ಬಹೂಪಯೋಗಿ ಹರಳೆಣ್ಣೆ
Team Udayavani, Feb 18, 2020, 5:02 AM IST
ಬಹಳ ಹಿಂದೆ ಹರಳೆಣ್ಣೆ ಅಡುಗೆಯಿಂದ ಹಿಡಿದು ಸೌಂದರ್ಯ ಪೋಷಣೆಗೂ ಸಹ ದಿನನಿತ್ಯ ಬಳಸು ತ್ತಿದ್ದರಂತೆ. ಇದು ಸಾಮಾನ್ಯ ಎಣ್ಣೆಯೆಂದು ಭಾವಿ ಸದೆ ಇದರಲ್ಲಿರುವ ನೈಸರ್ಗಿಕ ಗುಣಾಂಶಗಳನ್ನು ಈ ಲೇಖನದಿಂದ ನೀವು ತಿಳಿಯಬಹುದು.
ಏನಿದು ಹರಳೆಣ್ಣೆ ?
ಹರಳೆ ಬೀಜಗಳನ್ನು ಸಂಸ್ಕರಿಸಿ ಎಣ್ಣೆಯನ್ನು ತಯಾರಿಸಲಾಗುತ್ತದೆ. ಆರೋಗ್ಯದ ದೃಷ್ಟಿ ಯಿಂದ ನೈಸರ್ಗಿಕವಾಗಿ ದೊರೆಯುವ ಗಿಡ ಮೂಲಿಕೆಯಿಂದ ತಯಾರಿಸುವುದು ಸೂಕ್ತ.
ತ್ವಚೆಯ ಅಂದವನ್ನು ಹೆಚ್ಚಿಸಲು
ಇದರಲ್ಲಿರುವ ಸತ್ವಗಳು ಸೈಲೆನಿಕ್ ಆಮ್ಲ ತ್ವಚೆಯ ತೊಂದರೆಯನ್ನು ಸರಿ ಪಡಿಸಿ ಕಲೆಯಿಲ್ಲದ ತ್ವಚೆಯನ್ನು ನಿಮ್ಮದಾಗಿಸುತ್ತದೆ. ಬ್ಯಾಕ್ಟೀರಿಯಾ, ಶಿಲೀಂಧ್ರ ನಿವಾರಕ ಗುಣ ತ್ವಚೆಯ ಸುಕ್ಕನ್ನು ಕಡಿಮೆ ಮಾಡುತ್ತದೆ. ಮೂಳೆ ಸಮಸ್ಯೆ ನಿವಾರಿಸಲು ಓಲಿಕ್, ಲಿನೋಲಿಕ್, ರಿಸಿನೋಲಿಕ್ ಆಮ್ಲ ಮೂಳೆ ಸಮಸ್ಯೆ, ಸಂಧಿವಾತ ಸಮಸ್ಯೆಗಳ ನಿವಾರಣೆಗೆ ಸಹಕಾರಿ. ಈ ಎಣ್ಣೆಯನ್ನು ಬಿಸಿ ಮಾಡಿ ನೋವು ಉಂಟಾದ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಬೇಕು. ಬಳಿಕ ಉಗುರು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.
ಸೊಂಪಾದ ಕೇಶಕ್ಕೂ ಬೇಕು
ಹಿರಿಯರು ಕೇಶ ಕಾಂತಿಗೆ ಏನು ಬಳಕೆ ಮಾಡುತ್ತಿದ್ದರು ಎಂದು ಕೇಳಿದರೆ ಬರುವ ಉತ್ತರ ಹರಳೆಣ್ಣೆಯೆಂದು. ತಲೆ ಕೂದಲ ಬೇರಿಗೆ ತಾಕುವ ವರೆಗೂ ಎಣ್ಣೆ ಮಸಾಜ್ ಮಾಡಿ ಅರ್ಧ ಗಂಟೆ ಬಳಿಕ ತಲೆಕೂದಲನ್ನು ತೊಳೆಯಬೇಕು. ಇದರಲ್ಲಿ ಅಂಟಿನ
ಗುಣ ವಿರುವುದರಿಂದ ತೊಳೆಯುವುದು ಕಷ್ಟವಾದರೂ ಕೂದಲ ಆರೈಕೆಗೆ ಇದೊಂದು ಉತ್ತಮ ವಿಧಾನವೆನ್ನಬಹುದು. ಇದರಿಂದ ಕೂದಲು ಉದು ರುವಿಕೆ ಸಮಸ್ಯೆ ನಿವಾರಣೆಯಾಗುವುದಲ್ಲದೆ ಸಿಲ್ಕಿ ಸೊಂಪಾದ ಕೂದಲು ನಿಮ್ಮದಾಗುತ್ತದೆ.
ಮಲಬದ್ಧತೆ ನಿವಾರಿಸಲು
ಇದರ ಸೇವನೆಯಿಂದ ಹೊಟ್ಟೆಯಲ್ಲಿರುವ ಕಲ್ಮಶ ನಿವಾರಣೆಯಾಗಿ ಉತ್ತಮ ಜೀರ್ಣಕ್ರಿಯೆ ಪ್ರಾಪ್ತಿಯಾಗುತ್ತದೆ. ಮಲಬದ್ಧತೆ ಸಮಸ್ಯೆಗೂ ಇದು ಪರಿಣಾಮಕಾ ರಿಯಾಗಿದ್ದು, ಹರಳೆಣ್ಣೆಯ ನೈಸರ್ಗಿಕ ದಿಂದ ಸಮಸ್ಯೆ ನಿವಾರಣೆಯಾಗುತ್ತದೆ.
ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.