ಜೀವನವನ್ನು ಸುಂದರಗೊಳಿಸಿ
Team Udayavani, Oct 1, 2018, 3:24 PM IST
‘ಜೀವನ’ ಎಂಬ ಪದಕ್ಕೆ ‘ಜೀವಂತವಾಗಿರುವುದು’ ಎಂಬ ಅರ್ಥವೂ ಇದೆ. ಜೀವನವೊಂದು ಸುಂದರ ( ಲೈಫ್ ಈಸ್ ಬ್ಯುಟಿಫುಲ…) ಎಂಬುದು ಪ್ರತಿಯೊಬ್ಬರು ಮತ್ತೆ ಮತ್ತೆ ಹೇಳುವುದಿದೆ. ‘ಜೀವನ’ ಎಂಬ ಪದವನ್ನು ಆಲಿಸಿದ ಕೂಡಲೇ ನಮ್ಮ - ನಿಮ್ಮ ಜೀವನದ ಚಿತ್ರವೇ ಕಣ್ಣ ಮುಂದೆ ಬರುತ್ತದೆ. ಜೀವನ ಎಂಬ ಪದವು ಮಾನವ ಜೀವಿತಾವಧಿಯನ್ನು ಅರ್ಥೈಸುತ್ತೇವೆ. ಸೌಂದರ್ಯ ಎಂಬುದಕ್ಕೆ ಹಲವು ವ್ಯಾಖ್ಯಾನ ನೀಡಲಾಗುತ್ತಿದೆ. ಕೆಲವರಿಗೆ ಜೀವನ ಸುಂದರವಾಗಿದ್ದರೆ, ಕೆಲವರಿಗೆ ಜೀವನ ಕಹಿಯಾಗಿರುತ್ತದೆ. ಇನ್ನೂ ಕೆಲವರು ಅದನ್ನು ಕಲಾತ್ಮಕವಾಗಿ ಕೊಂಡುಹೋಗಲು ಸಂತೋಷ ಪಡುತ್ತಾರೆ.
ಯಾಕೆ ಸುಂದರ?
· ಮಮತೆ, ಪ್ರೀತಿ
ಬಂಜರು ಭೂಮಿ, ಮರುಭೂಮಿ ಸ್ಥಳವು ಸಹ ಪ್ರೀತಿಯ ಉಪಸ್ಥಿತಿಯಿಂದ ಸುಂದರವಾಗಬಹುದು. ಪ್ರೀತಿಯ ಅನುಪಸ್ಥಿತಿಯಲ್ಲಿ ಜೀವನವು ಬರಡಾಗುವುದು. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು ಎಂಬ ಮಾತಿದೆ. ಪ್ರೀತಿ ಮತ್ತು ಸಹನೆಗಳು ಜೀವನದ ಜತೆಗೆ ಹೆಜ್ಜೆ ಇಡುತ್ತಾ ಸಾಗಿದಂತೆ ಬದುಕು ಸುಂದರವಾಗುವುದರಲ್ಲಿ ಸಂದೇಹವಿಲ್ಲ. ಸಣ್ಣ ಪುಟ್ಟ ಖುಷಿಯನ್ನೂ ಸಂಭ್ರಮಿಸಬೇಕು. ಪುಟ್ಟದೊಂದು ಆನಂದ ನಿಮ್ಮ ಬೆಟ್ಟದಷ್ಟು ಇರುವ ಸಮಸ್ಯೆಯಿಂದ ತೃಪ್ತಿ ಪಡಿಸಲು ನೆರವಾಗುತ್ತದೆ.
