‘ಪೊಲೀಸರ ಜನಸ್ನೇಹಿ ಕಾರ್ಯಗಳಿಗೆ ಸಾರ್ವಜನಿಕ ಸಹಕಾರ’
Team Udayavani, Oct 15, 2018, 3:52 PM IST
ನರಿಮೊಗರು: ಅಪರಾಧ ಚಟುವಟಿಕೆ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಮಹತ್ತರವಾದ ಕಾರ್ಯಮಾಡುತ್ತಿದೆ. ಪುತ್ತೂರು ಪೊಲೀಸರು ಇಡೀ ಜಿಲ್ಲೆಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲಾಖೆ ಜನ ಸ್ನೇಹಿಯಾಗಿ ಕಾರ್ಯನಿರ್ವಹಿಸಿದರೆ ಜನರ ಬೆಂಬಲವೂ ಇದೆ ಎನ್ನುವುದಕ್ಕೆ ನರಿಮೊಗರು, ಮುಂಡೂರು ವ್ಯಾಪ್ತಿಯಲ್ಲಿ ಆದ ಅಭಿವೃದ್ಧಿಯೇ ಸಾಕ್ಷಿ ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ರವಿವಾರ ಸಂಜೆ ನರಿಮೊಗರು ಜಂಕ್ಷನ್ ಬಳಿ ಪುತ್ತೂರು ನಗರ ಪೊಲೀಸ್ ಠಾಣೆಯ ನೇತೃತ್ವದಲ್ಲಿ ಮುಂಡೂರು ಗ್ರಾ.ಪಂ., ಮೃತ್ಯುಂಜಯೇಶ್ವರ ದೇವಸ್ಥಾನ ಮುಂಡೂರು, ಸಂಘಸಂಸ್ಥೆಗಳು ಹಾಗೂ ದಾನಿಗಳ ನೆರವಿನಿಂದ ಅಳವಡಿಸಲಾದ ಸಿ.ಸಿ. ಕೆಮರಾ ಹಾಗೂ ಹೈಮಾಸ್ಟ್ ವಿದ್ಯುದ್ದೀಪ ಮತ್ತು ಸಹಕಾರಿ ಧುರೀಣ ದಿ| ಗಣಪತಿ ಶೆಣೈ ಹೆಸರಿನಲ್ಲಿ ಸಾರ್ವಜನಿಕರ ವತಿಯಿಂದ ರಚಿಸಲಾದ ಪ್ರಯಾಣಿಕರ ತಂಗುದಾಣದ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೆಳಂದೂರು ಈಡನ್ ಗ್ಲೋಬಲ್ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಕೆ.ಎಂ. ಅಬೂಬಕ್ಕರ್ ಸಿದ್ದಿಕ್ ಮೋಂಟುಗೋಳಿ ಮಾತನಾಡಿ, ದೇಶ ಪ್ರೇಮವೆಂದರೆ ಮಣ್ಣಿನ ರಕ್ಷಣೆ ಅಲ್ಲ, ಸಕಲ ಜನರ ರಕ್ಷಣೆ ಹಾಗೂ ಮಾನವ ಪ್ರೇಮ, ಸಾಮರಸ್ಯದ ಬದುಕು. ಆಡಳಿತ ವ್ಯವಸ್ಥೆಯೊಂದಿಗೆ ಜನರ ಸಹಕಾರವಿದ್ದರೆ ಉನ್ನತ ಕಾರ್ಯ ಮಾಡಬಹುದು ಎಂದರು.
ಬೀಟ್ ಪೊಲೀಸ್ ಶ್ರಮಕ್ಕೆ ಶ್ಲಾಘನೆ
ತಾ.ಪಂ. ಸದಸ್ಯ ಶಿವರಂಜನ್ ಮಾತನಾಡಿ, 8 ಕಡೆಗಳಲ್ಲಿ 30 ಸಿಸಿ ಕೆಮರಾವಮನ್ನು ಅಳವಡಿಸುವ ಮೂಲಕ ಬೀಟ್ ಪೊಲೀಸ್ ಯಾವ ರೀತಿಯಲ್ಲಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬಹುದು ಎಂಬುದನ್ನು ನರಿಮೊಗರು ಬೀಟ್ ಪೊಲೀಸ್ ಹರೀಶ್ ತೋಟತ್ತಡ್ಕ ಅವರು ತೋರಿಸಿಕೊಟ್ಟಿದ್ದಾರೆ. ಇವರು ಜಿಲ್ಲೆಯಲ್ಲೇ ಅತ್ಯುತ್ತಮ ಬೀಟ್ ಪೊಲೀಸ್ ಎಂದು ಅಭಿನಂದಿಸಿದರು. ತಾ.ಪಂ. ಸದಸ್ಯ ಪರಮೇಶ್ವರ ಭಂಡಾರಿ ಮಾತನಾಡಿ, ಗಣಪತಿ ಶೆಣೈ ಅವರ ಮಾರ್ಗದರ್ಶನದಲ್ಲಿ ಬೆಳೆದವರು ನಾವು. ಅವರ ಹೆಸರಿನಲ್ಲಿ ಬಸ್ ತಂಗುದಾಣ ನಿರ್ಮಾಣವಾದದ್ದು ಉತ್ತಮ ವಿಚಾರ ಎಂದರು.
