ಆಚಾರ್ಯ ಮಧ್ವರ ಜಾಗತಿಕ ಪರಿಕಲ್ಪನೆ


Team Udayavani, Feb 3, 2020, 5:43 AM IST

madhwa

ಆಚಾರ್ಯ ಮಧ್ವರ ಸಿದ್ಧಾಂತವನ್ನು ಈಗ ದ್ವೈತ ಮತ ಎಂದು ಹೇಳುತ್ತಾರಾದರೂ ಇದರ ಪ್ರಾಚೀನ ಹೆಸರು ತಣ್ತೀವಾದ. ಏಕದೇವ ದೇವನೊಬ್ಬನೇ ಎಂಬ ತಣ್ತೀ ಬಹು ಪ್ರಾಚೀನ. ವೈದಿಕ ವಾಙ್ಮಯ “ಏಕೋದೇವಃ’ ಎಂದು ಹೇಳಿದೆ. ಆದ್ದರಿಂದ ಈಗ ಜನಸಾಮಾನ್ಯರ ಭಾಷೆಯಲ್ಲಿ ಹೇಳುವ ಅನೇಕಾನೇಕ ದೇವರು ಸ್ವತಂತ್ರನಾದ ಭಗವಂತನ ಕಲ್ಪನೆಯಲ್ಲಿಲ್ಲ, ಹಾಗೆಂದು ಸರ್ವಥಾ ನಿರಾಕರಿಸುವಂತೆಯೂ ಇಲ್ಲ. ಅವರವರ ಸಾಮರ್ಥ್ಯ ಬೇರೆಯಷ್ಟೆ. ಸರ್ವತಂತ್ರ ಸ್ವತಂತ್ರನಾದ ಭಗವಂತನನ್ನು ಆಚಾರ್ಯ ಮಧ್ವರು ನಾರಾಯಣ, ಸ್ವತಂತ್ರನಾದ ಪರದೈವ ಎಂದು ಕರೆದರು. ಆತನನ್ನೇ ಸಮಸ್ತ ವೇದಗಳೂ ಬೇರೆ ಬೇರೆ ನಾಮಗಳಿಂದ ಸ್ತುತಿಸುತ್ತಿವೆ. ಎಲ್ಲ ಶಬ್ದಗಳೂ ಭಗವಂತನನ್ನೇ ಉಲ್ಲೇಖೀಸಿ ಹೇಳುತ್ತವೆ, ಯಾವುದೇ ಭಾಷೆಯಲ್ಲಿ ಕರೆದರೂ ಅದು ಒಬ್ಬ ದೇವನಿಗೇ ಸಲ್ಲುತ್ತದೆ ಎಂದು ಸಾರಿದರು.

ಈಗ ನಾವು ಕರೆಯುವ ನಾನಾ ದೇವರನ್ನು ದೇವತೆಗಳು ಎಂದು ಪರಿಗಣಿಸಲಾಗಿದೆ. ಇವರೆಲ್ಲ ಸಾಧನೆ ಮಾಡಿ ದೇವರನ್ನು ಸಾಕ್ಷಾತ್ಕ ರಿಸಿಕೊಂಡ ಉತ್ತಮ ಜೀವರುಗಳು. ಈ ಜೀವಾತ್ಮರುಗಳಲ್ಲಿ ಶ್ರೇಷ್ಠ ಸ್ಥಾನದವರು ವಾಯು ದೇವರು. ಆದ್ದರಿಂದಲೇ ವಾಯು ಜೀವೋತ್ತಮ ಎನಿಸಿಕೊಂಡಿದ್ದಾರೆ. ಭಗ ವಂತನ ಇಚ್ಛೆಯನ್ನು ಅನುಸರಿಸಿ ದೇವ ತೆಗಳು ಕಾರ್ಯಮಗ್ನರಾಗುವರು ಎಂಬ ಚಿಂತನೆ ಇದೆ. ಹೀಗಾಗಿಯೇ ಭಗವಂತ ಬಿಂಬನೆನಿಸಿದರೆ ಜೀವರು ಪ್ರತಿಬಿಂಬ.

