ಹೊರಾಂಗಣದಲ್ಲಿ ಅಡುಗೆ ಮನೆ
Team Udayavani, Jun 22, 2019, 5:00 AM IST
ಇತ್ತೀಚಿನ ದಿನಗಳಲ್ಲಿ ಹೊರಾಂಗಣ ಅಡುಗೆ ಕೋಣೆಗಳು ಒಂದು ಟ್ರೆಂಡ್ ಆಗಿವೆ. ಪ್ರಕೃತಿಯ ಸೊಬಗಿನೊಂದಿಗೆ ಅಡುಗೆ ಕೆಲಸ, ಊಟ- ಉಪಾಹಾರ ಸೇವನೆ, ಪಾರ್ಟಿಗಳಂತಹ ಕಾರ್ಯಕ್ರಮಗಳಿಗೆ ಅಡುಗೆ ಕೋಣೆ ಚಿಕ್ಕದಾಗುವುದು ಮುಂತಾದ ಹತ್ತು ಹಲವು ಕಾರಣಗಳನ್ನು ಅವಲಂಬಿಸಿ ಹೊರಾಂಗಣ ಅಡುಗೆಕೋಣೆ ಪದ್ಧತಿ ಆರಂಭಗೊಂಡಿದೆ.
ಸಾಮಾನ್ಯವಾಗಿ ಒಳಾಂಗಣ ಅಡುಗೆ ಕೋಣೆಗಳ ಮಾದರಿಯಲ್ಲೇ ಇವುಗಳು ಕಂಡುಬಂದರೂ ವಿನ್ಯಾಸದಲ್ಲಿ ಮಾತ್ರ ಕೊಂಚ ಬದಲಾವಣೆಗಳಾಗುವುದನ್ನು ಗಮನಿಸಬಹುದು. ಸಿಂಕ್, ಸ್ಟೋರೇಜ್ ಮುಂತಾದ ವ್ಯವಸ್ಥೆಗಳನ್ನು ಈ ಬಗೆಯ ಅಡುಗೆ ಕೋಣೆಗಳಲ್ಲಿ ಮಾಡಬಹುದಾಗಿದ್ದರೂ ಫ್ರಿಜ್‌ನಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮುಖ್ಯ ಅಡುಗೆ ಕೋಣೆಯಲ್ಲಿಯೇ ಇಡಬೇಕಾಗುತ್ತದೆ. ಒಂದು ವೇಳೆ ಇವುಗಳನ್ನೂ ಹೊರಾಂಗಣ ಅಡುಗೆ ಕೋಣೆಗಳಲ್ಲಿಯೇ ಅಳವಡಿಸಬೇಕು ಎಂಬ ಅಭಿಲಾಷೆ ನಿಮ್ಮದಾಗಿದ್ದರೆ ಅದಕ್ಕೆ ತಗುಲುವ ವೆಚ್ಚ ಕೊಂಚ ಹೆಚ್ಚು.
ಇವುಗಳೆಲ್ಲದರ ಹೊರತಾಗಿ ಹೊರಾಂಗಣ ಅಡುಗೆ ಕೋಣೆ ವಿನ್ಯಾಸ ಮಾಡುವಾಗ ತುಸು ಎಚ್ಚರಿಕೆ ವಹಿಸಬೇಕಾಗುತ್ತದೆ. ಅವುಗಳು ಯಾವುವು ಎಂಬದು ಇಲ್ಲಿದೆ.
