ಭಯ ಬೇಡ ಬ್ರೇಕ್‌ನ ಅನಂತರ…
Team Udayavani, Jan 21, 2019, 7:36 AM IST
ಕೆಲವು ವರ್ಷಗಳ ಕಾಲ ಯಾವುದೋ ಕಾರಣಕ್ಕಾಗಿ ಕೆಲಸಕ್ಕೆ ಗುಡ್‌ಬೈ ಹೇಳಿ, ಒಂದಿಷ್ಟು ಕಾಲದ ಅನಂತರ ಮತ್ತೇ ಕೆಲಸಕ್ಕೆ ಮರಳಬೇಕೆನ್ನುವ ಮಹಿಳೆಯರ ರೆಸ್ಯೂಮ್ ಅನ್ನು ಯಾವ ಕಂಪೆನಿಯೂ ಸೇರಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂಬ ಮಾತು ಆಗಾಗ ಕೇಳಿಬರುತ್ತದೆ. ಅದರಲ್ಲೂ ತಂತ್ರಜ್ಞಾನ, ವಿಜ್ಞಾನ ಹಾಗೂ ಕೌಶಲಾಧಾರಿತ ಉದ್ಯೋಗಗಳಿಗಂತೂ ಸೇರಿಸಿಕೊಳ್ಳುವುದಿಲ್ಲ ಎಂಬ ಅಪವಾದ ಉಂಟು. ಮಹಿಳೆಯರು ಕೆಲಸಕ್ಕಾಗಿ ಅಲೆದಾಡಿ ಸುಸ್ತಾಗಿರುತ್ತಾರೆ. ಇದರಿಂದಾಗಿ ಹಲವರ ವೃತ್ತಿಪರ ಜೀವನವು ಅರ್ಧಕ್ಕೆ ನಿಂತು ಬಿಡುತ್ತದೆ.
ಈ ಬಗ್ಗೆ ಚಿಂತಿಸುವುದು ಬೇಡ. ಏಕೆಂದರೆ ಯಾರಲ್ಲಿ ಕೌಶಲ, ಜ್ಞಾನ ಹಾಗೂ ನವನವೀನತೆ ಇರುತ್ತದೆಯೋ ಅವರಿಗೆ ಅವಕಾಶಗಳು ಮುಕ್ತವಾಗಿರುತ್ತವೆ. ಅಲ್ಪ ವಿರಾಮದ ಅನಂತರ ಮತ್ತೂಮ್ಮ ಕೆಲಸಕ್ಕೆ ಸೇರಿಕೊಳ್ಳುವಾಗ ಕೆಲವೊಂದಿಷ್ಟು ಗೊಂದಲಗಳು ಆಗುವುದು ಸಾಮಾನ್ಯ. ಹಾಗಂತ ಹೇಳಿ, ಹಾಗೆಯೇ ಕುಳಿತುಕೊಳ್ಳುವುದು ಸರಿಯಲ್ಲ. ಇರುವ ಗೊಂದಲಗಳನ್ನು ಪ್ರಯತ್ನಪೂರ್ವಕವಾಗಿ ಸರಿಪಡಿಕೊಳ್ಳಬೇಕು. ಹಾಗಾಗಿಯೇ ಕೆಲವೊಂದಿಷ್ಟು ಸರಳ ಉಪಾಯಗಳನ್ನು ಅನುಸರಿಸುವುದು ಆವಶ್ಯಕ. ಈ ಉಪಾಯಗಳು ಈ ಕೆಳಕಂಡಂತಿವೆ.
1 ಇಂದಿನ ಬಹುತೇಕ ಐಟಿ- ಬಿಟಿ ಕಂಪೆನಿಗಳು ನಮ್ಮಲ್ಲಿನ ಕೌಶಲಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ಈ ಕಾರಣಕ್ಕಾಗಿ ಕೌಶಲವನ್ನು ವೃದ್ಧಿಸಿಕೊಳ್ಳಬೇಕು. ಮುಖ್ಯವಾಗಿ ವರ್ತಮಾನದ ಟ್ರೆಂಡ್‌ಗೆ ಅನುಗುಣವಾಗಿ ಯಾವ ರೀತಿಯ ಕೌಶಲ ಮುಖ್ಯ ಎಂಬುದನ್ನು ಅರಿತು. ಅದನ್ನು ವೃದ್ಧಿಸಿಕೊಳ್ಳಬೇಕು.
2 ವೃತ್ತಿಪರ ಬದುಕಿನಲ್ಲಿ ಸಂಪರ್ಕ ಎಂಬುದು ಬಹುಮುಖ್ಯ. ಹಾಗಾಗಿ ಈ ಹಿಂದೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು, ಗ್ರಾಹಕರು ಹಾಗೂ ವೃತ್ತಿಪರರ ಸಂಪರ್ಕವನ್ನು ಗಳಿಸಿಕೊಂಡಾಗ ಮತ್ತೇ ತಮ್ಮ ವೃತ್ತಿಪರ ಬದುಕಿಗೆ ಸಹಾಯಕವಾಗಬಹುದು.
