ಮಂಗಳೂರಿಗೆ ಮೆಟ್ರೋಲೈಟ್ ರೈಲು ಪೂರಕ


Team Udayavani, Jul 28, 2019, 5:41 AM IST

q-22

ಮಂಗಳೂರು ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿರುವ ನಗರ. ರಾಜ್ಯದ ರಾಜಧಾನಿಯಲ್ಲಿ ಏನೇ ಅಭಿವೃದ್ಧಿಗಳು ನಡೆದರೂ ವೇಗದಲ್ಲೇ ಅದು ಮಂಗಳೂರಿನಲ್ಲೂ ಇಲ್ಲಿಗೆ ಅನುಗುಣವಾಗಿ ತಯಾರಾಗುತ್ತದೆ. ಬೆಂಗಳೂರಿನಲ್ಲಿ ಕೆಲವು ವರ್ಷಗಳ ಹಿಂದೆ ಸಂಚಲನ ಮೂಡಿಸಿದ್ದು ಮೆಟ್ರೋ ರೈಲುಗಳು. ಇದೀಗ ಮಂಗಳೂರಿನಲ್ಲಿ ಮೆಟ್ರೋ ಮಾದರಿಯ ರೈಲುಗಳ ಬದಲಾಗಿ ಕಡಿಮೆ ವೆಚ್ಚದ ಮೆಟ್ರೋಲೈಟ್ ರೈಲುಗಳು ಕಾಲಿಡುವ ಸಾಧ್ಯತೆಗಳಿವೆ.

ಕೇಂದ್ರ ಸರಕಾರದ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ಮೆಟ್ರೋಲೈಟ್ ಎಂಬ ಮಾದರಿಯಲ್ಲಿ ನಗರ ರೈಲು ಸಂಚಾರ ವ್ಯವಸ್ಥೆಯನ್ನು ಸಣ್ಣ ಹಾಗೂ ಮಧ್ಯಮ ಗಾತ್ರದ ನಗರಗಳಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದೆ. ಮಹಾನಗರಗಳಲ್ಲಿ ಮೆಟ್ರೋ ರೈಲು ವ್ಯವಸ್ಥೆ ಸಂಚಾರ ದಟ್ಟಣೆ ನಿರ್ವಹಣೆಗೆ ಯಶಸ್ವಿ ಪರಿಹಾರವಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಮಾದರಿಯಲ್ಲೇ ರೂಪಿಸಿರುವ ಅಗ್ಗದ ಹಗುರ ನಗರ ರೈಲು ಸಂಚಾರ ವ್ಯವಸ್ಥೆ ಇದಾಗಿದೆ. ಪ್ರಸ್ತುತ ಕಾರ್ಯಾಚರಿಸುತ್ತಿರುವ ಮೆಟ್ರೊ ರೈಲು ಮಾದರಿಯಲ್ಲಿ ಮಂಗಳೂರು ನಗರದಲ್ಲಿ ಲಘು ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಈ ವರ್ಷ ಎಚ್.ಡಿ. ಕುಮಾರಸ್ವಾಮಿಯವರು ಮಂಡಿಸಿದ್ದ ಕರ್ನಾಟಕ ರಾಜ್ಯ ಸರಕಾರದ ಮುಂಗಡ ಪತ್ರದಲ್ಲೂ ಇದಕ್ಕೆ ಪೂರಕವಾಗಿ ಪ್ರಸ್ತಾವನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸರಕಾರ ದೇಶದ ಮಧ್ಯಮ ಹಾಗೂ ಸಣ್ಣ ನಗರಗಳಲ್ಲಿ ಜಾರಿಗೆ ತರಲುದ್ದೇಶಿಸಿರುವ ಮೆಟ್ರೋಲೈಟ್ ರೈಲು ವ್ಯವಸ್ಥೆ ಮಂಗಳೂರಿಗೂ ಪೂರಕವಾಗಬಹುದು.