ಗಾಳಿ ದಿಕ್ಕು ಗಮನದಲ್ಲಿರಲಿ
ಹೊರಾಂಗಣ ಅಡುಗೆ ಕೋಣೆಗಳ ನಿರ್ಮಾಣದ ವೇಳೆ ಗಾಳಿಯ ದಿಕ್ಕು ಯಾವ ಕಡೆಯಿಂದ ಯಾವ ಕಡೆಗೆ ಇದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಮನೆಯ ಹೊರ ಪ್ರದೇಶದಲ್ಲಿ ಗಾಳಿ ಜಾಸ್ತಿ ಇರುವುದರಿಂದ ಗಾಳಿ ಬೀಸುವ ದಿಕ್ಕಿನಲ್ಲಿ ನಿಮ್ಮ ಅಡುಗೆ ಕೋಣೆಯ ಒಲೆಗಳಿದ್ದಲ್ಲಿ ಪದೇ ಪದೇ ಬೆಂಕಿ ಆರಿಹೋಗುವ ಅಥವಾ ಅಗ್ನಿ ಅವಘಡಗಳು ಸಮಭವಿಸಬಹುದಾದ ಸಾಧ್ಯತೆಗಳಿರುತ್ತವೆ.
ಚಿಕ್ಕದೊಂದು ಹೊದಿಕೆ ಇರಲಿ
ಈ ಬಗೆಯ ಅಡುಗೆ ಕೋಣಗಳ ಮೇಲೆ ಚಿಕ್ಕದೊಂದು ಮಾಡು ಅಥವಾ ಹೊದಿಕೆಯಿದ್ದರೆ ಚೆನ್ನ. ಬಿಸಿಲಿನ ಸಂದರ್ಭ ದಲ್ಲಿ ಇವು ನಿಮಗೆ ನೆರಳು ನೀಡುವುದರ ಜತೆಗೆ ಗಾಳಿಗೆ ಕಸ, ಕಡ್ಡಿಗಳು ನಿಮ್ಮ ಅಡುಗೆ ಕೋಣೆ ಸೇರದಂತೆ ಇವು ತಡೆಯಬಲ್ಲವು.
ಉತ್ತಮ ಬೆಳಕಿನ ವ್ಯವಸ್ಥೆ
ಈ ಮಾದರಿಯ ಅಡುಗೆ ಕೋಣೆಗಳು ಹೊರಾಂಗಣದಲ್ಲಿಯೇ ಇರುವುದರಿಂದ ಹಗಲು ಯಾವುದೇ ಕೃತಕ ಬೆಳಕಿನ ಆವಶ್ಯಕತೆ ಬೇಕಾಗಿಲ್ಲ. ಆದರೆ ರಾತ್ರಿ ಉತ್ತಮ ಬೆಳಕಿನ ವ್ಯವಸ್ಥೆ ಬೇಕೇ ಬೇಕು. ನಿಮ್ಮ ಅಡುಗೆ ಕೋಣೆಯ ಅಕ್ಕ ಪಕ್ಕದಲ್ಲಿರುವ ಮರಗಳಿಗೆ ಲೈಟ್ ಅಳವಡಿಸಿ. ಅವುಗಳ ಬೆಳಕು ನೇರವಾಗಿ ಅಡುಗೆ ಕೋಣೆಯ ಪ್ರದೇಶಕ್ಕೆ ಬೀಳುವಂತೆ ಮಾಡಿದಲ್ಲಿ ರಾತ್ರಿಯೂ ನೀವು ಪ್ರಕೃತಿ ಸೌಂದರ್ಯ ಸವಿಯಬಹುದು.
ಸ್ವಚ್ಛತೆಗೆ ಆದ್ಯತೆ ನೀಡಿ
ಒಳಾಂಗಣ ಅಡುಗೆ ಕೋಣೆಗಳಿಗಿಂತ ಈ ಬಗೆಯ ಅಡುಗೆ ಕೋಣೆಗಳ ಸ್ವತ್ಛತೆಗೆ ಕೊಚ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ಸಿಂಕ್‌ಗಳನ್ನು ಆಗಾಗ ಸ್ವತ್ಛ ಮಾಡುವುದರ ಜತೆಗೆ ಧೂಳು, ಕಸಗಳನ್ನು ತೆರವುಗೊಳಿಸುವ ಕಾರ್ಯವನ್ನು ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ನೀವು ಮಾಡಲೇ ಬೇಕು.
- ಪ್ರಸನ್ನ ಹೆಗಡೆ ಊರಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.