ಅಡಿಕೆ ಧಾರಣೆ ಚೇತರಿಕೆ
Team Udayavani, Sep 16, 2018, 2:49 PM IST
ಹಬ್ಬಗಳ ಸೀಸನ್ ಅಡಿಕೆ ಧಾರಣೆ ಏರಿಸುವಲ್ಲಿ ಸಫಲವಾಗಿದೆ. ಹೊಸ ಅಡಿಕೆ 275 ರೂ. ಹಾಗೂ ಹಳೆ ಅಡಿಕೆ ಕೆ.ಜಿ. ಗೆ 315 ರೂ. ನಂತೆ ಖರೀದಿ ನಡೆಸಿದೆ. ಚೌತಿ ಹತ್ತಿರ ಬರುತ್ತಿದ್ದಂತೆ ಅಡಿಕೆ ಉತ್ತಮ ಧಾರಣೆ ಪಡೆದುಕೊಳ್ಳಲು ಆರಂಭಿಸಿತು. ಕಳೆದ ಒಂದು ತಿಂಗಳಿನಿಂದ ಏರಿಕೆ ಹಾದಿಯಲ್ಲಿ ಕ್ರಮಿಸಿದ ಅಡಿಕೆ, ಈಗ 275 ರೂ. ಹಾಗೂ 315 ರೂ. ಗೆ ತಲುಪಿದೆ. ಇದರ ಹಿಂದಿನ ವಾರ ಕ್ರಮವಾಗಿ 265 ರೂ. ಹಾಗೂ 310 ರೂ. ನಲ್ಲಿತ್ತು. ಚೌತಿ ಬಳಿಕ ಹೊಸ ಅಡಿಕೆ ಮಾರುಕಟ್ಟೆಗೆ ಪ್ರವೇಶಿಸುವುದರಿಂದ ಧಾರಣೆ ಇಳಿಕೆ ಆಗುವ ಸಂಭವ ಹೆಚ್ಚು. ಆದರೆ ಮಾರುಕಟ್ಟೆ ಈಗ ಮೊದಲಿನಂತೆ ಇಲ್ಲ. ಆದ್ದರಿಂದ ಬೇಡಿಕೆಗೆ ಅನುಗುಣವಾಗಿ ಏರಿಳಿಕೆ ಕಾಣುವ ಸಂಭವವೇ ಹೆಚ್ಚು.
265 ರೂ. ನಲ್ಲಿದ್ದ ಹೊಸ ಅಡಿಕೆ 275 ರೂ. ಹಾಗೂ 310 ರೂ. ನಲ್ಲಿದ್ದ ಹಳೆ ಅಡಿಕೆ 315 ರೂ. ಗೆ ಏರಿಕೆ ಕಂಡಿವೆ. ಕಳೆದ ಕೆಲ ದಿನಗಳಿಂದ ಈ ಧಾರಣೆ 250 ರೂ. ಹಾಗೂ 310 ರೂ. ನಲ್ಲಿ ಸ್ಥಿರತೆ ಕಂಡಿತ್ತು. ಹಬ್ಬದವರೆಗೆ ಇನ್ನಷ್ಟು ಧಾರಣೆ ಏರಿಕೆ ಕಾಣುವ ನಿರೀಕ್ಷೆ ಇದೆ. ಕೃಷಿಕರ ನಿರೀಕ್ಷೆಯನ್ನು ಮಾರುಕಟ್ಟೆ ಸುಳ್ಳಾಗಿಸದು ಎಂಬ ಭರವಸೆಯಲ್ಲಿದ್ದಾರೆ ವರ್ತಕರು.
