ಕಾರು ಖರೀದಿಗೂ ಆನ್‌ಲೈನ್‌ ಬುಕ್ಕಿಂಗ್ 


Team Udayavani, Feb 1, 2019, 7:32 AM IST

february-10.jpg

ಈಗ ಆನ್‌ಲೈನ್‌ ಕಾಲ. ಬೇಕಾದ್ದನ್ನು ಆನ್‌ಲೈನ್‌ನಲ್ಲೇ ಕೊಂಡು, ಬೇಡವಾದ್ದನ್ನು ಆನ್‌ಲೈನ್‌ನಲ್ಲೇ ಮಾರಾಟ ಮಾಡುವ ಹವ್ಯಾಸ ಬೆಳೆಯುತ್ತಿದೆ. ಇದಕ್ಕೊಂದು ಸೇರ್ಪಡೆ ವಾಹನಗಳ ಖರೀದಿ ಮುನ್ನ ಆನ್‌ ಲೈನ್‌ ಬುಕ್ಕಿಂಗ್‌. ಕಾರು ರಿಲೀಸ್‌ ಆಗುವ ಮುನ್ನವೇ ಕಂಪೆನಿಗಳು ಗ್ರಾಹಕರಿಗೆ ಆನ್‌ಲೈನ್‌ ಖರೀದಿಗೆ ಅವಕಾಶ ಕಲ್ಪಿಸುತ್ತಿದ್ದು, ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯಲು, ಮಾರಾಟ ಪ್ರಕ್ರಿಯೆ ಸುಲಭ ಮಾಡಲು ಹೀಗೆ ಮಾಡುತ್ತಿವೆ. 

ಅಮೆಜಾನ್‌, ಫ್ಲಿಪ್‌ಕಾರ್ಟ್‌, ಸ್ನಾಪ್‌ಡೀಲ್‌ ನಂತ ಮಾರಾಟ ತಾಣಗಳಿಂದ ಆನ್‌ಲೈನಲ್ಲೇ ವಸ್ತು ಖರೀದಿ ಈಗ ತೀರಾ ಸಾಮಾನ್ಯ. ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಹೊಸ ವಾಹನಗಳ ಖರೀದಿ/ಬುಕ್ಕಿಂಗ್‌ ಕೂಡ ಆನ್‌ಲೈನಲ್ಲೇ ನಡೆಯುತ್ತಿದೆ. ಆನ್‌ಲೈನ್‌ನಲ್ಲಿ ಕಾರು ಖರೀದಿಗೆ ಮಂಗಳೂರು ಕೂಡ ತೆರೆದುಕೊಳ್ಳುತ್ತಿದೆ. ಇಲ್ಲಿನ ಜನರು ಇದರತ್ತ ಒಲವು ಬೆಳೆಸಿಕೊಳ್ಳುತ್ತಿದ್ದಾರೆ ಎನ್ನುವುದು ಕಾರು ಶೋರೂಂ ಪ್ರಮುಖರ ಅಭಿಪ್ರಾಯ. ನಗರದಲ್ಲಿ ಈ ಟ್ರೆಂಡ್‌ ವಿಸ್ತರಿಸಿಕೊಳ್ಳುತ್ತಿದ್ದು, ಗ್ರಾಮೀಣ ಮಟ್ಟಕ್ಕೂ ವಿಸ್ತರಿಸುವ ದಿನ ದೂರವಿಲ್ಲ.

