ನಮ್ಮ ಶಾಲೆ ನಮ್ಮ ಹೆಮ್ಮೆ: ಡಾ| ಶಿವರಾಮ ಕಾರಂತರ ಗೆಜ್ಜೆ ಸದ್ದು ಮಾಡಿದ ಶಾಲೆಗೆ 154ರ ಹರೆಯ

ಪುತ್ತೂರು ತಾಲೂಕಿನ ಪ್ರಥಮ ನೆಲ್ಲಿಕಟ್ಟೆ ಸ.ಹಿ.ಪ್ರಾ. ಶಾಲೆ

Team Udayavani, Nov 3, 2019, 5:28 AM IST

nn-53

1865 ಶಾಲೆ ಆರಂಭ
ಮಕ್ಕಳ ಕೊರತೆ, ಪುನಶ್ಚೇತನದ ಆವಶ್ಯಕತೆ ಇದೆ

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಪುತ್ತೂರು: ಕಡಲತಡಿಯ ಭಾರ್ಗವ, ಜ್ಞಾನಪೀಠ ಪುರಸ್ಕೃತ ಡಾ| ಶಿವರಾಮ ಕಾರಂತ ರಂಗಭೂಮಿ ಕೃಷಿ, ನೃತ್ಯ ಚಟುವಟಿಕೆಗಳು ಮಾರ್ದನಿಸಿದ ಶಾಲೆ ಇದು. ಸುಮಾರು 154 ವರ್ಷಗಳ ಹಿಂದೆ ಆರಂಭವಾದ ಪುತ್ತೂರು ತಾಲೂಕಿನ ಪ್ರಥಮ ಶಾಲೆ ಎಂಬ ಹೆಗ್ಗಳಿಕೆ ನೆಲ್ಲಿಕಟ್ಟೆ ಸ.ಹಿ.ಪ್ರಾ. ಶಾಲೆಗಿದೆ.

ಪುತ್ತೂರಿನ ಹೃದಯ ಭಾಗದಲ್ಲಿ ಈಗಿನ ಬಸ್‌ ನಿಲ್ದಾಣ ಪರಿಸರ ವ್ಯಾಪ್ತಿಯಲ್ಲಿ ಸುಮಾರು 1865ರಲ್ಲಿ ಈ ಶಾಲೆ ಆರಂಭಗೊಂಡಿತ್ತು ಎಂಬ ಮಾಹಿತಿ ಶಾಲೆಯಿಂದ ಲಭ್ಯವಾಗಿದೆ. ಆರಂಭದಲ್ಲಿ ಮುಳಿ ಹುಲ್ಲಿನ ಮಾಡಿನಲ್ಲಿದ್ದ ಶಾಲಾ ಕಟ್ಟಡ ಅನಂತರ ಬ್ರಿಟಿಷ್‌ ಆಡಳಿತದ ಸಂದರ್ಭದಲ್ಲಿ ಬೆಲ್ಲ ಮಿಶ್ರಣದೊಂದಿಗೆ ಕಲ್ಲಿನಲ್ಲಿ ವಿಶೇಷ ಶೈಲಿಯಲ್ಲಿ ಕಟ್ಟಲ್ಪಟ್ಟಿತ್ತು. ಇದಕ್ಕೆ ಪುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂಬ ಹೆಸರಿತ್ತು.

2,500 ಮಂದಿ ವಿದ್ಯಾರ್ಥಿಗಳು
ಸುಮಾರು 6 ಎಕ್ರೆ ವ್ಯಾಪ್ತಿಯಲ್ಲಿ ಎರಡು ಶಾಲಾ ಕಟ್ಟಡಗಳಿದ್ದವು. 1-4ರ ತನಕ ಕೆಳಭಾಗದಲ್ಲಿ ಹಾಗೂ 5-7ರ ತನಕದ ತರಗತಿಗಳು ನೆಲ್ಲಿಕಟ್ಟೆ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ಸುಮಾರು 20 ಕಿ.ಮೀ. ಸುತ್ತಲಿನ ವ್ಯಾಪ್ತಿಯಿಂದ ಇಲ್ಲಿಗೆ ಕಲಿಯಲು ಬರುತ್ತಿದ್ದರು. ಒಂದು ಹಂತದಲ್ಲಿ ಈ ಶಾಲೆಯಲ್ಲಿ 35 ಮಂದಿ ಶಿಕ್ಷಕರು ಹಾಗೂ 2,500 ಮಂದಿ ವಿದ್ಯಾರ್ಥಿಗಳಿದ್ದರು ಎನ್ನುವ ಮಾಹಿತಿ ಲಭ್ಯವಾಗುತ್ತದೆ.