ಪ್ರಪಂಚದ ಬಂಧನ
ಸದಾ ಪ್ರಾಪಂಚಿಕ ವ್ಯವಹಾರದಲ್ಲಿ ಮುಳು ಗಿರುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಇದನ್ನೇ ವ್ಯಾಪಕ ಅರ್ಥ ದಲ್ಲಿ ಸಂಸಾರ ಎಂದು ಕರೆಯಲಾಗಿದೆ. ಸಂಸಾ ರವೆಂದರೆ ಈಗ ನಾವು ಬಳಸುವ ಸಣ್ಣ ವ್ಯಾಪ್ತಿಯ ಕೌಟುಂಬಿಕ ಅರ್ಥವಲ್ಲ. ಈ ಪ್ರಪಂಚದ ಬಂಧನದಿಂದ ಬಿಡುಗಡೆ ಗೊಳ್ಳುವುದೇ ಜೀವರುಗಳ ಪರಮಧ್ಯೇಯವಾಗಬೇಕು. ಅನಂತರ ಪ್ರಪಂಚವಿದ್ದರೂ ಅದು ಬಂಧನ ವೆನಿಸುವುದಿಲ್ಲ.

ಪ್ರಪಂಚದ ಸೃಷ್ಟಿ
ಪಂಚಭೂತಗಳು, ಪಂಚತನ್ಮಾತ್ರೆಗಳು, ಪಂಚಕೋಶಗಳು, ಪಂಚೇಂದ್ರಿಗಳು ಈ ಐದರಿಂದಾಗಿ ಪ್ರ-ಪಂಚ ಎಂಬ ಹೆಸರು ಬಂತು. ಇದರಲ್ಲಿ ಐದು ರೂಪಗಳ ಪ್ರಾಣ ತಣ್ತೀಗಳೂ ಇವೆ. ಐದು ರೂಪಗಳಿಂದ ಭಗವಂತ ನಿಯಂತ್ರಿಸುತ್ತಿದ್ದಾನೆ. ಈ ಪ್ರಪಂಚದಲ್ಲಿ ಜಡ-ಜಡಗಳ ಭೇದ, ಜಡ-ಜೀವರ ಭೇದ, ಜಡ-ಪರಮಾತ್ಮ ಭೇದ, ಜೀವ-ಜೀವರ ಭೇದ, ಜೀವ-ಪರಮಾತ್ಮ ಭೇದ ಇದು ಮಧ್ವರ ಪ್ರಮುಖ ಸಂದೇಶ. ಇದು ಪ್ರಕೃತಿ ನಿಯಮ. ಇದನ್ನು ಬದಲಾಯಿಸಲಾಗದು ಎಂದೂ ಹೇಳಿದ್ದಾರೆ. ಒಬ್ಬ ವ್ಯಕ್ತಿಯಂತೆ ಇನ್ನೊಬ್ಬನಿಲ್ಲದಿರುವುದು, ಒಂದು ಮರದಂತೆ ಇನ್ನೊಂದು ಮರವಿಲ್ಲದಿರುವುದೇ ಏಕೆ, ಒಂದು ಎಲೆಯಂತೆ ಇನ್ನೊಂದು ಎಲೆಯೂ ಇಲ್ಲದಿರುವುದು ವೈಜ್ಞಾನಿಕವಾಗಿ ನಮಗೆ ಕಂಡುಬರುತ್ತದೆ.