ಸ್ಮಾರ್ಟ್‌ ಯುಗದ ಟ್ರೆಂಡ್‌
 ಕೈಯಲ್ಲೊಂದು ಸ್ಮಾರ್ಟ್‌ ಫೋನ್‌, ಇಂಟರ್ನೆಟ್‌ ಸಂಪರ್ಕ ಇದ್ದರೆ ಮುಗಿಯಿತು. ಸಣ್ಣ ವಸ್ತುವಿನಿಂದ ಹಿಡಿದು ಬೆಲೆ ಬಾಳುವ ವಸ್ತುವಿನವರೆಗೆ ಆನ್‌ಲೈನ್‌ನಲ್ಲೇ ಕಾಯ್ದಿರಿಸಿ ಕೊಳ್ಳುವ ಯುಗದಲ್ಲಿ ನಾವಿದ್ದೇವೆ. ಈ ಕಾರಣ ವಾಹನ ಬುಕ್ಕಿಂಗ್‌ ಕೂಡ ಟ್ರೆಂಡ್‌ ಆಗುತ್ತಿದೆ.

ಸ್ವಂತ ವಾಹನ ಹೊಂದುವ ಕನಸು ಪ್ರತಿಯೊಬ್ಬರಲ್ಲೂ ಇರುತ್ತದೆ. ಇದಕ್ಕಾಗಿ ನಾಲ್ಕೈದು ಬಾರಿ ಶೋರೂಂ ಸುತ್ತಿ ಬೆಲೆ, ಬ್ರ್ಯಾಂಡ್ , ಮಾಡೆಲ್‌, ಬಣ್ಣ ನೋಡುವುದು, ಒಂದೊಂದು ಬ್ರ್ಯಾಂಡ್  ವಿಚಾರಣೆಗೆ ನಾನಾ ಶೋರೂಂ ಸುತ್ತುವುದು ಹೀಗೆ ಕಾಲಹರಣ ಮಾಡುವುದಕ್ಕಿಂತ ಆನ್‌ಲೈನ್‌ನಲ್ಲೇ ಸಮಗ್ರ ಮಾಹಿತಿ ಪಡೆದುಕೊಂಡು ಇಷ್ಟವಾದ ಕಾರನ್ನು ಬುಕ್‌ ಮಾಡುವುದು ಸದ್ಯ ಟ್ರೆಂಡ್‌. ಆನ್‌ ಲೈನ್‌ನಲ್ಲೇ ಸಮಗ್ರ ಮಾಹಿತಿ ಕಲೆ ಹಾಕಿ ಅಲ್ಲೇ ಬುಕ್‌ ಮಾಡಿ, ನೇರ ಶೋರೂಂಗೆ ತೆರಳಿ ಕಾರು ತರುವುದು ಹೊಸತಾಗಿದೆ. ಬೇಡವಾದರೆ ಅಲ್ಲೇ ಕ್ಯಾನ್ಸಲ್‌ ಮಾಡಿಸುವ ವ್ಯವಸ್ಥೆಯೂ ಇದೆ. ಆದರೆ ದೇಶಾದ್ಯಂತ ಕಳೆದ ಎರಡ್ಮೂರು ವರ್ಷದಿಂದ ಈ ಟ್ರೆಂಡ್‌ ಜಾರಿಯಲ್ಲಿದ್ದರೆ, ಮಂಗಳೂರಿನಲ್ಲಿ ಆನ್‌ ಲೈನ್‌ ಬುಕ್ಕಿಂಗ್‌ ಪ್ರಕ್ರಿಯೆಗೆ ಜನ ಈಗಷ್ಟೇ ತೆರೆದುಕೊಳ್ಳುತ್ತಿದ್ದಾರೆ.

