ಮದುವೆ, ವೃತ್ತಿ ಜೀವನ ಸಮಾನತೆಯಲ್ಲಿರಲಿ
Team Udayavani, Oct 22, 2018, 1:07 PM IST
ಹೆಣ್ಣು ಮಕ್ಕಳಿಗೆ ಇಪ್ಪತ್ತು ವರ್ಷ ಆಯಿತು ಎಂದಾಕ್ಷಣ ವರಾನ್ವೇಷಣೆ ಆರಂಭಿಸುವುದು ಸಾಂಪ್ರದಾಯಿಕ ಜೀವನ ಪದ್ಧತಿ. ಆದರೆ ಈಗ ಜಗತ್ತು ಬದಲಾಗಿದೆ. ಯುವ ಜನತೆಯ ಆಸೆಗಳು ದೊಡ್ಡದಾಗಿವೆ. ಎಲ್ಲರೂ ಯಾರ ಹಂಗಿಲ್ಲದೆ ಬದುಕನ್ನು ಸಾಗಿಸಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಹಾಗಾಗಿ ಎಲ್ಲರೂ ಅವರ ಇಷ್ಟಕ್ಕೆ ಅಡ್ಡಿಪಡಿಸದೆ ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಲು ಪ್ರೋತ್ಸಾಹಿಸುವುದು ಈಗಿನ ಆವಶ್ಯಕತೆ.
ನವ ಯುಗದಲ್ಲಿ ಮಹಿಳೆಯರು ವೃತ್ತಿ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡು ವೃತ್ತಿಪರರಾಗಿ ಸಮಾಜದಲ್ಲಿ ಗುರುತಿಸಿ ಕೊಂಡಿದ್ದಾರೆ. ಹಾಗಾಗಿ ಅವರ 20ನೇ ವರ್ಷಕ್ಕೆ ಅವರಿಗೆ ಉಂಟಾಗುವ ಗೊಂದಲಗಳು, ಹಿರಿಯರ ಒತ್ತಾಯಗಳು, ಒತ್ತಡಗಳನ್ನು ಅವಳು ಎದುರಿಸಿ ಕೊಂಡು ಅವಳ ಇಚ್ಛೆಯಂತೆ ವೃತ್ತಿ ಜೀವನವನ್ನು ಮೊದಲಿಗೆ ಕಟ್ಟಿ ಅನಂತರ ಸಂಸಾರದ ಜೀವನಕ್ಕೆ ಕಾಲಿಡುವುದು ಉತ್ತಮ ಎನ್ನುವುದು ಹೆಚ್ಚಿನವರ ಸಲಹೆ.
ಮದುವೆ ಮತ್ತು ವೃತ್ತಿ ಜೀವನ
20 ವರ್ಷ ಆಗಿರುವಾಗ ಭವಿಷ್ಯದ ಕಟ್ಟಡಗಳನ್ನು ನಿರ್ಮಿಸುವ ಜೀವನ ಹಂತ ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ಕಾಲೇಜು ಜೀವನದಿಂದ ಸುತ್ತಲಿನ ಹೊಸ ಪ್ರಪಂಚವನ್ನು ನೋಡುತ್ತೇವೆ. ಹಾಗಾಗಿ ಪ್ರಪಂಚದ ಪರಿಚಯವಾಗಬೇಕು. ಕಾರ್ಪೊರೇಟ್ ಜಗತ್ತಿನಲ್ಲಿ ನಾವು ಮಗುವಿನಂತೆ ಕಾಲಿಡುವವರು. ಇಲ್ಲಿ ನಾವು ಏನು ಪಡೆಯಬೇಕು ಎಂದು ಅನ್ವೇಷಿಸುತ್ತೇವೆ. ಆದರೆ 20 ವರ್ಷವಾದ ಮೇಲೆ ಮದುವೆಯಾಗಲು ಒಳ್ಳೆಯ ಸಮಯ ಎನ್ನುವ ಸಮಾಜದಲ್ಲಿ ನಾವಿದ್ದೇವೆ. ಹಾಗಾಗಿ ಈ ಒತ್ತಡಕ್ಕೆ ನಾವು ಒಳಗಾಗುವ ಮೊದಲು ಮುಂದಿನ ಜೀವನದ ಕುರಿತು ಸ್ವಲ್ಪ ಆಲೋಚಿಸುವುದು ಉತ್ತಮ.
