![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 14, 2020, 5:52 AM IST
ಹೆಣ್ಣಿಗೆ ಸೀರೆಯೇ ಅಂದ. ಹೆಣ್ಮಕ್ಕಳು ಶುಭ, ಸಮಾರಂಭಗಳಲ್ಲಿ, ವಿಶೇಷ ಕಾರ್ಯಕ್ರಮಗಳಲ್ಲಿ ತಾವು ಅಂದವಾಗಿ ಕಾಣಲು ಹೆಚ್ಚಾಗಿ ಸೀರೆಗೆ ಮೊರೆಹೋಗುತ್ತಾರೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಯಾವೆಲ್ಲ ವಿಧದ ಸೀರೆಗಳು ಬಂದಿವೆ ಎಂಬುದನ್ನು ಕೂಡ ಗಮನಹರಿಸುತ್ತಾರೆ.
ಕಾಲ ಬದಲಾದಂತೆ ನಮ್ಮ ಜೀವನ ಕ್ರಮವೂ ಬದಲಾಗುತ್ತಿರುತ್ತದೆ. ಜೀವನಕ್ರಮ ಬದಲಾವಣೆಗಳಲ್ಲಿ ಹಳತುಗಳು ನಶಿಸಿ ಒಂದಷ್ಟು ಹೊಸತುಗಳು ಆಗಮಿಸುತ್ತವೆ. ಆಧುನಿಕ ದುನಿಯಾದಲ್ಲಿ ಫ್ಯಾಶನ್ ಲೋಕದ ಒಳಹೊರಗುಗಳ ತಿಳಿದು ಅಳವಡಿಸುವಿಕೆ ಜೀವನಕ್ರಮ ಬದಲಾವಣೆಯ ಬಹುಮುಖ್ಯ ಭಾಗವೂ ಆಗಿದೆ.
ಫ್ಯಾಶನ್ ಅದೇನೋ ಮೋಡಿ ಮಾಡುವ ಪದ. ಫ್ಯಾಶನ್ ಎಂದಾಗಲೇ ಯುವಕ ಯುವತಿಯರ ಚಿತ್ತ ಬಟ್ಟೆಯಂಗಡಿಯತ್ತ ಹೊರಳುತ್ತದೆ. ಧಿರಿಸಿನಲ್ಲಿ ಹೊಸತೇನಿದೆ ಎಂದು ಇಣುಕಿ ಬರುವ ಮನಸ್ಸಾಗದೇ ಇರದು. ಏಕೆಂದರೆ ಫ್ಯಾಶನ್ ಎಂದರೇ ಹಾಗೆ; ಒಂದಷ್ಟು ಕುತೂಹಲ ಜತೆಗೆ ಕೊಳ್ಳಲೇಬೇಕೆಂಬ ಆಸೆ.
ಸೀರೆಯಲ್ಲಿ ಫ್ಯಾಶನ್ ದುನಿಯಾ
ಹೆಣ್ಮಕ್ಕಳಿಗೂ ಫ್ಯಾಶನ್‌ಗೂ ಸ್ವಲ್ಪ ಜಾಸ್ತಿನೇ ನಂಟು. ಈಗಿನ ಹೊಸ ವೈವಿಧ್ಯದ ಫ್ಯಾಶನ್ ಡ್ರೆಸ್‌ಗಳಿಂದ ಹಿಡಿದು, ಸಾಂಪ್ರದಾಯಿಕ ಸೀರೆಯವರೆಗೆ ಹೊಸತೇನಿದೆ ಎಂದು ನೋಡುವ ತವಕ. ಹಾಗೆ ನೋಡಿದರೆ ಸಾಂಪ್ರದಾಯಿಕವಾಗಿ ಉಟ್ಟುಕೊಳ್ಳುವ ಸೀರೆಯಲ್ಲಿಯೂ ಫ್ಯಾಶನ್ ದುನಿಯಾ ಹೆಜ್ಜೆ ಇಟ್ಟಿದೆ. ಹೊಸ ತೆರನಾದ ವೈವಿಧ್ಯ ಸೀರೆಗಳ ಲೋಕವೇ ತೆರೆದುಕೊಂಡಿದೆ. 2020ರ ಸಾಲಿನಲ್ಲಿ ಸೀರೆಯಲ್ಲಿ ಏನೇನು ಫ್ಯಾಶನ್ ಬಂದಿದೆ ಎಂದು ತಿಳಿದುಕೊಳ್ಳುವ ಹೊತ್ತು.