ಇಷ್ಟವಾದರೆ ಬುಕ್ಕಿಂಗ್‌, ಬೇಡದಿದ್ದರೆ ರದ್ದು!
ಮಾರುಕಟ್ಟೆಗೆ ಹೊಸ ಕಾರುಗಳು ಬಿಡುಗಡೆಗೊಂಡಾಗ ಕಾರು ಮಾರಾಟ ಸಂಸ್ಥೆಯವರು ಆನ್‌ಲೈನ್‌ ಬುಕ್ಕಿಂಗ್‌ಗೆ ಆಹ್ವಾನಿಸುತ್ತಾರೆ. ಸ್ಯಾಂಟ್ರೊ, ವ್ಯಾಗನರ್‌ ಕ್ರೆಟ್ಟಾ, ಬ್ರೇಝಾ ಕಾರುಗಳಿಗೆ ಆನ್‌ಲೈನ್‌ ಬುಕ್ಕಿಂಗ್‌ ಬೇಡಿಕೆ ಇದೆ. ಇತರ ಕಂಪೆನಿಗಳ ಕೆಲವು ಕಾರುಗಳೂ ಆನ್‌ಲೈನ್‌ ಮೂಲಕ ಬುಕ್‌ ಆಗುತ್ತವೆ. ಒಂದು ವೇಳೆ ಗ್ರಾಹಕರಿಗೆ ನೇರವಾಗಿ ಕಾರು ನೋಡುವಾಗ ಇಷ್ಟವಾಗದಿದ್ದಲ್ಲಿ ಬುಕ್ಕಿಂಗ್‌ನ್ನು ರದ್ದು ಮಾಡುವ ಅವಕಾಶವೂ ಇರುವುದರಿಂದ ಆನ್‌ಲೈನ್‌ ಬುಕ್ಕಿಂಗ್‌ನಿಂದ ಸಮಸ್ಯೆ ಆಗದು.

ಸ್ಯಾಂಟ್ರೊ, ಕ್ರೆಟಾ ಕಾರುಗಳನ್ನು ಗ್ರಾಹಕರು ಆನ್‌ಲೈನ್‌ ಮುಖಾಂತರ ಬುಕ್‌ ಮಾಡುತ್ತಾರೆ ಎಂದು ಅದ್ವೈತ್‌ ಹುಂಡೈನ ಸಿಬಂದಿ ಚೇತನಾ ಹೇಳುತ್ತಾರೆ. ಮಾಂಡೋವಿ ಮೋಟಾರ್ನ ಕಿಶನ್‌ ಹೇಳುವ ಪ್ರಕಾರ, ಇಲ್ಲಿ ಇನ್ನೂ ಆನ್‌ಲೈನ್‌ ಬುಕ್ಕಿಂಗ್‌ ಸೇವೆ ಅಷ್ಟೊಂದು ಪರಿಚಿತವಾಗಿಲ್ಲ. ನಿಧಾನಕ್ಕೆ ಈ ಟ್ರೆಂಡ್‌ಗೆ ಜನ ತೆರೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ.

ಕೃಷಿ ಸಂಬಂಧಿ ವಾಹನಕ್ಕೂ ಆನ್‌ಲೈನ್‌ ಸೇವೆ
ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗೆ ಬೇಕಾಗುವ ವಾಹನಗಳ ಖರೀದಿಯೂ ಈಗ ಆನ್‌ಲೈನ್‌ ಮುಖಾಂತರ ಸುಲಭ ಸಾಧ್ಯವಾಗಿದೆ. ಅದಕ್ಕಾಗಿ ನಯಾಗಾಡಿ ಡಾಟ್‌ ಕಾಂ ವೆಬ್‌ಸೈಟ್‌ ಆರಂಭವಾಗಿದ್ದು, ಹೊಸದಾಗಿ ಮಾರುಕಟ್ಟೆಗೆ ಬರುವ ಕಾರುಗಳ ಸಮಗ್ರ ಮಾಹಿತಿ ದೊರೆಯುತ್ತದೆ. ಈ ವೆಬ್‌ ಸೈಟ್‌ ಮುಖಾಂತರವೂ ಬುಕ್‌ ಮಾಡುವ ವ್ಯವಸ್ಥೆ ಇರುತ್ತದೆ. ಗೂಡ್ಸ್‌, ಅಟೋ, ಬೈಕ್‌, ಸ್ಕೂಟರ್‌, ಕಾರು, ಟ್ರಾÂಕ್ಟರ್‌ ಸೇರಿದಂತೆ ಎಲ್ಲ ಬಗೆಯ ವಾಹನಗಳ ಮಾಹಿತಿ ಮತ್ತು ಬುಕ್ಕಿಂಗ್‌ ವ್ಯವಸ್ಥೆ ಇದರಲ್ಲಿದೆ. ಬುಕ್ಕಿಂಗ್‌ ವೇಳೆ ನಿಗದಿಪಡಿಸಿದ ದರದಲ್ಲೇ ವಾಹನಗಳನ್ನು ಖರೀದಿಸಲು ಇದರಲ್ಲಿ ಅವಕಾಶವಿದೆ.