ನಿಮ್ಮ ವೃತ್ತಿ ಎಂದಿಗೂ ನಿಮ್ಮಿಂದ ದೂರವಿರುವುದಿಲ್ಲ
ಭವಿಷ್ಯ ಏನೆಂದು ಯಾರಿಗೆ ಗೊತ್ತು? ನಿಮ್ಮ ಸಂಬಂಧ ಮುಂದೆ ಕೆಲಸಕ್ಕೆ ಬಾರದಿದ್ದರೆ, ಅಥವಾ ಹಾಸ್ಯಾಸ್ಪದವಾದರೆ? ಮುಂದೆ ಜೀವನ ಪರ್ಯಾಂತ ಇನ್ನೊಬ್ಬರ ಹಂಗಿನಲ್ಲಿ ಅಥವಾ ಅವಲಂಬಿಸಿಯೇ ಬದುಕಬೇಕಾಗುತ್ತದೆ. ನಿಮ್ಮ ಹೆತ್ತವರು, ಸ್ನೇಹಿತರು ಸಹಾಯದ ಕೈ ಎಷ್ಟೆಂದು ಚಾಚಿಯಾರು? ಹಾಗಾಗಿ ನಿಮ್ಮ ಜೀವನದಲ್ಲಿ ಬದುಕಲು ಯಾವತ್ತೂ ಸಹಾಯ ಮಾಡುವುದು ವೃತ್ತಿ ಜೀವನ.
ಇದು ಸಮಯ
ನಿಮ್ಮ ಆಸಕ್ತಿಯ ಮೇಲೆ ನಿಮ್ಮ ಸಾಧ್ಯಾ-ಸಾಧ್ಯತೆಗಳನ್ನು ಎದುರಿಸುವ ಸಮಯ. ಏಕೆಂದರೆ ಮದುವೆಯಾದರೆ ಇನ್ನೊಬ್ಬ ವ್ಯಕ್ತಿಯ ಕುಟುಂಬದ ಕ್ಷೇಮಕ್ಕಾಗಿ ನೀವು ಜವಾಬ್ದಾರರಾಗುತ್ತೀರಿ ಆದರೆ ಹಣಕಾಸಿನ ಹೊರೆ ಇರುವುದಿಲ್ಲ. ಆದರೆ ನೀವು ಜೀವನದಲ್ಲಿ ಏನನ್ನು ಮಾಡಲು ಬಯಸುತ್ತೀರಿ ಎಂಬುದನ್ನು ಕಂಡುಹಿಡಿಯಲು ಈ ಸಮಯವನ್ನು ನೀವು ಬಳಸುವುದು ಮತ್ತು ನೀವು ವೃತ್ತಿಪರರಾಗಿ ಸ್ಥಿರವಾಗಿದ್ದರೆ ಒಮ್ಮೆ ನಿಮ್ಮ ಕಾಲಮೇಲೆ ನಿಲ್ಲಬಹುದು.
