯಾಜ್ಯ ನಿರ್ವಹಣೆಯನ್ನು ಒಂದು ಕಾರ್ಯಕ್ರಮವಾಗಿ ಸೇರ್ಪಡೆಗೊಳಿಸಿ ಸರಕಾರದಿಂದ ಪ್ರೋತ್ಸಾಹ ನೀಡಿದರೆ ಹೆಚ್ಚಿನ ರೀತಿಯಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೆ ಪೈಪ್‌ ಕಾಂಪೋಸ್ಟ್‌ ಮಾದರಿ ಕೂಡ ಬಳಕೆಯಲ್ಲಿದೆ.

ಕಾಂಪೋಸ್ಟರ್‌ಗಳ ಮೂಲಕ ತಯಾರಾದ ಸಾವಯವ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಆದಾಯವನ್ನು ಕೂಡ ಇದು ತರಲಿದೆ. ಉತ್ಪತಿಯಾಗುವ ಸಾಯಯವ ಗೊಬ್ಬರವನ್ನು ಕಾಂಪೋಸ್ಟ್‌ ಸಂತೆಯ ಮೂಲಕ ವಿಲೇವಾರಿ ಮಾಡಬಹುದಾಗಿದೆ. ಬೆಂಗಳೂರಿನಲ್ಲಿ ಇಂಥದ್ದೇ ಕಾಂಪೋಸ್ಟ್‌ ಸಂತೆಯ ಪ್ರಯೋಗ ಮಾಡಿ ಯಶಸ್ಸು ಕಂಡುಕೊಳ್ಳಲಾಗಿದೆ. ಇದಲ್ಲದೆ ಸ್ಥಳೀಯರು ತಮ್ಮ ಮನೆಯ ಹೂವಿನ ಗಿಡಗಳು, ಕೈತೋಟಗಳಿಗೆ ಬಳಸಬಹುದು.

ವಾರ್ಡ್‌ ಮಟ್ಟದಲ್ಲಿ ನಿರ್ವಹಣೆ
ಹಸಿ ಕಸ ವಿಲೇವಾರಿಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಂದ ಬೇಸತ್ತ ಬೆಂಗಳೂರಿನಲ್ಲಿ ಸ್ಥಳೀಯರು ವಾರ್ಡ್‌ ಮಟ್ಟದಲ್ಲೇ ತ್ಯಾಜ್ಯ ನಿರ್ವಹಣೆ ಮಾಡುವ ಕ್ರಮವನ್ನು ಅನುಸರಿಸುತ್ತಿದ್ದಾರೆ. ವಾರ್ಡ್‌ ಮಟ್ಟದಲ್ಲಿ ಹಸಿ ಕಸವನ್ನು ಬಳಸಿ ಬೀದಿಯಲ್ಲೇ ಕಾಂಪೋಸ್ಟರ್‌ಗಳನ್ನು ಬಳಸಿ ಕಾಂಪೋಸ್ಟ್‌ ತಯಾರಿಸಲಾಗುತ್ತಿದೆ. ಕಾಂಪೋಸ್ಟರ್‌ ಸಾಧನ ಬಳಸಿ ಹಸಿಕಸದಿಂದ ಸಾವಯವ ಗೊಬ್ಬರ ತಯಾರಿಸಲು ಕಾರ್ಯೋನ್ಮುಖರಾಗಿದ್ದಾರೆ. ಕಾಂಪೋಸ್ಟರ್‌ಗಳನ್ನು ಬೀದಿಗಳಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಇಡಲಾಗುತ್ತಿದೆ. ನಿತ್ಯವೂ ಮನೆಗಳಿಂದ ಸಂಗ್ರಹಿಸುವ ಹಸಿ ಕಸವನ್ನು ಪೌರಕಾರ್ಮಿಕರು ಈ ಕಾಂಪೋಸ್ಟರ್‌ಗಳಿಗೆ ತುಂಬಿಸುತ್ತಾರೆ. ದುರ್ವಾಸನೆ ಬಾರದಂತೆ ಅದಕ್ಕೆ ಕೋಕೋಪಿಟ್‌ ಮಿಶ್ರ ಮಾಡಿ ಮುಚ್ಚಳಕ್ಕೆ ಬೀಗ ಹಾಕಲಾಗುತ್ತದೆ. ಸುಮಾರು 40 ದಿನಗಳಲ್ಲಿ ಸಾವಯವ ಗೊಬ್ಬರ ತಯಾರಾಗುತ್ತದೆ. ಒಂದು ಕಾಂಪೋಸ್ಟರ್‌ ತುಂಬಿದ ಬಳಿಕ ಇನ್ನೊಂದು ಕಾಂಪೋಸ್ಟರ್‌ ಅನ್ನು ಬಳಸಲಾಗುತ್ತದೆ. ಇದಕ್ಕೆ ಬಿಬಿಎಂಪಿಯು ವಿಶೇಷ ಆಸಕ್ತಿ ವಹಿಸಿದೆ.

-  ಕೇಶವ ಕುಂದರ್‌

ಟಾಪ್ ನ್ಯೂಸ್

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Kerala NCC Camp: ಸೇನಾಧಿಕಾರಿ ಮೇಲೆ ಹಲ್ಲೆ: ಕೇರಳದಲ್ಲಿ ಇಬ್ಬರ ಬಂಧನ

Kerala NCC Camp: ಸೇನಾಧಿಕಾರಿ ಮೇಲೆ ಹಲ್ಲೆ: ಕೇರಳದಲ್ಲಿ ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

mob

Karkala: ದೂರವಾಣಿ ಕರೆ ಮಾಡಿ ಹಣ ಲೂಟಿ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

robbers

Suratkal: ಮಹಿಳೆಯರಿಗೆ ನಿಂದನೆ: ಬಾಲಕರ ಸೆರೆ

police crime

ಕೊಳತ್ತಮಜಲಿನಲ್ಲಿ ಹೊಡೆದಾಟ; ಎರಡು ಪ್ರತ್ಯೇಕ ಪ್ರಕರಣ ದಾಖಲು

police

Bantwal: ಹಾಡಹಗಲೇ ಮನೆಯಿಂದ ನಗದು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.