ಮೆರುಗು ಹೆಚ್ಚಿಸುವ ಅಕ್ವೇರಿಯಂ ಕೊಳ್ಳುವ ಮುನ್ನ ಯೋಜನೆ ಇರಲಿ
Team Udayavani, Mar 7, 2020, 4:40 AM IST
ಮನೆಯಲ್ಲಿ ಅಕ್ವೇರಿಯಂ ಇದ್ದರೆ ಒಟ್ಟಾರೆ ಇಂಟೀರಿಯರ್‌ನ ಅಂದಕ್ಕೆ ಮತ್ತಷ್ಟು ಮೆರುಗು ಬರುತ್ತದೆ. ಅದರಲ್ಲೂ ಬೇರೆ ಬೇರೆ ಆಕಾರದ ಅಕ್ವೇರಿಯಂಗಳಂತೂ ನಿವಾಸದ ಅಲಂಕಾರಕ್ಕೆ ಇನ್ನಷ್ಟು ಅಂದ ನೀಡುತ್ತವೆ. ಇನ್ನೂ ಆರೋಗ್ಯದ ದೃಷ್ಟಿಯಿಂದಲೂ ಅಕ್ವೇರಿಯಂಗಳು ಉಪಯುಕ್ತವಾಗಿದ್ದು, ಒತ್ತಡ ನಿವಾರಣೆಯ ಕೆಲಸವನ್ನೂ ಮಾಡುವುದು ಮತ್ತೂಂದು ವಿಶೇಷ.
ಯೋಜನೆ ಅಗತ್ಯ
ಅಕ್ವೇರಿಯಂ ಖರೀದಿ ಮಾಡಿ ಮನೆಗೆ ತರುವ ಮುನ್ನವೇ ಸರಿಯಾದ ಯೋಜನೆ ಹಾಕಿಕೊಳ್ಳಬೇಕು. ಏಕೆಂದರೆ ಅದರ ಸ್ಥಳವನ್ನು ಆಗಾಗ ಬದಲಾಯಿಸಲು ಕಷ್ಟ. ಹೀಗಾಗಿ ಎಲ್ಲಿಡಬೇಕು, ವಾಸ್ತು ಪ್ರಕಾರ ಆ ಜಾಗ ಸರಿಯೇ, ಅಲ್ಲಿ ಪ್ಲಗ್ ವ್ಯವಸ್ಥೆ ಇದೆಯೇ ? ಮನೆಯ ಅಲಂಕಾರಕ್ಕೆ ಇದು ಪೂರಕವಾಗಿ ಹೊಂದಿಕೊಳ್ಳುವುದೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.
ಯಾವ ಸ್ಥಳ ಸೂಕ್ತ
ಲೀವಿಂಗ್ ರೂಮ್ ಅಥವಾ ಡೈನಿಂಗ್ ಏರಿಯಾ ಮತ್ತು ಕಿಚನ್ ಮಧ್ಯೆ ರೂಮ್ ಡಿವೈಡರ್ ಇದ್ದರೆ ಅದರ ಭಾಗವಾಗಿ ಇಡಬಹುದು. ಇದರ ಜತೆಗೆ ನೀವು ಕೂರುವ ಸೋಫಾಕ್ಕೆ ಎದುರಾಗಿದ್ದರೆ ಮನೆಯ ಅಂದಕ್ಕೆ ಅನುಕೂಲವಾಗಿ ಕಾಣುತ್ತದೆ. ಇದರ ಹೊರತಾಗಿ ಟಿವಿ ಕ್ಯಾಬಿನೆಟ್ ಅಥವಾ ಬಾರ್ ಯೂನಿಟ್‌ನ ಭಾಗವಾಗಿಯೂ ಬಳಸಬಹುದು.
ಎಚ್ಚರಿಕೆ ಅಗತ್ಯ
ಸದಾ ಓಡಾಡುವ ಜಾಗದಲ್ಲಿ ಅಕ್ವೇರಿಯಂ ಇಡುವುದು ಸೂಕ್ತವಲ್ಲ. ಏಕೆಂದರೆ ಓಡಾಡಲು ಅಡೆತಡೆಯಾಗುವುದರ ಜತೆಗೆ ಏನಾದರೂ ತಾಗಿ ಅಕ್ವೇರಿಯಂ ಒಡೆಯುವ ಸಾಧ್ಯತೆಗಳನ್ನು ಕಡೆಗಣಿಸುವಂತಿಲ್ಲ. ಇನ್ನು ಕಿಟಕಿಗಳ ಮೂಲಕ ಸೂರ್ಯ ಬೆಳಕು ನೇರವಾಗಿ ತಾಗುವ ಜಾಗದಲ್ಲೂ ಅಕ್ವೇರಿಯಂ ಇಡಬಾರದು.
