ಹಳೆ ವಸ್ತುಗಳಿಗೆ ಮರುಜೀವ

Team Udayavani, Jun 9, 2018, 3:36 PM IST

9-june-14.jpg

ಮನೆಯನ್ನು ಸಿಂಗಾರಗೊಳಿಸುವುದು ಒಂದು ಅಪರೂಪದ ಸೃಜನಾಶೀಲ ಕಲೆ. ವೇಸ್ಟ್‌ ಎಂದು ಬಿಸಾಡುವ ತ್ಯಾಜ್ಯ, ಮನೆಯ ಅಲಂಕಾರದಲ್ಲಿ ಕಸ, ಪ್ಲಾಸ್ಟಿಕ್‌, ಗಾಜಿನ ಬಾಟಲಿಗಳು ಇಂತಹ ಯಾವುದೇ ವಸ್ತುಗಳಿಗೆ ಜೀವ ತುಂಬುವುದು ಅಪರೂಪದ ಕಲೆಯಾಗಿದೆ.  ಈ ಕಲೆಯ ಬಗ್ಗೆ ತಿಳಿದುಕೊಂಡರೆ ಸಾಕು, ಮನೆಯ ಅಂದವನ್ನು ಕೇವಲ ಒಂದು ರೂ. ವೆಚ್ಚ ಮಾಡದೇ ತಮ್ಮ ಸೃಜನಾಶೀಲತೆಯಿಂದ ಸಿಂಗರಿಸಿ ಮನೆಯನ್ನು ಶ್ರೀಮಂತಗೊಳಿಸಬಹುದು.

ಮನೆಯ ಅಚ್ಚುಕಟ್ಟು ನಿರ್ವಹಣೆಗೆ ಬಹುಮುಖ್ಯ ತಾಳ್ಮೆ. ಮನೆಯ ಶ್ರೀಮಂತಿಕೆಯನ್ನು ಹೆಚ್ಚಿಸುವುದಕ್ಕಿಂತ ಮುಖ್ಯವಾಗಿ ಸಾಂಪ್ರಾದಾಯಿಕ ಲುಕ್‌ ನೀಡುವುದಕ್ಕೆ ತುಂಬಾ ಗಮನ ಹರಿಸುತ್ತೇವೆ. ಅದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿ, ಅನೇಕ ಶ್ರೀಮಂತಿಕೆ ವಸ್ತುಗಳು ತಂದಿಟ್ಟು ಮನೆಯ ಕಳೆಯನ್ನು ಹೆಚ್ಚಿಸುತ್ತೇವೆ. ಆದರೆ ಇದೊಂದು ದುಂದು ವೆಚ್ಚವಷ್ಟೇ, ನಮ್ಮಲ್ಲಿ ಸೃಜನಾಶೀಲ ಕಲೆಯೊಂದಿದ್ದರೆ ಸಾಕು, ಮನೆಯಲ್ಲಿ ಬಿದ್ದಿರುವ ಕಸ, ಕಡ್ಡಿ, ಗಾಜಿನ ಬಾಟಲಿಗಳಿಂದ ಕಲಾಕೃತಿಗಳನ್ನು ತಯಾರಿಸಬಹುದು. ಅಂತಹ ಹಲವಾರು ಮುಖ್ಯ ಸಂಗತಿಗಳು ಇಲ್ಲಿವೆ.

ಗಾಜಿನ ಬಾಟಲಿಗಳಿಂದ ಹೂ ಕುಂಡ
ಮನೆಯಲ್ಲಿ ಉಪಯೋಗಿಸಿದ ಗಾಜಿನ ಬಾಟಲಿಗಳನ್ನು ಎಸೆಯದೇ ಅದರಿಂದ ನಮ್ಮ ಮನೆ ಶೃಂಗಾರಕ್ಕೆ ಬಳಕೆ ಮಾಡಬಹುದು. ಗಾಜಿನ ಬಾಟಲಿಗಳಿಂದ ಅವುಗಳ ಮೇಲೆ ಬಣ್ಣ ಬಣ್ಣದ ದಾರಗಳು, ಇಲ್ಲವೇ ಬಣ್ಣ ಬಣ್ಣದ ದಾರಗಳನ್ನು ಸುತ್ತಿ ಅದನ್ನು ನಾವು ಹೂ ಕುಂಡಲಿಗಳನ್ನಾಗಿ ಮಾಡಿ, ಮನೆಯ ಅವರಣದಲ್ಲಿ ಇಡಬಹುದು. ಇನ್ನು ಪ್ಲಾಸ್ಟಿಕ್‌ ಬಾಟಲಿಗಳಿಂದ ಅನೇಕ ರೀತಿಯ ಪ್ರಯೋಜನಗಳಿದ್ದು, ಅವುಗಳನ್ನು ವಿವಿಧ ಕಲಾಕೃತಿಯಾಗಿ ಕತ್ತರಿಸಿ, ಅದನ್ನೇ ನಾವು ಹೂ ಕುಂಡಲಿಯನ್ನಾಗಿ ಮಾಡಿ, ಅದಕ್ಕೆ ವೈವಿಧ್ಯಮಯವಾದ ಬಣ್ಣವನ್ನು ಲೇಪಿಸಿ ಮನೆಯ ಷೋ ಕೇಸ್‌ಗಳಲ್ಲಿ ಇಟ್ಟರೇ ಮನೆಯ ಶೃಂಗಾರ ಹೆಚ್ಚಬಹುದು.

