ಅಡಿಕೆ ಕೃಷಿ ಗೊಬ್ಬರ ನಿರ್ವಹಣೆಗೂ ಇರಲಿ ಆದ್ಯತೆ
Team Udayavani, Nov 17, 2019, 4:28 AM IST
ಅಧಿಕ ಮಳೆಯಾಗುವ ಕರಾವಳಿ ಭಾಗಗಳಲ್ಲಿ ಬೆಳೆಗಳಿಗೆ ಗೊಬ್ಬರಗಳನ್ನು ವಿಭಜಿತ ಕಂತುಗಳಲ್ಲಿ ಕೊಡುವುದು ಸೂಕ್ತ. ಮಳೆಗಾಲ ಪೂರ್ವದಲ್ಲಿ ಸಾರಜನಕ ಕಡಿಮೆ ಇರುವ ಗೊಬ್ಬರ ಹಾಗೂ ಮಳೆಗಾಲ ಮುಗಿಯುವಾಗ ರಂಜಕ, ಸಾರಜನಕ, ಪೊಟ್ಯಾಶ್ ಸಮ ಪ್ರಮಾಣದಲ್ಲಿ ನೀಡಬೇಕು. ಜನವರಿ, ಫೆಬ್ರವರಿ ತಿಂಗಳಲ್ಲಿ ಮತ್ತೂಮ್ಮೆ ಗೊಬ್ಬರ ಹಾಕಬೇಕು. ಇದರಿಂದ ಉತ್ತಮವಾಗಿ ಬೆಳೆಯನ್ನು ಪಡೆಯಲು ಸಾಧ್ಯ.
ಅಕಾಲಿಕ ಮಳೆ, ನೀರಿನ ಕೊರತೆಯ ಜತೆಗೆ ಕಾಡುವ ರೋಗಗಳ ಮಧ್ಯೆ ಅಡಿಕೆ ಬೆಳೆಯನ್ನು ಉಳಿಸಿಕೊಳ್ಳುವುದು ಹಾಗೂ ನಿರೀಕ್ಷಿತ ಫಲ ಪಡೆಯುವುದು ತ್ರಾಸದಾಯಕ. ಆದರೆ ನಿರ್ವಹಣೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಅಡಿಕೆ ಮರಕ್ಕೆ ಮಣ್ಣಿನ ಪೋಷಕಾಂಶದ ಜತೆಗೆ ಸಾಂಪ್ರದಾಯಿಕ ಗೊಬ್ಬರ, ವರ್ಷಕ್ಕೆ ಇಂತಿಷ್ಟು ಸಾರಜನಕ, ರಂಜಕ ಮತ್ತು ಪೊಟ್ಯಾಶಿಯಂ ಕೂಡ ಆವಶ್ಯಕ ಎನ್ನುವುದನ್ನು ಸಂಶೋಧನೆಗಳು ಹೇಳುತ್ತವೆ. ಇದರ ಆಧಾರದಲ್ಲಿ ಈಗ ಕಾಲಮಾನಕ್ಕನುಗುಣವಾಗಿ ರೈತರು ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಾ ಬಂದಿದ್ದಾರೆ.
ಗೊಬ್ಬರ ಬಳಕೆ
ಕಚ್ಚಾ ರೂಪದಲ್ಲಿ ಕೊಡುವ ಯೂರಿಯಾವನ್ನು 250 ಗ್ರಾಂ. ಸೂಪರ್ ಪಾಸ್ಪೇಟ್ 300 ಗ್ರಾಂ. ಮತ್ತು ಪೊಟ್ಯಾಶ್ 225 ಗ್ರಾಂ. ಅನ್ನು ವರ್ಷಕ್ಕೆ ಮೂರು ಬಾರಿ ವಿಭಜಿಸಿ ಕೊಡಬೇಕು. ಅಧಿಕ ಮಳೆಯಾಗುವ ಕರಾವಳಿ ಭಾಗಗಳಲ್ಲಿ ಗೊಬ್ಬರಗಳನ್ನು ವಿಭಜಿತ ಕಂತುಗಳಲ್ಲಿ ಕೊಡುವುದು ಸೂಕ್ತ. ಮಳೆಗಾಲ ಪೂರ್ವದಲ್ಲಿ ಸಾರಜನಕ ಕಡಿಮೆ ಇರುವ ಗೊಬ್ಬರ ಹಾಗೂ ಮಳೆಗಾಲ ಮುಗಿಯುವಾಗ ರಂಜಕ, ಸಾರಜನಕ, ಪೊಟ್ಯಾಶ್ ಸಮ ಪ್ರಮಾಣದಲ್ಲಿ ನೀಡಬೇಕು. ಜನವರಿ, ಫೆಬ್ರವರಿ ತಿಂಗಳಲ್ಲಿ ಮತ್ತೂಮ್ಮೆ ಗೊಬ್ಬರ ಹಾಕಬೇಕು.
