ಬಿಡುವಿನ ವೇಳೆಯಲ್ಲಿ ಕೆಲಸ ಮಾಡಿ ಹಣಗಳಿಸಿ
Team Udayavani, Jan 7, 2019, 8:37 AM IST
ಬದುಕಲು ಹಣ ಬೇಕು. ಹಣ ಡುಡಿಯಲು ಕೆಲಸವೊಂದಿರಲೇ ಬೇಕು. ಆದರೆ ಈ ಕೆಲಸ ಪೂರ್ಣಾವಧಿಯದ್ದೇ ಆಗಿರಬೇಕೆಂದೇನೂ ಇಲ್ಲ. ನಮ್ಮ ಬಿಡುವಿನ ಅವಧಿಯಲ್ಲಿ ಮಾಡಬಹುದಾದ ಕೆಲಸಗಳೂ ನಮ್ಮ ಆರ್ಥಿಕ ಬಲವನ್ನು ಹೆಚ್ಚಿಸಲು ನೆರವಾಗುತ್ತವೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು, ಉನ್ನತ ವ್ಯಾಸಂಗ ಮಾಡಿದರೂ ಕೆಲಸ ಸಿಗದವರಿಗಾಗಿ ಇಂದು ಅನೇಕ ಪಾರ್ಟ್ ಟೈಮ್ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಇವುಗಳನ್ನು ಪುರ್ಣಾವಧಿ ಕೆಲಸದಲ್ಲಿರುವವರೂ ಮಾಡಬಹುದು.
ಆನ್‌ಲೈನ್ ಸರ್ವೇ
ರಿಸರ್ಚ್ ಕಂಪನಿಗಳು ತಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಹೊಸ ಉತ್ಪನ್ನಗಳ ಪರೀಕ್ಷೆಗಾಗಿ ಹೊಸ ಹೊಸ ಅರ್ಭರ್ಥಿಗಳನ್ನು ಜಗತ್ತಿನಾದ್ಯಂತ ಶೋಧಿಸುತ್ತಲೇ ಇರುತ್ತವೆ. ಅವು ಕೇಳುವ ಪ್ರಶ್ನೆಗಳಿಗೆ ನಮ್ಮ ಉತ್ತರಗಳನ್ನು ನೀಡಿದರೆ ಸಾಕು ನಿಮಗೆ ಒಂದಿಷ್ಟು ಹಣವನ್ನು ಅವು ಪಾವತಿಸುತ್ತವೆ. ಅಮೆರಿಕದಂತಹ ಕೆಲ ರಾಷ್ಟ್ರಗಳ ಕಂಪನಿಗಳು ಕೆಲವು ಸರ್ವೇಗಳಿಗೆ 5 ಡಾಲ ರ್‌ನಷ್ಟು ಹಣವನ್ನು ಪಾವತಿಸಿರುವುದೂ ಉಂಟು.
ಭಾಷಾಂತರ
ಭಾಷೆಗಳ ಮೇಲೆ ಉತ್ತಮ ಹಿಡಿತವಿರುವವರಿಗೆ ಇಂದು ಅನೇಕ ಉದ್ಯೋಗಗಳಿವೆ. ಭಾಷಾಂತರವನ್ನೇ ಆಧರಿಸಿ ಇಂದು ಅನೇಕ ಸಂಸ್ಥೆಗಳು ಉದ್ಯಮ ನಡೆಸುತ್ತಿದ್ದು, ಒಂದು ಪದ ಭಾಷಾಂತರಕ್ಕೆ ನಿರ್ದಿಷ್ಟ ಹಣವನ್ನು ಪಾವತಿಸುತ್ತವೆ. ಇದು ವಿದ್ಯಾರ್ಥಿಗಳು ಮತ್ತು ಪೂರ್ಣಾವಧಿ ಉದ್ಯೋಗಸ್ಥರೂ
ಮಡಬಹುದಾದ ಸುಲಭದ ಕೆಲಸವಾಗಿದೆ.
ಫೋಟೋಗ್ರಾಫಿ/ ಚಿತ್ರಕಲೆ:
ಒಳ್ಳೆಯ ಸೃಜನಾತ್ಮಕ ಚಿತ್ರಗಳನ್ನು ಸೆರೆಹಿಡಿಯಬಲ್ಲ ಚಾಕಚಕ್ಯತೆ ನಿಮ್ಮಲ್ಲಿದ್ದರೆ ನೀವೊಬ್ಬ ಹವ್ಯಾಸಿ ಛಾಯಾಚಿತ್ರಗಾರರಾಗಬಹುದು. ಹಾಗೆಯೇ ಅಂದವಾದ ಚಿತ್ರ ಬಿಡಿಸುವ ನೈಪುಣ್ಯತೆಯಿದ್ದಲ್ಲಿ ನಿಮ್ಮ ಚಿತ್ರಗಳಿಗೆ ಮಾರುಕಟ್ಟೆಯಲ್ಲಿ ಬೆಲೆಯಿದೆ. ಉತ್ತಮ ಛಾಯಾಚಿತ್ರಗಳು ಮತ್ತು ಚಿತ್ರಕಲೆಯನ್ನೇ ತಮ್ಮ ಹವ್ಯಾಸವಾಗಿಸಿಕೊಂಡು ಹಣ ಗಳಿಸುವ ಅನೇಕರಿದ್ದಾರೆ.
ಡೆಲಿವರಿ ಬಾಯ್
ಆಹಾರ, ಗೃಹಬಳಕೆ ಉಪಕರಣಗಳು ಮುಂತಾದವುಗಳ ವ್ಯವಹಾರ ಇಂದು ಆನ್‌ಲೈನ್‌ನಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು ಡೆಲಿವರಿ ಬಾಯ್ ಕೆಲಸಗಳು ಸಾಕಷ್ಟು ಹುಟ್ಟಿಕೊಳ್ಳುತ್ತಿವೆ. ವಿದ್ಯಾಭ್ಯಾಸ ಮುಗಿಸಿ ಕೆಲಸ ಇಲ್ಲದೆ ಖಾಲಿ ಇರುವುವವರು ಮಾಡಬಹುದಾದ ಪೂರ್ಣಾವಧಿಯ ಉದ್ಯೋಗ ಇದಾಗಿದ್ದು, ಹಲವು ಕಂಪನಿಗಳು ವಿದ್ಯಾರ್ಥಿಗಳಿಗೆ ಪಾರ್ಟ್ ಟೈಮ್ ಕೆಲಸವನ್ನೂ ನೀಡುತ್ತಿವೆ.
ಪ್ರಸನ್ನ ಹೆಗಡೆ ಊರಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.