ಆಯಿಲ್‌, ಅವುಗಳ ಪರಿಶೀಲನೆ 


Team Udayavani, Dec 7, 2018, 1:55 PM IST

7-december-10.gif

ಪ್ರತಿಯೊಂದು ಕಾರು ಕೂಡ ಸುಸ್ಥಿತಿಯಲ್ಲಿರಬೇಕಾದರೆ, ಅದರಲ್ಲಿರುವ ವಿವಿಧ ಆಯಿಲ್‌ಗ‌ಳ ಮಟ್ಟವೂ ಸರಿಯಾಗಿ ಇರಬೇಕಾಗುತ್ತದೆ. ಆಯಿಲ್‌ ಮಟ್ಟ ಕಡಿಮೆಯಿದ್ದರೆ, ಕಾರುಗಳ ವಿವಿಧ ತಾಂತ್ರಿಕತೆಗಳು ಕೆಲಸ ಮಾಡುವುದಕ್ಕೆ ಸಮಸ್ಯೆಯಾಗುತ್ತದೆ. ಆದ್ದರಿಂದ ಕಾರಿನಲ್ಲಿರುವ ಪ್ರಮುಖ ಆಯಿಲ್‌ಗ‌ಳು ಮತ್ತು ಅವುಗಳ ಪರಿಶೀಲನೆಯನ್ನು ನಿಯಮಿತವಾಗಿ ಮಾಡುತ್ತಿರಬೇಕು.

ಎಂಜಿನ್‌ ಆಯಿಲ್‌
ಕಾರಿನ ಎಂಜಿನ್‌ ಸುಸ್ಥಿತಿಯಲ್ಲಿರಬೇಕಾದರೆ ಬಹುಮುಖ್ಯವಾದ ಆಯಿಲ್‌. ನಿಮ್ಮ ಕಾರಿನ ಬಳಕೆದಾರರ ಕೈಪಿಡಿಯಲ್ಲಿ ಹೇಳಿದ ರೀತಿ ಒಂದು ವರ್ಷಕ್ಕೆ ಅಥವಾ ಇಂತಿಷ್ಟು ಕಿ.ಮೀ.ಗಳಿಗೊಮ್ಮೆ ಇದನ್ನು ಬದಲಾವಣೆ ಮಾಡಬೇಕಾದ್ದು ತೀರ ಅಗತ್ಯ. ಇಲ್ಲದಿದ್ದರೆ ಕಾರಿನ ಎಂಜಿನ್‌ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ. ಎಂಜಿನ್‌ ವಿಫ‌ಲವಾಗಬಹುದು. ಕಾರಿನ ಎಂಜಿನ್‌ ಆಯಿಲ್‌ ಸುಸ್ಥಿತಿಯಲ್ಲಿದೆಯೇ ಎಂದು ಪರಿಶೀಲಿಸಲು ಎಂಜಿನ್‌ ಮೇಲ್ಭಾಗದಲ್ಲಿಯೇ ಒರಿಂಗ್‌ಕ್ಯಾಪ್‌ ಇರುವ ಡಿಪ್‌ಸ್ಟಿಕ್‌ (ಆಯಿಲ್‌ ಪರಿಶೀಲನಾ ಸಾಧನ)ವನ್ನು ತೆಗೆದು ನೋಡಬೇಕಾಗುತ್ತದೆ. ಆಯಿಲ್‌ ಕಪ್ಪಾಗದೇ, ನಿರ್ದಿಷ್ಟ ಪ್ರಮಾಣದಲ್ಲಿದ್ದರೆ ಆಯಿಲ್‌ ಸುಸ್ಥಿತಿಯಲ್ಲಿದೆ ಎಂದರ್ಥ. ಆಯಿಲ್‌ ಮಟ್ಟ ಕಡಿಮೆ ಇದ್ದರೆ, ಕಪ್ಪಾಗಿದ್ದರೆ ಬದಲಾಯಿಸಬೇಕು.