ಸಾಮಾನ್ಯವಾಗಿ ಬೌಲ್ ಅಕ್ವೇರಿಯಂ ಟೇಬಲ್ ಮೇಲೆ ಇಡಲು ಸೂಕ್ತವಾದುದು. ಇದರಲ್ಲಿ ಸಾಂಪ್ರದಾಯಿಕ ಗೋಲ್ಡ್ ಮತ್ತು ಬ್ಲ್ಯಾಕ್ ಫಿಶ್ ಹಾಕಬಹುದು. ಫಿಶ್ ಬೌಲ್‌ಗಳನ್ನು ಸೆಂಟರ್ ಟೇಬಲ್ ಅಥವಾ ಮಾಮೂಲಿ ಟೇಬಲ್, ಸೈಡ್ ಬೋರ್ಡ್ ಅಥವಾ ಗ್ಲಾಸ್ ಶೆಲ್‌ನಲ್ಲಿ ಇಡಬಹುದಾಗಿದೆ.
ಗಾತ್ರ ನಿರ್ಣಯ
ಎಷ್ಟು ಮೀನುಗಳನ್ನು ಹಾಕಬೇಕು ಎಂಬುದನ್ನು ಯೋಚಿಸಿ ಬಳಿಕ ಅಕ್ವೇರಿಯಂ ಗಾತ್ರವನ್ನು ನಿರ್ಣಯ ಮಾಡಬೇಕು. ಟ್ಯಾಂಕ್ ದೊಡ್ಡದಿದ್ದಷ್ಟೂ ಒಳಗಿರುವ ಮೀನುಗಳಿಗೆ ಓಡಾಡಲು ಅನುಕೂಲವಾದ ವಾತಾವರಣವನ್ನು ನಿರ್ಮಿಸುತ್ತದೆ. ಚಿಕ್ಕ ಗಾತ್ರದ ಅಕ್ವೇರಿಯಂ ಆದ್ರೆ, ಚಿಕ್ಕ ಮೀನುಗಳನ್ನು ಹಾಕಬೇಕು. ಗೋಲ್ಡ… ಫಿಶ್, ಏಂಜಲ್ ಫಿಶ್, ಡಿಸ್ಕಸ್ ಫಿಸ್ ಮತ್ತು ನೀಲಿ ಧಾರೆ ಉಳ್ಳ ನಿಯಾನ್ ಫಿಶ್ ನೋಡಲು ತುಂಬಾ ಆಕರ್ಷಕವಾಗಿರುತ್ತವೆ. ಟೈಗರ್ ಶಾರ್ಕ್, ಸಿಲ್ವರ್ ಶಾರ್ಕ್‌ಗಳನ್ನೂ ಬಿಡಬಹುದು.
ಎಲ್ಲೆಡೆಯೂ ಸಾಧ್ಯ
ಅಕ್ವೇರಿಯಂ ಅನ್ನು ಹೊರಗೆ ಮಾತ್ರವಲ್ಲ ಒಳಗಡೆಯೂ ಅಲಂಕರಿಸಬಹುದು. ಇದಕ್ಕಾಗಿ ಒಳಗಡೆ ಅಕ್ವೇರಿಯಂ ಪ್ಲಾಂಟ್, ಪೆಬೆಲ್, ಚಿಪ್ಪು ಮೊದಲಾದವನ್ನು ಇಡಬಹುದು. ಇದರ ಜತೆಗೆ ಆಟಿಕೆ ಆಮೆ, ಏಡಿಯನ್ನೂ ಇಡುತ್ತಾರೆ. ಇದರ ಮೇಲ್ಭಾಗದಲ್ಲಿ ಕನ್ನಡಿಯನ್ನು ಅಳವಡಿಸಿದರೆ ಅಕ್ವೇರಿಯಂ ಇನ್ನಷ್ಟು ದೊಡ್ಡದಿರುವಂತೆ ಕಾಣುತ್ತದೆ.
ಸುಶ್ಮಿತಾ ಜೈನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
ESI ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಂಕಷ್ಟ:ಸಂಸದ ಬ್ರಿಜೇಶ್ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು
Kodagu: ಯೋಧ ದಿವಿನ್ ಪಂಚಭೂತಗಳಲ್ಲಿ ಲೀನ
Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.