![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Mar 22, 2020, 4:20 AM IST
ಹೇರಳ ಆರೋಗ್ಯವರ್ಧಕ ಗುಣಗಳಿರುವ ದಾಳಿಂಬೆಯನ್ನು ಉಪಬೆಳೆಯಾಗಿ ಕೃಷಿ ಮಾಡಬಹುದು. ಮೂಲತಃ ಇರಾನ್ ದೇಶಕ್ಕೆ ಸೇರಿರುವ ದಾಳಿಂಬೆಯನ್ನು ಭಾರತದಲ್ಲೂ ಹಲವಾರು ವರ್ಷಗಳಿಂದ ಬೆಳೆಯಲಾಗುತ್ತದೆ. ಆಯುರ್ವೇದ ಔಷಧಗಳಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಾಗುತ್ತಿದೆ.
ಆಂಗ್ಲ ಭಾಷೆಯಲ್ಲಿ ಪೊಮೋಗ್ರೊನೆಟ್ ಎಂದು ಕರೆಯಲಾಗುವ ಇದರ ವೈಜ್ಞಾನಿಕ ಹೆಸರು ಪುನಿಕ್ ಗ್ರೆನೇಟಮ್ ಸಸ್ಯಶಾಸ್ತ್ರದ ಪ್ರಕಾರ ಲಿತ್ರಾಸಿಯೆ ಕುಟುಂಬ ವರ್ಗಕ್ಕೆ ಸೇರಿದೆ. ಇದರಲ್ಲಿ ವಿಟಮಿನ್ ಬಿ, ಸಿ, ಇ ಹಾಗೂ ಫಾಸ್ಫರಸ್ ಅಂಶ ಅಧಿಕ ಪ್ರಮಾಣದಲ್ಲಿದೆ.
ಮಣ್ಣು ಮತ್ತು ಹವಾಮಾನ
ಫಲವತ್ತಾದ ನೀರು ಬಸಿದು ಹೋಗುವಂತಹ ಕೆಂಪು, ಕಪ್ಪು ಮಣ್ಣು ದಾಳಿಂಬೆ ಕೃಷಿಗೆ ಉತ್ತಮ. ಸಮಶೀತೋಷ್ಣ ಪ್ರದೇಶಗಳು ದಾಳಿಂಬೆ ಬೆಳೆಯಲು ಸಹಕಾರಿ. ತೇವಾಂಶ, ತಂಗಾಳಿ ಮಿಶ್ರಿತ ಮಳೆಯ ವಾತಾವರಣ ದಾಳಿಂಬೆ ಕೃಷಿಗೆ ಅಷ್ಟು ಸೂಕ್ತವಲ್ಲ. ಈ ವಾತಾವರಣದಲ್ಲಿ ದಾಳಿಂಬೆ ನಾನಾ ರೋಗಗಳಿಗೆ ತುತ್ತಾಗುವ ಸಾಧ್ಯತೆಯಿದೆ.
ಕೃಷಿ ವಿಧಾನ
ಎರಡರಿಂದ ಮೂರು ಅಡಿ ಉದ್ದ, ಅಗಲ ಮತ್ತು ಎರಡು ಅಡಿ ಆಳದ ಹೊಂಡ ತೋಡಿ. ಗಿಡದಿಂದ ಗಿಡಕ್ಕೆ ಹಾಗೂ ಸಾಲಿನಿಂದ ಸಾಲಿಗೆ ಸುಮಾರು 8ರಿಂದ 10 ಅಡಿ ಅಂತರ ಇರಲಿ. ಪ್ರತಿ ಹೊಂಡಕ್ಕೆ ಸ್ವಲ್ಪ ಪ್ರಮಾಣದಲ್ಲಿ ಸುಡುಮಣ್ಣು, ಒಣಗಿದ ಹಟ್ಟಿಗೊಬ್ಬರ ಮಿಶ್ರ ಮಾಡಿ ಹಾಕಿ. ಬಳಿಕ ನರ್ಸರಿಯಿಂದ ಉತ್ತಮ ತಳಿಯ ಗಿಡ ತಂದು ನಾಟಿ ಮಾಡಬೇಕು. ಪ್ರತಿ ದಿನ ನಿರ್ದಿಷ್ಟ ಪ್ರಮಾಣದಲ್ಲಿ ನೀರು ಒದಗಿಸಿ. ಹನಿ ನೀರಾವರಿ ವ್ಯವಸ್ಥೆ ಮಾಡಿದರೆ ಉತ್ತಮ. ಸಮರ್ಪಕವಾಗಿ ನೀರಿನ ನಿರ್ವಹಣೆ ಮಾಡುವ ಮೂಲಕ ದಾಳಿಂಬೆ ಹಣ್ಣು ಸೀಳು ಬಿಡುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಸುಮಾರು ಐದರಿಂದ ಎಂಟು ಮೀಟರ್ ಎತ್ತರಕ್ಕೆ ಬೆಳೆಯುವ ದಾಳಿಂಬೆ ಗಿಡ ವರ್ಷಕ್ಕೆ ಮೂರು ಬಾರಿ ಫಸಲು ನೀಡುತ್ತದೆ. ಗಿಡ ನೆಟ್ಟ ದಿನದಿಂದ ಫಸಲು ಕೈಗೆ ಬರಲು 22 ತಿಂಗಳು ಬೇಕು. ಅನಂತರ 2 ವರ್ಷಕ್ಕೆ 3 ಬಾರಿ ಬೆಳೆ ತೆಗೆಯಬಹುದು. ಒಮ್ಮೆ ನಾಟಿ ಮಾಡಿದ ದಾಳಿಂಬೆ ಗಿಡ ಕನಿಷ್ಠ 15 ವರ್ಷಗಳ ಕಾಲ ಫಸಲು ನೀಡುತ್ತದೆ.
ಎಜಿ.ಕೆ.
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.