ಕೂಲೆಂಟ್‌
ಚಾಲನೆ ಸಂದರ್ಭ ಕಾರಿನ ಎಂಜಿನ್‌ ವಿಪರೀತ ಪ್ರಮಾಣದಲ್ಲಿ ಬಿಸಿಯಾಗುತ್ತದೆ. ಹೀಗೆ ಬಿಸಿಯಾಗುವುದನ್ನು ತಪ್ಪಿಸುವ ಕೆಲಸವನ್ನು ಕೂಲೆಂಟ್‌ ಮಾಡುತ್ತದೆ. ಕೂಲಂಟ್‌ ಆಯಿಲ್‌ ರೇಡಿಯೇಟರ್‌ ಮೂಲಕ ಹಾದು, ಎಂಜಿನ್‌ ನಿರ್ವಹಣೆ ಸುಗಮವಾಗಿ ಮಾಡುತ್ತದೆ. ಈ ಕೂಲಂಟ್‌ ಆಯಿಲ್‌ಗ‌ಳು ತುಸು ದೀರ್ಘ‌ಕಾಲ ಬಾಳಿಕೆ ಬರುತ್ತವೆ. ಸುಮಾರು 40-50 ಸಾವಿರ ಕಿ.ಮೀ.ಗಳಿಗೊಮ್ಮೆ ಇವುಗಳನ್ನು ಬದಲು ಮಾಡಿದರೆ ಸಾಕಾಗುತ್ತದೆ. ಆದರೆ ಪ್ರತಿ ಬಾರಿ ಸರ್ವಿಸ್‌ ವೇಳೆ ಅಥವಾ ಅನುಕೂಲವಿದ್ದಾಗ ಚಾಲಕರೇ ಇದನ್ನು ಪರಿಶೀಲಿಸುವುದು ಉತ್ತಮ. ರೇಡಿಯೇಟರ್‌ ಮೇಲ್ಭಾಗದಲ್ಲಿ ಕೂಲಂಟ್‌ ಕ್ಯಾನ್‌ ಇದ್ದು ಹಸಿರು ಬಣ್ಣದಲ್ಲಿ ಕೂಲಂಟ್‌ ಆಯಿಲ್‌ ಇರುತ್ತದೆ.

ಪವರ್‌ ಸ್ಟೀರಿಂಗ್‌ ಆಯಿಲ್‌
ಹೈಡ್ರಾಲಿಕ್‌, ಎಲೆಕ್ಟ್ರಾನಿಕ್‌ ವ್ಯವಸ್ಥೆಯ ಪವರ್‌ ಸ್ಟೀರಿಂಗ್‌ ಗಳಲ್ಲಿ ಈ ಮಾದರಿ ಆಯಿಲ್‌ಗ‌ಳು ಇರುತ್ತವೆ. ಇದರಿಂದ ಸುಲಭವಾಗಿ ಸ್ಟೀರಿಂಗ್‌ ತಿರುಗಿಸಲು ನೆರವಾಗುತ್ತದೆ. ಸ್ಟೀರಿಂಗ್‌ ಆಯಿಲ್‌ ನೋಡಲು ಇದಕ್ಕೂ ಡಿಪ್‌ಸ್ಟಿಕ್‌ ಇರುತ್ತದೆ. ಇದನ್ನು ತೆಗೆದು ಆಯಿಲ್‌ ಮಟ್ಟ ಸರಿ ಇದೆಯೇ ಎಂದು ನೋಡಬಹುದು. ಒಂದು ವೇಳೆ ಕಡಿಮೆ ಇದ್ದರೆ ನಿರ್ದಿಷ್ಟ ದರ್ಜೆಯ ಆಯಿಲನ್ನು ಹಾಕಬೇಕು. ಸುಮಾರು 80 ಸಾವಿರ 1 ಲಕ್ಷ ಕಿ.ಮೀ.ವರೆಗೆ ಪವರ್‌ಸ್ಟೀರಿಂಗ್‌ ಆಯಿಲ್‌ಗ‌ಳು ಕಡಿಮೆಯಾಗುವುದಿಲ್ಲ.  

