ಕಡಿಮೆ ಖರ್ಚಿನಲ್ಲೀಗ ಸಾವಯವ ಗಾರ್ಡನಿಂಗ್‌


Team Udayavani, Sep 21, 2019, 5:00 AM IST

u-38

ರಾಸಾಯನಿಕ ಕೀಟನಾಶಕಗಳ ಬಳಕೆ ಇಂದು ಅಧಿಕವಾಗುತ್ತಿದೆ. ಗದ್ದೆ, ತೋಟ, ತರಕಾರಿಗಳಿಂದ ಹಿಡಿದು ಹೋದೋಟಗಳವರೆಗೆ ಎಲ್ಲ ಕಡೆಗಳಲ್ಲೂ ಗಿಡಗಳು ಉತ್ತಮವಾಗಿ ಬೆಳೆಯಲು ಹಾಗೂ ಬೇಗನೆ ಫ‌ಸಲು ನೀಡುವುದಕ್ಕಾಗಿ ಕೀಟನಾಶಕಗಳ ಬಳಕೆ ಮಾಡುತ್ತಾರೆ. ಇದರಿಂದ ಬೆಳೆ ಉತ್ತಮವಾಗಿ ಕೆಲವು ಸಮಯ ಲಭಿಸಬಹುದು. ಆದರೆ ಅದರಿಂದ ಮಣ್ಣಿಗೆ ಮಾತ್ರ ನಿರಂತರ ಹಾನಿಯುಂಟಾಗುತ್ತದೆ. ಮಣ್ಣಿನ ಫ‌ಲವತ್ತತೆ ನಷ್ಟವಾಗುತ್ತದೆ. ಆದರೆ ಸಾವಯವ ಕೃಷಿ ಮಾಡುವುದರಿಂದ ಮಣ್ಣಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಕಡಿಮೆ ಖರ್ಚಿನಲ್ಲಿ ಇದನ್ನು ಬಳಸಬಹುದು.

ಗಾರ್ಡನಿಂಗ್‌ ಮಾಡುವಾಗಲೂ ಸಾವಯವವನ್ನು ಆಯ್ದುಕೊಳ್ಳುವುದು ಉತ್ತಮ. ಹೂವಿನ ಗಿಡಗಳಿಗೆ ಯಾವುದೇ ರೀತಿಯಲ್ಲಿ ಹಾನಿಯುಂಟಾಗದೆ ಸುಂದರವಾಗಿ ಬೆಳೆಯಲು ಸಾವಯವ ಗೊಬ್ಬರಗಳು ಸಹಕಾರಿಯಾಗಿವೆ. ಈ ಗೊಬ್ಬರಗಳ ತಯಾರಿಕೆಗೆ ತುಂಬಾ ಶ್ರಮ ಪಡಬೇಕಾದ ಅಗತ್ಯವೇನಿಲ್ಲ. ಮನೆಯಲ್ಲಿರುವ ವಸ್ತುಗಳೇ ಸಾಕು.

ತರಗೆಲೆ ಅಥವಾ ಉದುರಿದ ಎಲೆಗಳೇ ಗೊಬ್ಬರ
ನಿಮ್ಮ ಉದ್ಯಾನವನದಲ್ಲಿ ಉದುರಿರುವ ಎಲೆಗಳನ್ನು ಹಾಗೇ ಇರಲು ಬಿಡಬೇಡಿ. ಅದನ್ನು ಗಿಡಗಳ ಬುಡಗಳಿಗೆ ಹಾಕಿ ಬಿಡಬೇಕು. ಅವುಗಳು ಅಲ್ಲೇ ಕೊಳೆತು ಗೊಬ್ಬರವಾಗಿ ಪರಿಣಮಿಸುತ್ತವೆ. ಅಥವಾ ಒಂದು ಹೊಂಡ ತೆಗೆದು ಅಲ್ಲಿ ತರಗೆಲೆಗಳ ಸಮೇತ ಕಸಕಡ್ಡಿಗಳನ್ನು ರಾಶಿ ಹಾಕುವುದರಿಂದ ಅಲ್ಲಿ ಗೊಬ್ಬರ ಉಂಟಾಗುತ್ತದೆ. ಅದನ್ನು ಮತ್ತೆ ಗಿಡಗಳ ಬುಡಕ್ಕೆ ಹಾಕಬಹುದು.

ದನದ ಸೆಗಣಿ ಹಾಗೂ ಬೂದಿ ಉತ್ತಮ ಗೊಬ್ಬರವೆಂದು ಪರಿಗಣಿಸಲ್ಪಡುತ್ತದೆ. ತಿಂಗಳಿಗೊಮ್ಮೆ ಇವುಗಳನ್ನು ಗಿಡಗಳಿಗೆ ಹಾಕಿದರೆ ಯಾವುದೇ ರಾಸಾಯನಿಕ ವಸ್ತುಗಳ ಅಗತ್ಯ ಕಂಡು ಬರುವುದಿಲ್ಲ. ಎರೆಹುಳಗಳಂತಹ ಸಣ್ಣ ಜೀವಿಗಳು ಮಣ್ಣಿನಲ್ಲಿ ಇದ್ದರೆ ಅವುಗಳನ್ನು ನಾಶ ಮಾಡಬೇಡಿ. ಮಣ್ಣಿನ ಫ‌ಲವತ್ತತೆಯನ್ನು ಹೆಚ್ಚಿಸುವಲ್ಲಿ ಇವುಗಳೂ ಸಹಕಾರಿ.

ಪ್ರತಿಯೊಂದು ಔಷಧಗಳನ್ನು ಗಿಡಗಳಿಗೆ ಸಿಂಪಡಿಸುವಾಗಲೂ ಎಚ್ಚರಿಕೆಯಿಂದಿರಿ. ಅತಿಯಾದ ಬಳಕೆ ಬೇಡ. ಪ್ರಮಾಣ ಹದವಾಗಿರಲಿ. ಗಿಡ ಸಣ್ಣದಾಗಿದ್ದು ಹಾಕುವ ಗೊಬ್ಬರಗಳ ಪ್ರಮಾಣ ಅಧಿಕವಾದರೆ ಕೆಲವೊಂದು ಸಂದರ್ಭದಲ್ಲಿ ಗಿಡಗಳು ಸಾಯುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಮಾಡಿದರೆ ಕಡಿಮೆ ಖರ್ಚಿನಲ್ಲಿ ಸಾವಯವ ಗೊಬ್ಬರದಿಂದ ಉತ್ತಮ ಉದ್ಯಾನವನ ನಿರ್ಮಿಸಬಹುದು.

ಜೈವಿಕ ಕೀಟನಾಶಕ
ಗಿಡಗಳಿಗೆ ಹುಳು ಬರುವುದಕ್ಕೆ ಮನೆಯಲ್ಲೇ ಕೀಟನಾಶಕಗಳನ್ನು ತಯಾರಿಸಬಹುದು. ಕಹಿಬೇವಿನ ರಸವನ್ನು ಹೂವಿನ ಗಿಡಗಳ ಎಲೆಗಳಿಗೆ ಸಿಂಪಡಿಸಿದರೆ ಹುಳು ವಿನ ಕಾಟದಿಂದ ಮುಕ್ತಿ ಪಡೆಯ ಬಹುದು. ಕಾಂಡವನ್ನು ಅಗೆಯುವ ಹುಳುಗಳಿದ್ದರೆ ಬೇವಿನ ರಸವನ್ನು ಬುಡಗಳಿಗೂ ಹಾಕಬಹುದು.

-  ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.