3 ಕೌಶಲ ವೃದ್ಧಿಸಿಕೊಂಡ ಬಳಿಕ ಅದನ್ನು ಸರಿಯಾದ ಸಮಯದಲ್ಲಿ ಪ್ರಯೋಗಿಸಿದರೆ ವೃತ್ತಿಯಲ್ಲಿ ಯಶಸ್ಸು ಗಳಿಸಬಹುದು. ಸಂಸ್ಥೆಯ ಬೋರ್ಡ್ ಸಭೆ, ನಿರ್ದೇಶಕ ಆಡಳಿತ ಮಂಡಳಿಗಳ ಸಭೆಯಲ್ಲಿ ನಿಮ್ಮ ಆಲೋಚನೆ ಹಾಗೂ ಯೋಜನೆಗಳನ್ನು ಪ್ರಸ್ತುತಪಡಿಸಿದಾಗ, ನೀವು ವೃತ್ತಿಯಲ್ಲಿ ಯಶಸ್ವಿಯಾಗಬಹುದು.
4 ವೃತ್ತಿಪರತೆಯೂ ನಿರಂತರವಾದುದು. ಸಮಯಕ್ಕೆ, ವರ್ತಮಾನಕ್ಕೆ ಬದಲಾವಣೆಗಳನ್ನು ಬಯಸುತ್ತಿರುತ್ತದೆ. ಇದಕ್ಕೆ ತಕ್ಕನಾಗಿ ಉದ್ಯೋಗಿಗಳು ವಿಭಿನ್ನ, ವೈವಿಧ್ಯಮಯವಾಗಿರಬೇಕು. ಸದ್ಯದ ಟ್ರೆಂಡ್, ಯೋಚನೆಗಳು, ಸ್ಪರ್ಧೆ ಇವೆಲ್ಲವನ್ನೂ ಅರಿತು ಇದಕ್ಕೆ ತಕ್ಕುದಾದ ನವನವೀನವಾದ ವಿಭಿನ್ನವಾಗಿ ಅಲೋಚಿಸಿದಾಗ ಯಶಸ್ಸು ಖಂಡಿತ.
5 ವಿರಾಮದ ಬಳಿಕ ಮತ್ತೇ ಕೆಲಸಕ್ಕೆ ಮರಳಿದಾಗ ಕುಟುಂಬ ಹಾಗೂ ವೃತ್ತಿಯನ್ನು ನಿಭಾಯಿಸುವುದರ ಬಗ್ಗೆ ಗಮನ ಹರಿಸಬೇಕು. ಈ ಎರಡರ ಮಧ್ಯೆ ಯಾವುದೇ ಗೊಂದಲಗಳ ಉಂಟಾಗುತ್ತದೆ ಸರಿಯಾಗಿ ನಿಭಾಯಿಸಿದಾಗ ವೃತಿಯಲ್ಲಿ ಯಶಸ್ವಿಯಾಗಲು ಸಾಧ್ಯವಿದೆ.
6 ಕೆಲಸವನ್ನು ಸರಿಯಾಗಿ ನಿಭಾಯಿಸಿ, ಕಠಿನವಾದ ಸವಾಲುಗಳನ್ನು ಎದುರಿಸಬೇಕು ಹಾಗೂ ವೃತ್ತಿಯಲ್ಲಿ ಯಾವುದೇ ಶಿಫ್ಟ್ಗಳಲ್ಲಾದರೂ ಕೆಲಸ ನಿರ್ವಹಿಸಿಲು ಸಿದ್ಧವಾಗಿರಬೇಕು. ಆಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ. ಈ ಎಲ್ಲ ಅಂಶಗಳಿಂದ ಮಹಿಳೆಯೊಬ್ಬರು ಉದ್ಯೋಗದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಲು ಸಾಧ್ಯವಿದೆ. ಇವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಎಷ್ಟೇ ವರ್ಷಗಳ ಬಳಿಕ ನೀವು ಮರಳಿ ಬಂದ ರೆ ಕಂಪೆನಿಗಳು ನಿಮ್ಮನ್ನು ಆತ್ಮೀಯತೆಯಿಂದ ಸ್ವಾಗತಿಸುತ್ತವೆ. ಅಲ್ಲದೇ ಅವಕಾಶಗಳೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂಬುದು ಗಮನಾರ್ಹವಾದುದು.
ವೃತ್ತಿಯಲ್ಲಿ ಸವಾಲುಗಳನ್ನು ಎದುರಿಸುವ ಜತೆಗೆ ಕೆಲವೊಂದು ಅಂಶಗಳನ್ನು ರೂಢಿಸಿಕೊಳ್ಳುವುದು ಆವಶ್ಯಕ.
1 ದೃಢನಿರ್ಧಾರ
2 ವೈವಿಧ್ಯಮಯ ಕೌಶಲ
3 ಪ್ರತಿಷ್ಠಿತ ಕಂಪೆನಿಗಳ ಅರ್ಹತಾ ಪ್ರಮಾಣ ಪತ್ರ
4 ಹೆಚ್ಚಿನ ಸಂಪರ್ಕ
5 ರಿಚ್ ಪ್ರೋಫೈಲ್
6 ಉತ್ತಮ ಸಂವಹನ
7 ಸ್ಪರ್ಧಾತ್ಮಕತೆ
8 ಅರ್ಹ ಕಂಪೆನಿಗಳು ನೀಡುವ ತರಬೇತಿಗಳ ಪ್ರಮಾಣ ಪತ್ರ.
ಶಿವಲೀಲಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.