ತಾಯಿ ಸೇವೆಯಲ್ಲಿ 13 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು


Team Udayavani, Mar 12, 2019, 6:28 AM IST

bb.jpg

ಪೊಳಲಿ :  ಧಾರ್ಮಿಕ ಕಾರ್ಯ ಆಯೋಜನೆ ಯಲ್ಲಿ ಭಕ್ತರನ್ನು ಸತ್ಕರಿಸಿ ನಿರ್ವಹಿಸುವುದು ಸವಾಲಿನ ಕಾರ್ಯ. ಆದರೆ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರ ನಿರ್ವಹಣೆ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕಾಗಿ ಈವರೆಗೆ 13 ಸಾವಿರಕ್ಕೂ ಹೆಚ್ಚು ಮಂದಿ ಸ್ವಯಂಸೇವಕರು ದುಡಿದಿರುವುದು ವಿಶೇಷವಾಗಿದೆ. 

ಅನ್ನಛತ್ರ, ಪಾಕಶಾಲೆ, ಅತಿಥಿ ಸತ್ಕಾರ, ಉಗ್ರಾಣ, ಪಾರ್ಕಿಂಗ್‌, ರಕ್ಷಣೆ ಹೀಗೆ ಎಲ್ಲಿ ನೋಡಿದರೂ ಸ್ವಯಂಸೇವಕರ ಅಚ್ಚುಕಟ್ಟಿನ ಸೇವೆ ಎದ್ದು ಕಾಣುತ್ತಿದೆ. ಕ್ಷೇತ್ರದಲ್ಲಿ ನಿತ್ಯವೂ ಸರಾಸರಿ ಎರಡು ಸಾವಿರಕ್ಕೂ ಅಧಿಕ ಮಂದಿ ದುಡಿಯುತ್ತಿದ್ದಾರೆ. ಪ್ರತಿ ಕಾರ್ಯಕ್ಕೂ ಸ್ವಯಂಸೇವಕರನ್ನು ಸಂಪರ್ಕ ಕಾರ್ಯಾಲಯದಲ್ಲಿ ವಿಭಾಗಿಸಿ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. 

    13,700ಕ್ಕೂ ಹೆಚ್ಚು ಮಂದಿ
ಬ್ರಹ್ಮಕಲಶದ ಸ್ವಯಂಸೇವಕರ ನೋಂದಣಿ ಆರಂಭಗೊಂಡ ಬಳಿಕ 225 ಪುರುಷರ ಹಾಗೂ 151 ಮಹಿಳೆಯರ ತಂಡಗಳ ನೋಂದಣಿ ಮಾಡಲಾಗಿದ್ದು,  ಒಟ್ಟು ಸ್ವಯಂಸೇವಕರ ಸಂಖ್ಯೆ 13,700 ಮೀರಿದೆ. ಪ್ರತಿ ತಂಡದಲ್ಲೂ ಕನಿಷ್ಠ 30 ಮಂದಿಯನ್ನು ನಿಗದಿಗೊಳಿಸಿದ್ದರೂ ಕೆಲವೊಂದು ಸಂದರ್ಭ ಹೆಚ್ಚಿನ ಸ್ವಯಂ ಸೇವಕರು ಆಗಮಿಸುತ್ತಿದ್ದಾರೆ. ಒಂದು ದಿನ ಮುಂಚಿತ ವಾಗಿ ಸ್ವಯಂಸೇವಕರನ್ನು ಪಟ್ಟಿ ಮಾಡಿ ಯಾವ ಕೆಲಸಕ್ಕೆ ಎಷ್ಟು ಮಂದಿ ಬೇಕು ಎಂದು ಸಂಬಂಧಪಟ್ಟವರ ಬಳಿ ವಿಚಾರಿಸಿ ಜವಾಬ್ದಾರಿ ಹಂಚಲಾಗುತ್ತದೆ. 

ಬಂಟ್ವಾಳ ತಾಲೂಕು ಸಹಿತ ದ.ಕ, ಉಡುಪಿ, ಕಾಸರಗೋಡು ಜಿಲ್ಲೆಗಳ ಬಹುತೇಕ ಪ್ರದೇಶದ ಸ್ವಯಂಸೇವಕರು ಬ್ರಹ್ಮಕಲಶ ಕಾರ್ಯದಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಫೆ. 26ರಿಂದಲೇ ಕ್ಷೇತ್ರದಲ್ಲಿ ಇದಕ್ಕಾಗಿ ಪ್ರತ್ಯೇಕ ಕಚೇರಿ ಕಾರ್ಯಾಚರಿಸುತ್ತಿದ್ದು, ನಿರಂತರವಾಗಿ ಸ್ವಯಂಸೇವಕರ ಜೋಡಣೆಯಲ್ಲಿ ತೊಡಗಿದೆ. ಕೆಲವೊಂದು ಸಂದರ್ಭ ಕ್ಷೇತ್ರಕ್ಕೆ ಕೈ ಮುಗಿಯಲು ಬಂದ ಭಕ್ತರೂ ಸೇವೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ವಿವಿಧ ಸಂಘ – ಸಂಸ್ಥೆಗಳು ಸ್ವಯಂ ಸೇವೆಗೆ ಬರುತ್ತಿರುವುದರಿಂದ ಒಮ್ಮೆ ಸೇವೆ ಸಲ್ಲಿಸಿದವರಿಗೆ ಬೇಡಿಕೆ ಇದ್ದರೂ ಮತ್ತೂಮ್ಮೆ ಅವಕಾಶ ನೀಡುವ ಪ್ರಮೇಯ ಕಡಿಮೆ ಇದೆ. 

