ಅಡಿಕೆ, ತೆಂಗು ಬೆಲೆ ಏರಿಕೆ
Team Udayavani, Aug 25, 2019, 5:26 AM IST
ಈ ವಾರ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆಯ ಬೆಳವಣಿಗೆಯಾಗಿದೆ. ಹಳೆಯ ಅಡಿಕೆ 290-300 ರೂ. ತನಕ ಖರೀದಿಯಾದರೆ, ಹೊಸ ಅಡಿಕೆಗೂ ಬೆಲೆ ಏರಿಕೆಯಾಗಿ 250 -260 ರೂ. ತನಕ ಮಾರುಕಟ್ಟೆ ಬೆಲೆಯಲ್ಲಿ ಖರೀದಿಯಾಗಿದೆ.
ಡಬಲ್ ಚೋಲು 310 ರೂ.ವರೆಗೆ ಖರೀದಿ ನಡೆಸಿದ್ದು, ಹಿಂದಿನ ವಾರದ ಧಾರಣೆಯನ್ನೇ ಕಾಪಾಡಿಕೊಂಡಿದೆ. ಪಠೊರಾ ಹೊಸ 150 ರೂ.ನಿಂದ 190 ರೂ.ವರೆಗೆ ಹಾಗೂ ಹಳೆಯದು 210 ರೂ.ಗೆ ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 130 ರೂ. ಹಾಗೂ ಹಳೆಯದು 150 ರೂ., ಕರಿಕೋಟು 100 ರೂ.ನಿಂದ 140 ರೂ.ವರೆಗೆ ಧಾರಣೆ ಪಡೆಯುತ್ತಿವೆ.
ಕಾಳುಮೆಣಸು ಯಥಾಸ್ಥಿತಿ
ಕಾಳುಮೆಣಸು ಧಾರಣೆಯಲ್ಲಿ ಈ ವಾರವೂ ಅದೇ 320 ರೂ. ದರ ಮುಂದುವರಿದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕಾಳುಮೆಣಸು ಒಂದಷ್ಟು ಬೇಡಿಕೆ ಪಡೆದುಕೊಂಡಿದೆ.
ರಬ್ಬರ್ ಇಳಿಕೆ
ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆ ರಬ್ಬರ್ ಬೆಲೆನ ಈ ವಾರ 5 ರೂ. ನಷ್ಟು ಮತ್ತಷ್ಟು ಇಳಿಕೆಯನ್ನು ಕಂಡಿದೆ. ಆರ್ಎಸ್ಎಸ್4 ದರ್ಜೆ 137.5 ರೂ., ಆರ್ಎಸ್ಎಸ್5 ದರ್ಜೆ 133 ರೂ., ಲಾಟ್ 122.5 ರೂ.ನಲ್ಲಿ ಖರೀದಿ ನಡೆಸಿದೆ. ಸ್ಕ್ರಾಪ್ 1 ದರ್ಜೆ 84 ರೂ. ಹಾಗೂ ಸ್ಕ್ರಾಪ್ 2 ದರ್ಜೆ 76 ರೂ.ನಲ್ಲಿ ಖರೀದಿ ನಡೆಸಿವೆ.
ತೆಂಗು ಧಾರಣೆ ಏರಿಕೆ
ಒಂದಷ್ಟು ಇಳಿಕೆ ಕಂಡಿದ್ದ ತೆಂಗಿನ ಬೆಲೆ ಮತ್ತೆ ಏರಿಕೆ ಕಂಡಿದೆ. ಈ ವಾರ ಹೊಸ ತೆಂಗಿನ ಕಾಯಿ 31 ರೂ.ಗೆ ಖರೀದಿಯಾದರೆ ಹಳೆಯ ತೆಂಗಿನಕಾಯಿ 32 ರೂ. ತನಕ ಖರೀದಿಯಾಗಿದೆ.
ಕೊಕ್ಕೋ ಸ್ಥಿರ
ಕಳೆದ ಕೆಲವು ಸಮಯಗಳಿಂದ ಸ್ಥಿರವಾಗಿ ಸಾಗುತ್ತಿದ್ದ ಕೊಕ್ಕೋ ಧಾರಣೆಯಲ್ಲಿ ಕಳೆದ ವಾರ ಇಳಿಕೆ ಕಂಡಿತ್ತು. ಈ ವಾರವೂ 45-48 ರೂ. ಗೆ ಖರೀದಿಯಾಗಿದೆ. ಕೃಷಿ ಉತ್ಪನ್ನಗಳ ಪೈಕಿ ಸ್ಥಿರತೆ ಸಾಧಿಸಿದ ಏಕೈಕ ಉತ್ಪನ್ನವೆಂದರೆ ಅದು ಕೊಕ್ಕೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕೆಲವು ವರ್ಷಗಳಿಂದ ಕೊಕ್ಕೋ ಬೆಳೆಯುವ ಪ್ರಮಾಣವೂ ಧಾರಣೆಯ ಸ್ಥಿರತೆಯ ಕಾರಣದಿಂದ ಹೆಚ್ಚಾಗಿದೆ.
•ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 series: ಪಾಕಿಸ್ಥಾನಕ್ಕೆ ವೈಟ್ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.