· ಹಂಚಿಕೊಳ್ಳಿ
ನಮ್ಮ ಸ್ನೇಹಿತರು, ಕುಟುಂಬ ಮತ್ತು ಇತರ ಪ್ರೀತಿಪಾತ್ರರು ನಮ್ಮ ಜೀವನವನ್ನು ಅನನ್ಯತೆಯಿಂದ ಮತ್ತು ಬೆಂಬಲದಿಂದ ಉತ್ಕೃಷ್ಟಗೊಳಿಸಲು ನೆರವಾಗುತ್ತಾರೆ. ದಾರಿಯುದ್ದಕ್ಕೂ ನಡೆಯುತ್ತಾ ಸಾಗಿದಾಗ ಒಂದಷ್ಟು ಅಪರಿಚಿತರನ್ನು ಕಾಣಬಹುದಾಗಿದೆ. ಅಪರಿಚಿತರಲ್ಲಿ ಸಂದರ್ಭಕ್ಕನುಗುಣವಾಗಿ ಒಂದು ಸಿಹಿಯಾದ ನಗು ಬೀರಿ ಒಂದಷ್ಟು ಸ್ನೇಹ, ಖುಷಿಯನ್ನು ಗಳಿಸಲು ಪ್ರಯತ್ನಿಸಿ. ಸಂಗತಿಯನ್ನು ಹಂಚಿಕೊಂಡಾಗ ಮನಸ್ಸಿಗೆ ನೆಮ್ಮದಿ, ಆತ್ಮ ತೃಪ್ತಿ ಲಭಿಸುತ್ತದೆ. ಈ ಅನುಭವವು ಸುಂದರವಾದದ್ದು.
· ಬದಲಾವಣೆ ಸಾಮರ್ಥ್ಯ
ನಾವೆಲ್ಲರೂ ಪ್ರಪಂಚವನ್ನು ನಾವು ನೋಡಿದ್ದಕ್ಕಿಂತ ಉತ್ತಮವಾಗಿ ರೂಪಿಸಬೇಕು. ಇದು ಜೀವನದ ಸುಂದರತೆಗಳಲ್ಲಿ ಒಂದಾಗಿದೆ. ನಾವು ಇತರಿಗಾಗಿ ಪ್ರಪಂಚವನ್ನು ಸುಧಾರಿಸಬೇಕಾದ ಸಮಯವನ್ನು ಬಳಸಿಕೊಳ್ಳಬಹುದು. ಈ ಪ್ರಕ್ರಿಯೆಯಲ್ಲಿ ಜೀವನವನ್ನು ಇನ್ನಷ್ಟು ಸುಂದರಗೊಳಿಸಬಹುದು. ಒಳ್ಳೆಯ ಕಾರ್ಯಗಳನ್ನು ಮಾಡುವುದು ಒಂದು ಸುಂದರವಾದ ಕಾರ್ಯವಾಗಿದೆ.
· ಆಶ್ಚರ್ಯ
ಜೀವನವು ಆಶ್ಚರ್ಯಕರವಾಗಿದೆ. ಒಂದು ಪರಿಚಯ ಅಥವಾ ಪುಸ್ತಕವು ನಿಮ್ಮನ್ನು ಪರಿಚಯಿಸುತ್ತದೆ. ಕೆಲವು ಜನರು ಸುಂದರವಾದ ಗಣಿತದ ಸಮಸ್ಯೆಗಳನ್ನು ಪರಿಹರಿಸುವುದನ್ನು ಇಷ್ಟ ಪಡುತ್ತಾರೆ. ಕೆಲವರು ತೋಟಗಾರಿಕೆಯಲ್ಲಿ ಉತ್ಸಾಹ ಕಂಡುಕೊಂಡರೆ, ಇನ್ನೂ ಕೆಲವರು ಕಲಾತ್ಮಕವಾಗಿ ಮುಂದೆ ಇರುತ್ತಾರೆ. ಪ್ರಪಂಚವು ಈ ಎಲ್ಲ ಅಭಿರುಚಿಗಳನ್ನು ಪೂರೈಸುತ್ತದೆ.