ಗಾಜಿನ ಬಾಟಲಿಯ ದೀಪ
ಮನೆಯ ಗಾಜಿನ ಬಾಟಲಿಗಳಿಂದ ದೀಪದ ಹಣತೆಗಳನ್ನಾಗಿ ಮಾಡಿ, ಮನೆಯ ಶೃಂಗಾರ ಹೆಚ್ಚಿಸುವುದು ಕೂಡ ಸೃಜನಾತ್ಮಕ ಕಲೆ. ಗಾಜಿನ ಬಾಟಲಿಗಳ ಮೇಲೆ ಫೆವಿಕ್ವಿಕ್‌ನಿಂದ ಬಣ್ಣದ ಮಿಂಚು ಅಥವಾ ಬಣ್ಣದ ಕಾಗದವನ್ನು ಅಂಟಿಸಿ, ಅನಂತರ ಮೇಣದ ಬತ್ತಿ (ಕ್ಯಾಂಡಲ್‌ ಗಳನ್ನು) ಇಟ್ಟು, ದೀಪ ಹಚ್ಚಬಹುದು. ಗಾಜಿನ ಬಾಟಲಿಗಳನ್ನು ಹೀಗೂ ಬಳಸಬಹುದು. ಗಾಜಿನ ಬಾಟಲಿಯಲ್ಲಿ ಗೋಲಿಗಳನ್ನು ಹಾಕಿ, ಅದಕ್ಕೆ ಮೇಲೆ ಪ್ಲಾಸ್ಟಿಕ್‌ ಹೂ ಇಟ್ಟು ಮನೆಯ ಟಿವಿ, ಷೋ ಕೇಸ್‌ಗಳಲ್ಲಿ ಇಡಬಹುದು. ಹಾಗೆಯೇ, ಗಾಜಿನ ಬಾಟಲಿಗಳಲ್ಲಿ ನೀರು ಹಾಕಿ, ಮೀನು ಬಿಟ್ಟರೆ, ಮಿನಿ ಫಿಶ್‌ ಟ್ಯಾಂಕ್‌ ಆಗಿ ಮಾಡಬಹುದು.

ಡಬ್ಬಗಳಿಂದ ಟೇಬಲ್‌ಗ‌ಳು
ಮನೆಯಲ್ಲಿರುವ ಅಡುಗೆ ಆಯಿಲ್‌ ಡಬ್ಬಗಳನ್ನು ಎಸೆಯದೇ, ಅದನ್ನು ಕೂಡ ಮನೆಯ ಸೌಂದರ್ಯಕ್ಕೆ ಬಳಕೆ ಮಾಡಬಹುದು. ಡಬ್ಬಗಳಿಗೆ ಚಿತ್ರಾಕೃತಿ ಇರುವ ಬಣ್ಣದ ಬಟ್ಟೆಯನ್ನು ಸುತ್ತಿ ಅದನ್ನು ಸುಂದರ ಟೇಬಲ್‌ ಥರ ಪರಿವರ್ತಿಸಿ ಪುಸ್ತಕ, ಅಗತ್ಯ ವಸ್ತುಗಳನ್ನು ಇಡಲು ಬಳಸಬಹುದು. ಇಂತಹ ಸಾಮಗ್ರಿಗಳಿಂದ ಮನೆಯೂ ಸುಂದರವಾಗಿ ಕಾಣುತ್ತದೆ.

 ಶಿವ ಸ್ಥಾವರಮಠ

ಟಾಪ್ ನ್ಯೂಸ್

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.