ಹೊಸ ವರ್ಷಕ್ಕೆ ಬರಲಿದೆ ಹೊಸ ಕಾರುಗಳು


Team Udayavani, Dec 13, 2019, 4:39 AM IST

sa-40

2019ಕ್ಕೆ ವಿದಾಯ ಹೇಳುವ ಸಮಯ ಹತ್ತಿರವಾಗುತ್ತಿದ್ದಂತೆ ಹೊಸ ವರ್ಷದ ನಿರೀಕ್ಷೆ ಗರಿ ಗೆದರಿದೆ. ಸಹಜವಾಗಿ ವಾಹನ ತಯಾರಿಕಾ ಕ್ಷೇತ್ರದತ್ತಲೂ ಅನೇಕ ನಿರೀಕ್ಷೆಗಳಿರುತ್ತವೆ. ಯಾವ ಕಂಪೆನಿ ಯಾವ ರೀತಿಯ ವಾಹನಗಳನ್ನು ಈ ವರ್ಷ ಬಿಡುಗಡೆಗೊಳಿಸುತ್ತದೆ ಎನ್ನುವುದು ಕುತೂಹಲ ಕೆರಳಿಸುವ ವಿಷಯ. ಈ ನಿಟ್ಟಿನಲ್ಲಿ 2020ರಲ್ಲಿ ಬಿಡುಗಡೆಗೊಳ್ಳಲಿರುವ ನಿರೀಕ್ಷಿತ ಕಾರು ಮಾದರಿಗಳ ಪರಿಚಯ ಇಲ್ಲಿದೆ.

ಹೊಸ ವರ್ಷ ಇನ್ನೇನು ಕೆಲ ದಿನಗಳಲ್ಲೇ ಆರಂಭವಾಗಲಿದ್ದು, ಈ ಋತುವಿನಲ್ಲಿ ಯಾವೆಲ್ಲ ಹೊಸ ಕಾರುಗಳು ಬಿಡುಗಡೆಯಾಗಲಿವೆ ಎಂಬ ಕುತೂಹಲ ಎಲ್ಲರಲ್ಲಿದೆ. ಅದರಲ್ಲಿಯೂ, ಯಾವೆಲ್ಲ ಕಂಪೆನಿಯ ಕಾರುಗಳು ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ, ಯಾವ ಕಾರಿನಲ್ಲಿ ಹೊಸ ವೈಶಿಷ್ಟ್ಯಗಳಿರಲಿದೆ ಎಂಬೆಲ್ಲ ಕುತೂಹಲಗಳು ಆಟೋಮೊಬೈಲ್‌ ಕ್ಷೇತ್ರದಲ್ಲಿದೆ. 2020ರಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುವ ಕೆಲವು ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅಲ್ಟ್ರೋಝ್
ಟಾಟಾ ಮೋಟಾರ್ಸ್‌ ಬಹುನಿರೀಕ್ಷಿತ ಹ್ಯಾಚ್‌ಬ್ಯಾಕ್‌ ಅಲ್ಟ್ರೋಝ್ ಕಾರಿನ ಟೀಸರ್‌ ಈಗಾಗಲೇ ಬಿಡುಗಡೆ ಮಾಡಿದ್ದು ಎಲ್ಲರ ಗಮನಸೆಳೆಯುತ್ತಿದೆ. ನೂತನ ಕಾರು 2020ರ ವೇಳೆ ಬಿಡುಗಡೆಯಾಗಲಿದೆ. ಈ ಕಾರು 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌, ಹೈ ವೇರಿಯೆಂಟ್‌ ಟಬೋìಚಾರ್ಜಡ್‌ ಎಂಜಿನ್‌ ಹೊಂದಿರಲಿದೆ. ಡೀಸೆಲ್‌ ವೇರಿಯೆಂಟ್‌ 1.5 ಲೀಟರ್‌ ಎಂಜಿನ್‌ ಹೊಂದಿರಲಿದೆ. ಇನ್ನು, ಬಿಎಸ್‌3 ಎಮಿಶನ್‌ ನಿಯಮಕ್ಕೆ ಒಳಪಟ್ಟಿದೆ.

