ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮೊಬೈಲ್ ಲೈನ್ ಆದ್ಯತೆಯಾಗಲಿ
Team Udayavani, May 12, 2019, 6:00 AM IST
ಒಂದು ನಗರ ಅಂದಾಕ್ಷಣ ಒತ್ತೂತ್ತಾಗಿರುವ ಗಗನ ಚುಂಬಿ ಕಟ್ಟಡಗಳು, ಮಾಲ್‌ಗಳು, ಮಾರುಕಟ್ಟೆಗಳು, ಬಂದರು, ಪಾರ್ಕ್, ಕಾಲೇಜು, ಬೀಚ್, ಹೀಗೆ ಎಲ್ಲ ವರ್ಗದ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತದೆ. ಈ ನಗರಗಳು ಎಲ್ಲರ ಆಸೆಗಳನ್ನು ಪೂರೈಸುವ ಹಂತದಲ್ಲಿ ಅಷ್ಟೇ ಪ್ರಮಾಣದ ಜನಸಂದಣಿ, ಟ್ರಾಫಿಕ್ ಸಮಸ್ಯೆಗಳನ್ನು ಹುಟ್ಟಿ ಹಾಕಿಕೊಳ್ಳುತ್ತವೆ.
ಹೌದು! ಸದ್ಯ ನಮ್ಮ ಸುತ್ತಲಿನ ಯಾವ ನಗರವನ್ನೂ ತೆಗೆದು ಕೊಂಡರೂ ಅಲ್ಲಿ ಟ್ರಾಫಿಕ್ ಸಮಸ್ಯೆ ಮುಖ್ಯವಾಗಿ ಕಂಡು ಬರುತ್ತದೆ. ರಸ್ತೆ ಸಂಚಾರದ ಈ ಸಮಸ್ಯೆಗೆ ಪರಿಹಾರ ಕಾಣಲು ಹಲವಾರು ರೀತಿಯ ನೂತನ ಮಾದರಿಯ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದೆನಿಸುತ್ತದೆ. ಅವುಗಳಲ್ಲಿ ರಸ್ತೆ ಬದಲಾವಣೆ , ಏಕ ಮುಖ ಸಂಚಾರ, ರಸ್ತೆಗಳಲ್ಲಿ ಘನ ವಾಹನಗಳಿಗೆ ನಿರ್ಬಂಧ, ಯೂ ಟರ್ನ್ ಅಂತರ ಕಡಿಮೆಗೊಳಿಸುವುದು. ಈ ರೀತಿಯ ಹತ್ತು ಹಲವು ಯೋಜನೆ ಗಳನ್ನು ಮೂಲಕ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಾಣುತ್ತೇವೆ. ಆದರೆ ಜನ ಸಂದಣಿ.?
ಹೌದು, ಪಾದಚಾರಿ ರಸ್ತೆಗಳಲ್ಲೂ ಒಂದೇ ರೀತಿಯ ಜನರು ಇರುವುದಿಲ್ಲ ಕೆಲವರು ನಿಧಾನವಾಗಿ ಸಾಗಿದರೆ ಇನ್ನೂ ಕೆಲವರು ನಗರವನ್ನು ನೋಡುತ್ತಾ ಸಾಗುವವರಿದ್ದಾರೆ. ಆದರೆ ಇವೆಲ್ಲರಿಗಿಂತಲೂ ಹೆಚ್ಚಿನ ಸಮಸ್ಯೆಯಾಗಿರುವ, ಒಂದು ಕ್ಷಣವೂ ಕೂಡ ಮೊಬೈಲ್ ಬಿಟ್ಟಿರದ ಮೊಬೈಲ್ ಬಳಕೆದಾರರು. ತಾವು ಎಲ್ಲಿದ್ದೇವೆ, ತನ್ನ ಸುತ್ತ ಮುತ್ತಲು ಏನಾಗುತ್ತಿದೆ ಎನ್ನುವುದನ್ನು ಮರೆತು ಹೌದು ತಮ್ಮದೇ ಲೋಕದಲ್ಲಿ ಸಂಚರಿಸುವ ಈ ಮೊಬೈಲ್ ಬಳಕೆದಾರರಿಗೆ ಬೇರೆಯದೇ ರಸ್ತೆ ನಿರ್ಮಾಣವಾದರೆ ಹೇಗಿರಬಹುದು. ಹೌದು, ಇಂತಹದ್ದೊಂದು ವಿನೂತನ ಪ್ರಯತ್ನ ಬೆಲ್ಜಿಯಂನ ಆಂಟೆಪ್ನ ಮಧ್ಯಭಾಗದಲ್ಲಿ ಪ್ರಯೋಗವಾಗಿದೆ.