ಆರ್ಥಿಕ ಸ್ಥಿರತೆ
ನಿಮ್ಮ ಪತಿ ಎಷ್ಟು ಸಂಪಾದಿಸುತ್ತಾನೆ ಅಥವಾ ಅವನ ಕುಟುಂಬ ಎಷ್ಟು ಶ್ರೀಮಂತವಾಗಿದೆ ಎನ್ನುವುದರ ಬದಲು ನೀವು ಆರ್ಥಿಕವಾಗಿ ಸ್ವತಂತ್ರವಾಗಿರುವುದು ಮುಖ್ಯ. ಏಕೆಂದರೆ ನೀವು ಕುಟುಂಬದಲ್ಲಿ ಅವಲಂಬಿತರಾಗುವುದಕ್ಕಿಂತ ನೀವೇ ಕುಟುಂಬಕ್ಕೆ ಕೊಡುಗೆದಾರರಾದರೆ, ಕುಟುಂಬ ನಿರ್ವಹಿಸುವ ಶಕ್ತಿ ನಿಮ್ಮಲ್ಲಿದ್ದರೆ ಒಳ್ಳೆಯದಲ್ಲವೇ. ಹಾಗಾಗಿ ಬೇಗ ಮದುವೆಯಾಗುವ ಮುಂಚೆ ಆಲೋಚಿಸಿ.
ಜ್ಞಾನ ಕೌಶಲ ಹೆಚ್ಚಿಸಿ
ನಿಮ್ಮ ವೃತ್ತಿಪರ ಪ್ರಪಂಚವು ಹೊಸ ಜನರನ್ನು ಭೇಟಿ ಮಾಡಿಸುತ್ತದೆ, ಅನುಭವ ನೀಡುತ್ತದೆ, ಕಲಿಸುತ್ತದೆ, ಜ್ಞಾನದ ಮಟ್ಟ, ಕೌಶಲಗಳನ್ನು ಸುಧಾರಿಸುತ್ತದೆ. ರಾಜಕೀಯ, ಕೆಲಸದ ಒತ್ತಡ, ಕಟ್ಟುನಿಟ್ಟಾದ ಗಡು ಎಲ್ಲವನ್ನೂ ನಿಮ್ಮ ಸ್ವಂತ ಜ್ಞಾನದಿಂದ ಅರಿತುಕೊಳ್ಳುತ್ತೀರಿ. ಹಾಗಾಗಿ ಇಪ್ಪತ್ತರ ವಯಸ್ಸು ನಿಮ್ಮ ಸ್ವಂತ ದೃಷ್ಟಿಕೋನ ಮತ್ತು ವ್ಯಕ್ತಿತ್ವ ಅಭಿವೃದ್ಧಿಪಡಿಸುವ ಸಮಯ.
ಪ್ರಮುಖ ವಿಷಯ
ನೀವು ಹೊಸತನಕ್ಕೆ ಕಾಲಿಡುವಾಗಲೇ ನಿಮ್ಮ ಸಂಗಾತಿಗೆ ನಿಮ್ಮ ವೃತ್ತಿಪರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ತಿಳಿಸಬೇಕು. ನೀವು ಮದುವೆ ಆದ ಅನಂತರ ಕೆಲಸ ಮಾಡುವುದನ್ನು ಮುಂದುವರಿಸಲು ಬಯಸಿದ್ದೀರಿ ಎಂದು ಸಂಭಾಷಣೆಯ ಮುಖಾಂತರ ಇಬ್ಬರು ಅರಿತುಕೊಂಡು ಜೀವನ ಸಾಗಿಸಿದರೆ ಉತ್ತಮ. ವೃತ್ತಿಜೀವನವನ್ನು ಮುಂದುವರಿಸುವವರು ವೃತ್ತಿ ಜತೆಗೆ ಜೀವನದ ಒಂದು ಅಂಗವಾದ ಮದುವೆಯನ್ನು ಕಡೆಗಣಿಸದೆ ಅರ್ಥ ಮಾಡಿಕೊಂಡು ಇಬ್ಬರೂ ತಮ್ಮ ವೃತ್ತಿಯನ್ನು ಮುಂದುವರಿಸುವುದು ಅಥವಾ ಅವರ ಇಷ್ಟದಂತೆ ಜೀವನ ನಡೆಸುವುದು ಮುಖ್ಯ.
ಭರತ್‌ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.