ಈಗ ಆರಂಭದ ಕಟ್ಟಡ ಶಿಥಿಲಗೊಂಡಿದೆ. ಈ ಶಾಲೆಗೆ ಸಂಬಂಧಪಟ್ಟ ಇನ್ನೊಂದು ಕಟ್ಟಡ 100 ಮೀ. ದೂರದ ಡಾ| ಶಿವರಾಮ ಕಾರಂತ ಪ್ರೌಢಶಾಲೆಯ ಬಳಿ ಇದ್ದು, ಆ ಕಟ್ಟಡವೂ ಶಿಥಿಲಾವಸ್ಥೆಗೆ ಜಾರುತ್ತಿದೆ. ಈಗ ನೆಲ್ಲಿಕಟ್ಟೆಯಲ್ಲಿ ಪ್ರತ್ಯೇಕ ಕಟ್ಟಡದಲ್ಲಿ 1-7 ನೇ ತನಕದ ತರಗತಿಗಳು ನಡೆ ಯುತ್ತಿವೆ. ಕಾರಂತರ ನೆನಪಿನ ಮೂಲ ಕಟ್ಟಡವನ್ನು ಉಳಿಸಿ ಕೊಳ್ಳಬೇಕೆಂಬ ಪ್ರಯತ್ನ, ಆಗ್ರಹಕ್ಕೂ ಈವರೆಗೆ ಬೆಲೆ ಸಿಕ್ಕಿಲ್ಲ.

ಗಣ್ಯರು ಬರುತ್ತಿದ್ದರು
ಇದೇ ಶಾಲೆಯಲ್ಲಿ ಪುತ್ತೂರು ದಸರಾ ನಾಡಹಬ್ಬವನ್ನೂ ಡಾ| ಕಾರಂತರು ಆರಂಭಿಸಿದ್ದು, ಈ ಸಂದರ್ಭ ನಾಡಿನ ಹೆಸರಾಂತ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿರಿಯ ಹಾಗೂ ಖ್ಯಾತ ಸಾಹಿತಿ ಮಾಸ್ತಿಯವರು, ಪಡುಕೋಣೆ ರಮಾನಂದ ರಾಯರು, ಚಂದ್ರಬಾಗಾದೇವಿ, ಪ್ರಭಾಕರ ರಾಯರು, ಮೊಳಹಳ್ಳಿ ಶಿವರಾಯರು, ಸದಾಶಿವರಾಯರು, ಪಂಡಿತ್‌ ಶಂಭು ಶರ್ಮ, ರಾಮಚಂದ್ರ ರಾಯರು, ಎ.ಪಿ. ಸುಬ್ಬರಾಯರು ಸೇರಿದಂತೆ ರಾಜ್ಯದ ಗಣ್ಯರು ಪಾಲ್ಗೊಂಡಿರುವ ಕುರಿತು ಡಾ| ಕಾರಂತರು ತಮ್ಮ ಬರಹಗಳಲ್ಲಿ ಉಲ್ಲೇಖೀಸಿದ್ದಾರೆ.

ಹಾಲಿ ಶಾಲೆಯಲ್ಲಿ ಶೌಚಾಲಯ, ಅಕ್ಷರದಾಸೋಹ ಕೊಠಡಿ, ತರಗತಿ ಕೊಠಡಿ, ಶಿಕ್ಷಕರ ಕೊಠಡಿ, ಬೆಂಚು -ಡೆಸ್ಕ್ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳಿವೆ. 5 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ 1 ದೈ.ಶಿ. ಶಿಕ್ಷಕರು, 1 ಸಂಗೀತ ಶಿಕ್ಷಕರು, 1 ಸಾಮಾನ್ಯ ಶಿಕ್ಷಕರು, 1 ನಿಯೋಜನೆಯ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾªರೆ. ಶಿಕ್ಷಕರ ಕೊರತೆಯ ಕಾರಣದಿಂದ ಇವರೇ ಪಾಠಗಳನ್ನು ಬೋಧಿಸುತ್ತಿದ್ದಾರೆ. ಮಕ್ಕಳ ಕೊರತೆ, ಪುನಶ್ಚೇತನದ ಆವಶ್ಯಕತೆ ಇದೆ.

ಬಡವರ ಮಕ್ಕಳ ಆಶ್ರಯ
ಆರಂಭದಿಂದ 150 ವರ್ಷಗಳಲ್ಲಿ ಈ ಶಾಲೆಯಲ್ಲಿ ಅನೇಕ ಸಾಧಕರು, ಗಣ್ಯರು ಶಿಕ್ಷಣ ಕಲಿತಿದ್ದಾರೆ. ಹಾಲಿ ಶಾಲೆಯಲ್ಲಿ 1ರಿಂದ 7ನೇ ತರಗತಿ ತನಕ 79 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಶೇ. 50ರಷ್ಟು ಪಕ್ಕದ ಅನಾಥಾಶ್ರಮದ ಮಕ್ಕಳು, ಶೇ. 50 ಮಂದಿ ಪಕ್ಕದ ಬ್ರಹ್ಮನಗರ ಕಾಲನಿಯವರು. ಕೂಲಿಗಾಗಿ ಬೇರೆ ಊರಿನಿಂದ ಬಂದವರ ಮಕ್ಕಳು, ಬಡವರು.