ಸೀರೆಯಂಚಿನಲ್ಲಿ ಹೊಸ ವಿನ್ಯಾಸ
ಸೀರೆ ಉಡುವುದು ಒಂದು ಕಲೆ. ತೆಳ್ಳಗೆ ಬಳುಕುವ ಬಳ್ಳಿಯಂತೆ ಸೀರೆ ಉಡುವುದೆಂದರೆ ಯುವತಿಯರಿಗೆ ಅಚ್ಚುಮೆಚ್ಚು. ಸಪೂರ ಸೆರಗು ಹಿಡಿದು ಸೀರೆ ಉಟ್ಟರೆ ಸೌಂದರ್ಯ ಇಮ್ಮಡಿಸುತ್ತದೆ. ಈ ಸೆರಗಿನ ಅಂಚಿನಲ್ಲಿ ಸ್ವಲ್ಪ ಬಟ್ಟೆಯನ್ನು ವೈವಿಧ್ಯ ವಿನ್ಯಾಸದೊಂದಿಗೆ ಹೊಲಿದು ಹೊಸ ಮಾದರಿಯ ಸೀರೆಗಳನ್ನು ತಯಾರುಗೊಳಿಸಲಾಗಿದೆ. ಇದು ಸೆರಗು ಮತ್ತು ಕಾಲಿನ ಭಾಗದಲ್ಲಿ ಇರುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಬೇರೆ ಬೇರೆ ವಿನ್ಯಾಸದಲ್ಲಿ ಇದನ್ನು ಜೋಡಿಸಿರುವುದರಿಂದ ಸೀರೆಯುಟ್ಟ ನೀರೆಯ ಸೊಬಗು ಸುಂದರ.
ಬೆಲ್ಟ್ ಸೀರೆಯ ಮೋಡಿ
ಪಕ್ಕನೆ ನೋಡುವಾಗ ಇದು ಸೀರೆಯೋ, ಲೆಹಂಗಾ ಚೋಲಿಯೋ ಎನಿಸುವಷ್ಟರ ಮಟ್ಟಿಗೆ ಸೀರೆಯಲ್ಲಿ ಫ್ಯಾಶನ್ ಲೋಕ ತೆರೆದುಕೊಳ್ಳುತ್ತದೆ. ಇದು ಬೆಲ್ಟ್ ಸೀರೆ. ಹೇಗೆ ಜೀನ್ಸ್‌ಗೆ ಬೆಲ್ಟ್ ಧರಿಸಲಾಗುತ್ತದೆಯೋ ಹಾಗೆಯೇ ಸೀರೆಯಲ್ಲಿಯೂ ಬೆಲ್ಟ್ ಧರಿಸಿ ತೆರಳುವುದು ಇತ್ತೀಚೆಗೆ ಟ್ರೆಂಡ್ ಆಗುತ್ತಿದೆ. ಆದರೆ ಬಹುತೇಕರಿಗೆ ಬೆಲ್ಟ್ ಸೀರೆಯ ಬಗ್ಗೆ ಅಷ್ಟೇನೂ ತಿಳಿದಿಲ್ಲವಾದ್ದರಿಂದ ಎಲ್ಲ ಹೆಣ್ಮಕ್ಕಳನ್ನು ಇದು ತಲುಪಿಲ್ಲವಾದರೂ ಮೋಡಿ ಮಾಡಿರುವುದಂತೂ ಸತ್ಯ.