ವಿಗ್ರಹದಲ್ಲಿ, ಎಲ್ಲೆಲ್ಲೂ ದೇವರು
ಜಗತ್ತು ಸತ್ಯ-ಅಸತ್ಯ ಎಂಬ ವಿಚಾರ ದಲ್ಲಿಯೂ ಚರ್ಚೆಗಳು ಆಗುತ್ತವೆ. ಜಗತ್ತನ್ನು ನಾವು ನೋಡುತ್ತಿರುವುದರಿಂದ ಸತ್ಯ ಹೌದು. ಅಸತ್ಯವೆಂದರೆ ಸುಳ್ಳಾಗಿರದೆ, ಭಗವಂತನ ನೀತಿಯನುಸಾರ ನಡೆಯುವ ವ್ಯವಸ್ಥೆಯಲ್ಲಿದೆ. ಇದು ನಿತ್ಯವೂ ನಮಗೆ ಸಿಗುವುದಿಲ್ಲ ಎಂಬ ಅನಿತ್ಯ ಸಂದೇಶದ ಅರ್ಥವೂ ತೆರೆದುಕೊಳ್ಳುತ್ತದೆ. ಸಾಮಾನ್ಯವಾಗಿ ವಿಗ್ರಹಾರಾಧನೆಯಲ್ಲಿಯೂ ಆಳವಾದ ಚಿಂತನೆಯನ್ನು ಕಂಡುಕೊಳ್ಳಬೇಕಾಗಿದೆ. ದೇವರನ್ನು ವಿಗ್ರಹದಲ್ಲಿ ಕಾಣುವುದೇ ವಿನಾ ವಿಗ್ರಹವೇ ದೇವರಲ್ಲ ಎಂಬ ಚಿಂತನೆಯೂ ಅಗತ್ಯವಾಗಿದೆ. ದೇವರು ಎಲ್ಲ ಕಡೆ ಇದ್ದಾನೆಂದಾದಾಗ ವಿಗ್ರಹದಲ್ಲಿರಲು ಸಾಧ್ಯವಿಲ್ಲವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮಧ್ವರು ಹೀಗಾಗಿಯೇ ಬಾಲ್ಯದಲ್ಲಿಯೇ ಕಲ್ಲು, ಮಣ್ಣು, ಮರಗಳನ್ನೂ ಮುಟ್ಟಿ ನಮಸ್ಕರಿಸಿದ್ದರು. ಯಾರೂ ಕಾಣದಂತೆ ಬಾಳೆಹಣ್ಣನ್ನು ತಿನ್ನಲು ಕನಕದಾಸರಿಗೆ ಸಾಧ್ಯವಾಗದೆ ಹೋದದ್ದು ಇದೇ ಕಾರಣಕ್ಕಾಗಿ… ದೇವರಿಗೆ ಕಾಣದಂತೆ ಏನನ್ನಾದರೂ ಮಾಡಲು ಸಾಧ್ಯವೆ? ಆಧುನಿಕ ಚಿಂತಕರು ಆಗಾಗ್ಗೆ ಬಳಸುವ ಪದ “ಅಂತಃಸಾಕ್ಷಿ’ ಇದೇ ಅಲ್ಲವೆ? ಇದುವೇ ಸಾಕ್ಷೀಪ್ರಜ್ಞೆ. ಇದನ್ನೇ ದೇವರ ಅಸ್ತಿತ್ವ ಪ್ರತಿಪಾದಿಸಲು ಪೇಜಾವರ ಶ್ರೀಗಳು ಬಳಸುತ್ತಿದ್ದರು. ಈ ವಾದಪ್ರಜ್ಞೆಯ ಮೂಲ ಇರುವುದು ಮಧ್ವರ ಸಿದ್ಧಾಂತದಲ್ಲಿ…

