ಏರ್ ಪ್ಯೂರಿಫೈಯರ್ ಮೊರೆ ಹೊಕ್ಕ ಜನ
Team Udayavani, Nov 22, 2019, 5:20 AM IST
ಹೆಚ್ಚುತ್ತಿರುವ ವಾಯುಮಾಲಿನ್ಯದ ಭೀಕರತೆ ಮನುಷ್ಯನ ಅಸ್ತಿತ್ವಕ್ಕೆ ಸವಾಲೊಡ್ಡುತ್ತಿದೆ. ಗಾಳಿಯ ಗುಣಮಟ್ಟ ಕಾಪಾಡುವುದೂ ಸವಾಲಾಗಿ ಪರಿಣಮಿಸಿದೆ. ಒಂದೆಡೆ ಪರಿಸರ ಮಾಲಿನ್ಯದಿಂದಾಗಿ ವಾಯುಮಾಲಿನ್ಯ ಅತಿಯಾಗುತ್ತಿದ್ದರೆ, ಇನ್ನೊಂದೆಡೆ ವಾಹನಗಳು ಉಗುಳುವ ಹೊಗೆಯೂ ಮನುಷ್ಯ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದೆ. ಎಷ್ಟೆಂದರೆ, ಈ ವಾಯುಕಾರಕ ಅಂಶಗಳು ನಮ್ಮ ಮಲಗುವ ಕೋಣೆಗಳನ್ನೂ ಬಿಟ್ಟಿಲ್ಲ ಎಂಬುದನ್ನು ನಂಬಲೇಬೇಕು.
ಶುದ್ಧ ಗಾಳಿಗಾಗಿ..
ಹೊರಗಿನ ಕಲುಷಿತ ಗಾಳಿ ಮನೆಯೊಳಗೂ ಬಂದು ನೆಮ್ಮದಿಯ ಬದುಕನ್ನು ನಮಗೆ ಗೊತ್ತಿಲ್ಲದಂತೆಯೇ ಕಸಿದುಕೊಳ್ಳುತ್ತಿದೆ. ಶುದ್ಧ ಗಾಳಿಯ ಉಸಿರಾಟ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಇದು ವ್ಯಾಪಿಸಿದೆ. ಹೊಸದಿಲ್ಲಿಯ ವಾಯು ಮಾಲಿನ್ಯದ ಭೀಕರತೆ ಆಮ್ಲಜನಕವನ್ನು ಹಣಕೊಟ್ಟು ಕೊಂಡುಕೊಳ್ಳಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿದೆ. ಮಂಗಳೂರಿನಲ್ಲಿಯೂ ಆಗುತ್ತಿರುವ ವಾಯು ಮಾಲಿನ್ಯದ ಪರಿಣಾಮ ಹೊಸದಿಲ್ಲಿಯ ವಾಸ್ತವತೆ ನಮಗೂ ಹತ್ತಿರದಲ್ಲೇ ಇದೆ ಎಂಬ ಎಚ್ಚರಿಕೆಯನ್ನು ತೆರೆದಿಟ್ಟಿದೆ. ಮನೆಯೊಳಗಾದರೂ ಶುದ್ಧ ಗಾಳಿ ಉಸಿರಾಡಬೇಕಾದರೆ ಏರ್ ಪ್ಯೂರಿಫೈಯರ್‌ಗಳ ಮೊರೆ ಹೊಕ್ಕಿದ್ದಾರೆ ಜನ.
ಹೌದು, ಶುದ್ಧ ಗಾಳಿಯ ಉಸಿರಾಟಕ್ಕಾಗಿ ಏರ್ ಪ್ಯೂರಿಫೈಯರ್ ಸಾಧನ ಸಹಾಯವಾಗುತ್ತಿದೆ. ಅದಕ್ಕಾಗಿಯೇ ಹಾಳಾಗಿರುವ ಶುದ್ಧಗಾಳಿಯನ್ನು ಮರಳಿ ಪಡೆಯಲು ಏರ್ ಪ್ಯೂರಿಫೈಯರ್ ಖರೀದಿ ದೊಡ್ಡ ದೊಡ್ಡ ಸಿಟಿಗಳಲ್ಲಿ ಟ್ರೆಂಡ್ ಆಗುತ್ತಿದೆ. ನಿಧಾನಕ್ಕೆ ಈ ಸಾಧನ ಪರಿಚಯವಾಗುತ್ತಿದೆ. ಮಂಗಳೂರಿನಂಥ ನಗರಕ್ಕೆ ಇದಿನ್ನೂ ಅಷ್ಟೊಂದು ಪರಿಚಯವಾಗದಿದ್ದರೂ, ಭವಿಷ್ಯದಲ್ಲಿ ಅಗತ್ಯದ ಸಾಧನವಾಗಿ ಬೇಕಾಗಲಿದೆ ಎಂಬುದು ಅಷ್ಟೇ ಸತ್ಯ.
