ವೈದ್ಯಕೀಯ ಕ್ಷೇತ್ರದ ಮುಖ್ಯ ದ್ವಾರ ನೀಟ್‌ ಪರೀಕ್ಷೆ


Team Udayavani, Feb 12, 2020, 5:00 AM IST

sds-26

ಪರೀಕ್ಷೆಯಲ್ಲಿ ರ್‍ಯಾಂಕ್‌ ಪಡೆದರೂ ಉನ್ನತ ಶಿಕ್ಷಣಕ್ಕಾಗಿ ಹೆಚ್ಚುವರಿ ಪರೀಕ್ಷೆಗಳನ್ನು ಎದುರಿಸಬೇಕಾದದ್ದು ಸದ್ಯದ ಸ್ಥಿತಿ. ಪಿಯುಸಿ ಬಳಿಕ ಎಂಜಿನಿಯರಿಂಗ್‌ , ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಲು ಸಿಇಟಿ, ನೀಟ್‌ ಅಂತಹ ಪರೀಕ್ಷೆಗಳನ್ನು ಎದುರಿಸುವ ಅನಿ ವಾರ್ಯ ವಿದ್ಯಾರ್ಥಿಗಳಿಗೂ ಇದೆ. ಈ ಕ್ಷೇತ್ರಗಳಿಗೆ ಕಾಲಿ ಡಲು ಈ ಪರೀಕ್ಷೆಗಳು ಮುಖ್ಯವಾದವು. ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಡಲು ನೀಟ್‌ ಪರೀಕ್ಷೆ ಬರೆಯಲೇಬೇಕು. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜ್ಞಾನ, ಅರ್ಹತೆಯನ್ನು ಅಳೆಯಲಾಗುತ್ತದೆ. ಈ ಹಿನ್ನೆಲೆ ಮೇ ತಿಂಗಳಿನಲ್ಲಿ ನೀಟ್‌ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಹೇಗೆ ಪೂರ್ವಸಿದ್ಧತೆ ನಡೆಸಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.

ಸ್ಮಾರ್ಟ್‌ ವರ್ಕ್‌ ಅಗತ್ಯ
ನೀಟ್‌ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯಲು ಕಠಿನ ಪರಿಶ್ರಮದ ಜತೆಗೆ ಸ್ಮಾರ್ಟ್‌ ವರ್ಕ್‌ ಸಹ ಅಗತ್ಯ. ಇತರ ಎಲ್ಲ ವಿಷಯಗಳಿಗಿಂತ ಜೀವಶಾಸ್ತ್ರದ ವಿಷಯದಲ್ಲಿ ಗಳಿಸಿದ ಅಂಕಗಳು ಅಭ್ಯರ್ಥಿಯ ರ್‍ಯಾಂಕ್‌ ನಿರ್ಧರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಜೀವಶಾಸ್ತ್ರ ವಿಷಯದಲ್ಲಿ ಕೇಳುವ ಶೇ.90 ರಷ್ಟು ಪ್ರಶ್ನೆಗಳಲ್ಲಿ 80ರಿಂದ 85ರಷ್ಟು ಪ್ರಶ್ನೆಗಳು NCERT ಪುಸ್ತಕ ಆಧಾರಿತವಾಗಿರುತ್ತವೆ. 30ರಿಂದ 35 ಪ್ರಶ್ನೆಗಳು ಒಂದು ಸಾಲಿನ ಪ್ರಶ್ನೆಗಳಾಗಿರುತ್ತವೆ. ಇತರ ಎಲ್ಲವೂ ಕಾನ್ಸೆಪ್ಟ್ ಆಧಾರಿತ ಮತ್ತು ಅಪ್ಲೆ„ಡ್‌ ಬಯೋಲಜಿ ಪ್ರಶ್ನೆಗಳಾಗಿರುತ್ತವೆ.

ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ
ಹೆಚ್ಚು ಅಂಕ ಗಳಿಸಲು ಹಿಂದಿನ ವರ್ಷದ ಪ್ರಶ್ನೆಪತ್ರಿಕೆ ಗಳನ್ನು ದಿನನಿತ್ಯ 2ರಿಂದ 3 ಗಂಟೆಗಳ ಕಾಲ ಬಿಡಿಸಿ. ಸಮಯ ಕೊಡುವುದರಲ್ಲಿ ಯಾವುದೇ ರಾಜಿ ಇಲ್ಲದಂತೆ ಅಭ್ಯಾಸ ನಡೆಸಬೇಕು.

ಸಾಮಾನ್ಯ ಪ್ರಶ್ನೆಗಳತ್ತ ಗಮನಹರಿಸಿ
ಹಿಂದಿನ ವರ್ಷಗಳ ಪರೀಕ್ಷೆಗಳಲ್ಲಿ ಕೇಳಿದ ಸಾಮಾನ್ಯ ಪ್ರಶ್ನೆಗಳು ಮತ್ತು ಆ ಅಧ್ಯಯನಗಳ ಬಗ್ಗೆ ಹೆಚ್ಚು ಗಮ ನಹರಿಸಿ. ಬಯೋಮೋಲಿಕ್ಯೂಲ್ಸ್‌, ಪಾಲಿಮರ್ಸ್‌, ಡೈಲಿ ಆ್ಯಂಡ್‌ ಎನ್ವಿರಾನ್‌ಮೆಂಟ್‌ ಕೆಮಿಸ್ಟ್ರಿ ಬಗ್ಗೆ ಯಾವಾಗಲೂ ಪ್ರಶ್ನೆಗಳು ಇದ್ದೇ ಇರುತ್ತವೆ. ಈ ಬಗ್ಗೆ ಹಲವರು ಅಸಡ್ಡೆ ಮಾಡುತ್ತಾರೆ. ಆದರೆ ಈ ವಿಷಯಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯಬಹುದು.

ರೆಫ‌ರೆನ್ಸ್ ಪುಸ್ತಕಗಳನ್ನು ಓದಲು ಮರೆಯದಿರಿ
ಹೆಚ್ಚು ಪ್ರಶ್ನೆಗಳಿಗೆ ಉತ್ತರ ತಿಳಿಯಲು ಉತ್ತಮ ರೆಫ‌ರೆನ್ಸ್ ಬುಕ್‌ ಅತ್ಯಗತ್ಯ. ವಿಶೇಷವಾಗಿ ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರಗಳಿಗೆ ಉತ್ತಮ ಪಠ್ಯ ಅಗತ್ಯ. ಜೀವಶಾಸ್ತ್ರದ ವಿಷಯಕ್ಕೆ ಸಂಬಂಧಿಸಿದಂತೆ NCERT ಪುಸ್ತಕಗಳನ್ನು ಓದಿ.

ಟೆಸ್ಟ್ ಸೀರೀಸ್‌ ತೆಗೆದುಕೊಳ್ಳಿ
ಕೋಚಿಂಗ್‌ ಪಡೆಯದೇ ಓದಿದರೂ ಪರವಾಗಿಲ್ಲ. ಆದರೆ ಸ್ವಲ್ಪ ಮಟ್ಟಿಗಾದರೂ ಟೆಸ್ಟ್ ಸೀರೀಸ್‌ ತೆಗೆದುಕೊ ಳ್ಳುವುದು ಹೆಚ್ಚು ಅಂಕ ಗಳಿಸುವ ದೃಷ್ಟಿಯಿಂದ ಒಳ್ಳೆಯದು. ಭೌತಶಾಸ್ತ್ರ ಕ್ಲಿಷ್ಟಕರದ ವಿಷಯ ಎಂಬುದು ನಿಜ. ಆದರೆ ಕೆಮಿಸ್ಟ್ರಿ ಮತ್ತು ಬಯೋಲಜಿ ವಿಷಯಗಳನ್ನು ಪಕ್ಕಕ್ಕೆ ಸರಿಸಿ, ಹೆಚ್ಚು ಒಂದೇ ವಿಷಯವನ್ನು ಓದುವುದು ಒಳ್ಳೆಯದಲ್ಲ.

