ಟ್ರಾಫಿಕ್ ಒತ್ತಡ ನಿಯಂತ್ರಣಕ್ಕೊಂದು ದಾರಿ
Team Udayavani, Jul 7, 2019, 5:00 AM IST
ನಗರವನ್ನು ಒಂದಲ್ಲ ಒಂದು ಕಾರಣಕ್ಕಾಗಿ ಜನರು ಆಶ್ರಯಿಸಿರುತ್ತಾರೆ. ವಾಸ್ತವ್ಯ, ಕೆಲಸ, ಮನರಂಜನೆ, ಸೌಕರ್ಯ ಮುಂತಾದ ಅನೇಕ ಕಾರಣಗಳಿಗಾಗಿ ಜನರು ನಗರವನ್ನು ನೆಚ್ಚಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ಇಂದು ನಗರಗಳು ಅನೇಕ ಸಮಸ್ಯೆಗಳನ್ನು ಹೊತ್ತುಕೊಂಡಿವೆ.
ಇದರಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಪ್ರಮುಖವಾದದ್ದು. ಹೌದು 15 ನಿಮಿಷದಲ್ಲಿ ತಲುಪಬೇಕಾದ ದಾರಿ ಕೂಡ ಸರಿಯಾದ ಉಪಕ್ರಮಗಳು ಇಲ್ಲದೇ ಮುಕ್ಕಾಲು ಗಂಟೆ ಸುತ್ತು ಸುತ್ತುವರಿದು ಸಂಚರಿಸುವಂತಾಗಿದೆ.
ದ್ವಿ ಪಥ ರಸ್ತೆಗಳನ್ನು ಚತುಷ್ಪಥವಾಗಿ ನಿರ್ಮಿಸುವುದು ಹೇಳುವಷ್ಟೂ ಸುಲಭವಿಲ್ಲ. ಬಹುಮಹಡಿಗಳು ಕಟ್ಟಡಗಳೇ ಸಂಧಿಗೊಂದಾಗಿ ನಿರ್ಮಾಣವಾಗಿವೆ. ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ನಗರಾಭಿವೃದ್ಧಿ ಇಲಾಖೆಗಳು ಬೇರೆ ಬೇರೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದರೂ ಅಷ್ಟೇನು ಪರಿಣಾಮ ಬೀರುತ್ತಿಲ್ಲ.
ಯಾವುದೋ ರಸ್ತೆಯನ್ನು ಮತ್ತೂಂದು ಮಾರ್ಗಕ್ಕೆ ಜೋಡಿಸಿ ಪರಿಹಾರ ಆಗಬಹುದು ಎಂದುಕೊಂಡರೆ ಅಲ್ಲಿನ ಬಹುಮಹಡಿ ಕಟ್ಟಡಗಳು ಅಡ್ಡ ಬರುವುದು ಹಿಂದಿನ ಪೂರ್ವ ಯೋಜಿತ ನಿರ್ಧಾರಗಳು ಇಲ್ಲದೆಯೇ ಆಗಿದೆ.
ಇವೆಲ್ಲವನ್ನೂ ಅಳತೆ ತೂಗಿ ಪರಿಹಾರ ಇಲ್ಲವೇನೆಂದು ಕೈ ಕುಳಿತರೆ ವಿದೇಶದಲ್ಲಿ ಇದಕ್ಕೆ ಪರಿಹಾರ ಕಂಡುಕೊಂಡು ನಿರಮ್ಮುರಳರಾಗಿದ್ದಾರೆ.
ಹೈವೇ ಥ್ರೂ ಬಿಲ್ಡಿಂಗ್
ಜಪಾನ್‌ನ ನಗರಗಳು ಕಟ್ಟಡಗಳನ್ನು ಕಟ್ಟಲು ಅಲ್ಲಿನ ಆಡಳಿತ ಅಧಿಕಾರಿಗಳು ಅವಕಾಶ ನೀಡುವಾಗ ಮುಂಬರುವ ಸಮಸ್ಯೆಗಳಿಗೆ ಅವಕಾಶ ನೀಡದಂತೆ ಆ ಸ್ಥಳದ ಎಲ್ಲ ಸಮಸ್ಯೆಗಳನ್ನು ಪರಿಗಣಿಸಿ ಕಟ್ಟಡದ ವಿನ್ಯಾಸ ರಚನೆ ಹೇಗಿರಬೇಕು, ಯಾವೆಲ್ಲ ಅಂಶಗಳನ್ನು ಪಾಲಿಸಬೇಕು ಎನ್ನುವುದು ಮೊದಲೇ ತಿಳಿಸಲಾಗುತ್ತದೆ.
ಸಂಭಾವ್ಯ ಟ್ರಾಫಿಕ್ ಸಮಸ್ಯೆಗಳು ಬರುತ್ತದೆ ಎಂದು ಗೊತ್ತಾದರೆ ಈ ಬಿಲ್ಡಿಂಗ್ ವಿನ್ಯಾಸವನ್ನು ವಾಹನಗಳು ಸಾಗುವಂತೆ ಅದರ ಸಾಮರ್ಥ್ಯದ ಅನ್ವಯ ಘನ ವಾಹನ, ಲಘು ವಾಹನಗಳೆಂದು ಪರಿಗಣಿಸಿ ಸುರಂಗದ ರೀತಿಯಲ್ಲಿ ಕಟ್ಟಡಗಳು ರಚಿತಗೊಳ್ಳುತ್ತದೆ.
ಈ ಮೂಲಕ ಟ್ರಾಫಿಕ್ ಸಮಸ್ಯೆಗೆ ಯಾವುದೇ ಮರ, ಕಟ್ಟಡಗಳನ್ನು ಉರುಳಿಸದೆ ಕೈಗೊಳ್ಳುವ ಅಭಿವೃದ್ಧಿ ಕ್ರಮಗಳು ಎಲ್ಲ ನಗರಗಳಿಗೂ ಅನುಕರಣೀಯ.
ಮಂಗಳೂರಿನಲ್ಲೂ ಈ ಕಟ್ಟಡ ರಚನೆ ಪರಿಚಯವಾಗಲಿ
ಮಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತು ಅದಕ್ಕೆ ಕಂಡುಕೊಳ್ಳುತ್ತಿರುವ ನಿಧಾನಗತಿಯ ಪರ್ಯಾಯ ಮಾರ್ಗಗಳು ಏನೊಂದು ಪ್ರಯೋಜನ ಕಾಣುತ್ತಿಲ್ಲ. ಇಲ್ಲಿನ ಬಹುಮಹಡಿ ಕಟ್ಟಡಗಳು ದಿನಕ್ಕೊಂದರಂತೆ ಏರುತ್ತಿರುವಾಗ ಪೂರ್ವಯೋಜಿತವಾಗಿ ಮತ್ತು ವಿದೇಶದ ಈ ಕ್ರಮಗಳನ್ನು ತಜ್ಞರೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತಂದರೆ ಅನೇಕ ರೀತಿಯಲ್ಲಿ ಪ್ರಯೋಜನವಾಗಬಹುದು. ಇಂಥ ಕಟ್ಟಡಗಳು ಮಂಗಳೂರಿನ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾಗಿವೆ,
•ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.