ಬ್ರೇಕ್‌ ಆಯಿಲ್‌
ಎಲ್ಲಾ ರೀತಿಯ ಆಧುನಿಕ ಕಾರುಗಳಲ್ಲಿ ಬ್ರೇಕ್‌ ಆಯಿಲ್‌ ಮುಖ್ಯ ವಸ್ತು. ಬ್ರೇಕ್‌ ಪೆಡಲ್‌ ಮತ್ತು ಬ್ರೇಕ್‌ನ ಮಧ್ಯೆ ಇದು ಸಂಪರ್ಕ ಕಲ್ಪಿಸುತ್ತದೆ. ಪೆಡಲ್‌ ಒತ್ತಿದ ಕೂಡಲೇ ಒತ್ತಡ ಉಂಟುಮಾಡಿ ಬ್ರೇಕ್‌ ಹಾಕುವಂತೆ ಮಾಡುತ್ತದೆ. ಕೆಲವು ಕಾರುಗಳಲ್ಲಿ ಬ್ರೇಕ್‌ ಆಯಿಲ್‌ ನೋಡಲು ಡ್ಯಾಶ್‌ ಬೋರ್ಡ್ ನಲ್ಲೇ ಪ್ರತ್ಯೇಕ ಇಂಡಿಕೇಟರ್‌ ಗಳು ಇರುತ್ತವೆ. ಇಲ್ಲದಿದ್ದರೆ ಪರಿಣತರು ಇದರ ಪರಿಶೀಲನೆ ನಡೆಸುತ್ತಾರೆ. ಪ್ರತಿ ಸರ್ವೀಸ್‌ ನಲ್ಲೂ ಬ್ರೇಕ್‌ ಆಯಿಲ್‌ ಮಟ್ಟ ಸರಿಯಿದೆಯೇ ಎಂದು ಪರಿಶೀಲಿಸುವುದು ಉತ್ತಮ. ಬ್ರೇಕ್‌ ಆಯಿಲ್‌ ಕಡಿಮೆಯಿದ್ದರೆ ಕೂಡಲೇ ಹಾಕಬೇಕು. ಆಯಿಲ್‌ ಕಡಿಮೆಯಿದ್ದರೆ ಪರಿಣಾಮಕಾರಿ ಬ್ರೇಕಿಂಗ್‌ ಸಾಧ್ಯವಾಗದು.

ಟ್ರಾನ್ಸ್‌ಮಿಷನ್‌ ಆಯಿಲ್‌
ಆಧುನಿಕ ಕಾರುಗಳಲ್ಲಿ ಟ್ರಾನ್ಸ್‌ಮಿಷನ್‌ ಆಯಿಲ್‌ಗ‌ಳು ಸಾಮಾನ್ಯವಾಗಿರುತ್ತವೆ. ಗಿಯರ್‌ ಹಾಕುವ ಮಾದರಿಯಲ್ಲಿ ಹೆಚ್ಚು ಶಾಖ ಉತ್ಪತ್ತಿಯಾಗುತ್ತದೆ. ಜತೆಗೆ ಮೆಕ್ಯಾನಿಕಲ್‌ ಬಿಡಿಭಾಗಗಳ ಸವೆತ, ಘರ್ಷಣೆ ಹೆಚ್ಚು. ಇದನ್ನು ತಪ್ಪಿಸಲು ಮತ್ತು ಸುಗಮವಾಗಿ ಗಿಯರ್‌ ಬದಲಾಯಿಸಲು ಟ್ರಾನ್ಸ್‌ಮಿಷನ್‌ ಆಯಿಲ್‌ ಇರುತ್ತದೆ. ಅಟೋ ಗಿಯರ್‌ ಹೊಂದಿದ ಕಾರುಗಳಲ್ಲಿ ಟ್ರಾನ್ಸ್‌ಮಿಷನ್‌ ಆಯಿಲ್‌ಗ‌ಳಿಗೆ ಹೆಚ್ಚು ಮಹತ್ವವಿದೆ. ಇದು ಅಟೋಮ್ಯಾಟಿಕ್‌ ಆಗಿ ಗಿಯರ್‌ ಹಾಕಲು ನೆರವು ನೀಡುತ್ತದೆ. ಟ್ರಾನ್ಸ್‌ಮಿಷನ್‌ ಆಯಿಲ್‌ ಕಡಿಮೆ ಇದ್ದರೆ ಸುಗಮವಾಗಿ ಆಟೋಮ್ಯಾಟಿಕ್‌ ಗಿಯರ್‌ ವ್ಯವಸ್ಥೆ ಕಾರ್ಯನಿರ್ವಹಿಸುವುದಿಲ್ಲ. ಹಾಗೆಯೇ ಗಿಯರ್‌ ಹೊಂದಿದ ವ್ಯವಸ್ಥೆಯಲ್ಲೂ ಸುಗಮವಾಗಿರದೆ ಗಿಯರ್‌ ಹಾಕುವುದು ಕಷ್ಟವಾಗುತ್ತದೆ. ವಾಹನದ ಸರ್ವೀಸ್‌ ವೇಳೆ ಇದರ ಪರಿಶೀಲನೆ ಅಗತ್ಯ.

 ಈಶ

ಟಾಪ್ ನ್ಯೂಸ್

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

20-

Burhan Wani; ಬುರ್ಹಾನ್‌ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್‌

19-

IED explodes: ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ: ಮೂರು ಕರಡಿಗಳು ಸಾವು

18-

Formula E race; ಫಾರ್ಮುಲಾ-ಇ ರೇಸ್‌ ಪ್ರಕರಣ: ಕೆಟಿಆರ್‌ ಮೇಲೆ ಎಸಿಬಿ ಎಫ್ಐಆರ್‌

17-gdp

GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.