“ಮಹಾತ್ಮ’ದ ಭಾರಕ್ಕೆ ಚಡಪಡಿಸಿದ ಮಹಾತ್ಮ


Team Udayavani, Sep 30, 2019, 5:30 AM IST

gandhi

ಗಾಂಧೀಜಿಯವರನ್ನು ಕರೆಯುವಾಗ “ಮಹಾತ್ಮ’ ಎಂಬ ವಿಶೇಷಣ ಸೇರಿಸಿ ಕರೆಯುವುದು ಲೋಕರೂಢಿ.

ಲಭ್ಯ ಆಕರಗಳ ಪ್ರಕಾರ ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆದ ಪ್ರಥಮ ವ್ಯಕ್ತಿ ವಜ್ರ ಉದ್ಯಮಿ, ವೈದ್ಯ, ನ್ಯಾಯವಾದಿ ಈ ವಿಶಿಷ್ಟ ವೃತ್ತಿ ಸಂಯೋಜನೆಯ ಡಾ| ಪ್ರಾಣಜೀವನ್‌ ಜಗಜೀವನದಾಸ್‌ ಮೆಹ್ತಾ. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಮಾಡುತ್ತಿದ್ದ ಕೆಲಸ ಗಳನ್ನು ಕಂಡು ಅವರು 1909ರಲ್ಲಿ ಗೋಪಾಲಕೃಷ್ಣ ಗೋಖಲೆಗೆ ಬರೆದ ಪತ್ರದಲ್ಲಿ ಹೀಗೆ ಉಲ್ಲೇಖೀಸಿದ್ದರು.

1915ರಲ್ಲಿ ಗಾಂಧೀಜಿ ಭಾರತಕ್ಕೆ ಬಂದ ಕೂಡಲೆ ಗುಜರಾತಿನ ಗೋಂಡಾಲದ ಭುವನೇಶ್ವರಿ ಪೀಠದ ಪೀಠಾಧಿಪತಿ ಮಹಾತ್ಮ ಎಂದು ಕರೆದಿದ್ದರಂತೆ. ಇದಕ್ಕೂ ಮುನ್ನ ಗುಜರಾತಿನ ಜೇಟು³ರದ ಭಗವಾನ್‌ಜಿ ಮೆಹ್ತಾ ಗಾಂಧೀಜಿಯನ್ನು ಈ ಬಿರುದಿನೊಂದಿಗೆ ಗೌರವಿಸಿ ದ್ದರು. 1915ರಲ್ಲಿ ಹರಿದ್ವಾರ ಹೃಷೀಕೇಶದ ಕಾಂಗ್ರೀ ಗುರುಕುಲದ ಸ್ವಾಮೀ ಶ್ರದ್ಧಾನಂದರು ಮಹಾತ್ಮ ಎಂದು ಕರೆದರು. 1915ರಲ್ಲಿ ಕೋಲ್ಕತ್ತಾದ ಶಾಂತಿನಿ ಕೇತನದಲ್ಲಿ ರವೀಂದ್ರನಾಥ ಠಾಗೋರರು ಮಹಾತ್ಮ ಬಿರುದನ್ನು ನೀಡಿದ್ದು ಲೋಕ ಪ್ರಸಿದ್ಧವಾಯಿತು. 1920-22ರ ಚಳವಳಿಯ ಹೊತ್ತಿಗೆ ಕವಿಗಳು, ಜನಸಮೂಹ ಮಹಾತ್ಮ ಎಂದು ಬಣ್ಣಿಸಿತು.

ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಮೂಲದವರು ಗಾಂಧೀಜಿಯನ್ನು “ಕರ್ಮವೀರ’ ಬಿರುದಿನಿಂದ ಗೌರವಿಸಿದ್ದರು. 1944ರಲ್ಲಿ ಅಝಾದ್‌ ಹಿಂದ್‌ ರೇಡಿಯೋದ ಮೂಲಕ ಮಾತಾಡಿದ್ದ ನೇತಾಜಿ ಸುಭಾಶ್‌ಚಂದ್ರ ಭೋಸ್‌ ಅವರು ಗಾಂಧೀಜಿಯನ್ನು “ರಾಷ್ಟ್ರಪಿತ’ ಎಂದು ಕರೆದಿದ್ದರು.