ಬುಡವನ್ನು ಬಿಡಿಸಬೇಕು
ಸಾಂಪ್ರದಾಯಿಕ ಕ್ರಮದಂತೆ ಬುಡ ಬಿಡಿಸಿ ಕೊಡುವುದು ಈಗ ಸಾಧ್ಯವಾಗದು. ಅದಕ್ಕೆ ಮೂರೂ ಗೊಬ್ಬರ ಹಾಗೂ ಲಘು ಪೊಷಕಾಂಶಗಳಾದ ಸತು, ಬೋರಾನ್, ಮ್ಯಾಂಗನೀಸ್ ಉಳ್ಳ ಮಿಶ್ರಣವನ್ನು ಪ್ರಮಾಣ ಹಾಗೂ ಗಿಡದ ಲೆಕ್ಕಾಚಾರದ ಮೇಲೆ ಬ್ಯಾರಲ್‌ಗೆ ಹಾಕಿ ಕರಗಿಸಿ ಕೊಡುವುದು ಉತ್ತಮ.
ಬೇಸಗೆ ಸಮಯ ಉತ್ತಮ
ಒಮ್ಮೆಲೇ ಗೊಬ್ಬರ ಹಾಕಿಸಲು ಖರ್ಚು ಅಧಿಕ. ಇದನ್ನು ವಿಭಜಿಸಲು ಸಾಧ್ಯ. ಬೇಸಗೆಯ ಸಮಯದಲ್ಲಿ ಗೊಬ್ಬರ ಕೊಡುವುದರಿಂದ ಫಲಿತಾಂಶ ದುಪ್ಪಟ್ಟು ಲಭಿಸುತ್ತದೆ ಎನ್ನುತ್ತಾರೆ ಅನುಭವಿಗಳು.
ಲಘು ಪೋಷಕಾಂಶ ನೀಡಿ
ಕಚ್ಚಾ ಗೊಬ್ಬರಗಳನ್ನು ಕೊಡುವ ಜತೆಗೆ ಸಂಯುಕ್ತ ಗೊಬ್ಬರಗಳನ್ನು ಕೊಡುವುದೂ ಅಗತ್ಯ. ಕೊಟ್ಟಿಗೆ ಗೊಬ್ಬರ, ಹಸುರೆಲೆ ಗೊಬ್ಬರವನ್ನು ನೀಡಲು ಸಾಧ್ಯವಾಗದವರು ಕಡಿಮೆ ಫಲವತ್ತತೆಯ ಭೂಮಿಯಲ್ಲೂ ಕೃಷಿ ಮಾಡಿದ್ದರೆ ಲಘು ಪೋಷಕಾಂಶಗಳನ್ನು ಕೊಡುವ ಅಗತ್ಯ ಇದೆ. ಸಾವಯವ ಗೊಬ್ಬರದ ಮೂಲವಾಗಿ ಕೊಟ್ಟಿಗೆ ಗೊಬ್ಬರ, ಅಡಿಕೆ ಹಾಳೆ, ಗರಿ, ಬಾಳೆ, ತ್ಯಾಜ್ಯಗಳನ್ನು ಕೊಡಬೇಕು. ಇದು ಮಣ್ಣಿನಲ್ಲಿ ನೈಸರ್ಗಿಕ ಕ್ರಿಯೆಯನ್ನು ಉಂಟು ಮಾಡುತ್ತದೆ. ಪೊಟ್ಯಾಶಿಯಂ ಸತ್ವಕ್ಕಾಗಿ ಸುಟ್ಟ ಬೂದಿಯನ್ನು ಬಳಕೆ ಮಾಡಬೇಕು.
- ರಾಜೇಶ್ ಪಟ್ಟೆ, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.