ಭಿನ್ನಭಿನ್ನ ಸ್ವಭಾವ
ಮನುಷ್ಯನೂ ಸೇರಿದಂತೆ ಎಲ್ಲ ಪ್ರಾಣಿಗಳ ಸ್ವಭಾವವೂ ಭಿನ್ನ ಭಿನ್ನವಾಗಿರುತ್ತದೆ. ಅವರವರ ಸ್ವಭಾವಕ್ಕೆ ತಕ್ಕಂತೆ ಆ ಜೀವನ ಉದ್ಧಾರ ಸಾಧ್ಯ. ಆತನ ಬೆಳವಣಿಗೆಯೂ ಸ್ವಭಾವಕ್ಕೆ ತಕ್ಕಂತೆ ಇರುತ್ತದೆ. ಒಬ್ಬ ಹುಟ್ಟಿದ ವಾತಾವರಣ ವ್ಯಕ್ತಿಯ ಬೆಳವಣಿಗೆ ಮೇಲೆ ಪರಿಣಾಮ ಬೀರುವುದು ಹೌದಾದರೂ ಒಳಗಿನ ಸ್ವಭಾವ ಪ್ರಧಾನ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಗೀತೆಯಲ್ಲಿ ಬರುವ ಚಾತುರ್ವರ್ಣ ಪದ್ಧತಿ ಈಗ ಸಾಮಾಜಿಕವಾಗಿ ಕಾಣುತ್ತಿರುವ ಜಾತಿ ಪದ್ಧತಿಗಿಂತ ಸಂಪೂರ್ಣ ಭಿನ್ನವಾಗಿದೆ. ವರ್ಣವೇ ಬೇರೆ, ಜಾತಿಯೇ ಬೇರೆ ಎಂದು ಮಧ್ವಾಚಾರ್ಯರು ತಿಳಿಸಿದ್ದಾರೆ. ಯಾವುದೇ ಜಾತಿಯ ಮನೆಯಲ್ಲಿ ಸಾತ್ವಿಕ, ರಾಜಸ, ತಾಮಸ ಜನಿಸಬಹುದು ಮತ್ತು ಆತ ಜಾತಿ ಆಧಾರದಲ್ಲಿ ಬದಲಾಗುವುದೂ ಇಲ್ಲ. ಈ ಸಾತ್ವಿಕ, ರಾಜಸ, ತಾಮಸ ಗುಣಗಳು ಜೀವರುಗಳ ಇತಿಹಾಸಕ್ಕೆ (ಜನ್ಮಾಂತರ) ತಕ್ಕನಾಗಿ ಬರುತ್ತದೆ. ಇದನ್ನೇ ಮಧ್ವಾಚಾರ್ಯರು ಮೋಕ್ಷಾಪೇಕ್ಷಿಗಳು, ನಿತ್ಯ ಸಂಸಾರಿಗಳು, ನಿತ್ಯ ನಾರಕಿಗಳು ಎಂಬ ಜೀವತ್ತೈವಿಧ್ಯ ವರ್ಗೀಕರಣವನ್ನು ಹೇಳಿದರು. ಮಧ್ವರಿಗೆ ಮುನ್ನ ಜೈನಧರ್ಮದವರೂ ಜೀವ ದ್ವೆ„ವಿಧ್ಯವನ್ನು ಹೇಳಿದ್ದರು. ಮೋಕ್ಷದ ಚಿಂತನೆ ನಡೆಸುವ ಮೋಕ್ಷಾಪೇಕ್ಷಿಗಳು, ಪ್ರಾಪಂಚಿಕ ವ್ಯವಹಾರವನ್ನೇ ಸರ್ವಸ್ವ ಎಂದು ತಿಳಿಯುವ ನಿತ್ಯ ಸಂಸಾರಿಗಳು, ಏನೇ ಹೇಳಿದರೂ ಕೆಟ್ಟದ್ದನ್ನು ಮಾಡಲು ಹಾತೊರೆಯುವ ನಿತ್ಯ ನಾರಕಿಗಳು ಯಾವುದೇ ಜಾತಿಯಲ್ಲಿಯೂ ಜನಿಸಬಹುದು ಎಂಬುದು ಪ್ರಸಕ್ತ ಸಮಾಜವನ್ನು ಸೂಕ್ಷ್ಮ ದೃಷ್ಟಿಯಿಂದ ನೋಡಿದರೆ ತಿಳಿಯುತ್ತದೆ.

ವೇದವ್ಯಾಸರ ಬ್ರಹ್ಮಸೂತ್ರಕ್ಕೆ ಸಮಗ್ರ ವ್ಯಾಖ್ಯಾನವನ್ನು ಸಂಸ್ಕೃತದಲ್ಲಿ ಬರೆದ ಕೊನೆಯ ಆಚಾರ್ಯರು ಮತ್ತು 23ನೆಯವರು ಮಧ್ವರು. ಇವರ ಅನಂತರ 24ನೆಯ ಆಚಾರ್ಯರು ಬರಲಿಲ್ಲ. 1238ರಲ್ಲಿ ಪಾಜಕದಲ್ಲಿ ಜನಿಸಿ ಉಡುಪಿಯನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಮಧ್ವರು ಭೌತಿಕ ಶರೀರದಲ್ಲಿ ಕೊನೆಯಲ್ಲಿ ಕಾಣಿಸಿಕೊಂಡದ್ದು 1317ರಲ್ಲಿ. ಉಡುಪಿ ಅನಂತೇಶ್ವರ ದೇವಸ್ಥಾನದಲ್ಲಿ ಭೌತಿಕವಾಗಿ ಕೊನೆಯದಾಗಿ ಕಾಣಿಸಿಕೊಂಡ ದಿನವನ್ನು ಮಧ್ವನವಮಿ ಎಂದು ಆಚರಿಸಲಾಗುತ್ತಿದೆ. ಈಗಲೂ ಮೂಲಬದರಿಯಲ್ಲಿದ್ದಾರೆಂಬ ನಂಬಿಕೆ ಇದೆ. ಸೋಮವಾರ ಉಡುಪಿಯೂ ಸೇರಿದಂತೆ (ಫೆ. 3) ವಿವಿಧೆಡೆ ಮಧ್ವನವಮಿಯನ್ನು ಆಚರಿಸಲಾಗುತ್ತಿದೆ. ಹಾಗಾಗಿ ಈ ವಿಶೇಷ ಲೇಖನ.