ಸಾಧುವೇ? ದೇವನೆ? ಸಾಮಾನ್ಯನೆ?
ಗಾಂಧಿಯವರನ್ನು ಕೆಲವರು ಸಾಧು, ಸಂತ ಎಂದು ಕರೆದಾಗ “ನಾನು ಸಾಧುವೂ ಅಲ್ಲ, ಪಾಪಿಯೂ ಅಲ್ಲ ನಾನೊಬ್ಬ ಸಾಮಾನ್ಯ ಮನುಷ್ಯ’ ಎಂದು ಸಮ ಜಾ ಯಿಷಿ ಕೊಟ್ಟಿದ್ದರು. ಗಾಂಧಿ ಗುಜರಾತಿನವರಾದ ಕಾರಣ, ದ್ವಾರಕೆಯಿಂದಾಗಿ ಕೃಷ್ಣನ ಅವತಾರ ಎಂದು ಕರೆದದ್ದೂ ಇದೆ. ಆಗ ಗಾಂಧಿ “ನನ್ನನ್ನು ಶ್ರೀ ಕೃಷ್ಣನ ಅವತಾರ ಎಂದು ತಿಳಿಯುವುದು ದೇವನಿಂದೆ. ಅನೇಕ ಸೇವಕರಲ್ಲಿ ನಾನೊಬ್ಬ ಸೇವಕ. ಸೇವಕನ ಮಹಿಮೆ ಬೆಳೆಸುವುದರಿಂದ ಕಾರ್ಯದ ಹಾನಿ ಆಗುತ್ತೆ’ ಎಂದಿದ್ದರು.

ಅವರೆಂದೂ ಬಿರುದುಗಳೊಂದಿಗೆ ಸಮೀಕರಿಸಿ ಕೊಂಡು ಎದೆಯುಬ್ಬಿಸಿಕೊಂಡದ್ದು ಇಲ್ಲ. “ಮಹಾತ್ಮ ಪದಕ್ಕಿಂತ “ಸತ್ಯ’ವು ನನಗೆ ಕೋಟಿ ಪಾಲು ಪ್ರಿಯ. ನನ್ನ ಶಕ್ತಿಯ ಮಿತಿ ಮೇರೆಗಳನ್ನು ಚೆನ್ನಾಗಿ ಬÇÉೆ. ನಾನೊಬ್ಬ ಮಹಾತ್ಮನೆಂದು ಅನ್ನಿಸುವುದೇ ಇಲ್ಲ. ಅದು ನನ್ನ ಜೀವಿತದ ನಶ್ವರ ಭಾಗ. ನನ್ನ ಜೀವನದ ನಿಜವಾದ ತಿರುಳು, ಸನಾತನ ಅಂಶವೆಂದರೆ ಸತ್ಯ, ಅಹಿಂಸೆ, ಬ್ರಹ್ಮಚರ್ಯದ ಬಗ್ಗೆ ಇರುವ ಆಗ್ರಹ. ಅವು ನನ್ನಲ್ಲಿ ಅಲ್ಪಾಂಶದಲ್ಲಿಯೆ ಇರಬಹುದು. ಆದರೂ ಅದು ತಿರಸ್ಕರಣೀಯವಲ್ಲ. ಸತ್ಯಾಗ್ರಹವೇ ನನ್ನ ಸರ್ವಸ್ವ.’ ಎಂದು ಹೇಳಿಕೊಂಡಿದ್ದಾರೆ.

“ಸತ್ಯಾಗ್ರಹ’ದ ಮಾನ ಉಳಿಯಿತು!
“ಸತ್ಯಾಗ್ರಹ’ ಶಬ್ದ “ಸತ್ಯ’ಕ್ಕಾಗಿ “ಆಗ್ರಹ’ ಎಂಬ ಸಂಯೋಜನೆಯಿಂದ ಬಂತು. ಇತ್ತೀಚಿಗೆ ಕೆಲವರು ಸ್ವಯಂ ನಾಚಿಕೊಂಡೋ ಏನೋ ಸತ್ಯಾಗ್ರಹದ ಬದಲು ಧರಣಿ, ಪ್ರತಿಭಟನೆ, ಪಿಕೆಟಿಂಗ್‌ ಇತ್ಯಾದಿ ಶಬ್ದಗಳನ್ನು ಚಲಾವಣೆಗೆ ತಂದು “ಸತ್ಯಾಗ್ರಹ’ದ ಮಾನ ಉಳಿಸಲು ಯತ್ನಿಸುತ್ತಿದ್ದಾರೆ.