ಸ್ಮಾರ್ಟ್ ಪೋನ್ ಜಾಡು
ನಗರದಲ್ಲಿ ಮೊಬೈಲ್ ಬಳಕೆದಾರರಿಂದ ಪಾದಚಾರಿ ರಸ್ತೆಗಳಲ್ಲಿ ಸಂಚರಿಸುವ ಪಾದಚಾರಿಗಳಿಗೆ ತೊಂದರೆ ಆಗಬಾರ ದೆಂದು ಇಲ್ಲಿನ ಕೆಲವು ನಗರಗಳು ಕಾಲುದಾರಿಗಳು ಮತ್ತು ಪಾದಚಾರಿ ವಲಯಗಳಲ್ಲಿ ಮೀಸಲಾದ ಸ್ಮಾರ್ಟ್ ಫೋನ್ ಲೈನ್‌ಗಳನ್ನು ಸ್ಥಾಪಿಸಲು ಪ್ರಾರಂಭಿಸಿವೆ. ಬೆಲ್ಜಿಯಂನ ಆಂಟೆÌಪ್ನì ಮಧ್ಯಭಾಗದಲ್ಲಿ ಇದನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ. ಇದರಿಂದಾಗಿ ಮೊಬೈಲ್‌ನಲ್ಲಿ ತಮ್ಮದೇ ವ್ಯವಹಾರದಲ್ಲಿ ನಿರತರಾಗಿರುವವರಿಗೆ ಈ ಸ್ಮಾರ್ಟ್ ಜಾಡುಗಳು ಉಪಕಾರಿಯಾಗಿದೆ. ಕೇವಲ ಮೊಬೈಲ್ ಉಪಯೋಗಿಸುವ ದಾರಿಗಳ ಹೊರತಾಗಿ ಕೆಲವೊಂದು ಪಾದಚಾರಿ ರಸ್ತೆಗಳಲ್ಲಿ ಮೊಬೈಲ್ ನಿರ್ಬಂಧ ಎನ್ನುವ ಎಚ್ಚರಿಕೆ ಫಲಕಗಳು ರಸ್ತೆಗಳಲ್ಲಿವೆ. ಚೀನಾದ ಮಹಾನಗರದ ಉದ್ಯಾನಗಳಲ್ಲಿ ಒಂದಾದ ಚೊಂಗಿಗ್‌ನಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರಿಗೆ 50 ಮೀಟರ್ ಲೈನ್‌ನ್ನು ನಿರ್ಮಿಸಿದೆ. ಇದೇ ರೀತಿಯ ಮೊದಲ ಮಾರ್ಗವನ್ನು ವಾಷಿಂಗ್ಟನ್, ಡಿ.ಸಿ.ನಲ್ಲಿ ಕಾಣಬಹುದು, ಇದು 2014 ರ ಬೇಸಗೆಯಲ್ಲಿ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಲೈನ್ ಅನ್ನು ಪರಿಚಯಿಸಿತು.
ಮಂಗಳೂರಿಗೂ ಪರಿಚಯವಾಗಲಿ
ಜನದಟ್ಟಣೆಯನ್ನು ಎದುರಿಸುತ್ತಿರುವ ನಮ್ಮ ಮಂಗಳೂರು ನಗರ ಈ ರೀತಿಯ ಪ್ರಯೋಗಕ್ಕೆ ಒಗ್ಗಿ ಕೊಳ್ಳಬಹುದು. ಅಥವಾ ತಮ್ಮ ನಗರವನ್ನು ವಿನೂತನವಾಗಿ ಹೊರಗಿನವರಿಗೆ ಪರಿಚಯಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಈ ಮೂಲಕವಾದರೂ ಮಂಗಳೂರಿನ ಜನದಟ್ಟನೆ ಹಾಗೂ ಮೊಬೈಲ್ ಬಳಕೆದಾರರಿಗೆ ನೂತನ ಮಾರ್ಗವನ್ನು ಕಂಡುಕೊಳ್ಳಬಹುದಾಗಿದೆ. ಈ ಬಗ್ಗೆ ಆಡಳಿತ ವ್ಯವಸ್ಥೆಯೂ ಗಮನ ಹರಿಸಬೇಕಾದ ಆವಶ್ಯಕತೆ ಹೆಚ್ಚಿದೆ.
– ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
“ಟೋಲ್‌ಗಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.