ಸ್ಮಾರ್ಟ್ ನಗರಿಗೂ ಬರಲಿ ಜನ ಸ್ನೇಹಿ ಬಸ್ ತಂಗುದಾಣ
Team Udayavani, Apr 28, 2019, 6:00 AM IST
ಸಾಂದರ್ಭಿಕ ಚಿತ್ರ.
ಅನೇಕ ರೀತಿಯ ಬಸ್ ತಂಗುದಾಣಗಳನ್ನು ನಾವು ನೋಡಿರುತ್ತೇವೆ. ಅದರಲ್ಲಿ ಮುಖ್ಯವಾದುದು ಸೋವಿಯತ್‌ನ ಬಸ್ ನಿಲ್ದಾಣಗಳು, ಕಲಾತ್ಮಕ ಬಸ್ ನಿಲ್ದಾಣಗಳು ಮತ್ತು ಸರಳ ಬಾಂಕರ್ಸ್ ಬಸ್ ನಿಲ್ದಾಣಗಳು. ಆದರೆ ಇವೆಲ್ಲವನ್ನೂ ಮೀರಿದ ಒಂದ ವಿನೂತನ ಬಸ್ ನಿಲ್ದಾಣವಿದೆ. ಇದು ಕೇವಲ ಬಸ್‌ಗಾಗಿ ಕಾಯಲು ಇರುವ ನಿಲ್ದಾಣವಲ್ಲ. ಬದಲಾಗಿ ಈಗ ನಮ್ಮ ಸಮಯವನ್ನು ಉತ್ತಮ ರೀತಿಯಲ್ಲಿ, ಆರೋಗ್ಯಕರವಾಗಿ ಉಪಯೋಗಿಸಲು ಇರುವ ಒಂದು ವ್ಯವಸ್ಥೆಯಾಗಿದೆ.
ಹೆಚ್ಚಾಗಿ ಬಸ್‌ಗೆ ಕಾಯುವಾಗ ನಮಗೆ ಸಮಯದ ಮಹತ್ವದ ಅರಿವಾಗುತ್ತದೆ. ಒಂದು ಬಸ್ ತಪ್ಪಿದರೆ ಮತ್ತೂಂದು ಬಸ್‌ಗಾಗಿ ಕಾಯುವಾಗ ಆಗುವ ಸಂಕಷ್ಟಕ್ಕೆ ಸುಸ್ತಾಗಿ ಬಿಡುತ್ತೇವೆ. ಹೋಗಿ ತಲುಪಬೇಕಾದ ಪ್ರಯಾಣವು ಮಂಕಾಗುವ ಎಲ್ಲ ಮುನ್ಸೂಚನೆಯನ್ನು ತೆರೆದಿಡುತ್ತದೆ. ಆದರೆ ಇದಕ್ಕೆಲ್ಲ ತದ್ವಿರುದ್ಧವಾಗಿ ಈ ಹೊಸ ವಿನೂತನ ಕಲ್ಪನೆ. ಬಸ್ ತಪ್ಪಿ ಹೋದರೂ ನಮ್ಮ ಮನಸ್ಸನ್ನಾಗಲಿ ಅಥವಾ ದೈಹಿಕವಾಗಲಿ ಮಂಕಾಗದಂತೆ ನೋಡುವಂತೆ ಮಾಡುತ್ತದೆ. ಹಾಗದಾರೆ ಏನಿದು ಇದರ ವಿಶೇಷತೆಯೇನು ಎಂಬ ಮಾಹಿತಿ ಇಲ್ಲಿದೆ.
ಬಸ್ ಸ್ಟಾಂಪ್ ಮೂವ್ಸ್
ವಿದೇಶದ ಕಲಾವಿದರ ಗುಂಪೊಂದು ಮತ್ತು ಸಮುದಾಯ ಕಾರ್ಯಕರ್ತರು ಸೇರಿ 2015ರಲ್ಲಿ ಬಸ್ ಸ್ಟಾಂಪ್ ಮೂವ್ಸ್ ಕಾರ್ಯಕ್ರಮವನ್ನು ದಿ ಮೆಟ್ರೊ ಹೆಲ್ತ… ಸಿಸ್ಟಮ್‌ನಲ್ಲಿ ಮತ್ತು GCRTA ಯ ಅಡಾಪ್ಟ್ – ಎ- ಆಶ್ರಯ ಕಾರ್ಯಕ್ರಮದ ಮೂಲಕ ಪ್ರಾರಂಭಿಸಿದರು.