   6,000ಕ್ಕೂ ಅಧಿಕ ಮಂದಿ
ಮಾ. 10ರಂದು ಪ್ರತಿಷ್ಠಾ ದಿನದಂದು 6,000ಕ್ಕೂ ಹೆಚ್ಚು ಮಂದಿ ಸ್ವಯಂಸೇವಕರು ಕಾರ್ಯ ನಿರ್ವ ಹಿಸಿದ್ದು, ಮಾ. 13ರಂದು ಇಷ್ಟೇ ಸಂಖ್ಯೆಯ ಸ್ವಯಂಸೇವಕರು ಕಾರ್ಯ ನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಮಿತಿಯ ಉಪಾಧ್ಯಕ್ಷ ಪ್ರಕಾಶ್‌ ಬೆಳ್ಳೂರು ತಿಳಿಸಿದ್ದಾರೆ. 

    ಸ್ವತ್ಛತೆಗೆ ಪ್ರತ್ಯೇಕ
ಸ್ವತ್ಛತೆಗೆ ಪ್ರತ್ಯೇಕವಾಗಿ ಪತಂಜಲಿ ಯೋಗ  ಸಮಿತಿ ಹಾಗೂ ಮರೋಳಿ ಶ್ರೀ ಸೂರ್ಯ ನಾರಾಯಣ ಕ್ಷೇತ್ರದವರು ದುಡಿಯುತ್ತಿದ್ದಾರೆ. ಪತಂಜಲಿಯ ತಂಡ ಬೆಳಗ್ಗಿನ ಹೊತ್ತು ಹಾಗೂ ಮರೋಳಿಯ ತಂಡ ರಾತ್ರಿ ಕಾರ್ಯ ನಿರ್ವಹಿಸುತ್ತಿದೆ. ಇವರಿಗೆ ಅಗತ್ಯಕ್ಕೆ ತಕ್ಕಂತೆ ಸ್ವಯಂಸೇವಕರನ್ನು ಒದಗಿಸುವ ಕಾರ್ಯವನ್ನು ಸಮಿತಿ ಮಾಡುತ್ತಿದೆ.  

ಸಂದೇಶ/ಕರೆಯ ವ್ಯವಸ್ಥೆ
ಬ್ರಹ್ಮಕಲಶದ ಕಾರ್ಯ ನಿರ್ವಹಣೆಗಾಗಿ ಸ್ವಯಂಸೇವಕರ ನೋಂದಣಿಯ ಸಂದರ್ಭದಲ್ಲೇ ಅವರ ಮೊಬೈಲ್‌ ಸಂಖ್ಯೆ ಯನ್ನೂ ಪಡೆಯಲಾಗಿತ್ತು. ಸ್ವಯಂಸೇವಕರ ತಂಡ ಯಾವ ಕೆಲಸ ಮಾಡಬೇಕು ಹಾಗೂ ತಂಡಕ್ಕೆ ನಿಗದಿಗೊಂಡಿರುವ ಅವಧಿ ಏನು ಎಂಬುದನ್ನು ಬಿಟಿ-ಪೊಳಲಿ ಎಂಬ ಹೆಸರಿನಲ್ಲಿ ಸಂದೇಶವೊಂದನ್ನು ಕಳುಹಿಸಲಾಗುತ್ತದೆ. ಜತೆಗೆ ತಂಡದ ಮುಖ್ಯಸ್ಥನಿಗೆ ಕರೆ ಮಾಡಿ ತಿಳಿಸಲಾಗುತ್ತದೆ. ಒಟ್ಟು  ಸ್ವಯಂಸೇವಕರ ಜೋಡಣ ಕಾರ್ಯದಲ್ಲಿ  ಸಂಪರ್ಕ ಕಾರ್ಯಾಲಯದಲ್ಲಿ  25 ಮಂದಿ ಸ್ವಯಂಸೇವಕರೇ ದುಡಿಯುತ್ತಿದ್ದಾರೆ. 

 ಕನಿಷ್ಠ 30 ಮಂದಿಯ ತಂಡ
ಭಕ್ತರಿಂದ ತಾಯಿಯ ಬ್ರಹ್ಮಕಲಶಕ್ಕೆ ನಿರೀಕ್ಷೆಗೂ ಮೀರಿ ಸಹಕಾರ ಲಭಿಸಿದೆ. ಈವರೆಗೆ 13 ಸಾವಿರಕ್ಕೂ ಅಧಿಕ ಮಂದಿ ಸ್ವಯಂಸೇವಕರು ಭಾಗಿಗಳಾಗಿದ್ದಾರೆ. ಒಂದು ತಂಡದಲ್ಲಿ ಕನಿಷ್ಠ 30 ಮಂದಿ ಇರಲಿದ್ದು, ಗರಿಷ್ಠ 150 ಮಂದಿಯೂ ಭಾಗವಹಿಸಿದ್ದಿದೆ. 
ಫೆ. 26ರಿಂದಲೇ ಸ್ವಯಂಸೇವಕರ ಸಂಪರ್ಕ ಕಾರ್ಯಾಲಯ ಸ್ವಯಂಸೇವಕರ ಜೋಡಣೆಯಲ್ಲಿ ನಿರತವಾಗಿದೆ. ಪ್ರತಿಯೊಬ್ಬರಿಗೂ ಎಸ್ಸೆಮ್ಮೆಸ್‌ ಮೂಲಕ ಸಮಯ, ಕೆಲಸದ ಅವಧಿತಿಳಿಸಲಾಗುತ್ತದೆ. 
 - ಬಿ. ದೇವದಾಸ್‌ ಶೆಟ್ಟಿ, ಅಧ್ಯಕ್ಷರು ಸ್ವಯಂಸೇವಕ ನಿರ್ವಹಣ ಸಮಿತಿ

  ಕಿರಣ್‌ ಸರಪಾಡಿ

ಟಾಪ್ ನ್ಯೂಸ್

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.