ಕಡಿಮೆ ಬಂಡವಾಳ ಗರಿಷ್ಠ ಲಾಭದ ಉದ್ಯಮಗಳು
Team Udayavani, Feb 4, 2019, 7:17 AM IST
ಸ್ವಂತ ಉದ್ಯಮ ಆರಂಭಿಸಬೇಕೆನ್ನುವುದು ಬಹುಪಾಲು ಯುವಜನತೆಯ ಕನಸು. ಯಾರದೋ ಮುಂದೆ ಕೈಕಟ್ಟಿ ನಿಲ್ಲುವ ಬದಲು ನಾವೇ ಏನಾದರೂ ಮಾಡಿದರೆ? ಎಂದು ಪ್ರತಿಯೊಬ್ಬರೂ ಯೋಚಿಸಿಯೇ ಇರುತ್ತಾರೆ. ಆದರೆ ಸ್ವಂತ ಉದ್ಯಮವನ್ನು ಆರಂಭಿಸುವುದು ಸುಲಭದ ಮಾತಲ್ಲ.ಅದಕ್ಕೆ ಬಂಡವಾಳ, ಕೆಲಸಗಾರರು, ಕಚ್ಚಾ ವಸ್ತುಗಳು ಹಾಗೆ ಹತ್ತು ಹಲವು ಆವಶ್ಯಕತೆ ಇರುತ್ತವೆ. ಇದೇ ಸಮಸ್ಯೆಗಳಿಗೆ ಹೆದರಿ ಅದೆಷ್ಟೋ ಮಂದಿ ಸ್ವಂತ ಉದ್ಯಮದ ಯೋಚನೆಯನ್ನೇ ಕೈಬಿಡುತ್ತಾರೆ. ಆದರೆ ಕಡಿಮೆ ಬಂಡವಾಳ, ಕೆಲಸಗಾರರು ಇಲ್ಲದೆ ಮಾಡಬಹುದಾದ ಉದ್ಯಮಗಳ ಬಗ್ಗೆ ಯಾರೊಬ್ಬರೂ ಯೋಚಿ ಸುವ ಗೋಜಿಗೆ ಹೋಗುವುದೇ ಇಲ್ಲ. ಇಂತಹ ಕೆಲವು ಉದ್ಯಮಗಳ ಮಾಹಿತಿ ಇಲ್ಲಿದೆ.
ಶಿಶುಪಾಲನಾ ಕೇಂದ್ರಗಳು
ಆಧುನಿಕ ಯುಗದಲ್ಲಿ ಮನೆ ಮಂದಿಯೆಲ್ಲ ಬೆಳಗ್ಗಿನಿಂದ ಸಂಜೆ ವರೆಗೆ ಮನೆಯಾಚೆ ದುಡಿಮೆಗೆ ತೆರಳುವುದರಿಂದಾಗಿ ಮಕ್ಕಳನ್ನು ಲಾಲಿಸಿ, ಪಾಲಿಸಲು ಅವರಲ್ಲಿ ಸಮಯ ವಿರುವುದಿಲ್ಲ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬಲ್ಲೆವು ಎಂಬ ವಿಶ್ವಾಸ ನಮ್ಮಲ್ಲಿದ್ದಲ್ಲಿ ಶಿಶುಪಾಲನಾ ಕೇಂದ್ರ ಗಳು ಕಡಿಮೆ ಬಂಡವಾಳದ, ಒಬ್ಬರೇ ನಿರ್ವಹಿಸಬಹುದಾದಂತಹ ಉದ್ಯಮವಾಗಿದೆ.
ಬ್ಯೂಟಿಶಿಯನ್ಸ್
ಸೌಂದರ್ಯದ ಬಗ್ಗೆ ಕಾಳಜಿ ಇರುವವರು ಬ್ಯೂಟಿಶಿಯನ್ ತರಬೇತಿಗಳನ್ನು ಪಡೆದು ಬ್ಯೂಟಿಪಾರ್ಲರ್‌ಗಳನ್ನು ತೆರೆಯ ಬಹುದು. ಬ್ಯೂಟಿಶಿಯನ್‌ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮನೆಬಾಗಿಲಿಗೂ ಸೇವೆ ನೀಡಿದಲ್ಲಿ ಉತ್ತಮ ಆದಾಯ ಗಳಿಸಬಹುದು
ಟ್ಯೂಶನ್
ಟ್ಯೂಶನ್ ಕ್ಲಾಸ್‌ಗಳನ್ನು ಬಂಡವಾಳವಿಲ್ಲದೆಯೇ ಮನೆ ಯಲ್ಲಿ ಲಭ್ಯವಿರುವ ಜಾಗದಲ್ಲಿ ಆರಂಭಿಸಬಹುದಾಗಿದೆ. ನಮ್ಮ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಯಾವ ಯಾವ ತರಗತಿಯ ಮಕ್ಕಳಿಗೆ ಟ್ಯೂಶನ್ ನೀಡಬಹುದು ಎಂಬುದನ್ನು ನಿರ್ಧರಿಸಬೇಕಾಗುತ್ತದೆ.
ಇವಿಷ್ಟಲ್ಲದೇ ಪೆಟ್ಕೇರ್, ಎರೋಬಿಕ್ ಮತ್ತು ಡಾನ್ಸ್ ಕ್ಲಾಸಸ್, ಫ್ರಿಲ್ಯಾನ್ಸರ್ ಹೀಗೆ ಹತ್ತು ಹಲವು ಆಯ್ಕೆಗಳಿದ್ದು, ನಮ್ಮ ಕೌಶಲ ಮತ್ತು ಸಾಮರ್ಥ್ಯಕ್ಕನುಗುಣವಾಗಿ ಉದ್ಯಮ ಆರಂಭಿಸಬಹುದು.
ಆಹಾರ ಪದಾರ್ಥಗಳ ಉತ್ಪಾದನೆ, ಪೂರೈಕೆ
ಹೋಮ್‌ಮೇಡ್ ಆಹಾರ ಪದಾರ್ಥಗಳಿಗೆ ಉತ್ತಮ ಬೇಡಿಕೆಯಿದೆ. ಇದೊಂದು ಕಡಿಮೆ ಬಂಡವಾಳದ ಉದ್ಯಮವಾಗಿದ್ದು, ವಿವಿಧ ಬಗೆಯ ಆಹಾರ ಪದಾರ್ಥಗಳು, ಜ್ಯೂಸ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಈ ಬಗೆಯ ಉದ್ಯಮ ಆರಂಭಿಸುವವರಿಗೆ ಕೊಂಚ ಅಡುಗೆಗಳ ಬಗ್ಗೆ ಮಾಹಿತಿ ಅಗತ್ಯ.
••ಪ್ರಸನ್ನ ಹೆಗಡೆ ಊರಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.