ಹೊಸ ಅಡಿಕೆ ದರ ಅಲ್ಪ ಏರಿಕೆ
Team Udayavani, Dec 29, 2019, 4:41 AM IST
ಕಳೆದ ವಾರ ಇಳಿಕೆ ಕಂಡಿದ್ದ ಹೊಸ ಅಡಿಕೆ ಬೆಲೆಯಲ್ಲಿ ಈ ವಾರದ ಕೊನೆಗೆ 2 ರೂ. ಏರಿಕೆಯಾಗಿದೆ. ಹೊಸ ಅಡಿಕೆ ಕಳೆದ ವಾರ 255 ರೂ.ನಿಂದ ಇಳಿಕೆ ಕಂಡು 240 ರೂ. ಗೆ ಖರೀದಿಯಾಗಿತ್ತು. ಈ ವಾರ 242 ರೂ.ಗೆ ಖರೀದಿಯಾಗಿದೆ. ಹಳೆಯ ಅಡಿಕೆ (ಸಿಂಗಲ್ ಚೋಲ್) 260 -298 ರೂ. ತನಕ ಖರೀದಿಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಪಠೊರಾ 200-210 ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 90-110 ರೂ., ಕರಿಕೋಟು 80- 100 ರೂ. ಧಾರಣೆ ಪಡೆಯುತ್ತಿವೆ.
ಕಾಳುಮೆಣಸು ಯಥಾಸ್ಥಿತಿ
ಕಾಳುಮೆಣಸಿನ ಧಾರಣೆಯಲ್ಲಿ ಯಥಾಸ್ಥಿತಿ ಇದೆ. ಕೆಜಿ.ಗೆ 320 ರೂ. ತನಕ ಖರೀದಿಯಾಗಿದೆ. ಕೆಲ ಸಮಯಗಳ ಧಾರಣೆಯನ್ನೇ ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು. ಕಳೆದ ಎರಡು ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರೆದಿದೆ.
ತೆಂಗು ಧಾರಣೆ
ಈ ವಾರ ತೆಂಗಿನ ಕಾಯಿ ಧಾರಣೆಯಲ್ಲಿ ಯಥಾಸ್ಥಿತಿ ಇದೆ. ತೆಂಗಿನಕಾಯಿ ಸಣ್ಣ ಗಾತ್ರ (ಕೆ. ಜಿ.ಗೆ) 20-24 ರೂ., ತೆಂಗಿನಕಾಯಿ ಮಧ್ಯಮ ಗಾತ್ರ (ಕೆ.ಜಿ.ಗೆ) 25-29 ರೂ., ತೆಂಗಿನಕಾಯಿ ದೊಡ್ಡ ಗಾತ್ರ (ಕೆ. ಜಿ. ಗೆ) 30-33 ರೂ. ಗೆ ಖರೀದಿಯಾಗಿದೆ.
ಕೊಕ್ಕೋ ಸ್ಥಿರತೆ
ಈ ವಾರ ಕೊಕ್ಕೋ 50-53 ರೂ. ತನಕ ಖರೀದಿಯಾಗಿದೆ. ಕೃಷಿ ಉತ್ಪನ್ನಗಳ ಪೈಕಿ ಸ್ಥಿರತೆ ಸಾಧಿಸಿದ ಏಕೈಕ ಉತ್ಪನ್ನವೆಂದರೆ ಅದು ಕೊಕ್ಕೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕೆಲವು ವರ್ಷಗಳಿಂದ ಕೊಕ್ಕೋ ಬೆಳೆಯುವ ಪ್ರಮಾಣವೂ ಧಾರಣೆಯ ಸ್ಥಿರತೆಯ ಕಾರಣದಿಂದ ಹೆಚ್ಚಾಗಿದೆ. ಆದರೆ ಈಗ ಮಾತ್ರ ಬೆಲೆ ಇಳಿಕೆಯಲ್ಲಿದೆ.
ರಬ್ಬರ್ ಯಥಾಸ್ಥಿತಿ
ರಬ್ಬರ್ ಧಾರಣೆಯು ಈ ವಾರ 130 ರೂ.ಗೆ ಖರೀದಿಯಾಗಿದೆ. ಕರಾವಳಿ ಭಾಗದ ಬೆಳೆಗಾರರ ಪ್ರಮುಖ ವಾಣಿಜ್ಯ ಬೆಳೆ ಎಣಿಸಿಕೊಂಡಿರುವ ರಬ್ಬರ್ನ ಕೆಲವು ಸಮಯದ ಹಿಂದೆ ಚೇತೋಹಾರಿ ಏರಿಕೆಯನ್ನು ಕಂಡು ಬೆಳೆಗಾರರಲ್ಲಿ ಖುಷಿಯನ್ನು ತಂದಿತ್ತು. ರಬ್ಬರ್ ಬೆಲೆ ವರ್ಷಗಳ ಬಳಿಕ 150 ರೂ.ಗೆ ತಲುಪಿತ್ತು. ಆದರೆ ಕೆಲವು ವಾರಗಳಿಂದ ಇಳಿಕೆಯ ಹಾದಿಯಲ್ಲಿ ಸಾಗಿತ್ತು. ಆರ್ಎಸ್ಎಸ್ 4- 130 ರೂ., ಆರ್ಎಸ್ಎಸ್ 5 – 124 ರೂ.ಗೆ ಖರೀದಿಯಾಗಿದೆ.
– ರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.