ಮ್ಯೂಚುವಲ್ ಫಂಡ್ ಸಲಹೆಗಳು
Team Udayavani, Dec 2, 2019, 5:17 AM IST
ಕಿರಿಯರು ಮ್ಯೂಚುವಲ್‌ಫಂಡ್‌ನಲ್ಲಿ ಹೂಡಿಕೆ ಮಾಡುವುದರ ಲಾಭ ಹಲವಿವೆ. ವಯಸ್ಸು ಚಿಕ್ಕದಾಗಿರುವುದರಿಂದ ಮ್ಯೂಚುವಲ್‌ಫಂಡ್‌ನ ಪೂರ್ಣ ಲಾಭವನ್ನು ಪಡೆಯಬಹುದು.
1 ಹೊಸದಾಗಿ ಬಂದಿರುವ ಮ್ಯೂಚುವಲ್‌ಫಂಡ್‌ಗಳಲ್ಲಿ ಹಣ ಹೂಡುವುದಕ್ಕಿಂತ, ಕೆಲ ವರ್ಷಗಳಷ್ಟು ಹಳತಾಗಿರುವ ಮ್ಯೂಚುವಲ್‌ಫಂಡ್‌ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ. ಹಳೆಯ ಯೋಜನೆಯಾದರೆ ಅದರ ಪೂರ್ವಾಪರ ವಿಚಾರಗಳು ತಿಳಿದು ಬರುವುದರಿಂದ ಹೂಡಿಕೆದಾರರಿಗೆ ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.
2 ಗುರಿ ಹಾಕಿಕೊಳ್ಳಿ- ಮ್ಯೂಚುವಲ್‌ಫಂಡ್‌ನಲ್ಲಿ ಹೂಡಿಕೆ ಮಾಡುವಾಗ ಉದ್ದೇಶ ಬಹಳ ಮುಖ್ಯ. ಮದುವೆ, ಮಕ್ಕಳ ವಿದ್ಯಾಭ್ಯಾಸ, ನಿವೃತ್ತಿ ಯೋಜನೆ ಹೀಗೆ ಇತ್ಯಾದಿ.
3 ಸಮಯ ಕೊಡಿ- ಯಾವುದೇ ಸಂಸ್ಥೆಯ ಶೇರುಗಳಾದರೂ ದೀರ್ಘ ಕಾಲ ಇಟ್ಟರೆ ಮಾತ್ರ ಹೆಚ್ಚಿನ ಲಾಭ ಪಡೆಯಲು ಸಾಧ್ಯ. ಎಲ್ಲ ವಿಭಾಗಗಳಲ್ಲಿಯೂ ಅದರದ್ದೇ ಆದ ರಿಸ್ಕ್ ಗಳಿರುತ್ತವೆ. ಹಾಗಾಗಿ ನಿಗದಿತ ಸಮಯದವರೆಗೆ ಪ್ರೀಮಿಯಂ ಕಟ್ಟಿದರೆ ಮಾತ್ರ ಮ್ಯೂಚುವಲ್‌ಫಂಡ್‌ನ ಸಂಪೂರ್ಣ ಲಾಭ ಪಡೆಯಬಹುದು. ಕನಿಷ್ಠ 5- 7 ವರ್ಷಗಳಷ್ಟಾದರೂ ಅವಧಿಯದ್ದಾಗಿದ್ದರೆ ಒಳ್ಳೆಯದು.
4 ಹೂಡಿಕೆದಾರರು ಪ್ರೀಮಿಯಂ ಪಾವತಿಸಲು ಎರಡು ವಿಧಾನಗಳನ್ನು ಅನುಸರಿಸಬಹುದಾಗಿದೆ. ಒಮ್ಮಿಂದೊಮ್ಮೆಲೇ ಒಟ್ಟಾಗಿ ದೊಡ್ಡ ಮೊತ್ತವನ್ನು ಕಟ್ಟಿಬಿಡುವುದು. ಎರಡನೆಯದು ವಾರ, ತಿಂಗಳು ಇಲ್ಲವೇ ಆರು ತಿಂಗಳಿಗೊಮ್ಮೆ ಕಟ್ಟುವುದು. ಪರಿಣತರ ಅಭಿಪ್ರಾಯದ ಪ್ರಕಾರ ಎರಡನೆಯ ವಿಧಾನವೇ ಅತ್ಯುತ್ತಮವಾದುದು.
5 ಮ್ಯೂಚುವಲ್‌ಫಂಡ್‌ಗಳಲ್ಲಿ ಹೂಡುವ ಹಣವನ್ನು ಆಯಾ ಸಂಸ್ಥೆಗಳು ಹಲವು ಕ್ಷೇತ್ರಗಳಲ್ಲಿ ಹೂಡುತ್ತವೆ. ಹೂಡಿಕೆದಾರ ತನ್ನ ಹಣ ಎಲ್ಲೆಲ್ಲಿ ಹೂಡಿಕೆಯಾಗುವುದೆಂಬ ಮಾಹಿತಿ ತಿಳಿದಿರಬೇಕು.
6 ಹೂಡುತ್ತಿರುವ ಮ್ಯೂಚುವಲ್‌ಫಂಡ್‌ಬೇರೆ ಬೇರೆ ಅವಧಿಗಳಲ್ಲಿ ಎಷ್ಟು ರಿಟರ್ನ್ಸ್ ತಂದುಕೊಡುತ್ತದೆ ಎನ್ನುವುದರ ಮಾಹಿತಿಯನ್ನು ಹೂಡಿಕೆದಾರ ತಿಳಿದುಕೊಳ್ಳಬೇಕು. ಇದರಿಂದ ಆಯಾ ಮ್ಯೂಚುವಲ್‌ಫಂಡ್‌ಅನ್ನು ಇತರೆ ಮ್ಯೂಚುವಲ್‌ಫಂಡ್‌ಗಳ ಜತೆ ಹೋಲಿಕೆ ಮಾಡಿಕೊಳ್ಳಲು ಸಹಾಯವಾಗುತ್ತದೆ.
7 ಹೂಡಿಕೆ ಮಾಡುತ್ತಿರುವ ಮ್ಯೂಚುವಲ್‌ಫಂಡ್ ತೆರಿಗೆ ಮುಕ್ತವೋ ಇಲ್ಲವೇ ತೆರಿಗೆ ಕಟ್ಟಬೇಕಾಗಿ ಬರುವುದೋ ಎಂಬ ಮಾಹಿತಿಯನ್ನು ತಿಳಿದಿರಬೇಕು.
- ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.