ಮುನ್ನೆಚ್ಚರಿಕೆ ಇರಲಿ
ಆನ್‌ಲೈನ್‌ ಮೂಲಕ ಖರೀದಿಸುವಾಗ ಎಚ್ಚರಿಕೆ ಅಗತ್ಯ. ಸಮಗ್ರ ಮಾಹಿತಿಯನ್ನು ಆನ್‌ಲೈನ್‌ ಮುಖಾಂತರ ಪಡೆದುಕೊಂಡರೂ, ಶೋರೂಂನಲ್ಲಿ ಮುಖತಃ ಭೇಟಿಯಾಗಿ ಮಾಹಿತಿ ಪಡೆದುಕೊಳ್ಳಿ. ಬುಕ್ಕಿಂಗ್‌ ಮಾಡಿದ ಬಳಿಕ ಕಾರು ಬೇಡವಾದಲ್ಲಿ ಬುಕ್ಕಿಂಗ್‌ ರದ್ದು ಮಾಡಲು ಅವಕಾಶವಿದೆಯೇ ಎಂಬುದನ್ನು ಶೋರೂಂ ಸಿಬಂದಿಯಲ್ಲಿ ವಿಚಾರಿಸಿಕೊಳ್ಳಿ. 

ಟ್ರೆಂಡ್‌ ಬೆಳೆಯುತ್ತಿದೆ
ಗೂಗಲ್‌ ಕಂಟಾರ್‌ ಟಿಎನ್‌ಎಸ್‌ ನಡೆಸಿದ ಸಮೀಕ್ಷೆಯೊಂದರಲ್ಲಿ ದೇಶದ ಶೇ. 90ರಷ್ಟು ಜನ ಆನ್‌ಲೈನ್‌ ಬುಕ್ಕಿಂಗ್‌ ಮೊರೆ ಹೋಗಿರುವುದು ತಿಳಿದು ಬಂದಿದೆ. ಗ್ರಾಹಕರು ಯಾವುದೇ ಬ್ರ್ಯಾಂಡ್ ನ‌ ಕಾರು ಖರೀದಿಸುವ ಮುನ್ನ ಆ ಕಾರಿನ ಸಮಗ್ರ ಮಾಹಿತಿಯನ್ನು ಆನ್‌ಲೈನ್‌ ಮುಖಾಂತರವೇ ನೋಡುತ್ತಾರೆ. ತಮ್ಮಿಷ್ಟದ ಕಾರು ಕಂಪೆನಿಯ ವೆಬ್‌ಸೈಟ್‌ ಮುಖಾಂತರ ಮಾಹಿತಿ ಪಡೆದುಕೊಂಡು ಅಲ್ಲೇ ಬುಕ್‌ ಮಾಡುತ್ತಾರೆ. ಆನ್‌ಲೈನ್‌ ಪೇಮೆಂಟ್‌ ನಲ್ಲಿಯೇ ಮುಂಗಡ ಬುಕ್ಕಿಂಗ್‌ ದರವನ್ನೂ ನೀಡುತ್ತಾರೆ. ಬೈಕ್‌ಗೂ ಕೂಡ ಈ ಟ್ರೆಂಡ್‌ ಇದ್ದು, ಕೆಲವೊಂದು ಆ್ಯಪ್‌ ಗಳು, ವೆಬ್‌ಸೈಟ್‌ಗಳಲ್ಲಿ ಡಿಸ್ಕೌಂಟ್‌ ಆಫ‌ರ್‌ಗಳೂ ಲಭ್ಯವಿವೆ. 

 ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.