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಪ್ರಕಾರ ಮೆಟ್ರೋಲೈಟ್ ರೈಲು ವ್ಯವಸ್ಥೆ ಮೆಟ್ರೋ ರೈಲಿನಷ್ಟು ದುಬಾರಿ ಅಲ್ಲ. ಅನುಷ್ಟಾನವೂ ಸುಲಭ. ಹೆಚ್ಚುವರಿ ಭೂಸ್ವಾಧೀನದ ಸಮಸ್ಯೆ ಇರುವುದಿಲ್ಲ. ಕಡಿಮೆ ವೆಚ್ಚದಲ್ಲಿ ಪ್ರಸ್ತುತ ಇರುವ ರಸ್ತೆಗಳ ಮಧ್ಯದಲ್ಲೇ ಇದನ್ನು ಅನುಷ್ಠಾನಗೊಳಿಸಬಹುದಾಗಿದೆ. ಮೆಟ್ರೋಲೈಟ್ ರೈಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ನಗರಗಳಿಗೆ ಆರ್ಥಿಕ ಸಹಾಯವನ್ನೂ ನೀಡಲಿದೆ. ರಸ್ತೆಗಳ ಮಧ್ಯಭಾಗ ಹಾಗೂ ವೆಲಿವೇಟೆಡ್‌ ಮಾರ್ಗ ನಿರ್ಮಿಸಿ ಮೆಟ್ರೋಲೈಟ್ ರೈಲು ಸಂಚಾರಕ್ಕೆ ಅನುಮತಿ ನೀಡುವ ಕುರಿತು ಸಚಿವಾಲಯ ಮಾನದಂಡ ಗಳನ್ನು ರೂಪಿಸಿದೆ.

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಮೆಟ್ರೋಲೈಟ್ ರೈಲು ಸಂಚಾರ ವ್ಯವಸ್ಥೆ ಬಗ್ಗೆ ಮಾನದಂಡ ರೂಪಿಸಿದೆ. ಮೆಟ್ರೋಲೈಟ್ ರೈಲಿನಲ್ಲಿ 3 ಬೋಗಿಗಳು ಇರುತ್ತವೆ. ಇದರಲ್ಲಿ 300 ಮಂದಿ ಪ್ರಯಾಣಿಸಬಹುದಾಗಿದೆ. ಪ್ರಸ್ತುತ ಇರುವ ರಸ್ತೆಗಳ ಮಧ್ಯೆ ಈ ಇರುವ ಸ್ಥಳಾವಕಾಶವನ್ನು ಉಪ ಯೋಗಿಸಿಕೊಂಡು ಮಾರ್ಗ ನಿರ್ಮಿಸ ಬಹುದಾಗಿದೆ. ಅಗತ್ಯಬಿದ್ದರೆ ಮೆಟ್ರೋಲೈಟ್ ಮಾರ್ಗಕ್ಕೆ ಬೇಲಿ ಹಾಕಿಕೊಳ್ಳಬಹುದು. ಛಾವಣಿ ಹೊಂದಿದ ಫ್ಲ್ಯಾಟ್ಫಾರ್ಮ್ಗಳನ್ನು ನಿರ್ಮಿಸಲಾಗುತ್ತದೆ. ಮೆಟ್ರೋ ರೈಲಿನ ಸ್ವಯಂಚಾಲಿತ ಗೇಟುಗಳು ಇರುವುದಿಲ್ಲ. ಎಕ್ಸ್‌ರೇ ಹಾಗೂ ಬ್ಯಾಗೇಜ್‌ ಸ್ಕ್ಯಾನರ್‌ ಕೂಡಾ ಇರುವುದಿಲ್ಲ. ಸಾಮಾನ್ಯ ರೈಲ್ನಂತೆ ಇಲ್ಲೂ ಕೂಡಾ ಟಿಕೇಟು ಪರೀಕ್ಷಕರು ಇರುತ್ತಾರೆ. ಟಕೇಟು ಇಲ್ಲದ ಪ್ರಯಾಣಿಕರಿಗೆ ದಂಡ ವಿಧಿಸಲಾಗುತ್ತದೆ. ಈ ರೈಲು ಗಂಟೆಗೆ 60 ಕಿ.ಮೀ.ವೇಗದಲ್ಲಿ ಚಲಿಸಬಲ್ಲದು. ರೈಲಿನೊಳಗೆ ಸಿಗ್ನಲ್ ವ್ಯವಸ್ಥೆ ವೈಫಲ್ಯ ಅನುಭವಿಸಿದರೂ 25 ಕಿ.ಮೀ. ಚಲಿಸಬಲ್ಲದು ಎಂದು ಮಾನದಂಡದಲ್ಲಿ ವಿವರಿಸಲಾಗಿದೆ. ಸಾಮಾನ್ಯವಾಗಿ ಪ್ರಸ್ತುತ ಮಹಾನಗರಗಳಲ್ಲಿ ಇರುವ ಮೆಟ್ರೋ ರೈಲು ವ್ಯವಸ್ಥೆಗಳಿಗೆ ಹೋಲಿಸಿದರೆ ಇವುಗಳ ವೆಚ್ಚ ಶೇ.40 ರಷ್ಟು ಕಡಿಮೆ ಎಂದು ಅಂದಾಜಿಸಲಾಗಿದೆ.ಆದುದರಿಂದ ಸಣ್ಣ ನಗರಗಳು ಹಾಗೂ ಪಟ್ಟಣಗಳಿಗೆ ಮೈಟ್ರೋಲೈಟ್ ವ್ಯವಸ್ಥೆ ಆರ್ಥಿಕವಾಗಿ ಕಾರ್ಯಸಾಧುವಾಗಬಲ್ಲದು ಎಂಬುದು ಕೇಂದ್ರ ಸರಕಾರದ ಲೆಕ್ಕಾಚಾರ.