· ಕಲೆ ಮತ್ತು ಸಂಸ್ಕೃತಿ
ನಾವು ಸಂಸ್ಕೃತಿ, ಇತಿಹಾಸ ಮತ್ತು ಸೃಜನಶೀಲತೆಗೆ ಸಮೃದ್ಧವಾಗಿರುವ ಜಗತ್ತಿನಲ್ಲಿ ಜನಿಸಿದ್ದೇವೆ. ಸಹಸ್ರಮಾನಗಳ ಕಾಲ, ಜೀವನವನ್ನು ಇನ್ನಷ್ಟು ಸುಂದರಗೊಳಿಸಲು ಇತರ ಮಾನವರೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ನಾವೂ ಅವರರಲ್ಲಿ ಒಂದಾಗೋಣ. ಜೀವನವನ್ನು ಸುಂದರ ಎನ್ನುವುದಕ್ಕಿಂತ ಹೇಗೆ ಇನ್ನಷ್ಟು ಸುಂದರ ಗೊಳಿಸಬಹುದು ಎಂಬುದನ್ನು ಯೋಚಿಸೋಣ.
· ನಮ್ಮ ಸುತ್ತಲಿನ ಪ್ರಪಂಚ
ಜೀವವೈವಿಧ್ಯದ ಅದ್ಭುತಗಳು ಮತ್ತು ಸ್ವರ್ಗದ ರಹಸ್ಯಗಳು ನಮಗೆ ಯಾವುದೇ ಸಮಯದಲ್ಲಿ ಸಂತೋಷವನ್ನು ಕರುಣಿಸುತ್ತದೆ. ನಯನ ಮನೋಹರ ಪ್ರಕೃತಿಗಳು, ಪರ್ವತ ಶ್ರೇಣಿಗಳನ್ನು ಆಸಾಧಿಸೋಣ. ನಮ್ಮ ಸುತ್ತಲೂ ಸೌಂದರ್ಯವಿದೆ. ಎಲ್ಲೆಲ್ಲೂ ಸೊಬಗಿದೆ ಆದರೆ ಅದನ್ನು ಆಸ್ವಾಧಿಸುವ. ಶ್ಲಾಘಿಸುವ ಸಮಯ ಮತ್ತು ಆ ಹೃದಯಬೇಕು.
ಬದುಕಿನ ಗುರಿ
ನಾವೆಲ್ಲರೂ ಪ್ರತಿಭೆ ಹೊಂದಿದ್ದೇವೆ ಮತ್ತು ಭಾವೋದ್ರಿಕ್ತರಾಗಿದ್ದೇವೆ. ಜೀವನವನ್ನು ವಿಶೇಷವಾಗಿ ಸುಂದರಗೊಳಿಸಬಲ್ಲ ವಸ್ತುಗಳ ಪೈಕಿ ಕನಸುಗಳನ್ನು ಅನುಸರಿಸುತ್ತೇವೆ ಮತ್ತು ನಮ್ಮ ಭಾವನೆಗಳನ್ನು ಅನುಸರಿಸುತ್ತೇವೆ. ಹಾಗೆ ಮಾಡುವುದರಿಂದ, ನಮ್ಮ ಜೀವನವು ಯೋಗ್ಯವಾಗಿದೆ ಎಂದು ನಾವು ಆಳವಾಗಿ ಗ್ರಹಿಸುತ್ತೇವೆ. ಇದು ಜೀವನವನ್ನು ಹೆಚ್ಚು ಸುಂದರವಾಗಿರುತ್ತದೆ. ಇದು ಅನೇಕ ಜನರಿಗಾಗಿ, ನಿಜವಾದ ಸೌಂದರ್ಯವು ಉದ್ದೇಶ ಪೂರ್ವಕವಾದ ಅರ್ಥಕ್ಕೆ ಸಂಬಂಧಿಸಿದೆ. ವಿಶೇಷವಾಗಿ ಜೀವನದಲ್ಲಿ ಒಳ್ಳೆಯ ಉದ್ದೇಶವನ್ನು ಹೊಂದಿದೆ.
ಕಾರ್ತಿಕ್ ಅಮೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.