ಸಹಕಾರವಿದ್ದರೆ ಉತ್ತಮ ಕಾರ್ಯ
ಪುತ್ತೂರು ವೃತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಮಾತನಾಡಿ, ಸಿಸಿ ಕೆಮರಾ, ಹೈಮಾಸ್ಟ್ ದೀಪ ಅಳವಡಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಇಲಾಖೆಯ ಜತೆ ಸಾರ್ವಜನಿಕರ ಸಹಕಾರವಿದ್ದರೆ ಉತ್ತಮ ಕಾರ್ಯನಿರ್ವಹಣೆ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಮುಂಡೂರು ಗ್ರಾ.ಪಂ. ಅಧ್ಯಕ್ಷ ವಸಂತ ಎಸ್.ಡಿ. ಮಾತನಾಡಿ, ಜನಸ್ನೇಹಿ ಅಧಿಕಾರಿಗಳಿಂದ ಜನೋಪಯೋಗಿ ಕಾರ್ಯ ಮಾಡಬಹುದು ಎಂಬುದನ್ನು ಬೀಟ್ ಪೊಲೀಸ್ ಹರೀಶ್ ತೋರಿಸಿಕೊಟ್ಟಿದ್ದಾರೆ ಎಂದರು.
ನರಿಮೊಗರು ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ನರಿಮೊಗರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಬಾಬು ಶೆಟ್ಟಿ ವೀರಮಂಗಲ, ಮುಂಡೂರು ಮೃತ್ಯುಂಜಯೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್, ಪುತ್ತೂರು ನಗರ ಠಾಣೆ ಎಎಸ್‌ಐ ಶ್ರೀಧರ್, ತಾ.ಪಂ. ಮಾಜಿ ಸದಸ್ಯ ಮೋಹನ್ ರೈ ಉಪಸ್ಥಿತರಿದ್ದರು.
ಬಸ್ ತಂಗುದಾಣ ಸಹಿತ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡ ಕೆ. ಇಬ್ರಾಹಿಂ, ಬಿ.ಎಂ. ಇಬ್ರಾಹಿಂ, ಹರೀಶ್ ಪೂಜಾರಿ, ಇಸುಬು, ನಾಸಿರ್, ಜಯಂತ ಗೌಡ, ಶಿವಪ್ರಸಾದ್ ಬಜಪ್ಪಳ, ಇಸಾಕ್ ಮುಕ್ವೆ ಹಾಗೂ ನರಿಮೊಗರು ಸಿಎ ಬ್ಯಾಂಕ್ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಸಾರ್ವಜನಿಕರು ಬೀಟ್ ಪೊಲೀಸ್ ಹರೀಶ್ ಅವರನ್ನು ಸಮ್ಮಾನಿಸಿದರು. ಧನಂಜಯ ಗೌಡ, ಅಶ್ವಿನಿ ಬಿ.ಕೆ., ಉಸ್ಮಾನ್ ನೆಕ್ಕಿಲು, ಪ್ರಕಾಶ್ ಗೌಡ ಸೇರಾಜೆ, ನವೀನ್ ರೈ ಶಿಬರ, ವೇದನಾಥ ಸುವರ್ಣ, ದಿನೇಶ್ ಗೌಡ ಮಜಲು, ಕೃಷ್ಣ ಸಾಲ್ಯಾನ್ ಅತಿಥಿಗಳನ್ನು ಗೌರವಿಸಿದರು.
ಸುಭಾಶ್ಚಂದ್ರ ಶೆಣೈ ಬಜಪ್ಪಳ ಸ್ವಾಗತಿಸಿದರು. ಪ್ರವೀಣ್ ನಾೖಕ್ ಸೇರಾಜೆ ಪ್ರಸ್ತಾವನೆಗೈದರು. ಸ್ವಾತಿ ಪ್ರಾರ್ಥಿಸಿದರು. ಜಯರಾಮ ಗೌಡ ಸೇರಾಜೆ ವಂದಿಸಿದರು.ನರಿಮೊಗರು ಗ್ರಾ.ಪಂ. ಸದಸ್ಯ ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.