ಈ ಅಧ್ಯಯನಗಳ ಅಭ್ಯಾಸ ಮರೆಯಬೇಡಿ
ಪ್ರಥಮ ಮತ್ತು ದ್ವಿತೀಯ ಪಿಯುಸಿ ಎರಡರಲ್ಲೂ ಕೆಮಿಸ್ಟ್ರಿ ವಿಷಯದ ಕೊನೆ ಅಧ್ಯಯನ ಎಕೋಲಜಿ ಮತ್ತು ಬಯೋಲಜಿಯನ್ನು ಓದುವುದನ್ನು ಮರೆಯಬೇಡಿ. ಮೈಕ್ರೋ ಬಯೋಲಜಿ ಮತ್ತು ಬಯೋಟೆಕ್ನಾಲಜಿ ಮತ್ತು ಫಿಸಿಯೋಲಜಿ ಬಗ್ಗೆ ಹೆಚ್ಚು ಗಮನಹರಿಸಿ. ಮಾರ್ಡನ್‌ ಫಿಸಿಕ್ಸ್ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯಬಹುದಾಗಿದ್ದು, ಇದು ಕೆಮಿಸ್ಟ್ರಿ ಪಠ್ಯಕ್ಕೂ ಸಹಾಯಕವಾಗುತ್ತದೆ. ಕಳೆದ ಮೂರು ವರ್ಷಗಳಿಂದ ತರಂಗ ದೃಗ್ವಿಜ್ಞಾನ ಬಗ್ಗೆ ಕೇಳಲಾಗುತ್ತಿದೆ. ಇದರ ಬಗ್ಗೆಯೂ ಅಧ್ಯಯನ ಮುಖ್ಯ.

ನೀಟ್‌ ಪರೀಕ್ಷೆಗೆ ಅರ್ಹತೆ
ಸರಕಾರಿ ಅಥವಾ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇನ್ನಿತರ ಯಾವುದೇ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಾವಕಾಶ ಕಲ್ಪಿಸುವ ಪರೀಕ್ಷೆಯೇ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌). ಎಂಬಿಬಿಎಸ್‌, ಬಿಡಿಎಸ್‌ ಅಥವಾ ಸ್ನಾತಕೋತ್ತರ ಕೋರ್ಸ್‌ ಎಂ.ಡಿ., ಎಂ.ಎಸ್‌. ಅಭ್ಯಸಿಸಲು ಬಯಸುವ ವಿದ್ಯಾರ್ಥಿ ಗಳಿಗೆ ಇದೊಂದು ಪ್ರವೇಶ ಪರೀಕ್ಷೆ. ನೀಟ್‌ ಪರೀಕ್ಷೆಯನ್ನು ನ್ಯಾಶನಲ್‌ ಟೆಸ್ಟಿಂಗ್‌ ಏಜೆನ್ಸಿ (ಎನ್‌ಟಿಎ) ನಡೆಸಿಕೊಡುತ್ತದೆ. ಎನ್‌ಟಿಎಯು ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ವಯಸ್ಸು, ಅರ್ಹತೆ ಎಲ್ಲವನ್ನೂ ನಿರ್ಧರಿಸುತ್ತದೆ. ನೀಟ್‌ ಪರೀಕ್ಷೆ ಜಾರಿಯಾದ ಅನಂತರ ಈ ಹಿಂದೆ ಇದ್ದ ಅಲ್‌ ಇಂಡಿಯಾ ಪ್ರಿ ಮೆಡಿಕಲ್‌ ಟೆಸ್ಟ್ ಹಾಗೂ ಹಲವಾರು ರಾಜ್ಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ನಡೆಸುತ್ತಿದ್ದ ಪ್ರವೇಶ ಪರೀಕ್ಷೆಗಳು ರದ್ದುಗೊಂಡಿವೆ.

ಟಾಪ್ ನ್ಯೂಸ್

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Priyank-Kharghe

ನಾವು ಬೀದಿಗಿಳಿದರೆ ಬಿಜೆಪಿಯವರು ಮನೆ ಖಾಲಿ ಮಾಡಬೇಕು: ಸಚಿವ ಪ್ರಿಯಾಂಕ್‌

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kejiriwal

Delhi Election: ಆಪ್‌ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್‌ ಮೈತ್ರಿ: ಕೇಜ್ರಿವಾಲ್‌

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.