ಟಿಯುವಿ 300 ಪ್ಲಸ್‌
ಮಹೀಂದ್ರಾ ಸಂಸ್ಥೆಯು ಟಿಯುವಿ 300 ಪ್ಲಸ್‌ ಎಂಬ ಕಾರನ್ನು 2020ರಲ್ಲಿ ಬಿಡುಗಡೆ ಮಾಡಲು ತಯಾರಾಗಿದೆ. ಈ ಕಾರು ಬಿಎಸ್‌-6 ಎಂಜಿನ್‌ ಹೊಂದಿದ್ದು, ಮುಂಭಾಗದಲ್ಲಿ ಹೊಸ ಆಕರ್ಷಕ ವಿನ್ಯಾಸವನ್ನು ಹೊಂದಿರಲಿದೆ. ಪವರ್‌ಫುಲ್‌ ಹೆಡ್‌ಲೈಟ್‌ನೊಂದಿಗೆ ಫಾಗ್‌ಲೈಟ್‌ ಕೂಡ ಅಳವಡಿಸಲಾಗಿದೆ. ಕಾರಿನ ಮುಂಭಾಗದಲ್ಲಿ ಬಂಪರ್‌ ಸುತ್ತ ವಿಭಿನ್ನ ಶೈಲಿಯಿಂದ ಕೂಡಿರಲಿದೆ.

ಕ್ಯುಸನಿ
ಅದೇ ರೀತಿ, ಟಾಟಾ ಸಂಸ್ಥೆಯ ಬಹುನಿರೀಕ್ಷಿತ 7 ಸೀಟರ್‌ ಎಸ್‌ಯುವಿ ಮಾದರಿಯ “ಕ್ಯುಸನಿ’ ಹೆಸರಿನ ಕಾರು 2020ರ ಮಾರ್ಚ್‌ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಸುಮಾರು 18 ಲಕ್ಷ ರೂ.ನಿಂದ 25 ಲಕ್ಷ ರೂ.ವರೆಗೆ ದರ ಇರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಟಾಟಾ ಸಂಸ್ಥೆಯ ಎಚ್‌2ಎಕ್ಸ್‌ (ಹಾರ್‌ ವ್ಹೀಲ್‌) ಮಾದರಿಯ ಕಾರು ಕೂಡ 2020ರಲ್ಲಿ ಬಿಡುಗಡೆಯಾಗಲಿದೆ.

ಬಿಎಸ್‌-6 ಹೋಂಡಾ ಸಿಟಿ
ಪ್ರಮುಖ ಕಾರು ಉತ್ಪಾದನಾ ಸಂಸ್ಥೆಯಾದ ಹೋಂಡಾವು ಈಗಾಗಲೇ ಬಿಎಸ್‌-6 ಹೋಂಡಾ ಸಿಟಿ ಪೆಟ್ರೋಲ್‌ ಕಾರನ್ನು ಬಿಡುಗಡೆಗೊಳಿಸಿದೆ. ಇದು ಸೆಡಾನ್‌ ಮಾದರಿಯ ಕಾರುಗಳಲ್ಲಿ ಒಂದಾಗಿದ್ದು, ಇದೀಗ 2020ರಲ್ಲಿ ಬಿಎಸ್‌-6 ನಿಬಂಧನೆಯಲ್ಲಿ ಡೀಸೆಲ್‌ ಆವೃತ್ತಿಯ ಕಾರು ಬಿಡುಗಡೆಗೊಳಿಸಲು ಸಜ್ಜಾಗಿದೆ. ಪೆಟ್ರೋಲ್‌ ಆವೃತ್ತಿಗಿಂತ ಡೀಸೆಲ್‌ ಆವೃತ್ತಿಗೆ ಬೆಲೆ ಕೊಂಚ ಜಾಸ್ತಿ ಇರಲಿದೆ ಎಂದು ಹೇಳ ಲಾಗುತ್ತಿದೆ.