ಈ ಯೋಜನೆಯ ಉದ್ದೇಶ ಏನಂದರೆ ಬಸ್ ನಿಲ್ದಾಣಗಳನ್ನು ಜನರಿಗೆ ಹೆಚ್ಚು ಉಪಯೋಗವಾಗುವಂತೆ ಮಾಡುವುದು. ಇದರ ಪ್ರಕಾರ ಸರಳವಾದ ವ್ಯಾಯಾಮ ಮತ್ತು ಆರೋಗ್ಯ ಮಾಹಿತಿಗಳನ್ನು ವಿವರಿಸಿರುವ ನಾಲ್ಕು ಗಾಜಿನ ಫಲಕಗಳನ್ನು ಆಯ್ಕೆ ಮಾಡಿದ ಬಸ್ ನಿಲ್ದಾಣಗಳಲ್ಲಿ ಇಡಲಾಗುತ್ತದೆ. ಈ ಮೂಲಕ ವಿವಿಧ ಕಾರ್ಯಗಳಿಗೆ ಹೋಗಲು ಬಸ್ ತಂಗುದಾಣವನ್ನು ಆಶ್ರಯಿಸುವ ವರಿಗೆ ಆರೋಗ್ಯ ಮಾಹಿತಿಗಳನ್ನು ಹಂಚಬಹುದಾಗಿದೆ. ಇದರಿಂದಾಗಿ ಒತ್ತಡದ ಬದುಕಲ್ಲಿ ಬಸ್ ಕಾಯುವ ಸಣ್ಣ ಬಿಡುವಿನಲ್ಲಿ ಕುಳಿತು ಅಥವಾ ನಿಂತು ಮಾಡುವ ಸುಲಭ ವ್ಯಾಯಮಗಳನ್ನು ತಿಳಿಸಲಾಗುತ್ತದೆ. ಅಲ್ಲದೇ ಸಮಯವಿದ್ದರೆ ಅಲ್ಲೇ ಕುಳಿತು ವ್ಯಾಯಾಮ ಮಾಡುವಂತೆ ಪ್ರೇರೆಪಿಸುತ್ತದೆ. ಹಲವಾರು ದೇಶಗಳಲ್ಲಿ ಇಂತಹ ಅನೇಕ ಮಾಹಿತಿ ನೀಡುವ ಬಸ್ ತಂಗುದಾಣಗಳಿವೆ.
ಮಂಗಳೂರಿಗೂ ಬರಲಿ ಮಂಗಳೂರಿನ ಕೆಲವೊಂದು ಬಸ್ ನಿಲ್ದಾಣಗಳು ಡಿಜಿಟಲ್ ಕೇಂದ್ರೀತವಾಗಿ ರೂಪುಗೊಂಡಾಗ ಮತ್ತು ಇಂತಹ ವಿಭಿನ್ನ ರೀತಿಯಲ್ಲಿ ಜನರಿಗೆ ಪರಿಚಯಿಸಿದಾಗ ಜನರೂ ಬಸ್ ಕಾಯುವ ಮುಖೇನ ಬಸ್ ಆಶ್ರಯ ತಾಣಗಳಲ್ಲಿ ವ್ಯಾಯಾಮದ ಉಪಯುಕ್ತ ಮಾಹಿತಿಗಳನ್ನು ನೀಡಬಹುದಾಗಿದೆ. ಇದು ಕೇವಲ ವ್ಯಾಯಮದ ದೃಷ್ಟಿ ಕೋನದಲ್ಲಿ ನೋಡದೆ ಎಲ್ಲ ರೀತಿಯ ಉಪಯುಕ್ತ ಮಾಹಿತಿಗಳನ್ನು ತಲುಪಿಸಬಹುದಾಗಿದೆ.
– ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.