ಫಿಲ್ಟರ್ ಮಾಡುತ್ತದೆ
ಹೆಚ್ಚಿದ ಹೊರಾಂಗಣ ಮಾಲಿನ್ಯವನ್ನು ತಡೆದು ಮನೆಯ ಕೋಣೆಯೊಳಗೆ ಶುದ್ಧ ಗಾಳಿ ನೀಡಲು ಏರ್ ಪ್ಯೂರಿಫೈಯರ್ ಸಹಾಯ ಮಾಡುತ್ತದೆ. ಪ್ಯೂರಿಫೈಯರ್‌ನ ಪರಿಣಾಮಕಾರಿ ಬಳಕೆಗೆ ಮನೆಯೊಳಗಿನ ಕಿಟಕಿ, ಬಾಗಿಲುಗಳನ್ನು ಮುಚ್ಚಿಡಬೇಕು. ಆದರೆ, ಅಡುಗೆ ಮಾಡುವಾಗ, ಮನೆಯೊಳಗಡೆ ಧೂಳಿದ್ದರೆ ಕಿಟಕಿ, ಬಾಗಿಲು ತೆರೆದಿಡಬೇಕು. ಮಾಲಿನ್ಯಕಾರಕಗಳನ್ನು ಫಿಲ್ಟರ್ ಮಾಡಿ ಶುದ್ಧಗಾಳಿ ಒದಗಿಸುತ್ತದೆ.
ಹೊರಾಂಗಣ ಕಾರಕಗಳನ್ನು ಫಿಲ್ಟರ್ ಮಾಡಿ ಶುದ್ಧಗಾಳಿಯನ್ನು ಉಸಿರಾಡುವಂತೆ ಮಾಡುವ ಸಾಧನ ಏರ್ ಪ್ಯೂರಿಫೈಯರ್. ವಿದ್ಯುತ್ ಚಾಲಿತವಾಗಿರುವ ಈ ಸಾಧನವನ್ನು ಮನೆಯೊಳಗಿದ್ದಾಗ ಬಳಕೆ ಮಾಡಬಹುದು. ಹೊಸದಿಲ್ಲಿ, ಬೆಂಗಳೂರಿನಂತಹ ದೊಡ್ಡ ದೊಡ್ಡ ಸಿಟಿಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಮನೆಯೊಳಗೆ ಏರ್ ಪ್ಯೂರಿಫೈಯರ್ ಅವಶ್ಯವಾಗಿದೆ. ಮನೆಯ ಯಾವುದೇ ಭಾಗದಲ್ಲಿ ಇದನ್ನು ಇರಿಸಿದರೂ ತಕ್ಕ ಮಟ್ಟಿಗೆ ಶುದ್ಧಗಾಳಿಯನ್ನು ಪಡೆಯಬಹುದು ಎಂಬ ಕಾರಣದಿಂದಾಗಿ ಸಿಟಿ ಜನ ಇದರ ಮೊರೆ ಹೋಗುತ್ತಿದ್ದಾರೆ.
ಮಂಗಳೂರಿನಲ್ಲಿಲ್ಲ ಬಳಕೆ
ಮಂಗಳೂರಿಗೆ ಸದ್ಯಕ್ಕೆ ಏರ್ ಪ್ಯೂರಿಫೈಯರ್ ಅವಶ್ಯವಿಲ್ಲವಾದರೂ, ಮುಂದಿನ ದಿನಗಳಲ್ಲಿ ಅಗತ್ಯ ಬೀಳಬಹುದು ಎಂಬುದು ವಿವಿಧ ಮಳಿಗೆಗಳ ಸಿಬಂದಿಯ ಅಭಿಪ್ರಾಯ. ಏರ್ ಪ್ಯೂರಿಫೈಯರ್ ಮಂಗಳೂರಿನಲ್ಲಿ ಬಳಕೆಯಲ್ಲಿಲ್ಲದ ಕಾರಣ ಮಂಗಳೂರಿನ ಮಾರುಕಟ್ಟೆಗೆ ಇನ್ನೂ ಕಾಲಿಟ್ಟಿಲ್ಲ. ಆದರೆ, ಹೊಸದಿಲ್ಲಿ, ಬೆಂಗಳೂರಿನಂತಹ ನಗರಗಳಲ್ಲಿ ಇದು ನಿಧಾನಕ್ಕೆ ಪರಿಚಯವಾಗುತ್ತಿದೆ. ಆನ್‌ಲೈನ್‌ನಲ್ಲಿ 2500 ರೂ. ಗಳಿಂದ ಹಿಡಿದು 25 ಸಾವಿರ ರೂ.ಗಳ ತನಕ ಬೆಲೆ ಬಾಳುವ ಏರ್ ಪ್ಯೂರಿಫೈಯರ್‌ಗಳಿವೆ. ಮಾರುಕಟ್ಟೆ ದರ ಸುಮಾರು 30 ಸಾವಿರ ರೂ. ಗಳಿಷ್ಟಿರಬಹುದು.
ಸೂಕ್ತ ಆಫರ್
ಮಂಗಳೂರಿನಲ್ಲಿ ಏರ್ ಪ್ಯೂರಿಫೈಯರ್ ಬಳಕೆ ಇಲ್ಲ. ಬಳಕೆ ಇಲ್ಲ ಎನ್ನುವುದಕ್ಕಿಂತ ಅದರ ಆವಶ್ಯಕತೆ ಸದ್ಯದ ಮಟ್ಟಿಗೆ ಕಂಡು ಬಂದಿಲ್ಲ. ಹಾಗಾಗಿ ನಗರದಲ್ಲಿ ಏರ್ ಪ್ಯೂರಿಫೈಯರ್ ಖರೀದಿ-ಮಾರಾಟಕ್ಕೆ ಬೇಡಿಕೆ ಬಂದಿಲ್ಲ.
– ಅನಂತ, ಉದ್ಯಮಿ
- ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.