ಕಾರಂತರ ನೆನಪು
ಪುತ್ತೂರಿನ ಬಾಲವನದಲ್ಲಿ ವಾಸ್ತವ್ಯವನ್ನು ಹೊಂದಿದ್ದ ಖ್ಯಾತ ಸಾಹಿತಿ ಡಾ| ಕೆ. ಶಿವರಾಮ ಕಾರಂತ ಅವರು ಸಾಂಸ್ಕೃತಿಕ ಚಟುವಟಿಕೆಗಳ ತರಗತಿಗಳನ್ನು ನೆಲ್ಲಿಕಟ್ಟೆಯ ಈ ಶಾಲಾ ಕಟ್ಟಡದಲ್ಲಿ ನಡೆಸುತ್ತಿದ್ದರು. ಕಾರಂತರು ಬಾಲವನವನ್ನು ಮಕ್ಕಳಿಗೆ ಮಾತ್ರ ಸೀಮಿತಗೊಳಿಸಿ ಉಳಿದ ರಂಗಭೂಮಿ ಚಟುವಟಿಕೆಗಳನ್ನು ಈ ಶಾಲಾ ಕಟ್ಟಡದಲ್ಲಿ ನಡೆಸುತ್ತಿದ್ದರು. ಇಲ್ಲಿ ರಾಜ್ಯದಲ್ಲಿಯೇ ಪ್ರಥಮ ಇಂಗ್ಲೆಂಡ್‌ ಥಿಯೇಟರ್‌ ಮಾದರಿಯನ್ನು ನಿರ್ಮಿಸಲಾಗಿತ್ತು.

ಸಾವಿರಾರು ಮಂದಿಗೆ ಶಿಕ್ಷಣದ ದೀವಿಗೆ ನೀಡಿದ, ಡಾ| ಶಿವರಾಮ ಕಾರಂತರು ಹಜ್ಜೆ ಹಾಕಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿದ ಶಾಲಾ ಕಟ್ಟಡದ ಕುರಿತು ನಮಗೆ ಹೆಮ್ಮೆ ಇದೆ. ಆದರೆ ಆ ಮೂಲ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಈ ಭಾಗದಲ್ಲಿ ಓಡಾಡುವ ಮಕ್ಕಳಿಗೂ ಅಪಾಯದ ಭಯವಿದೆ. ಉಳಿದಂತೆ ಶಾಲೆಯಲ್ಲಿ ಎಲ್ಲ ಸೌಕರ್ಯಗಳಿವೆ. ಮಕ್ಕಳ ಕೊರತೆಯೂ ಇದೆ.
– ಬಿ. ಧನಲಕ್ಷ್ಮೀ , ಮುಖ್ಯ ಶಿಕ್ಷಕರು

ಡಾ| ಶಿವರಾಮ ಕಾರಂತರು ಸಾಂಸ್ಕೃತಿಕ ಕೃಷಿ ಮಾಡಿದ ಪುತ್ತೂರಿನ ಪ್ರಥಮ ಸರಕಾರಿ ಶಾಲೆಯ ಮೂಲ ಕಟ್ಟಡವನ್ನು ಕಾರಂತರ ನೆನಪಿನಲ್ಲಾದರೂ ಉಳಿಸಿಕೊಳ್ಳುವ ದೃಷ್ಟಿಯಿಂದ ಪಾರಂಪರಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸುವಂತೆ ಹಲವು ವರ್ಷಗಳ ಹಿಂದೆಯೇ ಮನವಿ ಮಾಡಿದ್ದೇವೆ. ಆದರೆ ಪ್ರಯೋಜನವಾಗಿಲ್ಲ. ಈಗಿನ ಶಾಸಕರಿಗೂ ಮತ್ತೆ ಮನವಿ ಮಾಡುತ್ತೇವೆ.
-ಬಿ. ಪುರಂದರ ಭಟ್‌ , ಹಿರಿಯ ಸಾಹಿತಿ, ನ್ಯಾಯವಾದಿ

-  ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

Elon-Musk

America: ಎಚ್‌-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Elon-Musk

America: ಎಚ್‌-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Pierre-Filliozat

ಫ್ರಾನ್ಸ್‌ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್‌ ಫಿಲಿಯೋಜಾ ನಿಧನ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.