ಮಂಗಳೂರಿಗೆ ಪೂರಕ
ಮೆಟ್ರೋಲೈಟ್ ವ್ಯವಸ್ಥೆ ಮಂಗಳೂರಿನಂತಹ ನಗರಗಳಿಗೆ ಸೂಕ್ತವಾಗಿದೆ. ಮಂಗಳೂರು ನಗರದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿವೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳೂರಿನ ತಲಪಾಡಿಯಿಂದ ಕುಂದಾಪುರದವರೆಗಿನ ರಸ್ತೆಯಲ್ಲಿ ಮಧ್ಯಭಾಗದಲ್ಲಿ ಇರುವ ವಿಭಾಜಕಗಳು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದ್ದು ಯೋಜನೆಯ ಮಾನದಂಡದಂತೆ ರಸ್ತೆ ಮಧ್ಯದಲ್ಲಿ ಮಾರ್ಗ ನಿರ್ಮಾಣಕ್ಕೆ ಪೂರಕವಾಗಿವೆ. ಮಂಗಳೂರು ನಗರಕ್ಕೆ ಲಘು ರೈಲು ಸಂಚಾರ ಪ್ರಸ್ತಾವನೆ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಆರಂಭದಲ್ಲಿ ಸ್ಕೈಬಸ್‌ ಪ್ರಸ್ತಾವನೆ ಕೇಳಿಬಂದಿತ್ತು. ಸ್ಕೈಬಸ್‌ ಯೋಜನೆ ಗೋವಾದಲ್ಲಿ ವಿಫಲವಾಗಿದೆ ಎಂಬ ಅಂಶಗಳ ಹಿನ್ನೆಲೆಯಲ್ಲಿ ಯೋಜನೆಯ ಗಟ್ಟಿತನದ ಬಗ್ಗೆ ಸಂದೇಹಗಳು ವ್ಯಕ್ತವಾಗಿದ್ದವು. ಆಬಳಿಕ ಪ್ರಸ್ತಾವನೆಯಾಗಿದ್ದು ಮೋನೋರೈಲು. 2008ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಬಜೆಟ್‌ನಲ್ಲಿ ಮೋನೋ ರೈಲು ಪ್ರಸ್ತಾವನೆಯನ್ನು ಮಾಡಲಾಗಿತ್ತು. ಸಾಧ್ಯತಾ ವರದಿ ತಯಾರಿಸಲು 1 ಕೋ.ರೂ. ಬಿಡುಗಡೆ ಮಾಡುವುದಾಗಿ ಅಶ್ವಾಸನೆ ದೊರೆತರೂ ಅದೂ ಕಾರ್ಯಗತಗೊಂಡಿಲ್ಲ . ಇವೆೆಲ್ಲದರ ನಡುವೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ , ಧಾರವಾಡಗಳಲ್ಲಿ ಮೋನೋರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲು ಮಲೇಶ್ಯದ ಸಂಸ್ಥೆಯೊಂದು ಆಸಕ್ತಿ ವಹಿಸಿತ್ತು. ಮಂಗಳೂರಿನಲ್ಲಿ 30 ಕಿ.ಮೀ.ವರೆಗೆ ಮೋನೋರೈಲು ಜಾಲ ಕಲ್ಪಿಸುವ ಬಗ್ಗೆ ಕಂಪೆನಿ ಪ್ರಸ್ತಾವನೆ ಮಾಡಿತ್ತು. ಈ ಬಗ್ಗೆ ಕರ್ನಾಟಕ ಸರಕಾರದೊಂದಿಗೆ ಮಾತುಕತೆ ನಡೆದಿದ್ದ ಬಗ್ಗೆಯೂ ವರದಿಯಾಗಿತ್ತು.

ಮಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ಈಗಾಗಲೇ ತೀವ್ರ ಸ್ವರೂಪ ಪಡೆಯುತ್ತಿದೆ. ಸೀಮಿತ ಸಂಖ್ಯೆಯ ಸಂಚಾರ ಸಾಧನಗಳಲ್ಲಿ ಗರಿಷ್ಟ ಪ್ರಯಾಣಿಕರನ್ನು ಒಯ್ಯುವ ಸಂಚಾರ ಸೌಲಭ್ಯಗಳಿಗೆ ಮೊರೆ ಹೋಗುವ ಮೂಲಕ ಸಾರ್ವಜನಿಕ ಸಂಚಾರ ವಾಹನಗಳ ಸಂಖ್ಯೆಯ ಹೆಚ್ಚಳವನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ಮಂಗಳೂರು ನಗರದ ಬೆಳವಣಿಗೆಗಳನ್ನು ಊಹಿಸಿಕೊಂಡು ಈಗಿನ ಮತ್ತು ಭವಿಷ್ಯದ ಆವಶ್ಯಕತೆಗಳನ್ನು ಪರಿಗಣಿಸಿ ಒಂದಷ್ಟು ಯೋಜನೆಗಳು ರೂಪಿತವಾಗುವುದು ಮತ್ತು ಅನುಷ್ಠಾನದ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಅವಶ್ಯವೆನಿಸುತ್ತದೆ. ಈ ನಿಟ್ಟಿನಲ್ಲಿ ಮಂಗಳೂರಿಗೆ ಮೆಟ್ರೋಲೈಟ್ ಸಂಚಾರ ಯೋಜನೆಯ ಬಗ್ಗೆ ಈಗಿಂದಲೇ ಚಿಂತನೆ ನಡೆಸುವುದು ಪೂರಕವಾಗಬಹುದು.

ಹೇಗಿರುತ್ತೆ ವ್ಯವಸ್ಥೆ
ದೊಡ್ಡ ನಗರಗಳಲ್ಲಿ ಮೆಟ್ರೋ ಯೋಜನೆ ಜಾರಿಯಾಗುತ್ತಿದೆ. ಆದರೆ ಸಣ್ಣ ನಗರ ಹಾಗೂ ಪಟ್ಟಣಗಳಲ್ಲಿ ಸ್ಥಳಾವಕಾಶ ಪಿಸಿಬಿಲಿಟಿ, ಆರ್ಥಿಕ ಸಂಪನ್ಮೂಲದ ಕೊರತೆ ಮುಂತಾದ ಸಮಸ್ಯೆಗಳಿಂದಾಗಿ ಮೆಟ್ರೋ ರೈಲು ಅನುಷ್ಠಾನ ಕಷ್ಟ ಸಾಧ್ಯವಾಗುತ್ತಿದೆ. ದಿನದಿಂದ ದಿನಕ್ಕೆ ವಾಹನ ದಟ್ಟಣೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವ ಅನಿವಾರ್ಯ ಹೆಚ್ಚುತ್ತಿದೆ. ಈ ದಿಶೆಯಲ್ಲಿ ರೈಲು ಆಧಾರಿತ ಸಮೂಹ ಸಾರಿಗೆ ವ್ಯವಸ್ಥೆಯನ್ನು ನಗರದೊಳಗೆ ಅಳವಡಿಸುವುದು ಅನಿವಾರ್ಯವಾಗಿ ಪರಿಣಮಿಸುತ್ತಿದೆ. ಇದಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಸಣ್ಣ ನಗರ, ಪಟ್ಟಣಗಳಲ್ಲಿ ಮೆಟ್ರೋಲೈಟ್ ರೈಲು ವ್ಯವಸ್ಥೆಯನ್ನು ಅಳವಡಿಸುವುದು ಸರಕಾರದ ಉದ್ದೇಶ.

ಕೇಶವ ಕುಂದರ್‌

ಟಾಪ್ ನ್ಯೂಸ್

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.