ಆಕರ್ಷಕ ಬ್ಲೌಸ್ ಡಿಸೈನ್
ಈ ವರ್ಷ ಸೀರೆಯಲ್ಲಿ ಬಹುತೇಕ ಹೊಸತುಗಳು ಬಂದಿವೆ. ಸೀರೆಗೊಪ್ಪುವ ಬ್ಲೌಸ್ ನಲ್ಲಿ ಯೂ ಆಕರ್ಷಕ ಡಿಸೈನ್‌ಗಳನ್ನು ಕಾಣಬಹುದು. ಬೆಲೂನ್ ಹ್ಯಾಂಡ್, ಬುಗ್ಗೆ ಯಾಕಾ ರದ ಹ್ಯಾಂಡ್, ಬೋಟ್ ನೆಕ್‌ನೊಂದಿಗೆ ಫುಲ್ ಸ್ಲಿàವ್ ಮತ್ತು ತ್ರೀಫೋರ್ತ್ ಹ್ಯಾಂಡ್ ಬ್ಲೌಸ್‌ಗಳು, ತ್ರೀ ಫೋರ್ತ್ ಹ್ಯಾಂಡ್‌ನ ಕೊನೆಯಲ್ಲಿ ಬುಗ್ಗೆಯಾಕಾರದ ವಿನ್ಯಾಸ, ಬ್ಲೌಸ್ ನಲ್ಲೇ ಮಾಲೆಯ ಎಳೆಗಳು.. ಹೀಗೆ ಫ್ಯಾಶನ್ ಲೋಕದಲ್ಲಿನ ಧಿರಿಸುಗಳ ವೆರೈಟಿ ಹತ್ತು ಹಲವು.
ರೆಡಿ ಟು ವಿಯರ್ ಸೀರೆ
ತರಾತುರಿಯಲ್ಲಿ ಸೀರೆ ಉಡುವುದೊಂದು ಸವಾಲೇ ಸರಿ. ತತ್‌ಕ್ಷಣಕ್ಕೆ ತೆರಳಬೇಕಾಗಿ ಬಂದಾಗ ಸೀರೆ ಸುತ್ತಿಕೊಳ್ಳುವುದು ಅಸಾಧ್ಯವಾಗುತ್ತದೆ. ಅಲ್ಲದೆ, ಸೀರೆ ಸುತ್ತೋಕೆ ಬಾರದ ಹೆಣ್ಣು ಮಕ್ಕಳಿಗೆ ಸೀರೆ ಹಿಡಿದುಕೊಂಡು ಗೆಳತಿಯ ಮನೆಗೋ, ಬ್ಯೂಟಿಪಾರ್ಲರ್‌ಗೊà ಹೋಗಬೇಕಾಗುತ್ತದೆ. ಅಂಥಹವರಿಗೆ ಚಿಂತೆಯೇ ಇಲ್ಲ ಎಂಬಂತೆ ರೆಡಿ ಟು ವಿಯರ್ ಸೀರೆ ಮಾರುಕಟ್ಟೆಗೆ ಬಂದಿದೆ. ಪ್ರಸ್ತುತ ಹೆಚ್ಚು ಮಾರಾಟ ಕಾಣುತ್ತಿರುವ ಸೀರೆಗಳ ಪೈಕಿ ಇದೂ ಒಂದು. ಸೆರಗು, ನೆರಿಗೆ ಹಿಡಿಯಬೇಕಾದ ಪ್ರಮೇಯ ಇದರಲ್ಲಿಲ್ಲ. ಏಕೆಂದರೆ, ಎಲ್ಲವೂ ಸಿದ್ಧಗೊಂಡೇ ಮಾರುಕಟ್ಟೆಗೆ ಕಾಲಿರಿಸಿರುವುದರಿಂದ ತತ್‌ಕ್ಷಣಕ್ಕೇ ಇದನ್ನು ಧರಿಸಿಕೊಂಡರಾಯಿತು.
-ಧನ್ಯಾ ಬಾಳೆಕೆಜೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.