ಅರ್ಥವಿಶ್ಲೇಷಣೆ
ಸಾಕಾರ-ನಿರಾಕಾರ, ಸಗುಣ-ನಿರ್ಗುಣ ಎಂಬ ವಿಷಯದಲ್ಲಿ ಸಾಕಷ್ಟು ಚರ್ಚೆಗಳು ಆಗುವುದಿದೆ. ಒಳ್ಳೆಯ ಗುಣಗಳೇ ತುಂಬಿಕೊಂಡಾಗ ಸಗುಣನೆಂದೂ, ಕೆಟ್ಟ ಗುಣಗಳೇ ಇಲ್ಲದಾಗ ನಿರ್ಗುಣನೆಂದೂ, ನಮ್ಮಂತೆ ಭೌತಿಕ ಶರೀರವಿಲ್ಲದಾಗ ನಿರಾಕಾರನೆಂದೂ, ಜ್ಞಾನಾನಂದಮಯ ಶರೀರಿಯಾದ ಕಾರಣ ಸಾಕಾರನೆಂದೂ ಅರ್ಥವ್ಯಾಪ್ತಿಯನ್ನು ವಿಶ್ಲೇಷಿಸಿದರೆ ಮತ್ತೆ ಚರ್ಚೆಗೆ ಅವಕಾಶ ಸಿಗದು.

ಭಗವಂತನ ದಾಸತ್ವ  ,ದುಃಖೀತರ ಸೇವತ್ವ
ಭಗವಂತನ ಅಸ್ತಿತ್ವ, ಆತನ ಮಹಿಮೆಯನ್ನು ಜೀವರುಗಳು ಸದಾ ಸ್ಮರಿಸಿಕೊಂಡು ಆತನ ದಾಸನಾಗಿ ಇರಬೇಕು, ಆತನಿಂದಲೇ ಸೃಷ್ಟಿಯಾದ ಪ್ರಪಂಚವನ್ನೂ ಭಗವಂತನನ್ನು ಕಂಡ ರೀತಿಯಲ್ಲಿಯೇ ಪ್ರೀತಿಸಬೇಕೆಂಬ ಸಂದೇಶವನ್ನು ಮಧ್ವರು ಕೊಡುತ್ತಾರೆ. ಕರ್ತವ್ಯಕರ್ಮದಿಂದ ವಿಮುಖರಾಗಬಾರದು ಎಂಬ ಶ್ರೀಕೃಷ್ಣನ ಭಗವದ್ಗೀತೆಯ ಸಂದೇಶವನ್ನು ಅನೇಕ ದಾರ್ಶನಿಕರು ಪ್ರತಿಪಾದಿಸಿದ್ದಾರೆ. ದುಃಖೀತರು, ದೀನದಲಿತರಿಗೆ ನೆರವಾಗುವುದು ಜೀವರುಗಳ ಆದ್ಯ ಕರ್ತವ್ಯ. ಇದೂ ಭಗವಂತನಿಗೆ ಮಾಡುವ ಪೂಜೆ ಎಂಬ ಸಾಮಾಜಿಕ ಕಳಕಳಿಯ ಸಂದೇಶವನ್ನು ಮಧ್ವರು ಸಾರಿದ್ದಾರೆ.

 -ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

20-

Burhan Wani; ಬುರ್ಹಾನ್‌ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್‌

19-

IED explodes: ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ: ಮೂರು ಕರಡಿಗಳು ಸಾವು

18-

Formula E race; ಫಾರ್ಮುಲಾ-ಇ ರೇಸ್‌ ಪ್ರಕರಣ: ಕೆಟಿಆರ್‌ ಮೇಲೆ ಎಸಿಬಿ ಎಫ್ಐಆರ್‌

17-gdp

GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್‌

16-onion

Onion Price; ಈರುಳ್ಳಿ ಬೆಲೆ ಇಳಿಕೆ: ಹರಾಜು ನಿಲ್ಲಿಸಿ ರೈತರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.