ಏರುತ್ತಿರುವ ಬಿರುದುಬಾವಲಿಗಳು
ಗಾಂಧೀಜಿಯವರಿಗೆ ಬಿರುದುಗಳು ಭಾರವಾದರೆ ಈಗ ಅನೇಕರಿಗೆ ಸಿಗುವ ಬಿರುದುಗಳು ಆಪ್ಯಾಯ ವಾಗು ತ್ತಿವೆ. ಅವಾರ್ಡುಗಳಿಗೆ ಲೆಕ್ಕವೇ ಇಲ್ಲ, ಅಂತೆಯೇ ಡಾಕ್ಟರೇಟ್‌ಗೂ… ಹೌಹಾರುವಷ್ಟು ಡಾಕ್ಟ ರೇಟ್‌ ಪದವೀ ಧರರ ಸಂಖ್ಯೆ ಏರುತ್ತಿವೆ ಎಂದು ವಿಶ್ಲೇಷಣೆಗಳು ತಿಳಿಸು ತ್ತಿರ ಬೇಕಾದರೆ,ಅವಾರ್ಡುಗಳ ಪರಿಸ್ಥಿತಿ ಹೇಗಿರಬೇಡ?

ಇಂತಹವರ ಸಂಖ್ಯೆ ವಿರಳ
ಡಾಕ್ಟರೇಟ್‌ ಪದವಿ ಇದ್ದರೂ ಅದನ್ನು ತೋರ ಗೊಡದವರೂ ಇದ್ದಾರೆ. ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ, ಮಣಿಪಾಲ ಕೆಎಂಸಿಯಲ್ಲಿ ಪ್ರಾಧ್ಯಾಪಕರಾಗಿದ್ದ ಡಾ| ರವೀಂದ್ರನಾಥ ಶ್ಯಾನು ಭಾಗ್‌ ಅವರು ಬರೆದ ವಿವಿಧ ಪುಸ್ತಕಗಳಲ್ಲಿ ಲೇಖಕರ ಹೆಸರಿನ ಹಿಂದೆ “ಡಾ|’ ವಿಶೇಷಣವಿಲ್ಲ. “ಡಾಕ್ಟರ್‌ ಎಂದು ಹೇಳಬೇಕಾದ್ದು ನಾನಲ್ಲ. ಮೂರನೆಯ ವ್ಯಕ್ತಿ ಹೇಳಬೇಕು. ವಿದೇಶಗಳಲ್ಲಿ ವೈದ್ಯರ ಹೆಸರ ಹಿಂದೆ ಡಾಕ್ಟರ್‌ ಎಂದು ಬಳಸುವಂತಿಲ್ಲ. ಹೆಸರಿನ ಮುಂದೆ ಶೈಕ್ಷಣಿಕ ಪದವಿಗಳನ್ನು ಮಾತ್ರ ಹಾಕಿ ಕೊಳ್ಳಬೇಕು. ಡಾಕ್ಟರ್‌ ಎಂದರೆ “ಮಾಸ್ಟರ್‌’, “ಪರಿಣತ’ ಎಂದು. ಡಾ|ಶಿವರಾಮ ಕಾರಂತರು ಎಲ್ಲಿಯೂ “ಡಾ|’ ಎಂದು ಸೇರಿಸಿ ಕೊಳ್ಳು ತ್ತಿರಲಿಲ್ಲ’ ಎಂದು ಡಾ.ಶ್ಯಾನು ಭಾಗ್‌ ಉಲ್ಲೇಖೀಸುತ್ತಾರೆ.

ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರಿಗೆ ಎರಡು ವಿ.ವಿ.ಗಳು ಗೌರವ ಡಾಕ್ಟರೇಟ್‌ ನೀಡಿವೆ. ಅವರು ಲೆಟರ್‌ಹೆಡ್‌ನ‌ಲ್ಲಾಗಲೀ, ಅವರನ್ನು ಕರೆಸಿ ಕೊಳ್ಳುವಾಗಲೀ “ಡಾ|’ ವಿಶೇಷಣವನ್ನು ಬಳಸುವುದನ್ನು ಕಾಣುವುದಿಲ್ಲ.
ಹಲವು ಸಂಶೋಧನ ಕೃತಿಗಳನ್ನು ಕೊಟ್ಟ ಹಂಪಿ ಕನ್ನಡ ವಿ.ವಿ. ಹಿರಿಯ ಪ್ರಾಧ್ಯಾಪಕ ಡಾ|ರಹಮತ್‌ ತರೀಕೆರೆ ಅವರು ಪುಸ್ತಕಗಳಲ್ಲಿ “ಡಾ|’ ವಿಶೇಷಣವನ್ನು ಬಳಸಿಕೊಂಡಿಲ್ಲ. “ನಾನು ಪುಸ್ತಕಗಳಲ್ಲಿ, ಲೇಖನಗಳಲ್ಲಿ “ಡಾ|’ ಶಬ್ದ ಹಾಕಿಕೊಳ್ಳುವುದಿಲ್ಲ. ಲೇಖಕನ ಶಕ್ತಿಯಿಂದ ಲೇಖನಕ್ಕೆ ಶಕ್ತಿ ಬರುತ್ತದೆ ವಿನಾ ಡಾಕ್ಟರೇಟ್‌ ಪದವಿಯಿಂದ ಲೇಖನಕ್ಕೆ ಶಕ್ತಿ ಬರುತ್ತದೋ’ ಎಂದು ಪ್ರಶ್ನಿಸುತ್ತಾರೆ. ಈಗ ಡಾಕ್ಟರೇಟ್‌ ಪದವಿ ಖರೀದಿಸುವ ವಸ್ತು ಎಂಬ ಮಟ್ಟಕ್ಕೆ ಇಳಿದಿರುವಾಗಲೂ ಇಂತಹ ವಿಶೇಷಣಗಳನ್ನು ನಿರ್ಲಿಪ್ತವಾಗಿ ಕಾಣುವವರೂ ಇದ್ದಾರೆನ್ನುವುದು ವಿಶೇಷ.

“ನನಗೆ ಗುಂಡಿಕ್ಕಿದರೆ…’
ನನ್ನನ್ನು ಕೊಲ್ಲಬೇಕೆನ್ನುವ ಪ್ರಾಣಘಾತಕ ಪ್ರಯತ್ನಗಳು ಹಲವು ಆಗಿವೆ. ಕೊಲ್ಲಲು ಬಂದವರು ಪಶ್ಚಾತ್ತಾಪಪಟ್ಟಿರುವರು. ಆದರೆ ನಾನೊಬ್ಬ ಖಳನೆಂದು ಭಾವಿಸಿ ಯಾರಾದರೂ ಈಗ ಗುಂಡಿಕ್ಕಿದರೆ ಅವರು ತಮ್ಮ ಕಲ್ಪನೆಯಲ್ಲಿನ ಖಳನನ್ನು ಕೊಂದಂತಾಗುವುದೇ ಹೊರತು ನಿಜವಾದ ಗಾಂಧಿಯನ್ನಲ್ಲ ಎಂದು ಗಾಂಧಿ ಹೇಳಿಕೊಂಡಿದ್ದರು. ಗಾಂಧೀಜಿಯವರನ್ನು ಗೋಡ್ಸೆ ಕೊಲ್ಲುವ ಮೂಲಕ ಅವರ ಆತ್ಮಹತ್ಯೆಯನ್ನು ತಪ್ಪಿಸಿದ ಎಂದು ಡಾ|ಶಿವರಾಮ ಕಾರಂತರು “ಸ್ಮತಿಪಟಲ’ದಲ್ಲಿ ಉಲ್ಲೇಖೀಸಿದ್ದಾರೆ. ಇದು ಆಗಿನ ರಾಜಕೀಯ ವಿದ್ಯಮಾನಗಳನ್ನು ಕಂಡ ಕಾರಂತಜ್ಜನ ಅನಿಸಿಕೆಯಾಗಿತ್ತು ಎಂದು ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಮಾಲಿನಿ ಮಲ್ಯ ಬೆಟ್ಟು ಮಾಡುತ್ತಾರೆ.

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.