ಕಾಳುಮೆಣಸು ದರ ಇಳಿಕೆ
380 ರೂ. ವರೆಗೆ ತಲುಪಿದ್ದ ಕಾಳುಮೆಣಸು ಧಾರಣೆ ಈಗ 350-360 ರೂ. ಗೆ ಖರೀದಿ ನಡೆಸುತ್ತಿದೆ. ಹೊರರಾಜ್ಯಗಳ ವರ್ತಕರು ಕಾಳುಮೆಣಸಿಗೆ ಕರ್ನಾಟಕವನ್ನು ಅವಲಂಬಿಸುವುದರಿಂದ ಧಾರಣೆ ಏರಿಕೆ ಕಾಣಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಸ್ಥಳೀಯವಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ವ್ಯಕ್ತವಾಗದ ಕಾರಣ ಧಾರಣೆ ಇಳಿಕೆ ಕಂಡಿದೆ. ಇನ್ನೊಂದು ವಿಶ್ಲೇಷಣೆಯೂ ಕೇಳಿಬರುತ್ತಿದೆ. ಬೇಡಿಕೆಯಷ್ಟೇ ಕಾಳುಮೆಣಸನ್ನು ಕೃಷಿಕರು ಮಾರುಕಟ್ಟೆಗೆ ಬಿಡುತ್ತಿರುವುದು ಧಾರಣೆ ಇಳಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಕೊಕ್ಕೋ ದರ ಸ್ಥಿರ
ಕೊಕ್ಕೋ ಧಾರಣೆ ಹಿಂದಿನ ವಾರದಂತೆ ಈ ವಾರವು ಸ್ಥಿರತೆ ದಾಖಲಿಸಿದೆ. ಹಸಿ ಕೊಕ್ಕೋ ಕೆ.ಜಿ.ಗೆ 45 ರೂ. ಹಾಗೂ ಒಣ ಕೊಕ್ಕೋ ಕೆ.ಜಿ.ಗೆ 195 ರೂ. ನಂತೆ ಖರೀದಿ ನಡೆಸಿದೆ. ಮಳೆ ಬರುತ್ತಿದ್ದಂತೆ ಧಾರಣೆ ಇಳಿಕೆಗೆ ಆರಂಭಿಸಿದ್ದ ಹಸಿ ಕೊಕ್ಕೋ, ಈಗ 45 ರೂ. ಗೆ ತಲುಪಿದೆ. ಹಸಿ ಕೊಕ್ಕೋ ಇಷ್ಟು ಬೆಳವಣಿಗೆಗಳ ನಡುವೆ ಒಣ ಕೊಕ್ಕೋ ಮಾತ್ರ ಯಾವುದೇ ಬದಲಾವಣಗೆ ಜಗ್ಗಲಿಲ್ಲ.
ದರ ಹೆಚ್ಚಿಸಿಕೊಂಡ ತೆಂಗು
ತೆಂಗು ಧಾರಣೆ 34 ರೂ. ಗೆ ಏರಿಕೆ ಆಗಿದೆ. 32- 33 ರೂ. ನಲ್ಲಿದ್ದ ಧಾರಣೆ ವಾರಾಂತ್ಯಕ್ಕೆ 34 ರೂ. ಗೆ ತಲುಪಿದೆ. ಹಿಂದಿನ ವಾರದ ನಡುವೆ ಇದು 34 ರೂ. ಗೆ ತಲುಪಿತ್ತು. ಈಗ ಅದೇ ಧಾರಣೆ ಈ ವಾರಾಂತ್ಯದಲ್ಲಿ ತಲುಪಿದೆ. ಮಾರುಕಟ್ಟೆ ದೃಷ್ಟಿಯಿಂದ ನೋಡುವುದಾದರೆ ತೆಂಗು ಧಾರಣೆ ಉತ್ತಮ ಹಂತದಲ್ಲಿ ಇರಬೇಕಾಗಿತ್ತು.
ರಬ್ಬರ್ ಧಾರಣೆ ಏರಿಳಿಕೆ
ಇನ್ನೊಂದು ಕಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರಬ್ಬರ್ ಆಮದಾಗಿರುವ ಪ್ರಭಾವವೋ ಏನೋ, ರಬ್ಬರ್ ಧಾರಣೆಯಲ್ಲಿ ಇಳಿಕೆ ದಾಖಲಾಗಿದೆ. 129.5 ರೂ. ನಲ್ಲಿದ್ದ ಆರ್‌ಎಸ್‌ಎಸ್ 4 ದರ್ಜೆ 129 ರೂ. ಗೆ, 126 ರೂ. ನಲ್ಲಿದ್ದ ಆರ್‌ಎಸ್‌ಎಸ್ 5 ದರ್ಜೆ 124.5 ರೂ. ನಲ್ಲಿ, 115 ರೂ. ನಲ್ಲಿದ್ದ ಲಾಟ್ 114 ರೂ. ಗೆ, 95 ರೂ. ನಲ್ಲಿದ್ದ ಸ್ಕ್ರಾಪ್ 1 ದರ್ಜೆ 91 ರೂ.ಗೆ, 88 ರೂ. ನಲ್ಲಿದ್ದ ಸ್ಕ್ರಾಪ್ 2 ದರ್ಜೆ 83 ರೂ. ಗೆ ಇಳಿಕೆಯಾಗಿದೆ. ರಬ್ಬರ್ ಧಾರಣೆಯಲ್ಲಿ ದೊಡ್ಡ ಮಟ್ಟಿನ ಇಳಿಕೆ ದಾಖಲಾಗಿರುವುದು ಕಳವಳಕಾರಿ.
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.