ಕುತೂಹಲ ಮೂಡಿಸಿದೆ ಎಲೆಕ್ಟ್ರಿಕ್‌ ಕಾರುಗಳು
ಭಾರತವು ಎಲೆಕ್ಟ್ರಿಕ್‌ ವಾಹನ ಉತ್ಪಾದನೆಯತ್ತ ಮೊರೆ ಹೋಗುತ್ತಿದೆ. ಈಗಾಗಲೇ ಹಲವು ಎಲೆಕ್ಟ್ರಿಕ್‌ ವಾಹನಗಳು ಭಾರತದಲ್ಲಿ ಬಿಡುಗಡೆಯಾಗಿವೆ. 2020ರಲ್ಲಿ ಬಹುತೇಕ ಎಲ್ಲ ಕಾರು ಕಂಪೆನಿಗಳು ಎಲೆಕ್ಟ್ರಿಕ್‌ ವಾಹನವನ್ನು ಬಿಡುಗಡೆ ಮಾಡಲು ತಯಾರಾಗಿವೆ. ಈ ಬಗ್ಗೆ ಗ್ರಾಹಕರಲ್ಲಿ ಕುತೂಹಲ ಇದೆ. ಇದೀಗ ಟಾಟಾ ಮೋಟಾರ್ಸ್‌ ಕಂಪೆನಿ 2020ರಲ್ಲಿ ನೆಕ್ಸಾನ್‌ ಹೆಸರಿನ ಎಲೆಕ್ಟ್ರಿಕ್‌ ಕಾರನ್ನು ಬಿಡುಗಡೆ ಮಾಡುತ್ತದೆ. ಟಾಟಾ ಮೋಟಾರ್ಸ್‌ ಉತ್ಪಾದಿಸುವ ಕಾರುಗಳ ಪೈಕಿ ನೆಕ್ಸಾನ್‌ ಕಾರು ಮಾರಾಟದಲ್ಲಿ ದಾಖಲೆಯನ್ನು ಬರೆದಿದೆ. ಜತೆಗೆ ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. 2020ರ ವೇಳೆಗೆ ಎಲೆಕ್ಟ್ರಿಕ್‌ ಕಾರು ಮತ್ತೂಮ್ಮೆ ಹವಾ ಸೃಷ್ಟಿಸಲಿದೆ. ಅದೇ ರೀತಿ ಮೋರಿಸ್‌ ಗ್ಯಾರೇಜಸ್‌ (ಎಂಜಿ) ಸಂಸ್ಥೆಯು ವಿದ್ಯುತ್‌ ಚಾಲಿತ ಮತ್ತು ಅಂತರ್ಜಾಲ ವ್ಯವಸ್ಥೆಯನ್ನು ಹೊಂದಿದ ಎಸ್‌ಯುವಿ ಝಡ್‌ಎಸ್‌ ಕಾರನ್ನು ಬಿಡುಗಡೆ ಮಾಡಲು ತಯಾರಾಗಿದೆ. 2020ರಲ್ಲಿ ಗ್ರಾಹಕರಿಗೆ ದೊರಕಲಿದ್ದು, ಕಾರಿನ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ 340 ಕಿ.ಮೀ. ತನಕ ಪ್ರಯಾಣ ಮಾಡಬಹುದಾಗಿದೆ. 143 ಹಾರ್ಸ್‌ ಪವರ್‌ ಹೊಂದಿದ್ದು, ಕಾರು ಚಾಲನೆಗೊಂಡ 8.5 ಸೆಕೆಂಡ್‌ಗಳಲ್ಲಿ 100 ಕಿ.ಮೀ. ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿರಲಿದೆ ಎಂದು ಸಂಸ್ಥೆ ಹೇಳಿದೆ.
2020ರಲ್ಲಿ ಮಾರುತಿ ಸುಜುಕಿಯ ಮೊತ್ತ ಮೊದಲ ಎಲೆಕ್ಟ್ರಿಕ್‌ ಕಾರು ಮಾರುಕಟ್ಟೆಗೆ ಪರಿಚಯವಾಗಲಿದೆ. ಮಾರುತಿ ಸುಜುಕಿ ಮತ್ತು ಟೊಯೊಟಾ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್‌ ಕಾರಿನ ತಂತ್ರಜ್ಞಾನ ಅಭಿವೃದ್ಧಿಯಾಗಲಿದೆ. ಮಾರುತಿ ಸುಜುಕಿಯೇ ಈ ಕಾರಿನ ನಿರ್ಮಾಣ ಮತ್ತು ಮಾರಾಟವನ್ನು ಭಾರತದಲ್ಲಿ ನಡೆಸಲಿದೆ.

- ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.